ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಬ್ಲಡ್ ಕ್ಯಾನ್ಸರ್ ಜಯಿಸಿ, ಪ್ರತಿದಿನ 20 ಕಿಲೋಮೀಟರ್ ಓಡುವ ಅಶ್ರಫ್ ಸಾಧನೆಯ ಕಥೆ
5

ಬ್ಲಡ್ ಕ್ಯಾನ್ಸರ್ ಜಯಿಸಿ, ಪ್ರತಿದಿನ 20 ಕಿಲೋಮೀಟರ್ ಓಡುವ ಅಶ್ರಫ್ ಸಾಧನೆಯ ಕಥೆ

ರೋಗನಿರ್ಣಯದಿಂದ ಉಪಶಮನದವರೆಗೆ ಹಿಂಜರಿಯದ ಅಶ್ರಫ್ ಎಂ ಎ ಈ ವರ್ಷ ನಡೆಯಲಿರುವ ಮುಂಬರುವ ಮ್ಯಾರಥಾನ್‌ಗಳಿಗೆ ತರಬೇತಿ ನೀಡುತ್ತಿದ್ದಾರೆ.

ಬ್ಲಡ್ ಕ್ಯಾನ್ಸರ್ ಜಯಿಸಿ, ಪ್ರತಿದಿನ 20 ಕಿಲೋಮೀಟರ್ ಓಡುವ ಅಶ್ರಫ್

ಕೇರಳದ ಮುವಾಟ್ಟುಪುಳದ ಟಿವಿ ಮೆಕ್ಯಾನಿಕ್ ಆಗಿದ್ದ ಅಶ್ರಫ್, 58ವಿದ್ದಾಗ 2000 ರಲ್ಲಿ ಮ್ಯಾರಥಾನ್ ಓಡಲು ಪ್ರಾರಂಭಿಸಿದರು. ಗೆಳೆಯನ ಜೊತೆ ಜಾಗ್ ಹೋಗುವ ಅಭ್ಯಾಸವಿದ್ದ ಅವರು ಕ್ರಮೇಣ ಓಡುವ ಅಭ್ಯಾಸ ಬೆಳೆಸಿಕೊಂಡರು. ಉತ್ಸಾಹಿ ಓಟಗಾರರಾದ ಇವರು 2016 ರಲ್ಲಿ ಮ್ಯಾರಥಾನ್‌ಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಅಲ್ಲಿಂದ ಅವರು ಅನೇಕ ಪ್ರಶಸ್ತಿಗಳನ್ನು ಗೆದ್ದರು. ಜನ ಅವರನ್ನು ಅಶ್ರಫ್ ಮ್ಯಾರಥಾನ್ ಎಂದೇ ಕರೆಯತೊಡಗಿದರು. ಅವರು, ಅವರು ಮುಂದಿನ ಹಂತಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿರುವಾಗ ಅನಿರೀಕ್ಷಿತ ಆಘಾತ ಎದುರಾಯ್ತು. – ಟ್ರ್ಯಾಕ್ನಲ್ಲಿ ಓಡುವಾಗ ಕುಸಿದ ಅವರಿಗೆ ಲ್ಯುಕೇಮಿಯಾ (ಬ್ಲಡ್ ಕ್ಯಾನ್ಸರ್) ಇರುವುದು ತಿಳಿದುಬಂತು.

ಬ್ಲಡ್ ಕ್ಯಾನ್ಸರ್ ರೋಗನಿರ್ಣಯ

2017ರಲ್ಲಿ ಅಶ್ರಫ್ ತಮ್ಮ ಊರಿನಲ್ಲಿ ನಡೆದ ಮ್ಯಾರಥಾನ್ ವೇಳೆ ಹಠಾತ್ ಕುಸಿದು ಬಿದ್ದಿದ್ದರು. ಅವರು ಈ ಘಟನೆ ಬಗ್ಗೆ ಹೆಚ್ಚು ಗಮನ ಕೊಡದಿದ್ದರೂ, ಮರುದಿನ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿತು. ಅದು ಎರಡು ವಾರಗಳವರೆಗೆ ಕಡಿಮೆಯಾಗದೇ ಇದ್ದಾಗ ಅವರು ತಮ್ಮ ಕುಟುಂಬ ವೈದ್ಯರನ್ನು ಸಂಪರ್ಕಿಸಿದಾಗ ಅವರು ರಕ್ತ ಪರೀಕ್ಷೆ ಮಾಡಿಸಲು ತಿಳಿಸಿದರು. “ನನ್ನ ಬಿಳಿ ರಕ್ತ ಕಣಗಳು ಹೆಚ್ಚಾಗಿದ್ದು ಪ್ಲೇಟ್ಲೆಟ್ ಮಟ್ಟಗಳು ಅಸಹಜವಾಗಿ ಕಡಿಮೆಗಿತ್ತು ಎಂದು . ರಿಪೋರ್ಟ್ ಬಂದಿತ್ತು. ನನ್ನ ಆರೋಗ್ಯ ಹದಗೆಡುತ್ತಿತ್ತು’ ಎಂದು ಅಶ್ರಫ್ ನೆನಪಿಸಿಕೊಳ್ಳುತ್ತಾರೆ. “ವೈದ್ಯರು ಕ್ಯಾನ್ಸರ್ ಆಗಿರಬಹುದುಎಂದು ಶಂಕಿಸಿ, ಹೆಚ್ಚಿನ ಪರೀಕ್ಷೆಗಳಿಗಾಗಿ ನನ್ನನ್ನು ವಿಶೇಷ ಕೇಂದ್ರಕ್ಕೆ ಕರೆದೊಯ್ಯುವಂತೆ ಹೇಳಿದರು.

ಮತ್ತೊಂದು ಆಸ್ಪತ್ರೆಯಲ್ಲಿ ಹೆಚ್ಚುವರಿ ಪರೀಕ್ಷೆಯಾದ ನಂತರ ಅಶ್ರಫ್‌ಗೆ ಸ್ಟೇಜ್ ಲ್ಯುಕೇಮಿಯಾ ಇರುವುದು ತಿಳಿಯಿತು. “ನನ್ನ ಆರೋಗ್ಯದ ಬಗ್ಗೆ ಹೆದರಿಕೆಗಿಂತ, ನಾನು ಮತ್ತೆ ಓಡಲು ಸಾಧ್ಯವೇ ಎನ್ನುವುದೇ ನನ್ನ ದೊಡ್ಡ ಭಯವಾಗಿತ್ತು ”ಎನ್ನುತ್ತಾರೆ ಅಶ್ರಫ್.

ಬ್ಲಡ್ ಕ್ಯಾನ್ಸರ್ ಸೋಲಿಸುವುದು ಮತ್ತು ಮ್ಯಾರಥಾನ್ ಓಡುವುದು

ವೈದ್ಯರ ಸಲಹೆಯ ಮೇರೆಗೆ ಅಶ್ರಫ್‌ಗೆ ಕೀಮೋಥೆರಪಿ ಚಿಕಿತ್ಸೆ ಪ್ರಾರಂಭವಾಯ್ತು. ಚಿಕಿತ್ಸೆಯ ಸಮಯದಲ್ಲಿ ಅವರಿಗೆ ನ್ಯುಮೋನಿಯಾ ಕಾಣಿಸಿಕೊಂಡಿತು ಮತ್ತು ಕೆಮ್ಮಿನ ಜೊತೆ ರಕ್ತವೂ ಹೊರಬರುತ್ತಿತ್ತು. “ಸೋಂಕು ನನ್ನ ಹೃದಯಕ್ಕೆ ಹರಡುತ್ತಿದ್ದಂತೆ, ಕೀಮೋಥೆರಪಿಯನ್ನು ನಿಲ್ಲಿಸಲಾಯಿತು ಮತ್ತು ನನ್ನನ್ನು ತೀವ್ರ ನಿಗಾ ಘಟಕಕ್ಕೆ [ಐಸಿಯು] ಸ್ಥಳಾಂತರಿಸಲಾಯಿತು. ಕೆಲವು ತಿಂಗಳ ಚಿಕಿತ್ಸೆಯ ನಂತರ ಅರೋಗ್ಯ ಸ್ವಲ್ಪ ಸ್ಥಿರವಾಯ್ತು. ಅದರ ನಂತರ ಮತ್ತೆ ಕೀಮೋಥೆರಪಿಯನ್ನು ಪ್ರಾರಂಭಿಸಲಾಯಿತು” ಎಂದು ಅಶ್ರಫ್ ಹಂಚಿಕೊಳ್ಳುತ್ತಾರೆ.

ಒಂಬತ್ತು ತಿಂಗಳ ತೀವ್ರ ಚಿಕಿತ್ಸೆಯ ನಂತರ, ರೋಗಲಕ್ಷಣಗಳು ಕಡಿಮೆಯಾದವು ಮತ್ತು ಅವರ ಆರೋಗ್ಯ ಸುಧಾರಿಸಿತು. ಸಂಪೂರ್ಣ ಅಗ್ನಿಪರೀಕ್ಷೆಯ ದೈಹಿಕ ಮತ್ತು ಭಾವನಾತ್ಮಕ ಸವಾಲುಗಳು (ರೋಗನಿರ್ಣಯದಿಂದ ಉಪಶಮನದವರೆಗೆ) ಅಶ್ರಫ್‌ನನ್ನು ಬಾಧಿಸಲಿಲ್ಲ. 2019 ರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮುವಾಟ್ಟುಪುಳ ಮುನಿಸಿಪಲ್ ಸ್ಟೇಡಿಯಂನಲ್ಲಿ ನಡೆದ 55 ಕಿಲೋಮೀಟರ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದರು.

ಚಿಕಿತ್ಸೆಯ ನಂತರ ಆರೋಗ್ಯಕರ ಜೀವನಶೈಲಿ

ಚಿಕಿತ್ಸೆಯ ನಂತರ ಅಶ್ರಫ್ ಕೆಲವು ಆಹಾರದ ಬದಲಾವಣೆಗಳನ್ನು ವೈದ್ಯರು ಸೂಚಿಸಿದರು. ಆರಂಭದಲ್ಲಿ ಕೆಂಪು ಮಾಂಸವನ್ನು ತ್ಯಜಿಸಲು ಮತ್ತು ಸೊಪ್ಪಿನ ಸೇವನೆಯನ್ನು ಹೆಚ್ಚಿಸಲು ಸಲಹೆ ನೀಡಲಾಯಿತು. “ಈಗ ನಾನು ಎಲ್ಲವನ್ನೂ ತಿನ್ನಬಹುದೆಂದು ವೈದ್ಯರು ಹೇಳಿದರೂ ಈಗಲೂ ನಾನು ನನ್ನ ಆಹಾರದಲ್ಲಿ ಕೋಳಿ ಮತ್ತು ಕೆಂಪು ಮಾಂಸವನ್ನು ಮಿತಿಗೊಳಿಸಲು ಮತ್ತು ಹೆಚ್ಚು ತರಕಾರಿಗಳನ್ನು ತಿನ್ನಲು ಪ್ರಯತ್ನಿಸುತ್ತೇನೆ” ಎಂದು ಅಶ್ರಫ್ ಹೇಳುತ್ತಾರೆ.

ಅವರು ಪ್ರತಿದಿನ ವರ್ಕೌಟ್ ಮಾಡುತ್ತಾರೆ. ಪುಷ್-ಅಪ್‌ಗಳಂತಹ ಕಡಿಮೆ-ತೀವ್ರತೆಯ ವ್ಯಾಯಾಮಗಳನ್ನು ಆರಿಸಿಕೊಳ್ಳುತ್ತಾರೆ. ಪ್ರತಿದಿನ ಬೆಳಿಗ್ಗೆ 6-8 ರಿಂದ ಕ್ರೀಡಾಂಗಣದಲ್ಲಿ 20 ಕಿಲೋಮೀಟರ್‌ ಓಡುತ್ತಾರೆ. ತಮ್ಮ ಜೀವಿತಾವಧಿಯಲ್ಲಿ ನೂರಕ್ಕೂ ಹೆಚ್ಚು ಮ್ಯಾರಥಾನ್‌ಗಳಲ್ಲಿ ಭಾಗವಹಿಸಿರುವ ಅಶ್ರಫ್ ಪ್ರಸ್ತುತ ಈ ವರ್ಷ ದೇಶದಲ್ಲಿ ನಡೆಯಲಿರುವ ಮ್ಯಾರಥಾನ್‌ಗಾಗಿ ತರಬೇತಿ ಪಡೆಯುತ್ತಿದ್ದಾರೆ.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ