ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಉದ್ವೇಗ(Anxiety): ಚಿಹ್ನೆಗಳು, ಲಕ್ಷಣಗಳು ಮತ್ತು ಚಿಕಿತ್ಸೆ 
3

ಉದ್ವೇಗ(Anxiety): ಚಿಹ್ನೆಗಳು, ಲಕ್ಷಣಗಳು ಮತ್ತು ಚಿಕಿತ್ಸೆ 

ಉದ್ವೇಗವು ನಿದ್ರಾಭಂಗ, ತಲೆನೋವು, ಏಕಾಗ್ರತೆ ಕೊರತೆ ಮತ್ತು ಸ್ನಾಯು ನೋವುಗಳಿಗೆ ಕಾರಣವಾಗಬಹುದು.

ಉದ್ವೇಗ: ಚಿಹ್ನೆಗಳು, ಲಕ್ಷಣಗಳು ಮತ್ತು ಚಿಕಿತ್ಸೆ 

 ಪ್ರತಿಯೊಬ್ಬರೂ ತಮ್ಮ ಜೀವನದ ಒಂದಲ್ಲ ಒಂದು ಹಂತದಲ್ಲಿ ಉದ್ವೇಗ (Anxiety)ವನ್ನು ಅನುಭವಿಸಿರುತ್ತಾರೆ. ಇದರಿಂದಾಗಿ ಸಾಂದರ್ಭಿಕವಾಗಿ ಅನಾನುಕೂಲತೆ ಅನುಭವಿಸುವುದು ಸಾಮಾನ್ಯವಾಗಿದೆ. ಇದು ಪರೀಕ್ಷೆ ಬರೆಯುವಾಗ, ವೈದ್ಯರಿಂದ ದೈಹಿಕ ಪರೀಕ್ಷೆ ಮಾಡಿಸಿಕೊಳ್ಳುವಾಗ, ಉದ್ಯೋಗದ ಸಂದರ್ಶನಕ್ಕೆ ಹಾಜರಾಗುವಾಗ ಅಥವಾ ಪ್ರೇಕ್ಷಕರ ಮುಂದೆ ಮಾತನಾಡುವಾಗ.. ಹೀಗೆ ಯಾವುದೇ ಸಂದರ್ಭದಲ್ಲೂ ಆಗಿರಬಹುದು. ಆದರೂ ನಾವು ಅದನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಮತ್ತು ಚಿಂತೆಯು ದೀರ್ಘಕಾಲೀನವಾದಾಗ, ಅದು ಸಮಸ್ಯೆಯಾಗಿ ಪರಿವರ್ತನೆಯಾಗುತ್ತದೆ. 

ಉದ್ವೇಗವು ಭಾವನಾತ್ಮಕ ಸ್ಥಿತಿಯಾಗಿದ್ದು ಅದು ಕ್ಷೋಭೆ ಅಥವಾ ವೇದನೆಗೆ ಸಂಬಂಧಿಸಿದೆ ಮತ್ತು ಸೌಮ್ಯ ಮಟ್ಟದಿಂದ ತೀವ್ರ ಮಟ್ಟದ ವರೆಗೂ ಇರಬಹುದು. ಒಬ್ಬ ವ್ಯಕ್ತಿಯು ಭಯ ಅಥವಾ ಚಿಂತೆಯನ್ನು ದೀರ್ಘಕಾಲದವರೆಗೆ ಹೊಂದಿದ್ದಾಗ ಮತ್ತು ಕಾಲಾನಂತರದಲ್ಲಿ ಹೆಚ್ಚುತ್ತಲೇ ಹೋದರೆ, ಅವರು ಉದ್ವೇಗದ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದರ್ಥ. 

ಉದ್ವೇಗದ ಲಕ್ಷಣಗಳು 

ಉದ್ವೇಗವು ಗಾಬರಿಯ ಅಸ್ವಸ್ಥತೆಗಳು, ಫೋಬಿಯಾಗಳು, ಪೋಸ್ಟ್ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್‌ಡಿ) ಮತ್ತು ಜನರಲೈಸ್ಡ್ ಆಂಕ್ಸೈಟಿ ಡಿಸಾರ್ಡರ್ (ಜಿಎಡಿ) ಯಂತಹ ಇತರ ವೈದ್ಯಕೀಯ ಸ್ಥಿತಿಗಳಾದ ಪ್ರಮುಖ ಲಕ್ಷಣವಾಗಿದೆ.
 

ಹೆಚ್ಚಿದ ಹೃದಯ ಬಡಿತ, ನಡುಕ, ಕಿರಿಕಿರಿ, ಬೆವರು, ಇದ್ದಕ್ಕಿದ್ದಂತೆ ಮೈ ಬಿಸಿಯಾಗುವುದು, ಬಾಯಿ ಒಣಗುವಿಕೆ ಮತ್ತು ತಲೆತಿರುಗುವಿಕೆ ಇತ್ಯಾದಿ ಉದ್ವೇಗದ ಪ್ರಮುಖ ಲಕ್ಷಣಗಳಾಗಿವೆ. ವಿಪರೀತ ಸಂದರ್ಭಗಳಲ್ಲಿ, ರೋಗಲಕ್ಷಣಗಳು ಹೆಚ್ಚಾಗಬಹುದು ಮತ್ತು ಬಳಲಿಕೆ, ತಲೆನೋವು, ಹಸಿವು ಮತ್ತು ತೂಕದಲ್ಲಿನ ಬದಲಾವಣೆಗಳು, ಏಕಾಗ್ರತೆಯ ತೊಂದರೆಗಳು, ಸ್ನಾಯು ಸೆಳೆತ ಮತ್ತು ಯಾತನೆ ಮತ್ತು ನೋವುಗಳಿಗೆ ಕಾರಣವಾಗಬಹುದು. 

ಉದ್ವೇಗಕ್ಕೆ ಕಾರಣವೇನು? 

ಉದ್ವೇಗಕ್ಕೆ ಕಾರಣವಾಗುವ ಅಂಶಗಳು ಮತ್ತು ಮಾದರಿಗಳನ್ನು ಸರಿಯಾಗಿ ಗುರುತಿಸಬೇಕು ಮತ್ತು ಸಂಶೋಧನೆಯ ಮೂಲಕ ಪ್ರಮಾಣೀಕರಿಸಬೇಕು. ಉದ್ವೇಗಕ್ಕೆ ಕಾರಣವೇನು ಎಂಬುದನ್ನು ನಮಗೆ ಇನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೂ, ಹಲವಾರು ಅಂಶಗಳು ಉದ್ವೇಗವನ್ನು ಉಂಟುಮಾಡಬಹುದು ಎಂದು ಸಂಶೋಧಕರು ಹೇಳುತ್ತಾರೆ. 

ಮನಸ್ಥಿತಿ ಮತ್ತು ನಡವಳಿಕೆಯನ್ನು ನಿಯಂತ್ರಿಸುವ ಮೆದುಳಿನ ರಾಸಾಯನಿಕಗಳ ಅಸಮತೋಲನಗಳು, ಭೂತಕಾಲದಲ್ಲಿ ಒತ್ತಡ ಉಂಟುಮಾಡಿದ ಅಥವಾ ಆಘಾತಕಾರಿ ಅನುಭವಗಳು, ಥೈರಾಯ್ಡ್ ಅಸ್ವಸ್ಥತೆಗಳು, ಆಸ್ತಮಾ, ರಕ್ತದೊತ್ತಡದಲ್ಲಿನ ಬದಲಾವಣೆಗಳು, ಸಿಒಪಿಡಿ (ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ), ಮಾನಸಿಕ ಕಾಯಿಲೆಗಳು, ಮಾದಕ ವ್ಯಸನ ಮತ್ತು ದೀರ್ಘಕಾಲದ ಮದ್ಯಪಾನ ಇತ್ಯಾದಿಗಳು ಉದ್ವೇಗಕ್ಕೆ ಕಾರಣವಾಗುವ ಅಂಶಗಳಾಗಿವೆ. 

ನೆರವನ್ನು ಪಡೆದುಕೊಳ್ಳಿ 

ಈ ಯಾವುದಾದರೂ ಒಂದು ಅಂಶದಿಂದ ಯಾರಾದರೂ ಬಾಧಿತರಾಗಿದ್ದರೆ ಮತ್ತು ಅದು ಅವರ ದೈನಂದಿನ ಜೀವನದ ಮೇಲೆ (ಅರಿವಿನ ಅಥವಾ ನಡವಳಿಕೆಯ ಮೇಲೆ) ಪರಿಣಾಮ ಬೀರುತ್ತಿದ್ದರೆ ಮತ್ತು ನಿಯಮಿತವಾಗಿ ತೊಂದರೆ ಉಂಟುಮಾಡುವ ಸಾಮಾಜಿಕ ಉದ್ವೇಗದ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ಅದು ಕುಟುಂಬದ ಸದಸ್ಯರು ಅಥವಾ ವಿಶ್ವಾಸಾರ್ಹ ವೈದ್ಯರಿಂದ ನೆರವನ್ನು ಪಡೆದುಕೊಳ್ಳುವ ಸಮಯವಾಗಿರಬಹುದು. 

ಸಾಮಾಜಿಕ ಉದ್ವೇಗದ ಚಿಹ್ನೆಗಳು ಸೌಮ್ಯವಾಗಿದ್ದಾಗ, ಯೋಗ ಮತ್ತು ಧ್ಯಾನದ ಅಭ್ಯಾಸ; ಸಮತೋಲಿತ ಮತ್ತು ಪೌಷ್ಟಿಕ ಆಹಾರದ ಸೇವನೆ; ಮತ್ತು ಸೀಮಿತ ಕಾಫಿ, ಚಹಾ ಮತ್ತು ಆಲ್ಕೊಹಾಲ್‌ಯುಕ್ತ ಪಾನೀಯಗಳ ಬಳಕೆಯಿಂದ ಸ್ವಲ್ಪ ಪರಿಹಾರವನ್ನು ಕಂಡುಕೊಳ್ಳಬಹುದು. ಅಂತಹ ವ್ಯಕ್ತಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಸರಳ ಕ್ರೀಡೆಗಳು, ಸಂಗೀತ ಮತ್ತು ಹವ್ಯಾಸಗಳಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಪ್ರಯೋಜನಕಾರಿ ಎಂದು ತಜ್ಞರು ಸಲಹೆ ನೀಡುತ್ತಾರೆ. 

ಉದ್ವೇಗದ ಚಿಹ್ನೆಗಳು ಮಧ್ಯಮದಿಂದ ತೀವ್ರತರವಾಗಿದ್ದಾಗ ಮನೋವೈದ್ಯಕೀಯ ಚಿಕಿತ್ಸೆ, ಔಷಧ, ಅಥವಾ ಇದೆರಡರ ಸಂಯೋಜನೆಯು ಪರಿಣಾಮಕಾರಿ ಉದ್ವೇಗದ ಚಿಕಿತ್ಸೆಯಾಗಿದೆ ಎನ್ನುವುದನ್ನು ಆರೋಗ್ಯ ತಜ್ಞರು ಕಂಡುಹಿಡಿದಿದ್ದಾರೆ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿಯಲ್ಲಿ, ಮಾನಸಿಕ ಆರೋಗ್ಯ ತಜ್ಞರು ರೋಗಿಯ ಆಲೋಚನೆಗಳು ಮತ್ತು ಕಳವಳಗಳನ್ನು ಆಲಿಸಿ ಅವುಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಮತ್ತು ನಿಯಂತ್ರಿಸಬೇಕು ಎಂಬುದಕ್ಕೆ ಸಲಹೆಗಳನ್ನು ನೀಡುತ್ತಾರೆ. 

ಇದಲ್ಲದೆ, ಇತರ ಮಾನಸಿಕ ಚಿಕಿತ್ಸೆಗಳು ಒತ್ತಡ ಮತ್ತು ಉದ್ವೇಗದ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಚಿಕಿತ್ಸೆಯಲ್ಲಿ ನಿಷ್ಪರಿಣಾಮಕಾರಿಯಾಗಿದ್ದರೆ, ವೈದ್ಯರು ಪ್ರತಿಖಿನ್ನತೆ (anti-depressants) ಮತ್ತು ಪ್ರತಿಉದ್ವೇಗ (anti-anxiety) ಔಷಧಗಳನ್ನು ಶಿಫಾರಸು ಮಾಡಬಹುದು. 

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ