ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ವೈರಲ್ ಕಂಜಕ್ಟಿವಿಟಿಸ್ – ಮದ್ರಾಸ್ ಐ ಹೇಗೆ ಹರಡುತ್ತದೆ
12

ವೈರಲ್ ಕಂಜಕ್ಟಿವಿಟಿಸ್ – ಮದ್ರಾಸ್ ಐ ಹೇಗೆ ಹರಡುತ್ತದೆ

ವೈರಲ್ ಕಂಜಕ್ಟಿವಿಟಿಸ್ - ಮದ್ರಾಸ್ ಐ, ಕಣ್ಣುಗಳು ಕೆಂಪಾಗುವುದು, ತುರಿಸುವುದು ಮತ್ತು ಊದಿಕೊಳ್ಳುವುದಕ್ಕೂ ಮೊದಲು ಕೆಮ್ಮು ಮತ್ತು ಶೀತದಂತಹ ಶ್ವಾಸಕೋಶದ ಸೋಂಕಿನೊಂದಿಗೆ ಪ್ರಾರಂಭವಾಗಬಹುದು 
ವೈರಲ್ ಕಂಜಕ್ಟಿವಿಟಿಸ್ - ಮದ್ರಾಸ್ ಐ ಹೇಗೆ ಹರಡುತ್ತದೆ
ವೈರಲ್ ಕಂಜಕ್ಟಿವಿಟಿಸ್ – ಮದ್ರಾಸ್ ಐ ಹೇಗೆ ಹರಡುತ್ತದೆ

 ಮಳೆಗಾಲದಲ್ಲಿ ತಾಪಮಾನದ ಕುಸಿತ ಉಂಟಾದಾಗ ಭಾರತದ ಎಲ್ಲಾ ಮಹಾನಗರಗಳಲ್ಲಿ ಕಂಜಕ್ಟಿವಿಟಿಸ್ ಅಥವಾ ಕೆಂಗಣ್ಣು ಸೋಂಕು ಹರಡುವಿಕೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಕಾಣಬಹುದು. ಇವುಗಳಲ್ಲಿ 90 ಪ್ರತಿಶತದಷ್ಟು ಪ್ರಕರಣಗಳು ವೈರಲ್ ಕಂಜಕ್ಟಿವಿಟಿಸ್ ಆಗಿದ್ದು, ಇದು ಆರ್ದ್ರ ವಾತಾವರಣದಲ್ಲಿ ಹೆಚ್ಚು ವೇಗವಾಗಿ ಹರಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳು ಕಣ್ಣಿನಲ್ಲಿ ರೋಗಲಕ್ಷಣಗಳು ಕಾಣುವುದಕ್ಕೂ ಮೊದಲು ಗಂಟಲು ನೋವು, ಕೆಮ್ಮು ಮತ್ತು ಶೀತದಂತಹ ಮೇಲಿನ ಶ್ವಾಸಕೋಶದ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು. 

ಇತ್ತೀಚೆಗೆ ಬೆಂಗಳೂರಿನ ಒಂದು ಕುಟಂಬವು ಈ ಪರಿಸ್ಥಿತಿಯನ್ನು ಎದುರಿಸಿತು. ಸುರೇಶ್ ಎಂ (35) ಎಂಬವರು ಗಂಟಲು ನೋವು, ನೆಗಡಿ ಮತ್ತು ಕಣ್ಣಿನಲ್ಲಿ ನೀರು ಸುರಿಯುವುದು ಇತ್ಯಾದಿ ಲಕ್ಷಣಗಳನ್ನು ಗಮನಿಸಿ, ಮೊದಲಿಗೆ ಸಾಮಾನ್ಯ ಜ್ವರ ಎಂದು ಭಾವಿಸಿ ಪ್ಯಾರಾಸಿಟಮಾಲ್ ಮಾತ್ರೆಗಳನ್ನು ಸೇವಿಸಿದರು. ಶೀಘ್ರದಲ್ಲೇ ಅವರ ಕಣ್ಣುಗಳು ಊದಿಕೊಂಡು ಕೆಂಪಾದವು. 

ಸುರೇಶ್ ಅವರಿಗೆ ವೈರಲ್ ಕಂಜಕ್ಟಿವಿಟಿಸ್ ಎಂದು ರೋಗನಿರ್ಣಯ ಮಾಡಲಾಯಿತು. ತಮಗೆ ತಿಳಿಯದೆಯೇ ಅವರು ಗರ್ಭಿಣಿ ಪತ್ನಿಯೂ ಸೇರಿದಂತೆ ಮನೆಮಂದಿಗೆಲ್ಲಾ ಈ ಸೋಂಕನ್ನು ಹಬ್ಬಿಸಿದ್ದರು. 

 ವೈರಲ್ ಕಂಜಕ್ಟಿವಿಟಿಸ್  – ಮದ್ರಾಸ್ ಐ ಎಂದರೇನು? 

SARS-CoV2 ಮತ್ತು ಅಡೆನೋವೈರಸ್ ಎಂಬ ಸೋಂಕುಗಳು ಕಂಜಕ್ಟಿವಿಟಿಸ್‌ಗೆ ಕಾರಣವಾಗಬಹುದು ಎಂದು ಚೆನ್ನೈನ ಪ್ರಶಾಂತ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ ಅನಂತಕೃಷ್ಣನ್ ಅವರು ಹೇಳುತ್ತಾರೆ. ಯಾವುದೇ ವೈರಸ್ ಸೋಂಕು ಗಂಟಲು ನೋವು, ಶೀತ ಮತ್ತು ಕೆಮ್ಮಿನಂತಹ ಶ್ವಾಸಕೋಶದ ಸೋಂಕಿನ ಲಕ್ಷಣಗಳನ್ನು ಹೊಂದಿರುತ್ತವೆ. ಕಂಜಕ್ಟಿವಿಟಿಸ್ ಅನ್ನು ಸೋಂಕಿನ ಆರಂಭಿಕ ಹಂತದಲ್ಲಿ ಅಥವಾ ಕೊನೆಯ ಹಂತದಲ್ಲಿ ಸೋಂಕು ತೀವ್ರಗೊಂಡಾಗ ಕಾಣಿಸಿಕೊಳ್ಳಬಹುದು. 

ಕಂಜಕ್ಟಿವಿಟಿಸ್ ವೈರಸ್ ಅಥವಾ ಬ್ಯಾಕ್ಟೀರಿಯಾ ಯಾವುದರಿಂದಾದಲೂ ಉಂಟಾಗಬಹುದು ಎಂದು ಬೆಂಗಳೂರಿನ ಅಪೋಲೋ ಹಾಸ್ಪಿಟಲ್ಸ್‌ನ ನೇತ್ರವಿಜ್ಞಾನದ ಹಿರಿಯ ಸಲಹೆಗಾರರಾದ ಡಾ ಶಾಲಿನಿ ಶೆಟ್ಟಿಯವರು ಹೇಳುತ್ತಾರೆ. ಸೋಂಕು ರೋಗಿಗಳ ಸಂಪರ್ಕದಿಂದ ಉಂಟಾಗುತ್ತದೆ ಕೇವಲ ನೋಡುವುದರಿಂದಲ್ಲ. ಕಂಜಕ್ಟಿವಿಟಿಸ್ ಅತಿ ಶೀಘ್ರದಲ್ಲಿ ಹರಡುವ ಕಾರಣ, ಕಣ್ಣಿನಲ್ಲಿ ತುರಿಕೆ, ಉರಿ ಮತ್ತು ಕೆಂಪಾಗುವಿಕೆಯ ಲಕ್ಷಣಗಳು ಕಂಡುಬಂದರೆ, ಕೂಡಲೇ ನೇತ್ರವೈದ್ಯರನ್ನು ಸಂಪರ್ಕಿಸಬೇಕು ಎಂದು ಡಾ ಶೆಟ್ಟಿಯವರು ಹೇಳುತ್ತಾರೆ. 

ಕಣ್ಣಿನ ಸ್ರವಿಸುವಿಕೆಯ ಪ್ರಕಾರದ ಹೊರತಾಗಿ ಕಂಜಕ್ಟಿವಿಟಿಸ್‌ನ ರೋಗಲಕ್ಷಣವು ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕಿನಲ್ಲಿ ಒಂದೇ ರೀತಿ ಇರುತ್ತದೆ. ವೈರಸ್ ಸೋಂಕಿನಲ್ಲಿ ನೀರಿನಂತಹ ಸ್ರವಿಸುವಿಕೆ ಇದ್ದರೆ, ಬ್ಯಾಕ್ಟೀರಿಯಾ ಸೋಂಕಿನಲ್ಲಿ ಹಿಕ್ಕು ಉಂಟಾಗುತ್ತದೆ, ಎಂದು ಡಾ ಶೆಟ್ಟಿ ಹೇಳುತ್ತಾರೆ. 

ವೈರಲ್ ಕಂಜಕ್ಟಿವಿಟಿಯೇ ಆಗಿರಲಿ ಅಥವಾ ಫ್ಲೂ ಆಗಿರಲಿ, ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸೋಂಕಿತರು ಪ್ರತ್ಯೇಕವಾಗಿರುವುದೇ ಪರಿಹಾರ ಎಂದು ಡಾ ಅನಂತಕೃಷ್ಣನ್ ಹೇಳುತ್ತಾರೆ. ಸೋಂಕು ಕೇವಲ ಸೋಂಕಿತ ವ್ಯಕ್ತಿಯ ಕಣ್ಣೀರಿನಿಂದ ಮಾತ್ರವಲ್ಲ, ಸೀನುವಾಗ ಅಥವಾ ಕೆಮ್ಮುವಾಗ ಸಿಡಿಯುವ ಹನಿಗಳಿಂದಲೂ ಹರಡಬಹುದು. 

 ಗರ್ಭಧಾರಣೆಯ ಸಮಯದಲ್ಲಿ ಕೆಂಗಣ್ಣು ಅಥವಾ ಮದ್ರಾಸ್ ಐ ಹಾನಿಕಾರಕವೇ? 

ಸುರೇಶ್ ಅವರ ಪತ್ನಿ ಮೇಘನಾ ಎಸ್ ಅವರು ಗರ್ಭಧಾರಣೆಯ ಮೊದಲನೇ ತ್ರೈಮಾಸಿಕದಲ್ಲಿರುವಾಗ ಸೋಂಕಿಗೆ ಒಳಗಾಗಿದ್ದರು, ಅವರು ಚೇತರಿಸಿಕೊಳ್ಳಲು ಸುಮಾರು ಒಂದು ವಾರಗಳ ಕಾಲ ತೆಗೆದುಕೊಂಡರು ಮತ್ತು ಇವರಲ್ಲಿ ಯಾವುದೇ ರೀತಿಯ ಶ್ವಾಸಕೋಶದ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಲಿಲ್ಲ. 

ಕಂಜೆಕ್ಟಿವಿಟಿಸ್ ವ್ಯಾಪಕವಾಗಿ ಹರಡುವ ರೋಗವಾದರೂ, ಸೋಂಕಿತರು ಗಾಬರಿಗೊಳ್ಳಬಾರದು, ಆದಷ್ಟು ಬೇಗನೇ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಗರ್ಭಧಾರಣೆಯ ಸಂದರ್ಭದಲ್ಲಿ, ತಾಯಿಗಾಗಲೀ, ಹುಟ್ಟಲಿರುವ ಮಗುವಿಗಾಗಲೀ ಕಂಜಕ್ಟಿವಿಟಿಸ್‌ನಿಂದ ಯಾವುದೇ ತೊಡಕು ಉಂಟಾಗುವುದಿಲ್ಲ ಎಂದು ಹೈದರಾಬಾದ್‌ನ ಫರ್ನಾಂಡಿಸ್ ಆಸ್ಪತ್ರೆಯ ಪ್ರಸೂತಿ ವಿಭಾಗದ ಹಿರಿಯ ಸಲಹೆಗಾರರಾದ ಡಾ ಅನಿಶಾ ಗಾಲಾ ಅವರು ಹೇಳುತ್ತಾರೆ 

ವೈರಸ್ ಸೋಂಕಿಗೆ, ಲೂಬ್ರಿಕೆಂಟ್‌ಗಳನ್ನು (ಕಣ್ಣುಗಳಿಗೆ) ಶಿಫಾರಸು ಮಾಡಲಾಗುತ್ತದೆ ಹಾಗೂ ಬ್ಯಾಕ್ಟೀರಿಯಾ ಸೋಂಕಿಗೆ ಆ್ಯಂಟಿಬಯಾಟಿಕ್ ಡ್ರಾಪ್ಸ್ ನೀಡಲಾಗುತ್ತದೆ. ಗರ್ಭಿಣಿಯರಿಗೆ ಸುರಕ್ಷಿತ ಆ್ಯಂಟಿಬಯಾಟಿಕ್ ಕಣ್ಣಿನ ಡ್ರಾಪ್ಸ್ ನೀಡಲಾಗುತ್ತದೆ ಮತ್ತು ಇದು ತಾಯಿ ಅಥವಾ ಮಗುವಿಗೆ ಯಾವುದೇ ಹಾನಿಯುಂಟು ಮಾಡುವುದಿಲ್ಲ ಎಂದು ಡಾ ಶೆಟ್ಟಿ ಹೇಳುತ್ತಾರೆ. 

ವೈರಲ್ ಕಂಜೆಕ್ಟಿವಿಟಿಸ್: ಮದ್ರಾಸ್ ಐ ಹರಡುವುದನ್ನು ತಡೆಗಟ್ಟುವುದು 

ಕಂಜೆಕ್ಟಿವಿಟಿಸ್ ಕಣ್ಣುಗಳಿಗೆ ಕಿರಿಕಿರಿ ಉಂಟುಮಾಡುತ್ತದೆ ಮತ್ತು ಸೋಂಕಿತರು ಕಣ್ಣನ್ನು ಪದೇ ಪದೇ ಸ್ಪರ್ಶಿಸುವಂತೆ ಮಾಡುತ್ತದೆ. ಆದ್ದರಿಂದ, ಸೋಂಕು ಅವರ ಕೈಗಳ ಮೂಲಕ ಹರಡಬಹುದು ಎಂದು ಡಾ ಶೆಟ್ಟಿ ಹೇಳುತ್ತಾರೆ. ಕುಟುಂಬದಲ್ಲಿ ಯಾರಾದರೂ ಸೋಂಕಿಗೆ ಒಳಗಾದರೆ, ಅಂಥವರು ಎಲ್ಲರೂ ಬಳಸುವ ನ್ಯಾಪ್‌ಕಿನ್ ಅನ್ನು ಬಳಸಬಾರದು ಎನ್ನುತ್ತಾ ಅವರು ಕೈಗಳನ್ನು ತೊಳೆಯುವ ಮತ್ತು ನಿಯಮಿತವಾಗಿ ಸ್ಯಾನಿಟೈಸ್ ಮಾಡುವ ಅಗತ್ಯವನ್ನು ಒತ್ತಿ ಹೇಳುತ್ತಾರೆ.  

ಕಂಜೆಕ್ಟಿವಿಟಿಸ್ ವಸ್ತುಗಳ ಹೊರಮೈಯ ಮೂಲಕ ಹರಡುವುದಷ್ಟೇ ಅಲ್ಲ, ವೈರಲ್ ಕಂಜೆಕ್ಟಿವಿಟಿಸ್ ಶ್ವಾಸಕೋಶದ ಸೋಂಕಿನ ಲಕ್ಷಣಗಳನ್ನು ಹೊಂದಿರಬಹುದು. ಆದ್ದರಿಂದ ಮನೆಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳು ಮತ್ತು ಕನ್ನಡಕಗಳನ್ನು ಧರಿಸುವುದು ಉತ್ತಮ ಎಂದು ಡಾ ಶೆಟ್ಟಿ ಹೇಳುತ್ತಾರೆ. 

 ಸಾರಾಂಶ 

  •  ಕಂಜೆಕ್ಟಿವಿಟಿಸ್ ಅಥವಾ ಕೆಂಗಣ್ಣು ಮೂಲತಃ ವೈರಸ್ ಅಥವಾ ಬ್ಯಾಕ್ಟೀರಿಯಾ ಸೋಂಕು ಆಗಿರಬಹುದು. 
  • ಇದು ನೇರ ಸಂಪರ್ಕದ ಮೂಲಕ ಹರಡುತ್ತದೆ. 
  • ವೈರಲ್ ಕಂಜೆಕ್ಟಿವಿಟಿಸ್ ಅಡಿನೋವೈರಸ್ ಅಥವಾ ಕೋವಿಡ್-19 ಮುಂತಾದ ವೈರಸ್ ಸೋಂಕಿನ ಲಕ್ಷಣಗಳಾಗಿರಬಹುದು. 
  • ಗರ್ಭಿಣಿ ಮಹಿಳೆಯರು ಮತ್ತು ಹಿರಿಯ ನಾಗರಿಕರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಈ ಸೋಂಕಿಗೆ ತುತ್ತಾಗುತ್ತಾರೆ. 
  • ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಮತ್ತು ಸೂಚಿಸಲಾದ ಕಣ್ಣಿನ ಡ್ರಾಪ್ಸ್ ಅನ್ನು ಬಳಸುವುದರಿಂದ ಚಿಕಿತ್ಸೆಗೆ ಸಹಾಯಕವಾಗುತ್ತದೆ ಹಾಗೂ ರೋಗ ಹರಡುವಿಕೆಯನ್ನು ತಡೆಗಟ್ಟುತ್ತದೆ. 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ