ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಲೋಕಸಭೆ ಚುನಾವಣೆ 2024: ಬೇಸಿಗೆಯಲ್ಲಿ ಫಿಟ್‌ನೆಸ್ ಮಂತ್ರ
6

ಲೋಕಸಭೆ ಚುನಾವಣೆ 2024: ಬೇಸಿಗೆಯಲ್ಲಿ ಫಿಟ್‌ನೆಸ್ ಮಂತ್ರ

ಪೌಷ್ಠಿಕ ಉಪಹಾರದೊಂದಿಗೆ ದಿನವನ್ನು ಪ್ರಾರಂಭಿಸುವುದು ಮತ್ತು ದಿನವಿಡೀ ಹೈಡ್ರೇಟ್ ಆಗಿರುವುದರಿಂದ ಅಭ್ಯರ್ಥಿಗಳು ದಿನಕ್ಕೆ 10 ಗಂಟೆಗಳ ಕಾಲ ಈ ಬಿರುಬಿಸಿಲಿನಲ್ಲೂ ಫಿಟ್ ಆಗಿರಲು ಸಹಾಯ ಮಾಡುತ್ತದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಡಾ ಸಿ ಎನ್ ಮಂಜುನಾಥ್, ಬೇಸಿಗೆಯಲ್ಲಿ ಲೋಕಸಭೆ ಚುನಾವಣೆ 2024 ರ ಪ್ರಚಾರ ಮಾಡುವಾಗ ಹೈಡ್ರೇಟ್ ಆಗಿರುವತ್ತ ಗಮನ ಹರಿಸಿದ್ದಾರೆ (ಫೋಟೋ-ಅನಂತ ಸುಬ್ರಮಣ್ಯಂ ಕೆ/ಹ್ಯಾಪಿಯೆಸ್ಟ್ ಹೆಲ್ತ್)

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಪ್ರತಿದಿನ ಬೆಳಗ್ಗೆ 8 ಗಂಟೆಗೆ ಪ್ರಚಾರಕ್ಕೆ ತೆರಳಲು ಸಜ್ಜಾಗುತ್ತಾರೆ. ಡಾಕ್ಟರ್ ಮಂಜುನಾಥ್ ಅವರು ದಿನಾ ಬೆಳಿಗ್ಗೆ 6 ಗಂಟೆಗೆ ಎದ್ದು ಒಂದು ಲೋಟ ನೀರಿನೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ನಂತರ ಸಕ್ಕರೆ ಇಲ್ಲದ ಹಾಲನ್ನು ಕುಡಿಯುತ್ತಾರೆ. ಇಡ್ಲಿ, ದೋಸೆ ಅಥವಾ ಉಪ್ಪಿಟ್ಟಿನಂಥ ಉಪಾಹಾರವನ್ನು ಸೇವಿಸುತ್ತಾರೆ ಮತ್ತು ವೃತ್ತಪತ್ರಿಕೆ ಮೇಲೆ ಕಣ್ಣಾಡಿಸುವಾಗ ಒಂದು ಲೋಟ ಕಲ್ಲಂಗಡಿ ಜ್ಯೂಸ್ ಸೇವಿಸುತ್ತಾರೆ. ದಿನವೂ ಒಂದು ಬಟ್ಟಲು ಪಪ್ಪಾಯಿಯನ್ನೂ ಸೇವಿಸುತ್ತಾರೆ.

ಬೇಸಿಗೆಯ ತಿಂಗಳುಗಳಲ್ಲಿ ಲೋಕಸಭೆ 2024 ರ ಚುನಾವಣೆಯ ಪ್ರಚಾರಕ್ಕಾಗಿ ಅಭ್ಯರ್ಥಿಗಳು ಮತ್ತು ಅವರ ಸ್ವಯಂಸೇವಕರು ಆರೋಗ್ಯವಾಗಿರಲು ಶಕ್ತಿ, ನಿರ್ಣಯ, ದೃಢತೆ ಮತ್ತು ಎಚ್ಚರಿಕೆಯ ಯೋಜನೆ ಅಗತ್ಯವಿರುತ್ತದೆ. ಹ್ಯಾಪಿಯೆಸ್ಟ್ ಹೆಲ್ತ್ ಕೆಲವು ಅಭ್ಯರ್ಥಿಗಳನ್ನು ಭೇಟಿಯಾಗಿ ಸುದೀರ್ಘ ಗಂಟೆಗಳ ಕಾಲ ಅವರು ಪ್ರಚಾರ ಮಾಡುವಾಗ ಅದನ್ನು ಹೇಗೆ ನಿಭಾಯಿಸುತ್ತಾರೆ ಎಂದು ಮಾಹಿತಿ ಸಂಗ್ರಹಿಸಲಾಗಿದೆ.

‘ಮತದಾನದಷ್ಟೇ ನಡಿಗೆಯೂ ಮುಖ್ಯ’

ಬೇಸಿಗೆಯಲ್ಲಿ ಲೋಕಸಭೆ ಚುನಾವಣೆ 2024 ರ ಪ್ರಚಾರದ ಸಮಯದಲ್ಲಿ, ಡಾ ಮಂಜುನಾಥ್ ಮತದಾರರಿಗೆ ಆರೋಗ್ಯ ಸಲಹೆಗಳನ್ನು ನೀಡಿದ್ದಾರೆ. ಇತ್ತೀಚಿನ ಭಾಷಣದಲ್ಲಿ, ಅವರು ಚುನಾವಣೆಯ ದಿನದಂದು ಮತದಾನ ಕೇಂದ್ರಕ್ಕೆ ನಡೆದುಕೊಂಡು ಬಂದು ಮತದಾನ ಮಾಡಲು ಕರೆ ಕೊಟ್ಟಿದ್ದರು. ನಿಲ್ಲುವುದು ಮತ್ತು ನಡೆಯುವುದು ಎರಡೂ ವ್ಯಾಯಾಮದ ಸರಳ ವಿಧಾನಗಳು . ಅದನ್ನು ಎಲ್ಲರೂ ಅಳವಡಿಸಿಕೊಳ್ಳಬಹುದು. “ವಾಕ್ ಮಾಡಿ, ಮತದಾನದಷ್ಟೇ ಆರೋಗ್ಯವೂ ಮುಖ್ಯ” ಎಂದು ಅವರು ಇತ್ತೀಚೆಗೆ ಉದ್ಯಾನವನದಲ್ಲಿ ನಡೆದ ಸಭೆಯಲ್ಲಿ ಹೇಳಿದ್ದಾರೆ.

ಜಲಸಂಚಯನ ಮುಖ್ಯ

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಬೇಸಿಗೆಯ ಸೆಖೆ ತಡೆಯಲು ಸಾಕಷ್ಟು ದ್ರವಾಹಾರ ಸೇವಿಸುತ್ತಾರೆ (ಫೋಟೋ-ಅನಂತ ಸುಬ್ರಮಣ್ಯಂ ಕೆ/ಹ್ಯಾಪಿಯೆಸ್ಟ್ ಹೆಲ್ತ್)

ಈ ಹಿಂದೆ ಮೂರ್ಛೆ ಮತ್ತು ಕಡಿಮೆ ರಕ್ತದೊತ್ತಡದ ಸಮಸ್ಯೆ ಹೊಂದಿದ್ದ ರೆಡ್ಡಿ, ಹೈಡ್ರೇಟೆಡ್ ಆಗಿರುವುದರ ಮೇಲೆ ಗಮನ ನೀಡುತ್ತಾರೆ. “ನಾನು ಸಸ್ಯಾಹಾರಿಯಾಗಿರುವುದರಿಂದ, ನಾನು ತೆಂಗಿನ ಹಾಲು, ಬಾದಾಮ್ ಹಾಲು, ಓಟ್ ಹಾಲಿನೊಂದಿಗೆ ಕಾಫಿ ಅಥವಾ ಬ್ಲಾಕ್ ಕಾಫಿ ಅಥವಾ ಎಳನೀರನ್ನು ಕುಡಿಯುತ್ತೇನೆ. ಇದಲ್ಲದೆ ಮನೆಯಲ್ಲಿ ತಿನ್ನಲು ಸಮಯವಿಲ್ಲದಿದ್ದರೆ, ನಾನು ಕಾರಿನಲ್ಲಿ ತಿಂಡಿ ತಿನ್ನುತ್ತೇನೆ. ಹಾಗಾಗಿಯೇ ನಾನು ಕಾರಿನಲ್ಲಿ ಬಾಳೆಹಣ್ಣುಗಳು ಮತ್ತು ಡ್ರೈ ಫ್ರೂಟ್ ತೆಗೆದುಕೊಂಡು ಹೋಗುತ್ತೇನೆ. ಅಲ್ಲದೇ ನನ್ನ ಮುಂದಿನ ಊಟ ಯಾವಾಗ ಎಂದು ನನಗೆ ಗೊತ್ತಿರುವುದಿಲ್ಲ. ಸಾಮಾನ್ಯವಾಗಿ ನಾನು ಬೆಳಿಗ್ಗೆ 6.30 ಕ್ಕೆ ಪ್ರಚಾರಕ್ಕಾಗಿ ಹೊರಟರೆ ಮತ್ತು ಮಧ್ಯರಾತ್ರಿಯ ಹೊತ್ತಿಗೆ ಮನೆಗೆ ಬರುತ್ತೇನೆ, ”ಎಂದು ಸೌಮ್ಯಾ ಹೇಳುತ್ತಾರೆ.

ಡಾ. ಮಂಜುನಾಥ್ ಅವರು ಬೇಸಿಗೆಯಲ್ಲಿ ಪ್ರಚಾರಕ್ಕೆ ಹೊರಟಾಗ ತಮ್ಮ ಕಾರಿನಲ್ಲಿ ಕಿತ್ತಳೆ ಮತ್ತು ಬೆಚ್ಚಗಿನ ನೀರಿನ ಫ್ಲಾಸ್ಕ್ ಇರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ನೀರಿನಾಂಶ ಕಾಪಾಡಿಕೊಳ್ಳಲು ಎಳನೀರು ಕುಡಿಯುತ್ತಾರೆ ಮತ್ತು  ಹೊರಗೆ ಇರುವಾಗ ಹಣ್ಣಿನ ಜ್ಯೂಸ್ ತಪ್ಪಿಸುತ್ತಾರೆ

ಪ್ರಚಾರ ಮಾಡುವಾಗ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸುವುದು

ಪ್ರಚಾರ ಮಾಡುವುದು ಗಮನಾರ್ಹ ಪ್ರಮಾಣದ ದೈಹಿಕ ಚಟುವಟಿಕೆಯನ್ನು ಒಳಗೊಂಡಿರುತ್ತದೆ ಎಂದು ತೋರುತ್ತದೆಯಾದರೂ, ಡಾ ಮಂಜುನಾಥ್ ಅವರ ದಿನಕ್ಕೆ ಹೆಜ್ಜೆಗಳು 10,000 ರಿಂದ 5,000 ಕ್ಕೆ  ಇಳಿದಿದೆ. “ನನ್ನ ನಿವೃತ್ತಿಯ ಮೊದಲು ನಾನು ದಿನಕ್ಕೆ 242kcal ಬರ್ನ್ ಮಾಡುತ್ತಿದ್ದೆ. ಈಗ 153kcal ಗೆ ಇಳಿದಿದೆ. ಪ್ರಚಾರದ ವೇಳೆ ನಡೆದಾಡಿದರೂ, ಸಾಕಷ್ಟು ಸಭೆಗಳಿಗೆ ಹಾಜರಾಗುತ್ತೇನೆ, ಅಲ್ಲಿ ನಿಂತಿರುತ್ತೇನೆ’ ಎನ್ನುತ್ತಾರೆ ಡಾ.ಮಂಜುನಾಥ್.

ಸಸ್ಯಾಹಾರಿಯಾಗಿರುವ ರೆಡ್ಡಿಗೆ ಇತರ ಸವಾಲುಗಳಿವೆ. “ಕೆಲವೊಮ್ಮೆ ನಾನು ಪ್ರಚಾರಕ್ಕೆ ಹೋದಾಗ, ಜನರು ತುಪ್ಪವನ್ನು ಹೊಂದಿರುವ ಪ್ರಸಾದವನ್ನು ನೀಡುತ್ತಾರೆ, ಆದರೆ ಅದನ್ನು ತುಂಬಾ ಪ್ರೀತಿಯಿಂದ ನೀಡಲಾಗುತ್ತದೆ, ಅದನ್ನು ನಿರಾಕರಿಸಲು ನನಗೆ ಸಾಧ್ಯವಾಗುವುದಿಲ್ಲ. ಅಲ್ಲದೆ ನನಗೆ ಯಾವಾಗಲೂ ಗಂಟಲು ಕಟ್ಟುವುದರಿಂದ. ಯಾವಾಗಲೂ ನನ್ನ ಕಾರಿನಲ್ಲಿ ಲೋಜೆಂಜ್‌ಗಳು ಮತ್ತು ಬಿಸಿನೀರನ್ನು ಇಡುತ್ತೇನೆ. ಇದಲ್ಲದೆ, ನನಗೆ ಆಸ್ತಮಾ ಇರುವುದರಿಂದ, ನನಗೆ ಕೆಲವೊಮ್ಮೆ ಇನ್ಹೇಲರ್‌ಗಳು ಮತ್ತು ನೆಬ್ಯುಲೈಸೇಶನ್ ಅಗತ್ಯವಿರುತ್ತದೆ ”ಎಂದು ಅವರು ಹೇಳುತ್ತಾರೆ.

ತೊಂದರೆಗಳನ್ನು ಒಪ್ಪಿಕೊಳ್ಳುವುದು

ಬೇಸಿಗೆಯಲ್ಲಿ ಲೋಕಸಭೆ ಚುನಾವಣೆ 2024 ಕ್ಕೆ ಪ್ರಚಾರ ಮಾಡುವಾಗ, ಸಾರ್ವಜನಿಕ ಶೌಚಾಲಯಗಳ ಕೊರತೆ ಅಥವಾ ಸಂಬಂಧಿತ ನೈರ್ಮಲ್ಯ ಸಮಸ್ಯೆಗಳಿಂದಾಗಿ ಅನೇಕರು ಹೊರಗೆ ಇರುವಾಗ ದ್ರವ ಆಹಾರಗಳ ಸೇವನೆಯನ್ನು ಕಡಿಮೆ ಮಾಡುತ್ತಾರೆ ಎಂದು ಸೌಮ್ಯಾ ಒಪ್ಪಿಕೊಳ್ಳುತ್ತಾರೆ. ಆದರೆ ಜನರು ನೀರನ್ನು ಕೊಂಡೊಯ್ಯಬೇಕಾಗಬಹುದು ಮತ್ತು ರೆಸ್ಟೋರೆಂಟ್‌ಗಳಲ್ಲಿ ವಿಶ್ರಾಂತಿ ಕೊಠಡಿಗಳನ್ನು ಬಳಸಬೇಕಾಗಬಹುದು, ಅವುಗಳು ಸ್ವಚ್ಛವಾಗಿರುತ್ತವೆ.

ಕಳೆದ ಕೆಲವು ವರ್ಷಗಳಿಂದ ನಗರದಲ್ಲಿನ ಹವಾಮಾನ ಬದಲಾವಣೆಗಳ ಕುರಿತು ಮಾತನಾಡುತ್ತಾ, “ನಾನು ಬೆಂಗಳೂರು ಹವಾಮಾನ ಕ್ರಿಯಾ ಯೋಜನೆಯ ಭಾಗವಾಗಿದ್ದೇನೆ. ಆರೋಗ್ಯಕರ ಪರಿಸರಕ್ಕಾಗಿ ಹೆಚ್ಚಿನ ಮರಗಳನ್ನು ನೆಡುವ ಅಗತ್ಯವಿದೆ” ಎನ್ನುತ್ತಾರೆ ಸೌಮ್ಯಾ

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ