ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಅಕ್ಯೂಟ್ ಫ್ಯಾಟಿ ಲಿವರ್ ಆಫ್ ಪ್ರೆಗ್ನೆನ್ಸಿ(AFLP): ಫ್ಯಾಟಿ ಲಿವರ್ ಮತ್ತು ಗರ್ಭಾವಸ್ಥೆ
11

ಅಕ್ಯೂಟ್ ಫ್ಯಾಟಿ ಲಿವರ್ ಆಫ್ ಪ್ರೆಗ್ನೆನ್ಸಿ(AFLP): ಫ್ಯಾಟಿ ಲಿವರ್ ಮತ್ತು ಗರ್ಭಾವಸ್ಥೆ

ವಿಶೇಷವಾಗಿ ಗರ್ಭಧಾರಣೆಯ ಮೂರನೇ ತ್ರೈಮಾಸಿಕದಲ್ಲಿ ಸಂಭವಿಸುವ ಗರ್ಭಾವಸ್ಥೆಯ ತೀವ್ರ ಫ್ಯಾಟಿ ಲಿವರ್ ಯಕೃತ್ತಿನ ಕೋಶಗಳ ಒಳಗೆ ಉಂಟಾಗುವ ಹಠಾತ್ ಕೊಬ್ಬಿನ ಶೇಖರಣೆಯಿಂದ ಸಂಭವಿಸುವ ಜೀವಕಂಟಕವಾಗಬಲ್ಲ ಸ್ಥಿತಿಯಾಗಿದೆ.

ಅಕ್ಯೂಟ್ ಫ್ಯಾಟಿ ಲಿವರ್ ಆಫ್ ಪ್ರೆಗ್ನೆನ್ಸಿ(AFLP) ವಿಶೇಷವಾಗಿ ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕದಲ್ಲಿ ಕಂಡುಬರುವ ತೀವ್ರತರದ ಸಮಸ್ಯೆಯಾಗಿದೆ. ಇದು ಅಪರೂಪದ ಪ್ರಕರಣವಾದರೂ, ತಜ್ಞರು ಈ ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾದ ಗರ್ಭಾವಸ್ಥೆಗೆ ಸಂಬಂಧಿಸಿದ ಆರೋಗ್ಯ ತುರ್ತುಪರಿಸ್ಥಿತಿಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ.

AFLP ಎಂದರೆ, ಯಕೃತ್ತಿನ ಕೋಶಗಳಲ್ಲಿ ಕೊಬ್ಬಿನ ಹಠಾತ್ ಶೇಖರಣೆಯಾಗಿ ಇದರಿಂದ ಯಕೃತ್ತಿನ ಕಾರ್ಯ ಸ್ಥಗಿಗೊಂಡು ಕೊನೆಯದಾಗಿ ಯಕೃತ್ತಿನ ವೈಫಲ್ಯ ಉಂಟಾಗುವುದು. ಅಕ್ಯೂಕಟ್ ಯೆಲ್ಲೋ ಅಟ್ರೋಫಿ ಎಂದು ಕರೆಯಲ್ಪಡುವ ಈ ಪರಿಸ್ಥಿತಿಯು ತಾಯಿ ಹಾಗೂ ಭ್ರೂಣ ಇಬ್ಬರ ಜೀವಕ್ಕೂ ಮಾರಕವಾಗಬಹುದು ಎಂದು ಮುಂಬೈನ ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಯಕೃತ್ತು, ಮೇದೋಜೀರಕ ಗ್ರಂಥಿ ಮತ್ತು ಕರುಳಿನ ಕಸಿ, ಅಡಲ್ಟ್ ಹೆಪಾಟಾಲಜಿ ಮತ್ತು ಟ್ರಾನ್ಸ್‌ಪ್ಲಾಂಟ್ ಮೆಡಿಸಿನ್ ಸೆಂಟರ್‌ನ ಡಿಎಂ ಹೆಪಟಾಲಾಜಿಸ್ಟ್ ಮತ್ತು ಪ್ರೋಗ್ರಾಂ ಡೈರೆಕ್ಟರ್ ಆಗಿರುವ ಡಾ ಚೇತನ್ ರಮೇಶ್ ಕಲಾಲ್ ಅವರು ವಿವರಿಸುತ್ತಾರೆ.

AFLP ಸಂಭವಿಸಲು ಕಾರಣಗಳೇನು?

ಗರ್ಭಾವಸ್ಥೆಯ ಸಮಯದಲ್ಲಿ ಫ್ಯಾಟಿ ಆಮ್ಲಗಳ ಚಯಾಪಚಯ ಕ್ರಿಯೆಗಳಿಂದ ಉಂಟಾಗುವ ತೊಡಕುಗಳಿಂದ ಈ ಪರಿಸ್ಥಿತಿ ಉಂಟಾಗುತ್ತದೆ, ಹಾಗೂ ಇದು ನಿಖರವಾಗಿ ಯಾವುದರಿಂದ ಉಂಟಾಗುತ್ತದೆ ಎಂದು ಹೇಳುವುದು ಕಷ್ಟಸಾಧ್ಯ. AFLPಯ ಕಾರಣದ ನಿಖರವಾದ ಸ್ವರೂಪವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ, ಫ್ಯಾಟಿ ಆಮ್ಲಗಳು ವಿಭಜನೆಯಾಗುವ ಸಂದರ್ಭದಲ್ಲಿ ಮೈಟೋಕಾಂಡ್ರಿಯಾದಲ್ಲಿ ಉಂಟಾಗುವ ಕಾರ್ಯಸ್ಥಗಿತತೆಯಿಂದಾಗಿ ಈ ಪರಿಸ್ಥಿತಿ ಉಂಟಾಗಬಹುದು ಎಂದು ಇತ್ತೀಚಿನ ಕೆಲವು ಸಂಶೋಧನೆಗಳು ಹೇಳಿವೆ. ಫ್ಯಾಟಿ ಆಮ್ಲಗಳ ವಿಭಜನೆಗೆ ಕಾರಣವಾಗುವ ಯಾವುದೋ ಒಂದು ಪ್ರಮುಖ ಕಿಣ್ವದ ಅನುಪಸ್ಥಿತಿಯಿಂದಾಗಿ ಅಧಿಕ ಕೊಬ್ಬಿನ ಶೇಖರಣೆ ಉಂಟಾಗಬಹುದು. ಗರ್ಭಾವಸ್ಥೆಯ ಸಮಯದಲ್ಲಿನ ಹಾರ್ಮೋನ್ ಸಮತೋಲನದಲ್ಲಿನ ವ್ಯತ್ಯಸ ಕೂಡಾ ಈ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಚೆನ್ನೈನ ಫೋರ್ಟಿಸ್ ಮಲಾರ್‌ನ ಗ್ಯಾಸ್ಟ್ರೋಎಂಟೆರಾಲಜಿ ವಿಭಾಗದ ಮುಖ್ಯಸ್ಥರು ಮತ್ತು ಯಕೃತ್ತು ಕಸಿ ಶಸ್ತ್ರಚಿಕಿತ್ಸಕರಾದ ಡಾ ನೀಲಮೇಕಮ್ ತೊಪ್ಪ ಕಪಾಲಿಯವರು ಹೇಳುತ್ತಾರೆ.

“ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟಿರೋನ್‌ನಂತಹ ಹಾರ್ಮೋನುಗಳು ಗಣನೀಯ ಏರಿಳಿತಗಳಿಗೆ ಒಳಪಡುತ್ತವೆ. ಇದರಿಂದ ಕೊಬ್ಬಿನ ಚಯಾಪಚಯ ಸೇರಿದಂತೆ ಅನೇಕ ಚಯಾಪಚಯ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ಕೊಬ್ಬು ಶೇಖರಣೆಗೊಂಡು ಯಕೃತ್ತಿನ ಕಾರ್ಯವು ಹಠಾತ್ತನೆ ಹದಗೆಡಬಹುದು” ಎಂದು ಡಾ ಕಲಾಲ್ ಅವರು ಹೇಳುತ್ತಾರೆ.

ಯಕೃತ್ತಿನಲ್ಲಿ ಸಾಮಾನ್ಯವಾಗಿ ಸುಮಾರು ಐದು ಪ್ರತಿಶತದಷ್ಟು ಕೊಬ್ಬಿನಂಶ ಇರಬೇಕು. ಆದರೆ, AFLP ಹೊಂದಿರುವ ಗರ್ಭಿಣಿ ಮಹಿಳೆಯರಲ್ಲಿ ಇದು 13 ರಿಂದ 19 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಹಿಪಾಟೋಸೈಟ್‌ಗಳಿಂದಾಗಿ (ಲಿಪಿಡ್ ವಿಭಜನೆಯಲ್ಲಿ ಒಳಗೊಂಡಿರುವ ಯಕೃತ್ತಿನ ಕೋಶಗಳು) ಉತ್ಪಾದನೆಯಾಗುವ ಈ ಅಧಿಕ ಕೊಬ್ಬು ಶೇಖರಣೆ ಮತ್ತು ಅಮೋನಿಯಾ ಯಕೃತ್ತಿನ ವೈಫಲ್ಯಕ್ಕೆ ಪ್ರಮುಖ ಕಾರಣವಾಗುತ್ತದೆ.

ಮುನ್ನೆಚ್ಚರಿಕೆಗಳು

ಮಹಿಳೆಯ ದೇಹದಲ್ಲಿ ಗರ್ಭಧಾರಣೆಯು ಪ್ರಮುಖ ಬದಲಾವಣೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ, ಮದ್ಯ ಸೇವನೆಯನ್ನು ತ್ಯಜಿಸುವುದು, ತೂಕ ನಿಯಂತ್ರಣದಲ್ಲಿಡುವುದು ಮತ್ತು ಆರೋಗ್ಯಕರ ಆಹಾರದಿಂದ ಉತ್ತಮ-ಸಮತೋಲಿತ ಆಹಾರ ಸೇವಿಸುವುದು ಅತ್ಯಂತ ಅವಶ್ಯಕ. ವ್ಯಕ್ತಿಯು ಸುರಕ್ಷಿತವಾಗಿದ್ದುಕೊಂಡು ಗರ್ಭಾವಸ್ಥೆಯ ಸಂದರ್ಭದಲ್ಲಿ ತಮ್ಮನ್ನು ತಾವೇ ನಿಗಾವಹಿಸುತ್ತಾ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಂಡರೆ,ಇಂತಹ ತೀವ್ರ ಯಕೃತ್ತು ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಡಾ ಕಪಾಲಿ ವಿವರಿಸುತ್ತಾರೆ.

ಅಲ್ಲದೇ, ನಿಯಮಿತವಾದ ಪ್ರಸವ ಪೂರ್ವ ಆರೈಕೆಯು ಅತ್ಯಂತ ಅವಶ್ಯಕ. ನಿಯಮಿತ ಚೆಕ್ಅಪ್‌ಗೆ ಒಳಗಾಗುವುದರಿಂದ, ತಾಯಿ ಮತ್ತು ಭ್ರೂಣದ ಆರೋಗ್ಯದ ಬಗ್ಗೆ ನಿಗಾ ವಹಿಸಲು ವೈದ್ಯರಿಗೆ ಸಾಧ್ಯವಾಗುತ್ತದೆ. ಮಾತ್ರವಲ್ಲ, ಮದ್ಯಪಾನ, ಧೂಮಪಾನ ಮತ್ತು ಮಾದಕ ದ್ರವ್ಯ ಸೇವನೆಯನ್ನು ತ್ಯಜಿಸುವುದು ನಿರ್ಣಾಯಕವಾಗಿದೆ. ಸಾಕಷ್ಟು ವಿಶ್ರಾಂತಿ, ಒತ್ತಡ ನಿರ್ವಹಣೆ, ತ್ವರಿತ ವೈದ್ಯಕೀಯ ಆರೈಕೆ ಮತ್ತು ಆರಂಭಿಕ ಪತ್ತೆ ಕೂಡಾ ಗಮನಾರ್ಹ ವ್ಯತ್ಯಾಸವನ್ನು ಉಂಟುಮಾಡಬಹುದು ಎಂದು ಡಾ ಕಲಾಲ್ ಹೇಳುತ್ತಾರೆ.

AFLP ಭ್ರೂಣ ಅಥವಾ ಮಗುವಿನ ಮೇಲೆ ಪರಿಣಾಮ ಬೀರಬಹುದೇ?

“ಗರ್ಭಧಾರಣೆಯ ಮೂರನೇ ತ್ರೈಮಾಸಿಕದಲ್ಲಿ ಸಂಭವಿಸುವ AFLPಯನ್ನು ಅವಲಂಬಿಸಿ, ಮಗುವಿನ ಮೇಲೆ ವಿವಿಧ ಪರಿಣಾಮಗಳನ್ನು ಉಂಟುಮಾಡಬಹುದು. ಆರಂಭಿಕ ಹಂತದಲ್ಲಿ ಉಂಟಾಗುವ ಅಂದರೆ ಏಳನೇ ತಿಂಗಳಿನಲ್ಲಿ ಉಂಟಾಗುವ ಅವಧಿಪೂರ್ವ ಹೆರಿಗೆಯು ನವಜಾತ ಶಿಶುವಿನ ಬೆಳವಣಿಗೆಯಲ್ಲಿ ತೀವ್ರವಾದ ಕುಂಠಿತ ಬೆಳವಣಿಗೆಗೆ ಕಾರಣವಾಗಬಹುದು” ಎಂದು ಡಾ ಕಪಾಲಿ ಹೇಳುತ್ತಾರೆ.

ಇದರೊಂದಿಗೆ, ಭ್ರೂಣವು ಹೈಪೋಗ್ಲೈಸೀಮಿಯಾದಿಂದ (ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವುದು) ಬಳಲುತ್ತಿದೆಯೇ ಎಂಬುದನ್ನು ವಿಶೇಷವಾಗಿ ಗಮನಿಸುತ್ತಿರಬೇಕು. ಫ್ಯಾಟಿ ಆಮ್ಲದ ಚಯಾಪಚಯದಲ್ಲಿನ ದೋಷದಿಂದಾಗಿ, ಭ್ರೂಣವು ಕಡಿಮೆ ಸಕ್ಕರೆ ಅಂಶ ಮತ್ತು ಮೂರ್ಛೆರೋಗಕ್ಕೆ ಒಳಗಾಗುತ್ತದೆ. ಆದ್ದರಿಂದ ನಾವು ಅತ್ಯಂತ ಜಾಗರೂಕರಾಗಿದ್ದುಕೊಂಡು ಅವುಗಳ ಮೇಲೆ ನಿಗಾ ಇಡಬೇಕು” ಎಂದು ಡಾ ಕಲಾಲ್ ಅವರು ಹೇಳುತ್ತಾರೆ.

ಗರ್ಭಾವಸ್ಥೆ ವೇಳೆಯ ಅಕ್ಯೂಟ್ ಫ್ಯಾಟಿ ಲಿವರ್

ADLP ಯಲ್ಲಿ ಆರಂಭಿಕ ಪತ್ತೆ ಮತ್ತು ತ್ವರಿತ ವೈದ್ಯಕೀಯ ಚಿಕಿತ್ಸೆ ಅತ್ಯಂತ ನಿರ್ಣಾಯಕವಾದುದು. ವ್ಯಕ್ತಿಯ ರೋಗನಿರ್ಣಯವಾದ ಕೂಡಲೇ ತಾಯಿ ಮತ್ತು ಭ್ರೂಣವನ್ನು ನಿರಂತರವಾಗಿ ನಿಗಾ ವಹಿಸುತ್ತಿರಬೇಕು ಎಂದು ಡಾ. ಕಲಾಲ್ ಎಚ್ಚರಿಸುತ್ತಾರೆ.

ತುರ್ತು ಹೆರಿಗೆಯೇ ಇದಕ್ಕಿರುವ ಏಕೈಕ ಚಿಕಿತ್ಸೆ. ಮಗುವಿನ ಜನನದ ನಂತರ AFLP ನಿವಾರಣೆಯಾಗುತ್ತದೆ ಮತ್ತು ತಾಯಿಯ ಆರೋಗ್ಯ ಸಹಜ ಸ್ಥಿತಿಗೆ ಮರಳುತ್ತದೆ. ಯಕೃತ್ತಿನ ಕಾರ್ಯ ಸ್ಥಗಿತಗೊಂಡರೆ, ಶ್ವಾಸಕೋಶ ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಇದು ತಾಯಿ ಮತ್ತು ಮಗು ಇಬ್ಬರ ಜೀವಕ್ಕೂ ಅಪಾಯಕಾರಿ. ಆದ್ದರಿಂದ ಹೆರಿಗೆ ಮಾಡುವುದು ನಿರ್ಣಾಯಕ ಎಂದು ಡಾ ಕಪಾಲಿ ಹೇಳುತ್ತಾರೆ.

“ಸಾಕಷ್ಟು ವೈದ್ಯಕೀಯ ಆರೈಕೆ, ಆರಂಭಿಕ ರೋಗನಿರ್ಣಯ ಮತ್ತು ತ್ವರಿತ ಹೆರಿಗೆಯ ಮೂಲಕ ಹೆಚ್ಚಿನ ಪ್ರಕರಣಗಳನ್ನು ನಿಭಾಯಿಸಬಹುದು. ಆದರೆ ಕೆಲವು ಪ್ರಕರಣಗಳಲ್ಲಿ ಅಕ್ಯೂಟ್ ಫ್ಯಾಟಿ ಲಿವರ್ ಆಫ್ ಪ್ರೆಗ್ನೆನ್ಸಿಯು ತಡವಾಗಿ ರೋಗನಿರ್ಣಯಗೊಂಡು ಯಕೃತ್ತಿನ ವೈಫಲ್ಯ ಉಂಟಾಗುತ್ತದೆ, ಮತ್ತು ಇಂತಹ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಗೆ ಯಕೃತ್ತು ಕಸಿಯ ಅವಶ್ಯಕತೆ ಉಂಟಾಗಬಹುದು” ಎಂದು ಡಾ ಕಲಾಲ್ ಹೇಳುತ್ತಾರೆ.

ಸಾರಾಂಶ

  • ಗರ್ಭಾವಸ್ಥೆ ವೇಳೆಯ ಅಕ್ಯೂಟ್ ಫ್ಯಾಟಿ ಲಿವರ್ ಅಪರೂಪವಾದರೂ ತೀವ್ರವಾದ ಆರೋಗ್ಯ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಇದು ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕದಲ್ಲಿ ಉಂಟಾಗುತ್ತದೆ.
  • ಈ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ಜಾಂಡಿಸ್ ಉಂಟಾಗುತ್ತದೆ. ರೋಗನಿರ್ಣಯವಾದ ನಂತರ ತಾಯಿ ಮತ್ತು ಭ್ರೂಣವನ್ನು ನಿರಂತರವಾಗಿ ನಿಗಾ ವಹಿಸುತ್ತಿರಬೇಕು.
  • ಇದು ತಾಯಿ ಮತ್ತು ಮಗು ಇಬ್ಬರಿಗೂ ಮಾರಣಾಂತಿಕವಾಗಬಹುದು ಮತ್ತು ತಕ್ಷಣದ ಹೆರಿಗೆಯೇ ಇದಕ್ಕಿರುವ ಏಕೈಕ ಚಿಕಿತ್ಸೆಯಾಗಿದೆ.

ವಿಶೇಷವಾಗಿ ಗರ್ಭಾವಸ್ಥೆಯ ಸಮಯದಲ್ಲಿ ಆರೋಗ್ಯಕರ ಜೀವನಶೈಲಿ, ಮತ್ತು ಯಕೃತ್ತಿನ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಈ ತೊಡಕನ್ನು ತಡೆಗಟ್ಟಬಹುದಾಗಿದೆ.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ