ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಮಕ್ಕಳಲ್ಲಿ ಒತ್ತಡ ನಿರ್ವಹಣೆ: ಪೋಷಕರ ಪಾತ್ರವೇನು
335

ಮಕ್ಕಳಲ್ಲಿ ಒತ್ತಡ ನಿರ್ವಹಣೆ: ಪೋಷಕರ ಪಾತ್ರವೇನು

ಸೋಲನ್ನು ಒಪ್ಪಿಕೊಳ್ಳುವುದು ಮತ್ತು ಸಹಕಾರ ನೀಡುವುದರಿಂದ ಮಕ್ಕಳಲ್ಲಿ ಒತ್ತಡವನ್ನು ನಿರ್ವಹಿಸಬಹುದು.
ಮಕ್ಕಳಲ್ಲಿ ಒತ್ತಡ ನಿರ್ವಹಣೆ: ಪೋಷಕರ ಪಾತ್ರವೇನು
(ಎಡದಿಂದ ಬಲಕ್ಕೆ) ಬೆಂಗಳೂರಿನಲ್ಲಿ ನಡೆದ ಗೆಟ್ ಸೆಟ್ ಗ್ರೋ ಸಮಿಟ್ – ಪೂರ್ವಾ ರಾನಡೆ, ನೀರಜ್ ಕುಮಾರ್ ಮತ್ತು ಮಹೇಶ್ ಯಾದವ್. (ಫೋಟೋ ಗೌತಮ್ ವಿ/ ಹ್ಯಾಪಿಯೆಸ್ಟ್ ಹೆಲ್ತ್)

ಶೈಕ್ಷಣಿಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡದಿಂದ ಮಕ್ಕಳಲ್ಲಿ ಆತಂಕವಾಗಬಹುದು. ಇದರಿಂದ ಇತರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಮಕ್ಕಳಲ್ಲಿ ಒತ್ತಡ ನಿರ್ವಹಣೆ ಮಾಡಲು ಪೋಷಕರು ಪ್ರಯತ್ನಿಸಬೇಕು.

“ಒತ್ತಡ ಅತ್ಯಗತ್ಯ, ಇದರಿಂದ ಕಾರ್ಯಕ್ಷಮತೆ ಹೆಚ್ಚುತ್ತದೆ. ಆದರೆ ಒತ್ತಡದಿಂದ ಇತರ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದಾಗ ಇದೊಂದು ಸಮಸ್ಯೆಯಾಗಳಬಹುದು.” ಎಂದು ಮಕ್ಕಳ ಮನಶ್ಶಾಸ್ತ್ರಜ್ಞರು ಮತ್ತು ಸಲಹೆಗಾರ್ತಿಯಾದ ಪೂರ್ವಾ ರಾನಡೆ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹ್ಯಾಪಿಯೆಸ್ಟ್ ಹೆಲ್ತ್ ಮಕ್ಕಳ ಶೃಂಗಸಭೆಯಲ್ಲಿ ಹೇಳಿದರು.

ನಿರ್ವಹಿಸಲಾಗದ ಒತ್ತಡವು ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ

“ಮಕ್ಕಳಿಗೆ ಅನುಭವ ಕಡಿಮೆ. ಅವರ ಒತ್ತಡದ ಅನುಭವಗಳನ್ನ ಮಾತು ಬಿಟ್ಟು ಬೇರೆ ರೀತಿಯ ಕೌಶಲ್ಯಗಳಿರುವುದಿಲ್ಲ. ವಿಶೇಷವಾಗಿ ಹದಿಹರೆಯದವರು ಒತ್ತಡವನ್ನು ನಿರ್ವಹಿಸಲು ಹೆಚ್ಚು ಕಷ್ಟಪಡುತ್ತಾರೆ” ಎಂದು ಡಾ ರಾನಡೆ ವಿವರಿಸುತ್ತಾರೆ.

ಮಕ್ಕಳ ಮೇಲೆ ನಾವಿಡುವ ನಿರೀಕ್ಷೆಗಳು ಬಲವಾದ ಪಾತ್ರವನ್ನು ವಹಿಸುತ್ತವೆ. ಸಮಾನ ವಯಸ್ಕರು, ಪೋಷಕರು ಅಥವಾ ಶಿಕ್ಷಕರು ಈ ನಿರೀಕ್ಷೆಗಳನ್ನು ಪ್ರಭಾವಿಸುತ್ತಾರೆ. ಈ ನಿರೀಕ್ಷೆಗಳನ್ನು ಪೂರೈಸದಿದ್ದಾಗ ಮಗು ಒತ್ತಡಕ್ಕೆ ಒಳಗಾಗುತ್ತದೆ” ಎಂದು ಬೆಂಗಳೂರಿನ ಅಲೆನ್ ಕರಿಯರ್ ಇನ್‌ಸ್ಟಿಟ್ಯೂಟ್‌ನ ದಕ್ಷಿಣ ಭಾರತದ ಶೈಕ್ಷಣಿಕ ಮುಖ್ಯಸ್ಥ ಮಹೇಶ್ ಯಾದವ್ ಹೇಳುತ್ತಾರೆ.

ಲಕ್ಷಣಗಳನ್ನಲ್ಲ, ಒತ್ತಡವನ್ನು ನಿವಾರಿಸಿ

“ಹದಿಹರೆಯದವರಲ್ಲಿ ಶಾರೀರಿಕ ಮತ್ತು ಜೈವಿಕ ಬದಲಾವಣೆಗಳಾಗುತ್ತಿರುತ್ತವೆ. ಈ ಬದಲಾವಣೆಗಳ ನಡುವೆ, ಶಿಕ್ಷಣ ತಜ್ಞರು, ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು, ಮಗುವಿನಲ್ಲಿ ಮತ್ತಷ್ಟು ಒತ್ತಡವನ್ನು ಹೆಚ್ಚಿಸಬಹುದು. ಇದು ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಮಗು ಸಿಟ್ಟು ಮಾಡಿಕೊಳ್ಳುವುದು, ಹಠ, ಪ್ರತಿಭಟನೆ, ನಿದ್ರಾಹೀನತೆ ಅಥವಾ ನಿದ್ರಾ ಭಂಗ ಅಥವಾ ಇತರ ನಡವಳಿಕೆ ಕಂಡುಬಂದರೆ ಅದಕ್ಕೆ ಮೂಲ ಕಾರಣ ಒತ್ತಡ ಎಂದು ಪೋಷಕರು ಗುರುತಿಸುವುದು ಮುಖ್ಯ” ಎಂದು ರಾನಡೆ ವಿವರಿಸುತ್ತಾರೆ. ಹಾಗಾಗಿ ಲಕ್ಷಣಗಳನ್ನಷ್ಟೇ ಅಲ್ಲದೆ ಒತ್ತಡದ ಮೂಲ ಕಾರಣವನ್ನು ನಿಭಾಯಿಸುವುದು ಮುಖ್ಯ.

“ಮಕ್ಕಳ ಮಾನಸಿಕ ಯೋಗಕ್ಷೇಮ ಅತೀ ಮುಖ್ಯ ಎಂಬುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು. ಮಗುವಿನ ಮಾನಸಿಕ ಯೋಗಕ್ಷೇಮವನ್ನು ನಿರ್ವಹಿಸಲು ಸಹಾಯ ಮಾಡುವುದು ಒಂದೇ ದಿನದಲ್ಲಿ ಮುಗಿಯುವಂತದ್ದಲ್ಲ. ಔಪಚಾರಿಕ ಶಿಕ್ಷಣದ ಮೂಲಕ ಒತ್ತಡ ನಿರ್ವಹಣೆಯನ್ನು ರೂಢಿಸಿಕೊಳ್ಳಬೇಕು” ಎಂದು ಪೀಕ್‌ಮೈಂಡ್‌ನ ಸಿಇಒ ಮತ್ತು ಸಂಸ್ಥಾಪಕರಾದ ನೀರಜ್ ಕುಮಾರ್ ಹೇಳುತ್ತಾರೆ.

ಸಂವಹನ ನಡೆಸಿ

ತುಂಬು ಕುಟುಂಬ ನ್ಯೂಕ್ಲಿಯರ್‌ಗೆ ಬದಲಾವಣೆಯಾಗಿದ್ದು ಇದಕ್ಕೆ ಕೊಡುಗೆ ನೀಡುತ್ತಿದೆ. ಹೆಚ್ಚಿನ ಮಕ್ಕಳು ಪೋಷಕರೊಂದಿಗೆ ಸಂವಹನ ನಡೆಸುವ ಸಮಸ್ಯೆಗಳನ್ನು ಹೊಂದಿದ್ದಾರೆ ಈ ಸಮಸ್ಯೆಗಳನ್ನು ಮುಕ್ತ ಮತ್ತು ಆರೋಗ್ಯಕರ ಚರ್ಚೆಗಳ ಮೂಲಕ ವಿಂಗಡಿಸಬೇಕು. ಇದಕ್ಕೆ ಪೋಷಕರು ಮಗುವಿಗೆ ಸುರಕ್ಷಿತ ಮತ್ತು ಸಹಾನುಭೂತಿಯ ವಾತಾವರಣವನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಕುಮಾರ್ ವಿವರಿಸುತ್ತಾರೆ. ಪ್ರವೇಶ ಪರೀಕ್ಷೆಗಳಿಗೆ ತಯಾರಿ ಮಾಡುವಾಗ ಒತ್ತಡವು ಸ್ವಯಂ-ಹಾನಿಕಾರಕ ನಡವಳಿಕೆ ಮತ್ತು ವಿದ್ಯಾರ್ಥಿಗಳ ಆತಂಕದೊಂದಿಗೆ ಸಂಬಂಧಿಸಿದೆ. “ಪೋಷಕರು ಅಥವಾ ಶಿಕ್ಷಕರಿಗಿಂತ ಹೆಚ್ಚು ಮಕ್ಕಳು ಬೇಗ ಪ್ರತಿಕ್ರಿಯಿಸುತ್ತಾರೆ” ಎನ್ನುವುದು ಅವರ ಅನುಭವ.

ಮನೆಯ ಒಡನಾಟದಲ್ಲಿದ್ದ ಮಗು ಅಥವಾ ಹದಿಹರೆಯದವರು ವಿದ್ಯಾಭ್ಯಾಸಕ್ಕಾಗಿ ಹೊರಗಡೆ ಹೋಗಬೇಕಾದಾಗ ಅವರಿಗೆ ಸೂಕ್ತ ಬೆಂಬಲದ ಅಗತ್ಯವಿರುತ್ತದೆ. ಪೋಷಕರು ಮಕ್ಕಳಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಕುಮಾರ್ ಹೇಳುತ್ತಾರೆ.

ಮಗುವಿಗೆ ಆಟವಾಡಲು ಬಿಡಿ

ಮಕ್ಕಳು ಪ್ರತಿದಿನ ಎಂಟು ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಅಧ್ಯಯನದಲ್ಲಿ ಕಳೆಯುತ್ತಾರೆ ಎಂದು ಉಲ್ಲೇಖಿಸಿದ ಯಾದವ್, ಅವರು ಖುಷಿಯಾಗಿರಲು, ವಿಶ್ರಾಂತಿ ಪಡೆಯಲು ಮತ್ತು ಆಟವಾಡಲು ಸಮಯವಿಲ್ಲ ಎನ್ನುತ್ತಾರೆ. “ಅತ್ಯಂತ ಮುಖ್ಯವಾಗಿ, ನಿಮ್ಮ ಮಗು ಪ್ರತಿದಿನ ಸ್ವಲ್ಪ ಆಟದ ಸಮಯವನ್ನು ಹೊಂದಿರಬೇಕು. ಇದು ಉತ್ತಮ ಒತ್ತಡ ನಿರ್ವಹಣೆ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆಗಾಗಿ ಮೆದುಳಿನಲ್ಲಿನ ನ್ಯೂರಾನ್‌ಗಳನ್ನು ಉತ್ತೇಜಿಸುತ್ತದೆ” ಎನ್ನುತ್ತಾರೆ ಯಾದವ್.

ಅವರ ಸ್ಥಾನದಲ್ಲಿ ನಿಂತು ಯೋಚಿಸಿ

ಹದಿಹರೆಯದವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪೋಷಕರು ಸಾಕಷ್ಟು ಪ್ರಯತ್ನಗಳನ್ನು ಮಾಡದಿದ್ದಾಗ ಸಂಘರ್ಷವಾಗುತ್ತದೆ. ವಿಶೇಷವಾಗಿ ಮಾನಸಿಕ ಆರೋಗ್ಯ ಮತ್ತು ಜೀವನದ ಇತರ ಅಂಶಗಳ ಬಗ್ಗೆ ಪೋಷಕರು ಕೆಲವು ಪೂರ್ವಗ್ರಹಿಕೆಗಳು ಮತ್ತು ಅಭಿಪ್ರಾಯಗಳನ್ನು ಹೊಂದಿದ್ದು ಕೆಲವನ್ನು ಮರೆತುಬಿಡಬೇಕು ಮತ್ತು ಪುನಃ ಕಲಿಯಬೇಕು ಎಂದು ತಜ್ಞರು ಹೇಳುತ್ತಾರೆ. ಮಕ್ಕಳಲ್ಲಿ ಒತ್ತಡ ನಿರ್ವಹಣೆಯನ್ನು ಈ ಕೆಳಗಿನ ವಿಧಾನಗಳಲ್ಲಿ ನಿಭಾಯಿಸಲು ಪೋಷಕರಿಗೆ ಕುಮಾರ್ ಸಲಹೆ ನೀಡುತ್ತಾರೆ:

ನಿಮ್ಮ ಮಗುವಿನ ಬಗ್ಗೆ ಆರೋಗ್ಯಕರ ನಿರೀಕ್ಷೆಗಳನ್ನು ಹೊಂದಿಸಿ ಮತ್ತು ಅದೇ ರೀತಿ ಮಾಡಲು ಅವರಿಗೆ ತರಬೇತಿ ನೀಡಿ.
ಅಗತ್ಯವಿದ್ದಾಗ ವೃತ್ತಿ ಸಲಹೆಗಾರರ ಸಹಾಯ ಪಡೆಯಿರಿ.
ಮಕ್ಕಳೊಂದಿಗೆ ಮುಕ್ತ, ಪ್ರಾಮಾಣಿಕ ಮತ್ತು ಆರೋಗ್ಯಕರ ಚರ್ಚೆಗಳಿಗೆ ಆಸ್ಪದ ಕೊಡಿ. ಇದರಿಂದ ಬಾಂಧವ್ಯ ಹೆಚ್ಚುತ್ತದೆ.
ನಿರ್ದಿಷ್ಟ ಸಂಸ್ಥೆಯ ಶುಲ್ಕ ಮತ್ತು ಸಂಬಂಧಿತ ಸಮಸ್ಯೆಗಳ ಕುರಿತು ಮಗುವಿನೊಂದಿಗೆ ಬಜೆಟ್ ಮತ್ತು ಹಣದ ಸಮಸ್ಯೆಗಳನ್ನು ಚರ್ಚಿಸಿ.
ಬೆಂಬಲ ನೀಡಿ ಮತ್ತು ಅರ್ಥ ಮಾಡಿಕೊಳ್ಳಿ
ನಿಮ್ಮ ಮಗುವಿಗೆ ಸೈಕೋಮೆಟ್ರಿಕ್ ಪರೀಕ್ಷೆ ತೆಗೆದುಕೊಳ್ಳಲು ಹೇಳಿ. ಅದರಿಂದ ಸಾಮರ್ಥ್ಯ, ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.

ವೈಪರೀತ್ಯ

ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವೃತ್ತಿಗೆ ಬರಲು ಹಲವಾರು ಮಕ್ಕಳು ಬಯಸುತ್ತಾರೆ. ಹಾಗಾಗಿ ಪೋಷಕರು ಮಾತ್ರ ತಪ್ಪಿತಸ್ಥರಲ್ಲ ಎಂದು ಕುಮಾರ್ ಹೇಳುತ್ತಾರೆ. “ಮಕ್ಕಳನ್ನು ವಿವಿಧ ವೃತ್ತಿಗಳನ್ನೂ ಆಯ್ಕೆ ಮಾಡಿಕೊಳ್ಳಲು ಹೇಳಿ ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ಮುಕ್ತವಾಗಿ ಚರ್ಚಿಸಿ” ಎನ್ನುತ್ತಾರೆ ಕುಮಾರ್.

ಸಂವಹನ ವಿಷಯಗಳು

ಪಾಲಕರು ಮಗುವಿಗೆ ಒತ್ತಡ ನಿರ್ವಹಣೆಯಲ್ಲಿ ಸಹಾಯ ಮಾಡಬೇಕು ಮತ್ತು ಈ ಸ್ಪರ್ಧಾತ್ಮಕ ಪರೀಕ್ಷೆಗಳ ದೊಡ್ಡ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಬೇಕು. “ಸೋಲನ್ನು ಒಪ್ಪಿಕೊಳ್ಳುವುದು ಮತ್ತು ಕಾರಣ ಹುಡುಕಿ ಒತ್ತಡವನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ” ಎಂದು ಯಾದವ್ ವಿವರಿಸುತ್ತಾರೆ. ಕುಮಾರ್ ಪ್ರಕಾರ, “ನೀವು ಏನು ಹೇಳುತ್ತೀರಿ ಎಂಬುದು ಅಲ್ಲ ಆದರೆ ನೀವು ಹೇಗೆ ಹೇಳುತ್ತೀರಿ ಎಂಬುದು ವಿದ್ಯಾರ್ಥಿಗಳಿಗೆ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ”.

ಸಾರಾಂಶ:

  • ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಶೈಕ್ಷಣಿಕ ಒತ್ತಡವು ಮಕ್ಕಳಲ್ಲಿ ಗಂಭೀರವಾದ ಮಾನಸಿಕ ಒತ್ತಡವನ್ನು ಉಂಟುಮಾಡಬಹುದು.
  • ಪಾಲಕರು ಮಾತ್ರ ತಪ್ಪಿತಸ್ಥರಲ್ಲ, ಸಮಾಜವು ಅವರ ವೃತ್ತಿಯನ್ನು ಆಯ್ಕೆ ಮಾಡಲು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ.
  • ನಿಮ್ಮ ಮಗುವನ್ನು ಶೈಕ್ಷಣಿಕ ಅನ್ವೇಷಣೆಗಳಿಗಾಗಿ ನೀವು ಕಳುಹಿಸಿದಾಗ ಬಲವಾದ ಬೆಂಬಲ ವ್ಯವಸ್ಥೆಯಾಗಿರಿ.
  • ನಿಮ್ಮ ಮಗುವಿನ ಸಾಮರ್ಥ್ಯಗಳ ಬಗ್ಗೆ ಆರೋಗ್ಯಕರ ನಿರೀಕ್ಷೆಗಳನ್ನು ಹೊಂದಿಸಿ. ಒತ್ತಡ ನಿರ್ವಹಣೆಯಲ್ಲಿ ಮಗುವಿಗೆ ತರಬೇತಿ ನೀಡಿ.

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ