ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಆಲ್ಕೋಹಾಲಿಕ್ ಹೆಪಟೈಟಿಸ್‌ಗೆ ಮದ್ಯವರ್ಜನೆಯೇ ಪರಿಹಾರ
12

ಆಲ್ಕೋಹಾಲಿಕ್ ಹೆಪಟೈಟಿಸ್‌ಗೆ ಮದ್ಯವರ್ಜನೆಯೇ ಪರಿಹಾರ

ಬಹುತೇಕ ಸಂದರ್ಭಗಳಲ್ಲಿ, ಆಲ್ಕೋಹಾಲಿಕ್ ಹೆಪಟೈಟಿಸ್ ಅಥವಾ ಯಾವುದೇ ಆಲ್ಕೋಹಾಲ್ ಪ್ರೇರಿತ ಪಿತ್ತಜನಕಾಂಗದ ಸ್ಥಿತಿಯ ಚಿಕಿತ್ಸೆಯ ಪ್ರಾರಂಭದಲ್ಲಿ ಆ ಸ್ಥಿತಿಗೆ ಕಾರಣವಾದ ಕಾರಕದ ನಿರ್ಮೂಲನೆ ನಡೆಸಲಾಗುತ್ತದೆ. 

ಆಲ್ಕೋಹಾಲಿಕ್ ಹೆಪಟೈಟಿಸ್‌ಗೆ ಮದ್ಯವರ್ಜನೆಯೇ ಪರಿಹಾರ

ಜುಲೈ 4, 2020 ರ ಬೆಳಗ್ಗೆ, ಯುಎಸ್‌ಎ ಯ ವ್ಯೋಮಿಂಗ್ ಮೂಲದ ಜಸ್ಟಿನ್ ಎಲ್ ಅನಾರೋಗ್ಯದಿಂದ ಬಳಲಿದರು. ಆರಂಭದಲ್ಲಿ, ಅವರು ಅದನ್ನು ಕೋವಿಡ್ ಎಂದು ಭಾವಿಸಿದ್ದರೂ, ನಡುಕ ಮತ್ತು ಭಾರೀ ಬೆವರುವಿಕೆ ಇದ್ದಕ್ಕಿದ್ದಂತೆ ಹೊಟ್ಟಯಲ್ಲಿ ತೀವ್ರವಾದ ಅಸ್ವಸ್ಥತೆ ಉಂಟಾಯಿತು ಮತ್ತು ನಡೆಯಲು ಸಾಧ್ಯವಾಗದ ಪರಿಸ್ಥಿತಿಗೆ ತಿರುಗಿತು. 

ನಂತರದ ವಾರ, ಜಸ್ಟಿನ್ ಅವರು ವಾಕರಿಕೆ ಮತ್ತು ನಿರ್ಜಲೀಕರಣದಿಂದ ತೀವ್ರವಾಗಿ ಬಳಲಿದರು, ಅದರ ಮುಂದಿನ ವಾರ ಅವರು ಬದುಕುಳಿಯುವುದೇ ಕಷ್ಟವೆಂದು ಹೇಳಲಾಯಿತು. ಅಕ್ಟೋಬರ್ 5 ರಂದು ಅವರಿಗೆ ಆಲ್ಕೋಹಾಲಿಕ್ ಹೆಪಟೈಟಿಸ್ ಇರುವುದು ಪತ್ತೆಯಾಯಿತು.  

ವೈದ್ಯರು ಸಿರೋಸಿಸ್‌ನೊಂದಿಗಿನ ಆಲ್ಕೋಹಾಲಿಕ್ ಹೆಪಟೈಟಿಸ್ ಎಂದು ನನ್ನ ರೋಗನಿರ್ಣಯ ಮಾಡಿದರು. ನಾವು ಸಂಭವನೀಯ ಯಕೃತ್ತಿನ ಕಸಿ ಬಗ್ಗೆ ಮಾತನಾಡುತ್ತಿದ್ದೆವು. ಚಿಕಿತ್ಸೆಯನ್ನು ಪರಿಗಣಿಸಲು ಕನಿಷ್ಠ ಎರಡು ವರ್ಷಗಳ ಕಾಲ ಮದ್ಯಪಾನವನ್ನು ಮಾಡಬಾರದು ಎಂದು ವೈದ್ಯರು ಹೇಳಿದರು. ಅದು ನನಗೆ ಆಶ್ಚರ್ಯವನ್ನುಂಟುಮಾಡಿತು. ಅವರು ಯಕೃತ್ತಿನ ಕಸಿಯ ಬಗ್ಗೆ ಮಾತನಾಡುತ್ತಿದ್ದಿದ್ದರಿಂದ ನಾನು ಬದುಕುಳಿಯುವ ಸಾಧ್ಯತೆ ಇರಬಹುದು ಎಂದು ನಾನು ಭಾವಿಸಿದೆ ಎನ್ನುತ್ತಾರೆ ಜಸ್ಟಿನ್. 

ಎರಡು ವರ್ಷಗಳಿಂದ ಆಲ್ಕೋಹಾಲ್‌ ತ್ಯಜಿಸಿರುವ ಜಸ್ಟಿನ್ ಇದೀಗ ಪ್ರತಿದಿನ ಮೂರು ಮೈಲುಗಳಷ್ಟು ದೂರ ಓಡುತ್ತಾರೆ ಮತ್ತು ಅವರು ತಮ್ಮ ಜೀವನ ಈಗ ಅತ್ಯುತ್ತಮ ಹಂತದಲ್ಲಿದೆ ಎಂದು ಭಾವಿಸುತ್ತಾರೆ. 

ಆಲ್ಕೋಹಾಲಿಕ್ ಹೆಪಟೈಟಿಸ್ ಸೇರಿದಂತೆ ಯಾವುದೇ ಆಲ್ಕೋಹಾಲ್-ಸಂಬಂಧಿತ ಯಕೃತ್ತಿನ ಕಾಯಿಲೆಗೆ ಚಿಕಿತ್ಸೆ ನೀಡುವ ಮೊದಲ ಹಂತವೆಂದರೆ, ಸಮಸ್ಯೆಯನ್ನು ಉಂಟುಮಾಡುವ ವಸ್ತುವನ್ನು ಪ್ರಾರಂಭದಲ್ಲೇ ತೊಡೆದುಹಾಕುವುದು ಎಂದು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗಳ ಹೆಪಟೊಬಿಲಿಯರಿ ಮತ್ತು ಟ್ರಾನ್ಸ್‌ಪ್ಲಾಂಟ್ ಸರ್ಜರಿಯ ಪ್ರಮುಖ ಸಲಹೆಗಾರ ಡಾ.ಸೋನಲ್ ಅಸ್ಥಾನಾ ವಿವರಿಸುತ್ತಾರೆ. 

ಈ ಸಂದರ್ಭದಲ್ಲಿ ವ್ಯಕ್ತಿಯು ತಕ್ಷಣವೇ ಆಲ್ಕೋಹಾಲ್ ಕುಡಿಯುವುದನ್ನು ನಿಲ್ಲಿಸಲು ಮತ್ತು ಅದು ಅವರ ಜೀವನವನ್ನು ಸಂಪೂರ್ಣವಾಗಿ ನಾಶಮಾಡುವುದನ್ನು ತಡೆಯಲಾಗುತ್ತದೆ ಎಂದು ಅವರು ಹೇಳುತ್ತಾರೆ, 

ಆಲ್ಕೋಹಾಲಿಕ್ ಹೆಪಟೈಟಿಸ್ ಎಂದರೇನು? 

ಹೊಸದಿಲ್ಲಿಯ ಓಖ್ಲಾದಲ್ಲಿರುವ ಫೋರ್ಟೀಸ್ ಎಸ್ಕಾರ್ಟ್ಸ್‌ನ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟೊಬಿಲಿಯರಿ ಸೈನ್ಸ್‌ನ ನಿರ್ದೇಶಕ ಡಾ. ಪಂಕಜ್ ಪುರಿ ಅವರು ಆಲ್ಕೋಹಾಲ್ ಸೇವಿಸುವ ಹೆಚ್ಚಿನ ಜನರ ಯಕೃತ್ತಿನಲ್ಲಿ ಕೊಬ್ಬು(Fatty liver) ಕಂಡುಬರುತ್ತದೆ ಎಂದು ಹೇಳುತ್ತಾರೆ.  

ಅದಾಗ್ಯೂ, ಈ ವ್ಯಕ್ತಿಗಳಲ್ಲಿ ಕೆಲವರು ತಮ್ಮ ಯಕೃತ್ತಿನ ಕಾರ್ಯ(ಲಿವರ್ ಫಂಕ್ಷನ್)ಗಳಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ, ಇದರಿಂದಾಗಿ ಅಬ್‌ನಾರ್ಮಲ್ ಲಿವರ್ ಫಂಕ್ಷನ್ ಟೆಸ್ಟ್‌ ಅನ್ನು ನಡೆಸಬೇಕಾಗುತ್ತದೆ. ಲಿವರ್ ಫಂಕ್ಷನ್ ಟೆಸ್ಟ್‌‌ಗಳು ಪಿತ್ತಜನಕಾಂಗದಲ್ಲಿ ರಾಸಾಯನಿಕಗಳು (ಕಿಣ್ವಗಳು), ಪ್ರೋಟೀನ್‌ಗಳು ಮತ್ತು ಇತರ ಪದಾರ್ಥಗಳ ಮಟ್ಟವನ್ನು ಪರಿಶೀಲಿಸುವ ಮೂಲಕ ಪಿತ್ತಜನಕಾಂಗದ ಹಾನಿ ಅಥವಾ ಉರಿಯೂತದ ಮಟ್ಟವನ್ನು ಪತ್ತೆಹಚ್ಚುವ ರಕ್ತ ಪರೀಕ್ಷೆಗಳಾಗಿವೆ. ಹಿನ್ನಲೆ ಕೊಬ್ಬುಗಳು ಇದ್ದಾಗ, ಯಕೃತ್ತಿನಲ್ಲಿ ಗಾಯದ ಗುರುತುಗಳು ಮತ್ತು ಬಿಗಿತ ಹೆಚ್ಚಾಗುತ್ತದೆ. ಇದನ್ನೇ ಆಲ್ಕೋಹಾಲಿಕ್ ಹೆಪಟೈಟಿಸ್ ಎನ್ನಲಾಗುತ್ತದೆ” ಎಂದು ಅವರು ಹೇಳುತ್ತಾರೆ 

ಆಲ್ಕೋಹಾಲ್ ಸಂಬಂಧಿತ ಪಿತ್ತಜನಕಾಂಗದ ಹಾನಿಯು ಯಕೃತ್ತಿನ ಸಿರೋಸಿಸ್ ಮತ್ತು ವೈಫಲ್ಯ, ಯಕೃತ್ತಿನ ಕ್ಯಾನ್ಸರ್ ಮತ್ತು ಮರಣಕ್ಕೆ ಕಾರಣವಾಗುವ ಸಾಧ್ಯತೆಗಳಿವೆ ಎಂದು ಡಾ. ಪುರಿ ಹೇಳುತ್ತಾರೆ. 

 

ಆಲ್ಕೋಹಾಲಿಕ್ ಹೆಪಟೈಟಿಸ್ ಅನ್ನು ಚಿಕಿತ್ಸೆಯಿಂದ ಗುಣಪಡಿಸಬಹುದೇ? 

ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯವಾದರೆ, ಆಲ್ಕೋಹಾಲ್ ಹೆಪಟೈಟಿಸ್ ಅನ್ನು ಗುಣಪಡಿಸಲು ಸಾಧ್ಯವಿದೆ. ಗಂಭೀರವಾದ ಗಾಯದ ಗುರುತು ಮತ್ತು ಫೈಬ್ರೋಸಿಸ್ ಅನ್ನು ತಡೆಗಟ್ಟಲು ಪ್ರಾರಂಭದಲ್ಲೇ ಪತ್ತೆಹಚ್ಚುವುದು ಮುಖ್ಯವಾಗಿದೆ. ಫೈಬ್ರೋಸಿಸ್ ಎಂದು ಕರೆಯಲ್ಪಡುವ ಗಾಯಗೊಂಡ ಯಕೃತ್ತಿನ ಅಂಗಾಂಶಗಳ ಶೇಖರಣೆಯು ಯಕೃತ್ತಿನ ರಕ್ತದ ಸಂಚಾರ ಗಮನಾರ್ಹವಾಗಿ ಕಡಿಮೆಯಾಗಲು ಕಾರಣವಾಗುತ್ತದೆ. ಡಾ. ಪುರಿಯ ಪ್ರಕಾರ, ಇದು ಸಿರೋಸಿಸ್‌ ಬೆಳವಣಿಗೆಗೆ ಕಾರಣವಾಗಬಹುದು, ಇದರಿಂದಾಗಿ ಹಾನಿಗೊಳಗಾದ ಯಕೃತ್ತು ಶಾಶ್ವತ ಅಪಾಯವನ್ನು ಎದುರಿಸುತ್ತದೆ ಎಂದು ಡಾ. ಪುರಿ ಹೇಳುತ್ತಾರೆ.   

ಈಗಾಗಲೇ ಗಂಭೀರ ಪರಿಸ್ಥಿತಿಯಲ್ಲಿರುವ ಮತ್ತು ರೋಗವು ಮುಂದಿನ ಹಂತದಲ್ಲಿರುವವರಲ್ಲಿ ಮರಣ ಪ್ರಮಾಣವು ಸರಿಸುಮಾರು 50% ಆಗಿದೆ” ಎನ್ನುತ್ತಾರೆ ಅವರು. 

ಆಲ್ಕೋಹಾಲಿಕ್ ಹೆಪಟೈಟಿಸ್ ಅನ್ನು ಸಕಾಲದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎನ್ನುವುದನ್ನು ಡಾ.ಅಸ್ಥಾನಾ ಸಮ್ಮತಿಸಿದರೂ, ಇದು ಈಗಾಗಲೇ ಯಕೃತ್ತು ಎಷ್ಟು ಹಾನಿಗೆ ಒಳಗಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳುತ್ತಾರೆ. 

ಆಲ್ಕೋಹಾಲ್ (ಮದ್ಯ) ಯಕೃತ್ತನ್ನು ಅನೇಕ ರೀತಿಯಲ್ಲಿ ಹಾನಿಗೊಳಿಸುತ್ತದೆ. ಜನರು ದೀರ್ಘಕಾಲದವರೆಗೆ ಸ್ಥಿರ ಪ್ರಮಾಣದ ಆಲ್ಕೋಹಾಲ್ ಅನ್ನು ಸೇವಿಸಿದಾಗ, ಇದು ಪಿತ್ತಜನಕಾಂಗದ ನಿರಂತರ ಹಾನಿ ಮತ್ತು ಫೈಬ್ರೋಸಿಸ್‌ಗೆ (ಗಾಯದ ಗುರುತುಗಳು) ಕಾರಣವಾಗಬಹುದು. ಇದು ಆಲ್ಕೋಹಾಲ್ ಸಂಬಂಧಿತ ಪಿತ್ತಜನಕಾಂಗದ ಹಾನಿಯ ಅತ್ಯಂತ ವಿಶಿಷ್ಟ ವಿಧಗಳಲ್ಲಿ ಒಂದಾಗಿದೆ. ತೀವ್ರವಾದ ಯಕೃತ್ತಿನ ಹಾನಿ ಉಂಟಾಗುವವರೆಗೆ ಕೆಲವು ವ್ಯಕ್ತಿಗಳಲ್ಲಿ ಯಕೃತ್ತಿನ ಕಾಯಿಲೆ ಯಾವುದೇ ಲಕ್ಷಣಗಳನ್ನು ತೋರಿಸದೆಯೇ ಇರಬಹುದು” ಎಂದು ಅವರು ಹೇಳುತ್ತಾರೆ. 

ವಿಶೇಷವಾಗಿ ಯುವ ವಯಸ್ಕರಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಕರಣಗಳ ಎರಡನೆಯ ವಿಧವೆಂದರೆ, ಕಡಿಮೆ ಸಮಯದಲ್ಲಿ ಹೆಚ್ಚಿನ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಆಲ್ಕೋಹಾಲ್ ಸೇವನೆ ಅಥವಾ ವಾರಾಂತ್ಯದಲ್ಲಿ ಮಾಡುವ ಬಿಂಜ್ ಡ್ರಿಂಕಿಂಗ್’. ಬಿಂಜ್ ಡ್ರಿಂಕ್ಸ್ ಸಹ ಯಕೃತ್ತಿಗೆ ಗಮನಾರ್ಹ ಹಾನಿ ಮತ್ತು ಉರಿಯೂತವನ್ನು ಉಂಟುಮಾಡಬಹುದು” ಎನ್ನುತ್ತಾರೆ ಡಾ. ಅಸ್ಥಾನಾ. 

ಆಲ್ಕೋಹಾಲಿಕ್ ಹೆಪಟೈಟಿಸ್‌ನ ರೋಗನಿರ್ಣಯ 

ದೀರ್ಘಕಾಲದವರೆಗೆ ನಿಯಮಿತವಾಗಿ ಆಲ್ಕೋಹಾಲ್ ಸೇವನೆಯಲ್ಲಿ ತೊಡಗಿರುವ ಜನರು ವ್ಯಸನದ ಕೆಲವು ಲಕ್ಷಣಗಳನ್ನು ತೋರ್ಪಡಿಸಬಹುದು ಎಂದು ಡಾ.ಪುರಿ ಹೇಳುತ್ತಾರೆ. 

  • ಸ್ಪೈಡರ್ ಆಂಜಿಯೋಮಾ (ಚರ್ಮದ ಮೇಲ್ಮೈ ಮೇಲೆ ಸಣ್ಣ, ಕೆಂಪು ಅಥವಾ ನೆರಳೆ ಬಣ್ಣದ ಗುರುತುಗಳು) 
  • ಪಾಮರ್ ಎರಿಥೆಮಾ ಎಂದು ಕರೆಯಲ್ಪಡುವ ಗಾಡ ಕೆಂಪು ಬಣ್ಣದ ಅಂಗೈಗಳು 
  • ಕಾಮಾಲೆಯ ರೋಗಲಕ್ಷಣಗಳು 
  • ರಕ್ತ ಪರೀಕ್ಷೆಯಿಂದ ಕಂಡುಹಿಡಿಯಬಹುದಾದ ಅಸಹಜ ಯಕೃತ್ತಿನ ಕಾರ್ಯ 
  • ಅಲ್ಟ್ರಾಸೌಂಡ್‌ನಿಂದ ಕಂಡುಹಿಡಿಯಬಹುದಾದ ಯಕೃತ್ತಿನ ಕೊಬ್ಬು (fatty liver) 
  • ಫೈಬ್ರೋಸ್ಕ್ಯಾನ್ (ಯಕೃತ್ತಿನ ಬಿಗಿತವನ್ನು ಅಳೆಯುವ ಒಂದು ಪ್ರಕಾರದ ಅಲ್ಟ್ರಾಸೌಂಡ್) ಸಮಯದಲ್ಲಿ ಕಂಡುಬರುವ ಯಕೃತ್ತಿನ ಬಿಗಿತ. 

“ಏತನ್ಮಧ್ಯೆ, ಅಲ್ಪಾವಧಿಯಲ್ಲಿ ಅಧಿಕ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸುವ ಜನರು ತೀವ್ರವಾದ ಕಾಮಾಲೆ, ಪಾದಗಳ ಊತ ಮತ್ತು ಹೊಟ್ಟೆಯ ಹಿಗ್ಗುವಿಕೆ ಸಮಸ್ಯೆಯನ್ನು ಹೊಂದಿರಬಹುದು ಎಂದು ವೈದ್ಯರು ಹೇಳುತ್ತಾರೆ. ಆಲ್ಟ್ರಾಸೌಂಡ್‌ನಿಂದ ಯಕೃತ್ತಿನಲ್ಲಿರುವ ಕೊಬ್ಬು ಮತ್ತು ದ್ರವದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.” 

ಆಲ್ಕೋಹಾಲಿಕ್ ಹೆಪಟೈಟಿಸ್‌ನ ತೀವ್ರತೆಯನ್ನು ಹಲವಾರು ಪರೀಕ್ಷೆಗಳಿಂದ ನಿರ್ಧರಿಸಲಾಗುತ್ತದೆ. ಅವುಗಳಲ್ಲೊಂದು ಸಾಮಾನ್ಯ ವಿಧಾನವೆಂದರೆ, ಮ್ಯಾಡ್ರೆ ಸ್ಕೋರ್. ಗ್ಲ್ಯಾಸ್ಗೋ ಸ್ಕೋರ್ ಕೂಡ ಲಭ್ಯವಿದೆ. ಇದು ಅಂತಿಮ ಹಂತದ ಯಕೃತ್ತಿನ ಕಾಯಿಲೆಯನ್ನು(MELD) ಪತ್ತೆಹಚ್ಚುವ ಸ್ಕೋರ್ ಮಾದರಿಯಾಗಿದೆ. ರೋಗವು ಎಷ್ಟು ತೀವ್ರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸ್ಕೋರ್‌ಗಳನ್ನು ಅವಲಂಬಿಸಬಹುದಾಗಿದೆ. ಅದರ ಪ್ರಮಾಣ ಹೆಚ್ಚಿದಷ್ಟು ಕಾಯಿಲೆ ತೀವ್ರವಾಗುವುದರಿಂದ, ರೋಗಿಗಳಿಗೆ ಹೆಚ್ಚು ತೀವ್ರತೆಯ ಚಿಕಿತ್ಸೆಯನ್ನು ನೀಡುವುದು ಅವಶ್ಯಕವಾಗಿರುತ್ತದೆ” ಎಂದು ಡಾ.ಪುರಿ ಹೇಳುತ್ತಾರೆ 

ಆಲ್ಕೋಹಾಲ್ ಸಂಬಂಧಿತ ಪಿತ್ತಜನಕಾಂಗದ ಹಾನಿಯು ಇತರ ಕಾಯಿಲೆಗಳನ್ನು ಹೊಂದಿರುವವರಲ್ಲಿ ಅಂದರೆ ಸ್ಥೂಲಕಾಯತೆಯಿಂದ ಬಳಲುತ್ತಿರುವವರಲ್ಲಿ, ಹೆಪಟೈಟಿಸ್ ಬಿ ಮತ್ತು ಸಿ ಜೊತೆಗೆ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿರುವ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎನ್ನುತ್ತಾರೆ ಡಾ. ಪುರಿ. 

ಚಿಕಿತ್ಸೆ ಮತ್ತು ಚೇತರಿಕೆ 

ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸಿದ ಸ್ನೇಹಿತೆಯೊಬ್ಬರು, ಚೇತರಿಕೆಯ ಪ್ರಕ್ರಿಯೆಯಲ್ಲಿ ನೆರವಾದರು ಎನ್ನುತ್ತಾರೆ ಜಸ್ಟಿನ್. 

“ಅವಳು ನಿಜವಾಗಿಯೂ ಕೇಳಿಸಿಕೊಂಡು ಅರ್ಥಮಾಡಿಕೊಂಡಳು ಮತ್ತು ಅಲ್ಕೋಹಾಲಿಕ್ಸ್ ಅನೋನಿಮಸ್ (AA) ರೂಮ್‌ಗಳ ಮೂಲಕ ನೆರವನ್ನು ಒದಗಿಸಿದಳು” ಎಂದು ಅವರು ಹೇಳುತ್ತಾರೆ. AA ಎಂದರೆ ಮದ್ಯಪಾನದ ಸಾಮಾನ್ಯ ಸಮಸ್ಯೆಗಳೊಂದಿಗೆ ಬಳಲುತ್ತಿರುವ ಪುರುಷರು ಮತ್ತು ಮಹಿಳೆಯರು ಪರಸ್ಪರ ನೆರವಾಗುವ ಫೆಲೋಶಿಪ್ ಆಗಿದೆ. 

ಜಸ್ಟಿನ್ ವಾರದಲ್ಲಿ ಹಲವಾರು ಬಾರಿ AA ಸಭೆಗಳಿಗೆ ಹಾಜರಾಗಲು ಪ್ರಾರಂಭಿಸಿದರು. ಅವರು ಸಭೆಗಳಿಗೆ ಹಾಜರಾಗದ ದಿನಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿರಲು ಫಿಟ್‌ನೆಸ್ ದಿನಚರಿಯನ್ನು ಅಳವಡಿಸಿಕೊಂಡರು. “ನನಗೆ ಅರಿವಿಲ್ಲದಂತೆಯೇ ವಿಷಯಗಳು ಬದಲಾಗಲಾರಂಭಿಸಿದವು” ಎಂದು ಅವರು ಹೇಳುತ್ತಾರೆ. 

ತಮ್ಮ ಪ್ರಸ್ತುತ ಜೀವನದ ಬಗ್ಗೆ ಮಾತನಾಡಿದ ಜಸ್ಟಿನ್, ನಾನು ಸಮತೋಲಿತ ಆಹಾರವನ್ನು ಸೇವಿಸುತ್ತೇನೆ, ಪ್ರತಿದಿನ ಧ್ಯಾನ ಮಾಡಲು ಪ್ರಯತ್ನಿಸುತ್ತೇನೆ. ನಾನು ಬಹುತೇಕ ಪ್ರತಿದಿನ AA ಸಭೆಗಳಿಗೆ ಹಾಜರಾಗುತ್ತೇನೆ. ನಾನು ಇಷ್ಟಪಡುವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ಅದಕ್ಕಾಗಿ ವಿಶ್ವವಿದ್ಯಾಲಯಗಳಿಗೂ ಭೇಟಿನೀಡಿದ್ದೇನೆ. ನಾನೀಗ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದೇನೆ. ಆಗಾಗ್ಗೆ ಪ್ರಯಾಣಿಸುತ್ತೇನೆ. ನಾನು ಪ್ರತಿದಿನ ಅಲ್ಲದಿದ್ದರೂ ವಾರಕ್ಕೊಮ್ಮೆಯಾದರೂ ಸ್ನೇಹಿತರನ್ನು ಭೇಟಿಮಾಡುತ್ತೇನೆ. ಕುಟುಂಬದೊಂದಿಗೆ ಸಮಯ ಕಳೆಯುತ್ತೇನೆ. ನಾನು ಫೋನ್ ಕರೆಗಳು ಮತ್ತು ಮೆಸೇಜ್‌ಗಳಿಗೆ ಉತ್ತರಿಸುತ್ತೇನೆ. ಮತ್ತು ನಾನು ಆಲಿಸುತ್ತೇನೆ” ಎಂದು ಹೇಳುತ್ತಾರೆ. 

ವ್ಯಸನದಲ್ಲಿ ಏಕಾಂಗಿಯಾಗಿರಬೇಕಿಲ್ಲ ಎಂದು AA ನಿಂದ ಕಲಿತುಕೊಂಡೆ, ನೀವು ಕೆಡುಕೆಂದು ನಿಮ್ಮನ್ನೇ ದೂಷಿಸುವ ಅಗತ್ಯವಿಲ್ಲ, ಮತ್ತು ಇದು ದೋಷವಲ್ಲ ಗೆಲುವು ಎಂದು ಜಸ್ಟಿನ್ ಅವರು ಹೇಳುತ್ತಾರೆ. 

ಸಾರಾಂಶ 

  • ಪ್ರಾರಂಭದಲ್ಲೇ ಪತ್ತೆಹಚ್ಚಲು ಸಾಧ್ಯವಾದರೆ, ಆಲ್ಕೋಹಾಲಿಕ್ ಹೆಪಟೈಟಿಸ್ ಅನ್ನು ಗುಣಪಡಿಸಲು ಸಾಧ್ಯವಿದೆ. 
  • ಆಲ್ಕೋಹಾಲಿಕ್ ಹೆಪಟೈಟಿಸ್ ಅಥವಾ ಯಾವುದೇ ಆಲ್ಕೋಹಾಲ್ ಸಂಬಂಧಿತ ಪಿತ್ತಜನಕಾಂಗದ ಅಸ್ವಸ್ಥತೆಯಲ್ಲಿ ಮದ್ಯವನ್ನು ತ್ಯಜಿಸುವುದು ಅತ್ಯಂತ ಮಹತ್ವದ್ದಾಗಿದೆ. 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ