ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಮಂಗನ ಕಾಯಿಲೆ ಮತ್ತೆ ಆತಂಕ ಹೆಚ್ಚಿಸುತ್ತಿದೆ
99

ಮಂಗನ ಕಾಯಿಲೆ ಮತ್ತೆ ಆತಂಕ ಹೆಚ್ಚಿಸುತ್ತಿದೆ

ಲಸಿಕೆಗಳ ಕೊರತೆ ಮತ್ತು ಈ ಸೋಂಕಿನ ವಿರುದ್ಧ ನಿರ್ದಿಷ್ಟ ಆಂಟಿ-ವೈರಲ್ ಚಿಕಿತ್ಸೆ ಇಲ್ಲದಿರುವುದು ಕಳವಳಕ್ಕೆ ಕಾರಣವಾಗಿದೆ. 2024ರಲ್ಲಿ ಏಕಾಏಕಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕಂಡು ಬಂದಿದೆ
ಮಂಗನ ಕಾಯಿಲೆ ಮತ್ತೆ ಆತಂಕ ಹೆಚ್ಚಿಸುತ್ತದೆ
ಚಿತ್ರ: ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್, GOI ನಿಂದ

ಮಂಗನ ಕಾಯಿಲೆ ಅಥವಾ ಕ್ಯಾಸನೂರು ಅರಣ್ಯ ರೋಗ (ಕೆಎಫ್‌ಡಿ) ಹರಡುತ್ತಿರುವುದು ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಹರಡುತ್ತಿರುವುದು ಆತಂಕಕಾರಿಯಾಗಿದ್ದು ಮತ್ತಷ್ಟು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಸಮಿತಿಯನ್ನು ರಚಿಸಿದೆ.

ಮಂಗನ ಜ್ವರ/ ಅಥವಾ ಮಂಗನ ಕಾಯಿಲೆ ಎಂದು ಕರೆಯಲಾಗುವ ರೋಗ ಹಠಾತ್ತನೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನಿಖಾ ಸಮಿತಿಯನ್ನು ರಚಿಸಿದೆ. 2024 ರಲ್ಲಿ ಇಲ್ಲಿಯವರೆಗೆ ಮೂರು ಜಿಲ್ಲೆಗಳಲ್ಲಿ 103 ಕೆಎಫ್‌ಡಿ-ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ: ಶಿವಮೊಗ್ಗ (37 ಪ್ರಕರಣಗಳು), ಉತ್ತರ ಕನ್ನಡ (40) ಮತ್ತು ಚಿಕ್ಕಮಗಳೂರು (26). ಫೆಬ್ರವರಿ 19 ರಂದು, ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಅವರು ಇತ್ತೀಚಿಗೆ ಸೋಂಕಿನ ಉಲ್ಬಣಕ್ಕೆ ಪ್ರತಿಕ್ರಿಯೆಯಾಗಿ ಸಭೆಯನ್ನು ಕರೆದಿದ್ದರು. ಹೆಚ್ಚು ಪರಿಣಾಮಕಾರಿಯಲ್ಲ ಎನ್ನುವ ಕಾರಣಕ್ಕೆ 2023 ರಿಂದ KFD ಲಸಿಕೆಗಳನ್ನು ನಿಲ್ಲಿಸಿರುವುದು ಈಗ ಚರ್ಚೆಯ ವಿಷಯವಾಗಿದೆ.

2024 ರಲ್ಲಿ ರಾಜ್ಯವು ಮಂಗನ ಕಾಯಿಲೆಯಿಂದ ಇಲ್ಲಿಯವರೆಗೆ ಎರಡು ಸಾವುಗಳನ್ನು ಕಂಡಿದೆ. ಬಲಿಯಾದವರು – ಹೊಸನಗರ ಅಥವಾ ಶಿವಮೊಗ್ಗದ 18 ವರ್ಷದ ಹುಡುಗಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ 79 ವರ್ಷದ ವ್ಯಕ್ತಿ. ಈ ರೋಗದ ಧನಾತ್ಮಕ ಪ್ರಮಾಣವು 2.52 ಪ್ರತಿಶತ ಮತ್ತು ಪ್ರಕರಣದ ಮರಣ ಪ್ರಮಾಣವು 1.92 ಪ್ರತಿಶತ.

ಮಂಗನ ಕಾಯಿಲೆ ಎಂದರೇನು?

ಕೆಎಫ್‌ಡಿ ಉಣುಗು ಕಚ್ಚಿದಾಗ (Tick-borne) ವೈರಲ್ ಹೆಮರಾಜಿಕ್ ಜ್ವರವಾಗಿದ್ದು, ಇದು 1957 ರಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ ಕಾಣಿಸಿಕೊಂಡಿತು. ಕ್ರಮೇಣ ಈ ಸೋಂಕು ಕರ್ನಾಟಕದ 10 ನೆರೆಯ ರಾಜ್ಯಗಳಿಗೆ ಹರಡಿದೆ ಮತ್ತವು ಸ್ಥಳೀಯವಾಗಿವೆ.

ಮಂಗನ ಕಾಯಿಲೆ ಲಕ್ಷಣಗಳು

ಅಧಿಕ ಜ್ವರ, ತಲೆನೋವು, ಮೈಯಾಲ್ಜಿಯಾ, ಆಬ್ಸೆಂಟ್ ರಿಫ್ಲೆಕ್ಸ್, ವಾಂತಿ, ನಡುಕ, ಗೊಂದಲ, ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಮೂಗು, ಗಂಟಲು ಮತ್ತು ಒಸಡುಗಳಿಂದ ರಕ್ತಸ್ರಾವವನ್ನು ಒಳಗೊಂಡಿವೆ. ಸೋಂಕಿಗೆ ಚಿಕಿತ್ಸೆ ನೀಡಲು ಯಾವುದೇ ಸಾಬೀತಾದ ಔಷಧವಿಲ್ಲ, ಮತ್ತು ಇಲ್ಲಿಯವರೆಗೆ, ಚಿಕಿತ್ಸೆಯು ರೋಗಲಕ್ಷಣ ಕೂಡ ನಿರ್ದಿಷ್ಟವಿಲ್ಲ.

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ)ಯುಎಸ್‌ ಪ್ರಕಾರ, ಮಂಗನ ಕಾಯಿಲೆಯ ರೋಗ ಲಕ್ಷಣಗಳೆಂದರೆ ರಕ್ತದೊತ್ತಡ ಮತ್ತು ಪ್ಲೇಟ್‌ಲೆಟ್, ಕೆಂಪು ರಕ್ತ ಕಣ ಮತ್ತು ಬಿಳಿ ರಕ್ತ ಕಣಗಳ ಸಂಖ್ಯೆಯು ಅಸಹಜವಾಗಿ ಕಡಿಮೆಯಾಗಬಹುದು. ತೀವ್ರವಾದ ತಲೆನೋವು, ಮಾನಸಿಕ ಅಡಚಣೆಗಳು, ನಡುಕ ಮತ್ತು ದೃಷ್ಟಿ ಕೊರತೆಗಳೊಂದಿಗೆ ವೈರಲ್ ಸೋಂಕು ಕೆಲವರಲ್ಲಿ ನರವೈಜ್ಞಾನಿಕ ಲಕ್ಷಣಗಳೊಂದಿಗೆ ಸಹ ತೋರಿಸುತ್ತದೆ. CDC ಕ್ಯಾಸನೂರು ಅರಣ್ಯ ರೋಗದ ಅಂದಾಜು ಪ್ರಕರಣ-ಸಾವಿನ ಪ್ರಮಾಣವು 3 ರಿಂದ 5 ಪ್ರತಿಶತ ಎಂದು ಉಲ್ಲೇಖಿಸುತ್ತದೆ.

ಮಂಗನ ಕಾಯಿಲೆ: ಹೇಗೆ ಹರಡುತ್ತದೆ?

ಈ ರೋಗವು ನವೆಂಬರ್ ನಿಂದ ಮೇ ವರೆಗೆ ಹರಡುತ್ತದೆ. ಇದು ಉಣುಗು ಕಚ್ಚುವಿಕೆಯಿಂದ (Tick-borne) ಅಥವಾ ಸೋಂಕಿತ ಪ್ರಾಣಿಯೊಂದಿಗೆ ಸಂಪರ್ಕಕ್ಕೆ ಬರುವುದರಿಂದ ಉಂಟಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ಅನಾರೋಗ್ಯ ಅಥವಾ ಇತ್ತೀಚೆಗೆ ಸತ್ತ ಕೋತಿಯಿಂದ ಬರುತ್ತದೆ. ಈ ಸೋಂಕು ಸಾಂಕ್ರಾಮಿಕವಲ್ಲ ಎಂದು ವೈದ್ಯರು ಹೇಳುತ್ತಾರೆ. ಗಟ್ಟಿಯಾದ ಉಣ್ಣಿ, ಮಂಗಗಳು, ಇಲಿಗಳು ಮತ್ತು ಬಾವಲಿಗಳು ಈ ರೋಗದ ವೈರಸ್‌ನ ಸಾಮಾನ್ಯ ಹೋಸ್ಟ್‌ಗಳಾಗಿವೆ. ಆಗಾಗ ಕಾಡಿಗೆ ಹೋಗಿ ಬರುವವರು, ಅಥವಾ ಕಾಡಿನ ಅಕ್ಕಪಕ್ಕದಲ್ಲಿ ವಾಸಿಸುವವರು ಸೋಂಕಿಗೆ ತುತ್ತಾಗುತ್ತಾರೆ.

ವೈರಲ್ ಸೋಂಕು ಮಲೆನಾಡು ಪ್ರದೇಶದಲ್ಲಿ ಕಂಡುಬರುವ ದನಗಳು ಅಥವಾ ಇತರೆ ಜಾನುವಾರುಗಳಿಗೆ ಸೋಂಕು ತಗುಲುವುದಿಲ್ಲ. “ಆದರೆ ಈ ಸೋಂಕನ್ನು ಸಾಗಿಸುವ ಉಣ್ಣಿಗಳನ್ನು (ಉಣುಗು) ಜಾನುವಾರುಗಳಲ್ಲಿಯೂ ಕಾಣಬಹುದು. ಇದು ಸಂಪರ್ಕದಿಂದ ಮನುಷ್ಯರಿಗೆ ಸೋಂಕನ್ನು ಹರಡುತ್ತದೆ ಎಂದು ಶಿವಮೊಗ್ಗದ ಸ್ತ್ರೀರೋಗ ತಜ್ಞರಾದ ಡಾ ಎನ್ ಪಿ ಮನೋಹರ್ ಹೇಳುತ್ತಾರೆ.

1985-1990ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಮದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಾಗ ಅದರ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಡಾ ಮನೋಹರ್ ನಿರ್ಣಾಯಕ ಪಾತ್ರ ವಹಿಸಿದ್ದರು.

ಪ್ರಸ್ತುತ ಮಂಗನ ಕಾಯಿಲೆಗೆ ಯಾವುದೇ ಲಸಿಕೆ ಇಲ್ಲ, DEPA ( ಡೈಥೈಲ್ ಫಿನೈಲ್ ಅಸೆಟಮೈನ್) ನಿವಾರಕಗಳನ್ನು ಬಳಸಲಾಗುತ್ತಿದೆ

ಅರಣ್ಯ ಪ್ರದೇಶಗಳಿಗೆ ಆಗಾಗ ಭೇಟಿ ನೀಡುವವವರಿಗೆ ಲಸಿಕೆ ಹಾಕುವುದೊಂದೇ ಉಣ್ಣಿಯಿಂದ ಹರಡುವ ಸೋಂಕಿನ ತೀವ್ರತೆಯನ್ನು ತಡೆಯುವ ಏಕೈಕ ಮಾರ್ಗ. ಲಸಿಕೆಗಳ ಪರಿಣಾಮಕಾರಿತ್ವದ ಕೊರತೆಯಿಂದಾಗಿ, ಸರ್ಕಾರವು ವಾರ್ಷಿಕ ಲಸಿಕೆ ನೀಡುವುದನ್ನು ನಿಲ್ಲಿಸಿದೆ. ಈ ಸೋಂಕಿನ ವಿರುದ್ಧ ಹೊಸ ಲಸಿಕೆ ತಯಾರಿಕೆಯಲ್ಲಿದೆ ಮತ್ತು ಸಂಶೋಧನೆಯು ಹೊಸದಿಲ್ಲಿಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನೊಂದಿಗೆ ನಡೆಯುತ್ತಿದೆ. ಲಸಿಕೆ ಉತ್ಪಾದನೆಗೆ ಐಸಿಎಂಆರ್ ಸೂಕ್ತ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೇ ಲಸಿಕೆ ಲಭ್ಯವಾಗಲಿದೆ ಎಂದು ಗುಂಡೂರಾವ್ ಹೇಳಿದ್ದಾರೆ.

ತಡೆಗಟ್ಟುವ ಕ್ರಮವಾಗಿ, ಟಿಕ್ ನಿವಾರಕವಾದ ಡೈಥೈಲ್ ಫಿನೈಲ್ ಅಸೆಟಮೈನ್ (DEPA) ತೈಲವನ್ನು ಸ್ಥಳೀಯ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ವಿತರಿಸಲಾಗಿದೆ.

“ಹಿಂದೆ ಬಳಸಲಾಗುತ್ತಿದ್ದ ಲಸಿಕೆಗಳು ಸಾವುಗಳನ್ನು ತಡೆಗಟ್ಟುವಲ್ಲಿ ಖಂಡಿತವಾಗಿಯೂ ಪರಿಣಾಮಕಾರಿಯಾಗಿದೆ. 1980ರ ಸನ್ನಿವೇಶಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಕಡಿಮೆಯಾಗಿದೆ. ಪರಿಣಾಮಕಾರಿ ವ್ಯಾಕ್ಸಿನೇಷನ್ ಮತ್ತು DEPA ಎಣ್ಣೆಯ ಬಳಕೆಯ ಮೂಲಕ ಇದನ್ನು ನಿಭಾಯಿಸಬಹುದು” ಎಂದು ಡಾ ಮನೋಹರ್ ಹೇಳುತ್ತಾರೆ.

ನಿರೋಧಕ ಕ್ರಮಗಳು

ಹ್ಯಾಪಿಯೆಸ್ಟ್ ಹೆಲ್ತ್‌ನೊಂದಿಗೆ ಮಾತನಾಡಿದ ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ಮಂಗನ ಕಾಯಿಲೆ ನಿರ್ವಹಣೆಯಲ್ಲಿ ಪಾತ್ರವಹಿಸುವ ಅಂಶಗಳೆಂದರೆ ವೈರಲ್ ಲೋಡ್ ಹೊರತುಪಡಿಸಿ, ಇನ್ಕ್ಯುಬೇಶನ್ ಕಾಲಾವಧಿ, ವ್ಯಕ್ತಿಯ ರೋಗನಿರೋಧಕ ಶಕ್ತಿ, ಪೌಷ್ಠಿಕಾಂಶದ ಸ್ಥಿತಿ. ಕಳೆದ ಐದು ವರ್ಷಗಳಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಕಂಡುಬಂದ ಗ್ರಾಮಗಳಲ್ಲಿ ಜಾಗೃತಿ ಚಟುವಟಿಕೆಗಳು ನಡೆಯುತ್ತಿವೆ. ಸ್ಥಳೀಯ ಗ್ರಾಮಸ್ಥರಿಗೆ ಸೋಂಕಿನ ಬಗ್ಗೆ ತಿಳಿದಿದ್ದರೂ, ಹೊರಗಿನವರು, ಪ್ರವಾಸಿಗರು ಮತ್ತು ಈ ಪ್ರದೇಶಕ್ಕೆ ಬರುವ ಪ್ರವಾಸಿಗರಿಗೆ ತಿಳಿದಿಲ್ಲ, ಈ ಪ್ರದೇಶಗಳಿಗೆ ಭೇಟಿ ನೀಡುವ ಪ್ರಯಾಣಿಕರು ಮತ್ತು ಚಾರಣಿಗರು ಸಹ ಸೋಂಕಿನಿಂದ ಬಳಲುತ್ತಿದ್ದಾರೆ. ಫೆಬ್ರವರಿ 2019 ರಲ್ಲಿ, 33 ವರ್ಷ ವಯಸ್ಸಿನ , ಫ್ರಾನ್ಸ್‌ ನಿಂದ ಬಂದ ಮಹಿಳೆ, ಉತ್ತರ ಕನ್ನಡದ ಬಳಿಯ ಪ್ರವಾಸಿ ತಾಣವಾದ ಯಾಣ ಗುಹೆಗಳಿಗೆ ಟ್ರೆಕ್ಕಿಂಗ್ ಮಾಡಿದಾಗ ಈ ಸೋಂಕು ಪಾಸಿಟಿವ್ ಬಂದಿತ್ತು.

ಈ ಹಿಂದೆ ಸೋಂಕು ಕಾಣಿಸಿಕೊಂಡ ಗ್ರಾಮಗಳಲ್ಲಿ ಜುಲೈನಿಂದ ಪ್ರತಿ ವರ್ಷ ಟಿಕ್ ಸಮೀಕ್ಷೆಯನ್ನು ಕೈಗೊಳ್ಳುವ ಕ್ರಮಗಳು ಸೇರಿವೆ ಎಂದು ಡಾ. ಸುರಗಿಹಳ್ಳಿ ತಿಳಿಸಿದ್ದಾರೆ. “ಪ್ರತಿ ಕೋತಿಯ ಸಾವಾದಾಗ ಶವಪರೀಕ್ಷೆಯನ್ನು ಮಾಡಲಾಗುತ್ತದೆ ಮತ್ತು  ಮಂಗನ ಕಾಯಿಲೆ ವೈರಸ್ ಇದೆಯೇ ಎಂದು ಪರೀಕ್ಷಿಸಲಾಗುತ್ತದೆ. ಟಿಕ್ ತನ್ನ ಬೆಳವಣಿಗೆಯಲ್ಲಿ ನಾಲ್ಕು ಹಂತಗಳನ್ನು ಹೊಂದಿದೆ ಮತ್ತು ಮೂರನೇ ಹಂತದಲ್ಲಿ ಹೆಚ್ಚು ಸೋಂಕು ತಗುಲುತ್ತದೆ. ಲಾರ್ವಾ ಹಂತಗಳಲ್ಲಿಯೇ ಟಿಕ್ ಅನ್ನು ನಾಶಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ”ಎಂದು ಅವರು ತಿಳಿಸಿದ್ದಾರೆ.

ಸಾರಾಂಶ

ಮಂಗನ ಕಾಯಿಲೆ/ ಕ್ಯಾಸನೂರು ಫಾರೆಸ್ಟ್ ಡಿಸೀಸ್ (KFD), ಇದು ಕರ್ನಾಟಕದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಕಂಡುಬರುವ ವೈರಲ್ ಹೆಮರಾಜಿಕ್ ಜ್ವರವಾಗಿದೆ. ಆಗಾಗ್ಗೆ ಅರಣ್ಯ ಪ್ರದೇಶಗಳಿಗೆ ಹೋಗಿ ಟಿಕ್ (ಉಣುಗು) ಸಂಪರ್ಕಕ್ಕೆ ಬರುವವರು ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ. ಪ್ರಸ್ತುತ, ಸೋಂಕಿನ ವಿರುದ್ಧ ಯಾವುದೇ ಲಸಿಕೆ ಬಳಸಲಾಗುತ್ತಿಲ್ಲ. ಆದರೆ ಪರಿಣಾಮಕಾರಿ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಸ್ತುತ ಈ ವೈರಲ್ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಸದ್ಯಕ್ಕೆ ಡೈಥೈಲ್ ಫಿನೈಲ್ ಅಸೆಟಾಮೈನ್ (DEPA) ತೈಲ, ಟಿಕ್ ನಿವಾರಕ, ತಡೆಗಟ್ಟುವ ಕ್ರಮವಾಗಿ ಬಳಸಲಾಗುತ್ತದೆ.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ