ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಲೋಕಸಭೆ ಚುನಾವಣೆ 2024: ಕರಾವಳಿಯ ಬಿರು ಬೇಸಿಗೆಯಲ್ಲಿ ಫಿಟ್‌ನೆಸ್ ಕಾಪಾಡಿಕೊಳ್ಳುವುದು ಹೇಗೆ?
2

ಲೋಕಸಭೆ ಚುನಾವಣೆ 2024: ಕರಾವಳಿಯ ಬಿರು ಬೇಸಿಗೆಯಲ್ಲಿ ಫಿಟ್‌ನೆಸ್ ಕಾಪಾಡಿಕೊಳ್ಳುವುದು ಹೇಗೆ?

ದಕ್ಷಿಣ ಕನ್ನಡದಲ್ಲಿ ಪ್ರಚಾರ ಮಾಡಲು ವಾತಾವರಣಕ್ಕೆ ಹೊಂದಿಕೊಳ್ಳುವ ಅಗತ್ಯವಿದೆ. ಈ ವಾತಾವರಣಕ್ಕೆ ಒಗ್ಗಿಕೊಂಡಿರುವ ಸ್ಪರ್ಧಿಗಳು ಫಿಟ್ ಆಗಿರಲು ಅವರು ಅನುಸರಿಸುವ ವಿಧಾನಗಳನ್ನು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ 2024: ಕರಾವಳಿಯ ಬಿರು ಬೇಸಿಗೆಯಲ್ಲಿ ಫಿಟ್‌ನೆಸ್ ಕಾಪಾಡಿಕೊಳ್ಳುವುದು ಹೇಗೆ?
ಬ್ರಿಜೇಶ್ ಚೌಟಾ ದಕ್ಷಿಣ ಕನ್ನಡದಲ್ಲಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ

2024 ರ ಲೋಕಸಭಾ ಚುನಾವಣೆ, ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಿರುವ 43 ವರ್ಷದ ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಮಾಜಿ ಭಾರತೀಯ ಸೇನಾಧಿಕಾರಿಯಾಗಿದ್ದು, ಈಗಲೂ ತಮ್ಮ ಆಹಾರ ಮತ್ತು ವ್ಯಾಯಾಮದ ದಿನಚರಿಯನ್ನು ಶಿಸ್ತುಬದ್ಧಯಾಗಿ ಅನುಸರಿಸುತ್ತಿದ್ದಾರೆ. ಬೇಸಿಗೆಯ ಬಿಸಿಲಿನಲ್ಲಿಯೂ ದಿನಕ್ಕೆ 10-12 ಗಂಟೆಗಳ ಕಾಲ ದಣಿವರಿಯದ ಪ್ರಚಾರ ನಡೆಸುತ್ತಿದ್ದಾರೆ. ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್ ಪದ್ಮರಾಜ್ ಅವರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಅವರು ಬೆಳಿಗ್ಗೆ 7 ರಿಂದ ಸಂಜೆಯವರೆಗೆ ಪ್ರಚಾರ ನಡೆಸುತ್ತಿದ್ದಾರೆ.

ಕರ್ನಾಟಕದ ಕರಾವಳಿ ಪ್ರದೇಶವಾದ ದಕ್ಷಿಣ ಕನ್ನಡದಲ್ಲಿ ಹೆಚ್ಚು ಹ್ಯುಮಿಡಿಟಿಯಿದ್ದು, ಇದು ಮಾರ್ಚ್ ಮತ್ತು ಮೇ ನಡುವೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಶಾಖದಿಂದ ಸುಸ್ತು, ನಿರ್ಜಲೀಕರಣ ಮತ್ತು ಅತಿಯಾದ ಬೆವರುವಿಕೆ ಸಾಮಾನ್ಯವಾಗಿದೆ. ಈ ಮಧ್ಯೆ, ಈ ವರ್ಷ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ತಿಂಗಳಾದ್ಯಂತ ಬಿಸಿಗಾಳಿ ಎಚ್ಚರಿಕೆಯನ್ನು ನೀಡಿದ್ದು, ದಕ್ಷಿಣ ಕನ್ನಡದಲ್ಲಿ ಚುನಾವಣೆಗಾಗಿ ದಣಿವರಿಯಿಲ್ಲದೆ ದುಡಿಯುತ್ತಿರುವವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ದಕ್ಷಿಣ ಕನ್ನಡದಲ್ಲಿ ಚುನಾವಣೆ: ಹ್ಯುಮಿಡಿಟಿ ನಡುವೆ ಪ್ರಚಾರ ಮಾಡುವುದು

ಪದ್ಮರಾಜ್ ದಕ್ಷಿಣ ಕನ್ನಡದಲ್ಲಿ ಚುನಾವಣಾ ಪ್ರಚಾರದ ವೇಳೆ ಸ್ಥಳೀಯರೊಂದಿಗೆ ಸಂವಾದ ನಡೆಸುತ್ತಿರುವುದು

ಚೌಟಾ ಅವರು ತಮ್ಮ ಸೈನ್ಯದ ದಿನಗಳಿಂದಲೂ, ಸೂರ್ಯೋದಯಕ್ಕೆ ಮುಂಚಿತವಾಗಿ ಏಳುವ ಅಭ್ಯಾಸ ಅಭ್ಯಾಸವನ್ನು ಹೊಂದಿದ್ದರು. ಈಗಲೂ, ಅವರ ದಿನ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ನಿಂಬೆ ಮತ್ತು ಜೇನುತುಪ್ಪದೊಂದಿಗೆ ಪ್ರಾರಂಭವಾಗುತ್ತದೆ. ಓಟಗಾರರರೂ ಆದ ಚೌಟಾ, ನಡೆಯಲು ಮತ್ತು ಸೂರ್ಯ ನಮಸ್ಕಾರಗಳನ್ನು ಮಾಡಲು ಇಷ್ಟಪಡುತ್ತಾರೆ. ಪ್ರಚಾರ ಮಾಡುವಾಗ ಒಂದು ಮನೆಯಿಂದ ಮುಂದಿನ ಮನೆಗೆ ಹೋಗಬೇಕಾಗುತ್ತದೆ. ಹಾಗಾಗಿ ದಿನಕ್ಕೆ 10,000 ಸ್ಟೆಪ್ಸ್ ಪೂರ್ಣಗೊಳಿಸುತ್ತಾರೆ.  ಅದು ರಾತ್ರಿ ಚೆನ್ನಾಗಿ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.

53 ವರ್ಷದ ಪದ್ಮರಾಜ್ ವಕೀಲರಾಗಿದ್ದು ಮಂಗಳೂರಿನಾದ್ಯಂತ ಪ್ರತಿದಿನ 10-12 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಹೋಗುತ್ತಾರೆ. “ನಾನು ನಡೆದುಕೊಂಡು ಓಡಾಡುತ್ತೇನೆ, ಆದರೆ ಅದು ಚುರುಕಾದ ನಡಿಗೆಯಾಗಿರುವುದಿಲ್ಲ. ನಾನು ಜನರನ್ನು ಭೇಟಿ ಮಾಡುತ್ತೇನೆ ಮತ್ತು ಪ್ರಚಾರ ಮಾಡುವಾಗ ಅವರ ಜೊತೆ ಮಾತಾಡುತ್ತೇನೆ. ಕೆಲವೊಮ್ಮೆ ಮಾತಾಡುತ್ತಾ ಬಹಳ ಗಂಟೆಗಳ ಕಾಲ ನಿಲ್ಲಬೇಕಾಗುತ್ತದೆ” ಎಂದು ಅವರು ಹೇಳುತ್ತಾರೆ. ಸಾಧ್ಯವಾದಷ್ಟೂ ಲಿಫ್ಟ್‌ ಬಳಸುವ ಬದಲು ಮೆಟ್ಟಿಲುಗಳನ್ನು ಬಳಸಿ, ವ್ಯಾಯಾಮದ ದಿನಚರಿಯನ್ನು ಸರಿದೂಗಿಸಲು ಪ್ರಯತ್ನಿಸುತ್ತಾರೆ.

ಫಿಟ್ ಆಗಿರಲು ಸ್ಥಳೀಯ ಉತ್ಪನ್ನಗಳನ್ನು ಸೇವಿಸುವುದು

ಬ್ರಿಜೇಶ್ ಚೌಟಾ ದಕ್ಷಿಣ ಕನ್ನಡದಲ್ಲಿ ಪ್ರಚಾರ

ಚೌಟ ಮತ್ತು ಪದ್ಮರಾಜ್ ಇಬ್ಬರೂ ಕರಾವಳಿಯ ಸ್ಥಳೀಯ ಮತ್ತು ಋತುಮಾನದ ಆಹಾರಗಳನ್ನು ಸೇವಿಸುವುದು ತಮ್ಮ ಉತ್ತಮ ಆರೋಗ್ಯದ ಗುಟ್ಟು ಎಂದು ನಂಬುತ್ತಾರೆ. ಚೌಟ ಅವರು ತುಳುನಾಡಿನ ಸಾಂಪ್ರದಾಯಿಕ ಆಹಾರಗಳನ್ನು ಇಷ್ಟಪಡುತ್ತಾರೆ – ವಿವಿಧ ಬಗೆಯ ದೋಸೆ ಅಥವಾ ಪುಂಡಿ/ಅಕ್ಕಿ ಕಡುಬು ಮತ್ತು ಬೆಳಗಿನ ಉಪಾಹಾರಕ್ಕಾಗಿ ಒಂದು ಬಿಸಿ ಕಪ್ ಚಹಾ, ಮೀನು ಕರಿ, ಕುಚಲಕ್ಕಿ ಅನ್ನ ಮತ್ತು ಮಧ್ಯಾಹ್ನದ ಊಟಕ್ಕೆ ಒಂದು ಲೋಟ ಮಜ್ಜಿಗೆ ಮತ್ತು ರಾತ್ರಿಯಲ್ಲಿ ಅಕ್ಕಿ ಗಂಜಿ ಅವರ ಆಯ್ಕೆಗಳು. ಇಂತಹ ಆಹಾರಗಳು ಫೈಬರ್-ಭರಿತವಾಗಿದ್ದು, ಬೇಸಿಗೆಯ ದಿನಗಳಲ್ಲಿ ಜಲಸಂಚಯನಕ್ಕೆ ಸಹಾಯ ಮಾಡುತ್ತದೆ ಮತ್ತು ದೇಹವನ್ನು ತಂಪಾಗಿಸುತ್ತವೆ.

ಪ್ರಚಾರದ ಸಮಯದಲ್ಲಿ ಪ್ರಯಾಣದಿಂದ ಊಟದ ಸಮಯ ವ್ಯತ್ಯಾಸವಾಗಬಹುದು. ಆದರೆ ಜಂಕ್ ತಿನ್ನುವ ಬದಲು, ನಾನು ಮತ್ತು ನನ್ನ ತಂಡ ಪ್ರಯಾಣದಲ್ಲಿರುವಾಗ ಆರೋಗ್ಯಕರ ಮತ್ತು ಸ್ಥಳೀಯವಾಗಿ ಲಭ್ಯವಿರುವ ಕಲ್ಲಂಗಡಿ, ಬಾಳೆಹಣ್ಣು ಅಥವಾ ಸೇಬುಗಳನ್ನು ತಿನ್ನುತ್ತೇನೆ” ಎಂದು ಎಂದು ಚೌಟಾ ಹೇಳುತ್ತಾರೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕರಾವಳಿ ಬೆಲ್ಟ್ ಅತ್ಯಂತ ಹ್ಯುಮಿಡಿಟಿಯಿಂದ ಕೂಡಿರುವುದರಿಂದ, ಅವರು ಮತ್ತು ಅವರ ತಂಡವು ಪೊಳಲಿಯ ದೇವಸ್ಥಾನದ ಜಾತ್ರೆಯಲ್ಲಿ ಸ್ಥಳೀಯವಾಗಿ ಬೆಳೆದ ಕಲ್ಲಂಗಡಿಗಳನ್ನು ಸವಿಯುತ್ತಾರೆ ಮತ್ತು ಉಪ್ಪಿಲ್ಲದ ಗೋಡಂಬಿಗಳು ಶಕ್ತಿಯನ್ನು ನೀಡುತ್ತದೆ. ಪ್ರಚಾರ ಮಾಡುವಾಗ ನೀರಿನ ಅಂಶಕ್ಕಾಗಿ ಎಳನೀರು, ದಾಳಿಂಬೆ ರಸ ಮತ್ತು ಮಜ್ಜಿಗೆಯನ್ನೂ ಸೇವಿಸುತ್ತಾರೆ.

ಪದ್ಮರಾಜ್ ಅವರಿಗೂ ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸುತ್ತಾರೆ. ಮಂಗಳೂರಿಗರು ಮುಖ್ಯವಾಗಿ ಕರಾವಳಿ ಆಹಾರವನ್ನು ಆನಂದಿಸುತ್ತಾರೆ – ತರಕಾರಿಗಳು, ಕುಚ್ಚಲಕ್ಕಿ, ಮತ್ತು ಸಮುದ್ರಾಹಾರದ ಆರೋಗ್ಯಕರ ಮಿಶ್ರಣವನ್ನು ಸವಿಯುತ್ತಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ ಪೂರ್ವಸಿದ್ಧತೆಯಿಲ್ಲದ ದಿನಚರಿಗಳು ಸಾಮಾನ್ಯವಾಗಿದ್ದರೂ, ಪದ್ಮರಾಜ್ ದಿನವಿಡೀ ಹೈಡ್ರೇಟ್ ಆಗಿರಲು ಗಮನ ನೆಡುತ್ತಾರೆ. “ಕಾರಿನಲ್ಲಿ 3-4 ಕುದಿಸಿದ ನೀರಿನ ಫ್ಲಾಸ್ಕ್‌ಗಳನ್ನು ಇಟ್ಟುಕೊಳ್ಳುತ್ತೇನೆ. ಆಗಾಗ್ಗೆ ನೀರು ಕುಡಿಯುತ್ತೇನೆ. ಅಲ್ಲದೆ, ಒಣ ಹಣ್ಣುಗಳು ಮತ್ತು ಬಾಳೆಹಣ್ಣುಗಳಂತಹ ಸ್ಥಳೀಯವಾಗಿ ಲಭ್ಯವಿರುವ ಹಣ್ಣುಗಳನ್ನು ಒಳಗೊಂಡಿರುತ್ತವೆ.

ಪ್ರಚಾರ ಪ್ರಾರಂಭವಾದಾಗಿನಿಂದ ಅವರು ಎಂದಿಗೂ ಹಸಿವಿನ ಸಮಸ್ಯೆಯಿಂದ ಬಳಲಿಲ್ಲ ಎಂದು ಪದ್ಮರಾಜ್ ಹ್ಯಾಪಿಯೆಸ್ಟ್ ಹೆಲ್ತ್‌ಗೆ ಹೇಳುತ್ತಾರೆ. ಪ್ರಚಾರದ ಭೇಟಿಯ ಸಮಯದಲ್ಲಿ ಮನೆಯಲ್ಲಿ ತಯಾರಿಸಿದ ಆಹಾರ, ಬಿಸಿ ಕಪ್ ಚಹಾ ಅಥವಾ ಕಾಫಿ ಅಥವಾ ಎಳನೀರನ್ನು ಜನರು ಪ್ರೀತಿಯಿಂದ ನೀಡಿದಾಗ ಅದನ್ನು ಅವರು ಸ್ವೀಕರಿಸುತ್ತಾರೆ. ಚಹಾ ಅಥವಾ ಎಳನೀರು ಎನ್ನುವ ಆಯ್ಕೆ ಬಂದರೆ ನಾನು ಎಳನೀರನ್ನು ಸೇವಿಸುತ್ತೇನೆ ಎಂದು ಎನ್ನುತ್ತಾರೆ.

ಕೆಲಸ, ಸೇವೆ, ನಿದ್ರೆ, ಪುನರಾವರ್ತನೆ

2024ರ ಲೋಕಸಭೆ ಚುನಾವಣೆಗೂ ಮುನ್ನ ಪದ್ಮರಾಜ್ ಜನರೊಂದಿಗೆ ಸಂವಾದ ನಡೆಸಿದರು

ದಕ್ಷಿಣ ಕನ್ನಡದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ಎಂದರೆ ಕರಾವಳಿಯ ಉದ್ದಗಲಕ್ಕೂ ಮತ್ತು ದೂರದವರೆಗೂ ಪ್ರಚಾರಕ್ಕಾಗಿ ಪ್ರಯಾಣಿಸಬೇಕಾಗುತ್ತದೆ. ಎಲ್ಲದರ ನಡುವೆ, ಪದ್ಮರಾಜ್ ರಾತ್ರಿಯಲ್ಲಿ ನಾಲ್ಕು ಗಂಟೆಗಳ ನಿರಂತರ ನಿದ್ರೆ ಮಾಡುತ್ತಾರೆ. ಅದು ಅವರಿಗೆ ಮಾರನೇ ದಿನಕ್ಕೆ ಶಕ್ತಿ ನೀಡುತ್ತದೆ. ಚೌಟಾ ದಣಿವಾದಾಗ ಸಣ್ಣ ನಿದ್ದೆ ಮಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ. “ಸೇನೆಯಲ್ಲಿ ಇದ್ದಿದ್ದರಿಂದ ನಾನು ಕಡಿಮೆ ನಿದ್ದೆಯನ್ನು ಅಭ್ಯಾಸ ಮಾಡಿಕೊಂಡಿದ್ದೇನೆ” ಎಂದು ಚೌಟಾ ಹೇಳುತ್ತಾರೆ.

ದಕ್ಷಿಣ ಕನ್ನಡದಲ್ಲಿ ಚುನಾವಣೆಗೆ ಕೆಲವೇ ದಿನಗಳಿರುವಾಗ, ಮಂಗಳೂರು ಮತ್ತು ಸುತ್ತಮುತ್ತಲಿನ ಕೆಲವು ಸ್ಥಳಗಳಲ್ಲಿ ಮಳೆ ಬಂದಿದೆ.  ಆದರೆ ಪೂರ್ವ ಮಾನ್ಸೂನ್ ತುಂತುರು ಮಾತ್ರ ಕಡಿಮೆಯಿದೆ. ಚುನಾವಣಾ ಜ್ವರ ಏರುತ್ತಲೇ ಇದೆ. ಅಭ್ಯರ್ಥಿಗಳು ಸಕ್ರಿಯವಾಗಿ ಪ್ರಚಾರ ಮಾಡುವಾಗ, ಬೇಸಿಗೆಯ ತಾಪಮಾನದ ಜೊತೆಗೂ ಹೋರಾಡಬೇಕಿದೆ.

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ