ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ನವಜಾತ ಶಿಶುಗಳಲ್ಲಿ ಕಾಮಾಲೆ ಬಂದರೆ ಚಿಕಿತ್ಸೆ ಏನು? 
23

ನವಜಾತ ಶಿಶುಗಳಲ್ಲಿ ಕಾಮಾಲೆ ಬಂದರೆ ಚಿಕಿತ್ಸೆ ಏನು? 

ನವಜಾತ ಶಿಶುಗಳು ಅದರಲ್ಲೂ ವಿಶೇಷವಾಗಿ ಅವಧಿಪೂರ್ವವಾಗಿ ಜನಿಸಿದ ಶಿಶುಗಳಲ್ಲಿ ಕಾಮಾಲೆ ಸಾಮಾನ್ಯ ಸಂಗತಿಯಾಗಿದೆ. ಬಹುತೇಕ ಸಂದರ್ಭಗಳಲ್ಲಿ ಅದು ತನ್ನಷ್ಟಕ್ಕೇ ಸರಿಹೋಗುತ್ತದೆ. ಆದರೆ ಕೆಲವು ಬಾರಿ ಶಿಶುಗಳಿಗೆ ಫೋಟೊಥೆರಪಿ ನೀಡಬೇಕಾಗುತ್ತದೆ. 

ನವಜಾತ ಶಿಶುಗಳಲ್ಲಿ ಕಂಡುಬರುವ ಕಾಮಾಲೆ (ಜಾಂಡೀಸ್)

ಗಾಯತ್ರಿ ಬೈಶ್ಯಾ ಅವರು ಆಗಸ್ಟ್ 2021 ರಲ್ಲಿ ಮಗುವನ್ನು ಹೆತ್ತ ಸಂಭ್ರಮದ ಜೊತೆಜೊತೆಯಲ್ಲೇ ಒತ್ತಡಕ್ಕೆ ಒಳಗಾಗಬೇಕಾಗಿ ಬಂತು. ಅವರ ನವಜಾತ ಶಿಶುವನ್ನು ಐಸಿಯುನಲ್ಲಿ ನೋಡಬೇಕಾಯಿತು. ಯಾಕೆಂದರೆ, ಹೆಣ್ಣು ಮಗುವಿಗೆ ನವಜಾತ ಕಾಮಾಲೆ ಇತ್ತು. ಆಕೆ ಜನಿಸಿದ ಎರಡನೇ ದಿನಕ್ಕೆ ಅವಳ ಬಿಲಿರುಬಿನ್ ಮಟ್ಟ ವಿಪರೀತ ಹೆಚ್ಚಾಗಿತ್ತು. 

 ಸ್ವತಃ ನರ್ಸ್ ಆಗಿದ್ದ ಬೈಶ್ಯಾ ಶಿಶುವಿನ ಸ್ಥಿತಿಯನ್ನು ತಕ್ಷಣವೇ ಗುರುತಿಸಿದರು. “ಅವಳ ಕಣ್ಣಿನ ಬಿಳಿ ಭಾಗವು ಹಳದಿ ಬಣ್ಣಕ್ಕೆ ಬದಲಾಗುವುದನ್ನು ನಾನು ಗಮನಿಸಿದಾಗ ಅದು ಕಾಮಾಲೆಯಿರಬಹುದು ಎಂದು ಶಂಕಿಸಿದೆ. ರಕ್ತ ಪರೀಕ್ಷೆಯಿಂದ ದೃಢಪಟ್ಟ ಬಳಿಕ, ವೈದ್ಯರು ಅವಳನ್ನು 24 ಗಂಟೆಗಳ ಕಾಲ ಫೋಟೋಥೆರಪಿ ಚಿಕಿತ್ಸೆಗೆ ಒಳಪಡಿಸಿದರು ಮತ್ತು ಅವಳು ಸುಲಭವಾಗಿ ಚೇತರಿಸಿಕೊಂಡಳು. ಆಕೆಗೆ ಚೆನ್ನಾಗಿ ಸ್ತನ್ಯಪಾನ ಮಾಡಿಸಬೇಕು ಮತ್ತು ಅವಳನ್ನು ನಿಯಮಿತವಾಗಿ ಸೂರ್ಯನ ಬೆಳಕಿಗೆ ಒಡ್ಡಬೇಕು ಎಂದು ನನಗೆ ವೈದ್ಯರು ತಿಳಿಸಿದ್ದರುಎಂದು ಅವರು ಹೇಳುತ್ತಾರೆ. 

 ಈಗಷ್ಟೇ ಜನಿಸಿದ ಶಿಶುವನ್ನು ವೈದ್ಯಕೀಯವಾಗಿ ನವಜಾತ ಶಿಶು ಎಂದು ಕರೆಯುತ್ತಾರೆ, ಅದು ಬಿಳುಚಿದ ಮತ್ತು ಹಳದಿ ಬಣ್ಣವನ್ನು ಹೊಂದಿದ್ದರೆ, ಮಗು ನವಜಾತ ಕಾಮಾಲೆ ಅಥವಾ ಹೈಪರ್‌ಬಿಲಿರುಬಿನೆಮಿಯಾದಿಂದ ಬಳಲುತ್ತಿರುವ ಸಾಧ್ಯತೆಯಿದೆ. ನವಜಾತ ಶಿಶುವಿನ ರಕ್ತದಲ್ಲಿ ಹೆಚ್ಚು ಬಿಲಿರುಬಿನ್ ಇರುವ ಸ್ಥಿತಿ ಇದಾಗಿದೆ. ಬಿಲಿರುಬಿನ್ ಪಿತ್ತರಸದಲ್ಲಿರುವ ಹಳದಿ ವರ್ಣದ್ರವ್ಯವಾಗಿದ್ದು ಅದು ಯಕೃತ್ತಿನಿಂದ ಬಿಡುಗಡೆಯಾಗುತ್ತದೆ. 

ನವಜಾತ ಶಿಶುವಿನ ಕಾಮಾಲೆಯು ತಾತ್ಕಾಲಿಕ ಸ್ಥಿತಿಯಾಗಿದೆ ಹಾಗೂ ಚಿಕಿತ್ಸೆ ನೀಡಬಹುದಾಗಿದೆ. ಆದರೂ ಕೆಲವೊಮ್ಮೆ ಅದು ಬೇರೊಂದು ಆರೋಗ್ಯ ಸಮಸ್ಯೆಯ ಸಂಕೇತವಾಗಿರುವ ಸಾಧ್ಯತೆಯೂ ಇದೆ. 

ನವಜಾತ ಶಿಶುವಿನಲ್ಲಿ ಕಾಮಾಲೆ: ಅಪಕ್ವವಾದ ಯಕೃತ್ತಿನ ಕಿಣ್ವಗಳೇ (Immature liver enzymes) ಕಾರಣ 

ಬೆಂಗಳೂರು ಮೂಲದ ಮಕ್ಕಳ ತಜ್ಞ ಡಾ.ಭಾಸ್ಕರ್ ಶೆಣೈ ಅವರ ಪ್ರಕಾರ, ನವಜಾತ ಶಿಶುವಿನ ಕಾಮಾಲೆಗೆ ಮುಖ್ಯ ಕಾರಣ  ಬಿಲಿರುಬಿನ್ ಅನ್ನು ಚಯಾಪಚಯಗೊಳಿಸುವ ಯಕೃತ್ತಿನ ಕಿಣ್ವಗಳ ಅಪಕ್ವತೆಯಾಗಿದೆ. 

ಕೆಂಪು ರಕ್ತ ಕಣಗಳು ನಾಶವಾಗಿ ಬಿಲಿರುಬಿನ್ ಉತ್ಪತ್ತಿಯಾಗುತ್ತದೆ. ಬಿಲಿರುಬಿನ್ ಅನ್ನು ವಿಘಟಿಸುವ ಹಲವಾರು ಕಿಣ್ವಗಳನ್ನು ಹೊಂದಿರುವ ಯಕೃತ್ತಿನ ಮೂಲಕ ಕೆಂಪು ರಕ್ತ ಕಣಗಳು ಹಾದುಹೋಗುತ್ತವೆ. ನವಜಾತ ಶಿಶುಗಳಲ್ಲಿ, ಕಿಣ್ವಗಳು ಉತ್ತಮವಾಗಿ ಅಭಿವೃದ್ಧಿ ಹೊಂದಿರುವುದಿಲ್ಲ, ಆದ್ದರಿಂದ ಬಿಲಿರುಬಿನ್ ಸರಿಯಾಗಿ ಚಯಾಪಚಯಗೊಳ್ಳದೆಶಾರೀರಿಕ ಕಾಮಾಲೆಎಂದು ಕರೆಯಲ್ಪಡುವ ಸ್ಥಿತಿ ಉಂಟಾಗುತ್ತದೆಎಂದು ಡಾ. ಶೆಣೈ ಹೇಳುತ್ತಾರೆ. 

ನವಜಾತ ಶಿಶುವಿನಲ್ಲಿ ಕಂಡುಬರುವ ಕಾಮಾಲೆ ವಿಧಗಳು: 

ನವಜಾತ ಶಿಶುಗಳಲ್ಲಿಶಾರೀರಿಕಮತ್ತುರೋಗಲಕ್ಷಣದಿಂದ ಕೂಡಿದಎಂಬ ಎರಡು ಪ್ರಕಾರದ ಕಾಮಾಲೆ ಕಂಡುಬರುತ್ತದೆ ಎಂದು ಡಾ. ಶೆಣೈ ಸೂಚಿಸುತ್ತಾರೆ. 

ಶಾರೀರಿಕ ಕಾಮಾಲೆ ಸಾಮಾನ್ಯವಾಗಿ ಹೆರಿಗೆಯ ಎರಡನೇ ದಿನದಂದು ಪ್ರಾರಂಭವಾಗುತ್ತದೆ. 

ರೋಗಲಕ್ಷಣದಿಂದ ಕೂಡಿದ ಕಾಮಾಲೆಯು ಹುಟ್ಟಿದ ಮೊದಲ ದಿನದಂದೇ ಉಂಟಾಗುತ್ತದೆ, ಸಂದರ್ಭದಲ್ಲಿ, ಕಾಮಾಲೆಯು ಪ್ರಸ್ತುತವಿರುವ ಕಾಯಿಲೆಯನ್ನು ಸೂಚಿಸುತ್ತದೆ. ಇದು ಹೆಚ್ಚು ತೀವ್ರವಾಗಿರುತ್ತದೆ ಆದ್ದರಿಂದ ತಕ್ಷಣವೇ ವೈದ್ಯಕೀಯ ನೆರವನ್ನು ಪಡೆದುಕೊಳ್ಳುವುದು ಅವಶ್ಯಕವಾಗಿರುತ್ತದೆ. 

ಶಾರೀರಿಕ ಜಾಂಡೀಸ್‌ಗೆ ಎರಡು ಸಾಮಾನ್ಯ ಕಾರಣಗಳು ಅಧಿಕ ಹಿಮೋಗ್ಲೋಬಿನ್ ಮಟ್ಟಗಳು ಮತ್ತು ಯಕೃತ್ತಿನ ಕ್ರಿಯೆಯ ಅಪಕ್ವತೆಯಾಗಿವೆ ಎಂದು ಮುಂಬೈನ ಸಂಜೀವನಿ ಮೆಡಿಕಲ್ ಸೆಂಟರ್‌ನ ಮಕ್ಕಳ ತಜ್ಞೆ ಡಾ. ಮನೀಶಾ ಬಾವಡೇಕರ್ ಅವರು ಹೇಳುತ್ತಾರೆ. 

ಕಾಮಾಲೆಗೆ ಕಾರಣವಾಗುವ ಇತರ ಕಾರಣಗಳನ್ನು ಡಾ. ಶೆಣೈ ಅವರು ಕೆಳಗಿನಂತೆ ಉಲ್ಲೇಖಿಸಿದ್ದಾರೆ: 

  • ಸಾಕಷ್ಟು ಹಾಲು ಸಿಗದಿರುವುದು 
  • ತಾಯಿ ಮತ್ತು ಮಗುವಿನ ರಕ್ತದ ಗುಂಪುಗಳ ಹೊಂದಿಕೊಳ್ಳದಿರುವಿಕೆ: ABO ಹೊಂದಿಕೊಳ್ಳದಿರುವಿಕೆ (ತಾಯಿಯ ರಕ್ತದ ಗುಂಪು O+ ಮತ್ತು ಮಗು A+ ಅಥವಾ B+) ಮತ್ತು Rh ಅಂಶದ ಹೊಂದಿಕೊಳ್ಳದಿರುವಿಕೆ (Rh ಅಥವಾ ರೀಸಸ್ ಎಂಬುದು ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಕಂಡುಬರುವ ಆನುವಂಶೀಯ ಅಂಶವಾಗಿದೆ; ಅದರ ಉಪಸ್ಥಿತಿಯನ್ನು Rh+ ಎಂದು ಕರೆಯಲಾಗುತ್ತದೆ ಮತ್ತು ಅದರ ಅನುಪಸ್ಥಿತಿಯನ್ನು Rh- ಎಂದು ಕರೆಯಲಾಗುತ್ತದೆ.) 
  • ಥೈರಾಯ್ಡ್ ಹಾರ್ಮೋನ್ ಕೊರತೆ 
  • G6PD ಕೊರತೆ (ಕೆಂಪು ರಕ್ತ ಕಣಗಳನ್ನು ವಿಘಟಿಸುವ G6PD ಕಿಣ್ವದ ಕೊರತೆಯಿಂದಾಗಿ ಉಂಟಾಗುವ ಆನುವಂಶೀಯ ಸ್ಥಿತಿ) 
  • ಗರ್ಭಾವಸ್ಥೆಯಲ್ಲಿ TORCH ಸೋಂಕು (ಟಾಕ್ಸೊಪ್ಲಾಸ್ಮಾಸಿಸ್, ರುಬೆಲ್ಲಾ, ಸೈಟೊಮೆಗಾಲೊವೈರಸ್, ಹರ್ಪಿಸ್ ಸಿಂಪ್ಲೆಕ್ಸ್ ಮತ್ತು HIV ನಂತಹ ಸೋಂಕುಗಳ ಗುಂಪು) ಬೆಳೆಯುತ್ತಿರುವ ಭ್ರೂಣದ ಮೇಲೆ ಪರಿಣಾಮ ಬೀರಬಹುದು. ಹೆರಿಗೆಯ ನಂತರ ತಾಯಿಯಲ್ಲಿ ಸೋಂಕು ಅಭಿವೃದ್ಧಿಯಾದರೆ, ಅದು ಎದೆಹಾಲಿನ ಮೂಲಕ ಮಗುವಿಗೆ ವರ್ಗಾವಣೆಯಾಗಬಹುದು. 

 ನವಜಾತ ಶಿಶು ಕಾಮಾಲೆ ರೋಗವನ್ನು ಹೊಂದಿದ್ದಾಗ 

ಮೊದಲ ದಿನದ ಕಾಮಾಲೆ ರೋಗ ಯಾವಾಗಲೂ ರೋಗಲಕ್ಷಣಗಳಿಂದ ಕೂಡಿರುತ್ತದೆ. ಹಾಗೂಇದು ಸಾಮಾನ್ಯವಾಗಿ ABO ಮತ್ತು Rh ಹೊಂದಿಕೊಳ್ಳದಿರುವಿಕೆಯಿಂದ ಉಂಟಾಗುತ್ತದೆ,” ಎಂದು ಡಾ.ಬಾವಡೇಕರ್ ಹೇಳುತ್ತಾರೆ. 

ಶಾರೀರಿಕ ಕಾಮಾಲೆ ಸಾಮಾನ್ಯವಾಗಿ ಮೂರನೇ ದಿನದಿಂದ ಪ್ರಾರಂಭವಾಗುತ್ತದೆ ಮತ್ತು ನಾಲ್ಕು ಅಥವಾ ಐದು ದಿನಗಳವರೆಗೆ ಮುಂದುವರಿಯುತ್ತದೆ. ಒಂದು ವಾರ ಅಥವಾ ಹತ್ತು ದಿನಗಳಲ್ಲಿ, ಅದು ಮೂಲಸ್ಥಿತಿಗೆ ಬರುತ್ತದೆ. ಸಂದರ್ಭಗಳಲ್ಲಿ, ಮಗುವಿನ ಬಿಲಿರುಬಿನ್ ಮಟ್ಟ ಪ್ರಮುಖ ಪಾತ್ರ ವಹಿಸುತ್ತದೆ. ಕಾಮಾಲೆಯ ಮೊದಲ ದಿನವು ಹೆಚ್ಚು ಅಪಾಯಕಾರಿಯಾಗಿದೆ; ವೈದ್ಯರು ತ್ವರಿತವಾಗಿ ಕಾರ್ಯನಿರ್ವಹಿಸಬೇಕು. Rh ಹೊಂದಿಕೊಳ್ಳದಿರುವಿಕೆಯು ರೋಗಲಕ್ಷಣಗಳಿಂದ ಕೂಡಿದ ಕಾಮಾಲೆಗೆ ಕಾರಣವಾಗುತ್ತದೆ, ಇದು ABO ಹೊಂದಿಕೊಳ್ಳದಿರುವಿಕೆಗಿಂತ ಹೆಚ್ಚು ತೀವ್ರವಾಗಿರುತ್ತದೆಎಂದು ಡಾ ಶೆಣೈ ವಿವರಿಸುತ್ತಾರೆ. 

ತಪಾಸಣೆ ಮತ್ತು ರೋಗಲಕ್ಷಣಗಳು 

 “ಒಂಬತ್ತನೇ ತಿಂಗಳಿಗೆ ಜನಿಸಿದ ಸಾಮಾನ್ಯ ತೂಕವನ್ನು ಹೊಂದಿರುವ ಮಗು ಬಿಲಿರುಬಿನ್ ಶೇಖರಣೆಯಿಂದಾಗಿ ಸ್ಕ್ಲೀರಾ (ಕಣ್ಣಿನ ಬಿಳಿಪೊರೆ) ಮತ್ತು ಚರ್ಮವು ಹಳದಿಯಾಗುವುದು ಮುಂತಾದ ವಿಶಿಷ್ಟ ರೋಗಲಕ್ಷಣಗಳನ್ನು ಹೊಂದಿರುತ್ತದೆ. ವಾಡಿಕೆಯ ತಪಾಸಣೆಯನ್ನು ಯಾವಾಗಲೂ ಮಾಡಲಾಗುತ್ತದೆ, ಮತ್ತು ಸೀರಮ್ ಬಿಲಿರುಬಿನ್ ರಕ್ತ ಪರೀಕ್ಷೆಯ ಮೂಲಕ ಮಗುವಿನ ಬಿಲಿರುಬಿನ್ ಮಟ್ಟವನ್ನು ಕಂಡುಕೊಳ್ಳುವುದು ಮುಂದಿನ ಹಂತವಾಗಿದೆ ಎನ್ನುತ್ತಾರೆ ಡಾ.ಶೆಣೈ. 

 “ಮಗು ಆಸ್ಪತ್ರೆಯಲ್ಲಿದ್ದಾಗ ಕಾಮಾಲೆಯ ಯಾವುದೇ ಚಿಹ್ನೆಗಳು ಕಂಡುಬರುತ್ತವೆಯೇ ಎಂದು ಪ್ರತಿದಿನ ಮೇಲ್ವಿಚಾರಣೆ ಮಾಡಲಾಗುತ್ತದೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರವೂ ಫಾಲೋಅಪ್‌ಗಾಗಿ ಅವರನ್ನು ಸಂಪರ್ಕಿಸಲಾಗುತ್ತದೆ. ಕಾಮಾಲೆಯಲ್ಲಿ ಕಣ್ಣಿನ ಬಣ್ಣದ ಹಳದಿಯಾಗುವುದರ ಜೊತೆಗೆ ಮೂತ್ರವೂ ಕೂಡ ಕಡು ಹಳದಿ ಬಣ್ಣಕ್ಕೆ ತಿರುಗುತ್ತದೆ ಎಂದು ಡಾ. ಬಾವಡೇಕರ್ ಅವರು ಒತ್ತಿ ಹೇಳುತ್ತಾರೆ. 

ಅವಧಿ ಪೂರ್ವವಾಗಿ ಜನಿಸಿದ ಶಿಶುಗಳು ಹೆಚ್ಚಿನ ಅಪಾಯವನ್ನು ಎದುರಿಸೋದು ಯಾಕೆ? 

ಕಾಮಾಲೆಯು ಅವಧಿ ಪೂರ್ವವಾಗಿ ಜನಿಸಿದ ಶಿಶುಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ ಮತ್ತು ಹೆಚ್ಚಾಗಿರುತ್ತದೆ ಏಕೆಂದರೆ ಅವುಗಳು ಕಡಿಮೆ ಜನನ ತೂಕ ಹೊಂದಿರುತ್ತವೆ, ವಿಶೇಷವಾಗಿ ABO ಹೊಂದಿಕೊಳ್ಳದಿರುವಿಕೆ ಕಂಡುಬರುತ್ತದೆ. G6PD ಕೊರತೆಯಿರುವ ಮತ್ತು ಸ್ಪೆರೋಸೈಟೋಸಿಸ್ (ಕೆಂಪು ರಕ್ತ ಕಣಗಳು ಡಿಸ್ಕ್ಆಕಾರದ ಬದಲಿಗೆ ಗೋಲಾಕಾರದಲ್ಲಿರುವ ಅನುವಂಶೀಯ ಸ್ಥಿತಿ) ಹೊಂದಿರುವ ಶಿಶುಗಳೂ ಕೂಡ ಹೆಚ್ಚಿನ ಅಪಾಯವನ್ನು ಎದುರಿಸುತ್ತವೆಎಂದು ಡಾ. ಬಾವಡೇಕರ್ ಹೇಳುತ್ತಾರೆ. 

ಅವಧಿ ಪೂರ್ವವಾಗಿ ಜನಿಸಿದ ಶಿಶುವು ಬಿಲಿರುಬಿನ್ ನಿರ್ಮಾಣದ ಸಂದರ್ಭದಲ್ಲಿ ಋಣಾತ್ಮಕ ಪರಿಣಾಮಗಳನ್ನು ಎದುರಿಸುವ ಸಾಧ್ಯತೆಯಿದೆ. ರಕ್ತಮಿದುಳಿನ ತಡೆಗೋಡೆ ದಾಟುವ ರಕ್ತದಲ್ಲಿನ ಬಿಲಿರುಬಿನ್‌ನಿಂದ ಉಂಟಾಗುವ ನರವೈಜ್ಞಾನಿಕ ಕೊರತೆಗಳು ಕಳವಳಕ್ಕೆ ಕಾರಣವಾಗಿವೆ ಮತ್ತು ಅವು ಮಗುವಿನ ತೂಕ ಮತ್ತು ಗರ್ಭಾವಸ್ಥೆಯ ಅವಧಿಯನ್ನು  (ಗರ್ಭಧಾರಣೆ ಮತ್ತು ಜನನದ ನಡುವಿನ ಅವಧಿ) ಅವಲಂಬಿಸಿರುತ್ತದೆ. ಅವಧಿ ಪೂರ್ವವಾಗಿ ಜನಿಸಿದ ಶಿಶು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚುಎನ್ನುತ್ತಾರೆ ಡಾ. ಶೆಣೈ. 

 ಅವಧಿ ತುಂಬಿದ ಮಗುವಿಗೆ, 20 mg ಬಿಲಿರುಬಿನ್ ಕೂಡ ರಕ್ತಮಿದುಳಿನ ತಡೆಗೋಡೆ ದಾಟಲು ಬಿಲಿರುಬಿನ್ ಸಮಸ್ಯೆಯುಂಟು ಮಾಡುವುದಿಲ್ಲ; ಆದರೆ ಅವಧಿ ಪೂರ್ವವಾಗಿ ಜನಿಸಿದ ಮಗುವಿಗೆ, ಸಮಸ್ಯೆಯನ್ನು ಉಂಟುಮಾಡಲು 10-12 mg ಬಿಲಿರುಬಿನ್ ಸಾಕಾಗುತ್ತದೆ ಎಂದು ಡಾ. ಶೆಣೈ ವಿವರಿಸುತ್ತಾರೆ. 

ನವಜಾತ ಶಿಶುಗಳಲ್ಲಿ ಕಾಮಾಲೆ: ಚಿಕಿತ್ಸೆಯಾಗಿ ಫೋಟೊಥೆರಪಿ  

ಫೋಟೊಥೆರಪಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಡಾ. ಬಾವಡೇಕರ್ ವಿವರಿಸುತ್ತಾರೆ. “ಪಿತ್ತಜನಕಾಂಗವು ಫೋಟೊಥೆರಪಿ ಸಮಯದಲ್ಲಿ ಬಿಲಿರುಬಿನ್ ಅನ್ನು ತ್ವರಿತವಾಗಿ ವಿಘಟಿಸುತ್ತದೆ ಮತ್ತು ಇದನ್ನು ಮೂತ್ರದ ಮೂಲಕ ಸುಲಭವಾಗಿ ವಿಸರ್ಜಿಸಬಹುದು. ಶಿಶುಗಳನ್ನು ತೆರೆದ ಇನ್ಕ್ಯುಬೇಟರ್‌ನಲ್ಲಿ ಇರಿಸಲಾಗುತ್ತದೆ, ಅದರಲ್ಲಿ ಶಿಶುಗಳನ್ನು ಬಿಲಿರುಬಿನ್ ಅನ್ನು ವಿಘಟಿಸಲು ನೆರವಾಗುವಂತಹ ಬೆಳಕಿನ ನಿರ್ದಿಷ್ಟ ತರಂಗಾಂತರಕ್ಕೆ ಒಡ್ಡಲಾಗುತ್ತದೆಎಂದು ಅವರು ಹೇಳುತ್ತಾರೆ. 

ಕಾಮಾಲೆಯಿಂದ ಬಳಲುತ್ತಿರುವ ಎಲ್ಲಾ ಶಿಶುಗಳಿಗೆ ಫೋಟೊಥೆರಪಿಯ ಅಗತ್ಯವಿರುವುದಿಲ್ಲ. ಫೋಟೊಥೆರಪಿಯ ಅಗತ್ಯವನ್ನು ಬಿಲಿರುಬಿನ್ ಮಟ್ಟಗಳು, ಗರ್ಭಾವಸ್ಥೆಯ ವಯಸ್ಸು ಮತ್ತು ಆಧಾರವಾಗಿರುವ ಸಹವರ್ತಿ ರೋಗದಿಂದ ನಿರ್ಧರಿಸಲಾಗುತ್ತದೆ. 14 ಮಿಲಿಗ್ರಾಂ ಬಿಲಿರುಬಿನ್ ಮತ್ತು ಸುಮಾರು 2.5 kg ಸಾಮಾನ್ಯ ಜನನ ತೂಕದ ಮಗುವಿಗೆ ಫೋಟೊಥೆರಪಿಯನ್ನು ನೀಡದಿದ್ದರೆ, ಸಮಸ್ಯೆಯು ತನ್ನಷ್ಟಕ್ಕೇ ತಾನೇ ಸರಿಹೋಗುತ್ತದೆ. ಗಮನಿಸಬೇಕಾದ ವಿಷಯವೆಂದರೆ ಅದು ಹೆಚ್ಚಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ದೇಹದಿಂದ ಬಿಲಿರುಬಿನ್ ಅನ್ನು ವೇಗವಾಗಿ ತೆಗೆದುಹಾಕಲು ಸಾಧ್ಯವಾಗುವಂತೆ ಸಾಕಷ್ಟು ಪ್ರಮಾಣದ ಹಾಲು ಕುಡಿಯುವಂತೆಯೂ ಪ್ರೋತ್ಸಾಹಿಸಲಾಗುತ್ತದೆಡಾ. ಶೆಣೈ ಹೇಳುತ್ತಾರೆ. 

ಸಾರಾಂಶ 

ಶಿಶುಗಳಲ್ಲಿ ಕಂಡುಬರುವ ಕಾಮಾಲೆಯಲ್ಲಿ ಶಾರೀರಿಕ ಮತ್ತು ರೋಗಲಕ್ಷಣದಿಂದ ಕೂಡಿದ ಎಂಬ ಎರಡು ಪ್ರಕಾರಗಳಿವೆ. ಶಾರೀರಿಕ ಕಾಮಾಲೆ ಹೆರಿಗೆಯ ಎರಡನೇ ದಿನದಿಂದ ಪ್ರಾರಂಭವಾಗುತ್ತದೆ ಮತ್ತು ರೋಗಲಕ್ಷಣದಿಂದ ಕೂಡಿದ ಕಾಮಾಲೆ ಹುಟ್ಟಿದ ಮೊದಲ ದಿನದಿಂದೇ ಪ್ರಾರಂಭವಾಗುತ್ತದೆ. ರೋಗಲಕ್ಷಣದಿಂದ ಕೂಡಿದ ಕಾಮಾಲೆಯು ಪ್ರಸ್ತುತವಿರುವ ಕಾಯಿಲೆಯ ಸಂಕೇತವಾಗಿರಬಹುದು ಮತ್ತು ಅದಕ್ಕೆ ತಕ್ಷಣವೇ ವೈದ್ಯಕೀಯ ನೆರವನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ. 

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ