ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ರಜಾದಿನಗಳಲ್ಲಿ ತೂಕ ಹೆಚ್ಚಾಗುವುದನ್ನು ತಪ್ಪಿಸಲು ಸಲಹೆಗಳು
9

ರಜಾದಿನಗಳಲ್ಲಿ ತೂಕ ಹೆಚ್ಚಾಗುವುದನ್ನು ತಪ್ಪಿಸಲು ಸಲಹೆಗಳು

ರಜೆಯ ಸಮಯದಲ್ಲಿ ತೂಕ ಹೆಚ್ಚಾಗುವ ಭಯ ಅನೇಕರದ್ದು. ಈ ಸಲಹೆಗಳು ಅದನ್ನು ನಿರ್ವಹಿಸಲು ಸಹಾಯ ಮಾಡಬಹುದು

ರಜಾದಿನಗಳಲ್ಲಿ ತೂಕ ಹೆಚ್ಚಾಗುವುದನ್ನು ತಪ್ಪಿಸಲು ಸಲಹೆಗಳು

ರಜಾದಿನಗಳಲ್ಲಿ ತೂಕ ಹೆಚ್ಚಾಗುವ ಭಯ ಅನೇಕರಿಗೆ ಇರಬಹುದು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವಾಗ ಡಯಟ್ ಪಾಲಿಸುವುದು ಕಷ್ಟ. ಇದು ಸ್ವಲ್ಪ ತೂಕವನ್ನು ಹೆಚ್ಚಿಸಬಹುದು. ರಜೆಯ ಸಮಯದಲ್ಲಿ ತೂಕ ಹೆಚ್ಚಾಗುವುದು ದೊಡ್ಡ ಮಟ್ಟದ್ದಲ್ಲದೇ ಇದ್ದರೂ, ತೂಕದ ಬಗ್ಗೆ ಕಾಳಜಿ ಇರುವವರಿಗೆ ಇದು ಸಾಕಾಗುತ್ತದೆ. ಬೆಂಗಳೂರಿನ ಆಸ್ಟರ್ ಸಿಎಮ್‌ಐ ಆಸ್ಪತ್ರೆ, ಕ್ಲಿನಿಕ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಮುಖ್ಯಸ್ಥ ಎಡ್ವಿನಾ ರಾಜ್, ರಜೆಯ ಮೋಡ್‌ನಲ್ಲಿಇರುವವರು ತಿಂಗಳಿಗೆ ಸುಮಾರು ಒಂದರಿಂದ ಮೂರು ಕೆಜಿಗಳಷ್ಟು ಹೆಚ್ಚಾಗುತ್ತಾರೆ ಎಂದು ಹೇಳುತ್ತಾರೆ. ಸ್ಥೂಲಕಾಯತೆ ಹೊಂದಿರುವವರಿಗೆ ಕಳಪೆ ಚಯಾಪಚಯ ಕ್ರಿಯೆಯಿಂದಾಗಿ ತೂಕ ಹೆಚ್ಚುವ ಸಾಧ್ಯತೆ ಇದೆ. ರಜೆಯ ತೂಕ ಹೆಚ್ಚಾಗುವುದನ್ನು ಸುಲಭವಾಗಿ ತಡೆಯಬಹುದು ಅಥವಾ ನಿರ್ವಹಿಸಬಹುದು. ನೀವು ಏನನ್ನು ಸೇವಿಸುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿದ್ದರೆ ಇದು ಸಾಧ್ಯವಿದೆ.

1. ಸಕ್ರಿಯರಾಗಿರಿ

ಚಲನಚಿತ್ರಗಳನ್ನು ಅತಿಯಾಗಿ ನೋಡುವ ಬದಲು, ಟ್ರೆಕ್ ಅಥವಾ ಬೀಚ್‌ನಲ್ಲಿ ಓಡಾಡಬಹುದು. ರಜಾದಿನಗಳಲ್ಲಿ ಸ್ನೇಹಿತರು ಮತ್ತು ಕುಟುಂಬದ ಜೊತೆ ಇದು ಕಷ್ಟ ಎನಿಸಿದರೆ ರಾಜ್ ಅವರು ಸೂಚಿಸಿದ ವ್ಯಾಯಾಮದ ಲಘು ವ್ಯಾಯಾಮವನ್ನು (ಸಣ್ಣ ಪಂದ್ಯಗಳೊಂದಿಗೆ ರಚನಾತ್ಮಕ ವ್ಯಾಯಾಮ) ಅಭ್ಯಾಸ ಮಾಡಲು ಪ್ರಯತ್ನಿಸಬಹುದು. ಸಾಧ್ಯವಾದಾಗಲೆಲ್ಲಾ ಕನಿಷ್ಠ 15 ನಿಮಿಷಗಳ ಕಾಲ ಸ್ನೇಹಿತರು ಅಥವಾ ಕುಟುಂಬದೊಂದಿಗೆವಾಕ್ ಹೋಗಬಹುದು.

ರೂಮ್ ಸರ್ವೀಸ್ ಗಾಗಿ ಕಾಯುವಾಗ ಹೋಟೆಲ್ ಜಿಮ್‌ನಲ್ಲಿ ಕೆಲವು ಕಾರ್ಡಿಯೋ ಮಾಡಬಹುದು ಅಥವಾ ನಿಮ್ಮ ಕೋಣೆಯಲ್ಲಿ 20-ನಿಮಿಷಗಳ ಸುಲಭವಾದ ವ್ಯಾಯಾಮವನ್ನು ಮಾಡಬಹುದು. ಹಿರಿಯ ಫಿಟ್ನೆಸ್ ತರಬೇತುದಾರರಾದ ಅಭಿಷೇಕ್ ಖಂಡೇಕರ್, ಕೆಲವು ಬಾಡಿ ವೈಟ್ ವ್ಯಾಯಾಮ ಸಂಯೋಜನೆಗಳನ್ನು ಮಾಡಲು ಶಿಫಾರಸು ಮಾಡುತ್ತಾರೆ. 25 ಜಂಪಿಂಗ್ ಜ್ಯಾಕ್‌ಗಳು, 15 ಬಾಡಿ ವೇಟ್ ಸ್ಕ್ವಾಟ್‌ಗಳು, 10 ಪುಷ್ಅಪ್‌ಗಳು ಮತ್ತು 10 ಲಂಜ್‌ಗಳನ್ನು ಪ್ರತಿ ಕಾಲಿಗೆ ಮತ್ತು 10 ಬರ್ಪಿಗಳೊಂದಿಗೆ ದಿನಚರಿಯನ್ನು ಕೊನೆಗೊಳಿಸಲು ಸೂಚಿಸುತ್ತಾರೆ. “ಪ್ರತಿಯೊಂದರ ನಾಲ್ಕು ಸೆಟ್‌ಗಳು ರಜಾದಿನಗಳಲ್ಲಿ ಯಾವುದೇ ಸಲಕರಣೆಗಳ ಬಳಕೆಯಿಲ್ಲದೆ ತೂಕವನ್ನು ಕಾಪಾಡಿಕೊಳ್ಳಲು ಅಥವಾ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ” ಎಂದು ಅವರು ಹೇಳುತ್ತಾರೆ.

2. ಆಹಾರ ನಿಯಂತ್ರಣ

ರಜಾದಿನಗಳಲ್ಲಿ ಅತಿಯಾಗಿ ತಿನ್ನುವುದು ಸಾಮಾನ್ಯವಾಗಿದೆ. ಆ ಕ್ಯಾಲೊರಿಗಳನ್ನು ಬರ್ನ್ ಮಾಡಲು ವ್ಯಾಯಾಮ ಮಾಡುವುದು ಕಷ್ಟಕರವಾಗಿರುವುದರಿಂದ, ಆಹಾರದ ಪ್ರಮಾಣವನ್ನು ನಿಯಂತ್ರಿಸುವುದು ತಜ್ಞರ ಸಲಹೆಯಾಗಿದೆ. ಬಫೆ ಊಟದ ಸಮಯದಲ್ಲಿ, ಚಿಕ್ಕದಾದ ಪ್ಲೇಟ್ ಆಯ್ಕೆ ಮಾಡಿ. ಇದು ತಮ್ಮ ತಟ್ಟೆಗಳಲ್ಲಿ ಲೋಡ್ ಮಾಡಬಹುದಾದ ಆಹಾರದ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ಮತ್ತು ನಂತರದ ತೂಕ ಹೆಚ್ಚಾಗುವ ಸಾಧ್ಯತೆಯನ್ನು ತಪ್ಪಿಸಬಹುದು.

3. ಫೈಬರ್ ಮತ್ತು ಪ್ರೋಟೀನ್ ಭರಿತ ಆಹಾರವನ್ನು ಸೇವಿಸಿ

ರಜಾದಿನದಲ್ಲಿ ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇವಿಸುತ್ತೇವೆ. ಬದಲಿಗೆ ಮಾಂಸ ಮತ್ತು ಪನೀರ್‌ನಂತಹ ಪ್ರೋಟೀನ್‌ನೊಂದಿಗೆ ಮತ್ತು ಸಂಪೂರ್ಣ ಧಾನ್ಯಗಳನ್ನು ಆಯ್ಕೆ ಮಾಡಿಕೊಂಡರೆ ಫೈಬರ್ ಅಂಶ ಸಿಗುತ್ತದೆ. ಫೈಬರ್ ಅತ್ಯಾಧಿಕತೆಯನ್ನು ಸುಧಾರಿಸುತ್ತದೆ ಎಂದು ಖಾಂಡೇಕರ್ ಹೇಳುತ್ತಾರೆ.

ಅಲ್ಲದೆ, ನೀವು ಹೊರಗಡೆ ಹೋದಾಗ ಹೆಚ್ಚಾಗಿ ಅನಾರೋಗ್ಯಕರ ಕಾರ್ಬೋಹೈಡ್ರೇಟ್‌ಗಳು ಮತ್ತು ಕರಿದ ಆಹಾರವಿರುವ ಫಾಸ್ಟ್ ಫುಡ್ ಜಾಯಿಂಟ್‌ಗಳು ಅಥವಾ ರೆಸ್ಟೋರೆಂಟ್‌ಗಳನ್ನು ತಪ್ಪಿಸಲು ತಜ್ಞರು ಸಲಹೆ ನೀಡುತ್ತಾರೆ. “ಹೆಚ್ಚು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ. ಊಟವನ್ನು ಪ್ರಾರಂಭಿಸುವ ಮೊದಲು ಕನಿಷ್ಠ ಕೆಲವು ತರಕಾರಿ ಸೂಪ್ ಅಥವಾ ಕೆಲವು ತರಕಾರಿ ಸಲಾಡ್ ಸೇವಿಸಿ. ನಂತರ ನಿಮ್ಮ ಪ್ಲೇಟ್ನಲ್ಲಿ ಸ್ವಲ್ಪ ಪ್ರೋಟೀನ್ ಸೇರಿಸಿ. ಅದು ಪನೀರ್,ಮೊಳಕೆ ಕಾಳುಗಳು ಮೊಟ್ಟೆ, ಕೋಳಿ ಅಥವಾ ಮೀನು ಆಗಿರಬಹುದು.ಪಾಲಿಶ್ ಮಾಡಲಾದ ಬಿಳಿ ಅಕ್ಕಿಯನ್ನು ತಪ್ಪಿಸಿ ಬದಲಿಗೆ ಧಾನ್ಯದ ಆಯ್ಕೆಗಳನ್ನು ಆರಿಸಿ. ಮತ್ತು ರಾತ್ರಿಯ ಊಟವನ್ನು ಲಘುವಾಗಿ ಮಾಡಿ ”ಎಂದು ರಾಜ್ ಹೇಳುತ್ತಾರೆ.

4. ಸಿಹಿ ಸೇವನೆಯನ್ನು ಮಿತಿಗೊಳಿಸಿ

ವಿಶೇಷವಾಗಿ ರಜೆಯಲ್ಲಿ ಊಟದ ಕೊನೆಯಲ್ಲಿ ಸಿಹಿ ಇದ್ದೇ ಇರುತ್ತದೆ. ಸಕ್ಕರೆ ಸೇವನೆ ತೂಕ ಹೆಚ್ಚಾಗಲು ಸಾಮಾನ್ಯ ಕಾರಣವಾಗಿದೆ. “ಆರೋಗ್ಯಕರ ಆಯ್ಕೆಗಳು ಇಲ್ಲದಿದ್ದಾಗ ನಿಮ್ಮ ನೆಚ್ಚಿನ ಸಿಹಿತಿಂಡಿಯನ್ನು ಮಾತ್ರ ಸೇವಿಸಿ ಮತ್ತು ಉಳಿದವುಗಳನ್ನು ತ್ಯಜಿಸಬಹುದು” ಎಂದು ಖಾಂಡೇಕರ್ ಹೇಳುತ್ತಾರೆ

5. ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ

ತಜ್ಞರು ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಲು ಸಲಹೆ ನೀಡುತ್ತಾರೆ ಏಕೆಂದರೆ ಇದು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ತೀವ್ರ ನಿರ್ಜಲೀಕರಣವನ್ನು ಉಂಟುಮಾಡಬಹುದು. ಆ ಸಮಯದಲ್ಲಿ ಕೆಲವು ಸ್ನಾನ್ಕ್ಸ್ ತಿನ್ನುವಾಗ ಅದರಲ್ಲಿರುವ ಹೆಚ್ಚಿನ ಉಪ್ಪಿನ ಅಂಶ ಸೇರುತ್ತದೆ ಅಲ್ಲದೇ ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೊರಿ ಸೇವನೆಯಿಂದ ತೂಕ ಹೆಚ್ಚುತ್ತದೆ.

6. ಸಾಕಷ್ಟು ದ್ರವಗಳನ್ನು ಕುಡಿಯಿರಿ

ವಿಶೇಷವಾಗಿ ದೂರದ ಪ್ರದೇಶ ಅದುಕ್ಕೆ ಹೋಗುವಾಗ ಆಗಾಗ ಮೂತ್ರವಿಸರ್ಜನೆಗೆ ಹೋಗುವುದನ್ನು ತಪ್ಪಿಸಲು ಕೆಲವರು ಕಡಿಮೆ ನೀರನ್ನು ಕುಡಿಯುತ್ತಾರೆ. ಅದರಿಂದ ಹೈಡ್ರೇಟೆಡ್ ಆಗಿರಲು ಕಷ್ಟವಾಗುತ್ತದೆ. ನೀರು ಮತ್ತು ಇತರ ದ್ರವಗಳನ್ನು ಕುಡಿಯುವುದು ನಿರ್ಜಲೀಕರಣ ತಪ್ಪುತ್ತದೆ ಮತ್ತು ತೂಕ ನಿರ್ವಹಿಸಲು ಸಾಧ್ಯವಾಗುತ್ತದೆ. ಏಕೆಂದರೆ ಇದು ಹಸಿವನ್ನು ನಿಗ್ರಹಿಸುತ್ತದೆ. ಸಾಕಷ್ಟು ದ್ರವಾಹಾರ ಸೇವಿಸಿ. ಮಜ್ಜಿಗೆ ಅಥವಾ ಸರಳವಾದ ಹಣ್ಣು-ಇನ್ಫ್ಯೂಸ್ ಆಗಿರಬಹುದು. ಚೆನ್ನಾಗಿ ನೀರಿನ ಅಂಶ ದೇಹದಲ್ಲಿದಾಗ ಬೇಗ ಹಸಿವಾಗುವುದಿಲ್ಲ, ಹಾಗಾಗಿ ಕಡಿಮೆ ಆಹಾರ ಸೇವನೆ ಸಾಧ್ಯ. ಇಲ್ಲದಿದ್ದರೆ ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಜಲಸಂಚಯನವು ಬಹಳ ಮುಖ್ಯವಾದ ಅಂಶವಾಗಿದೆ” ಎಂದು ರಾಜ್ ಹೇಳುತ್ತಾರೆ. ಆದರೆ ಸಕ್ಕರೆಯಿರುವ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು ಖಾಂಡೇಕರ್ ಹೇಳುತ್ತಾರೆ.

7. ಸರಿಯಾದ ಊಟ

ಕೆಲವೊಮ್ಮೆ ಪ್ರಯಾಣಿಸುವಾಗ ರೆಸ್ಟೋರೆಂಟ್‌ಗಳು ಕಂಡುಬರದ ಕಾರಣ ಸಮಯಕ್ಕೆ ಊಟ ಮಾಡುವುದು ಕಷ್ಟವಾಗಬಹುದು. ಪ್ರವಾಸದಲ್ಲಿ ಚಟುವಟಿಕೆಗಳಲ್ಲಿ ಭಾಗವಹಿಸಲು ಮತ್ತು ಈವೆಂಟ್‌ಗಳಿಗೆ ಹಾಜರಾಗಲು ಆದ್ಯತೆ ನೀಡುವುದರಿಂದ ಅದಕ್ಕೆ ಅನುಗುಣವಾಗಿ ಊಟದ ಸಮಯವನ್ನು ಸರಿಹೊಂದಿಸಬಹುದು. , “ರಜೆಯಲ್ಲಿ ಬೆಳಗಿನ ಉಪಾಹಾರವನ್ನು ಸೇವಿಸದೇ ಇರುವುದರಿಂದ ಹಸಿವಿನ ಕಾರಣದಿಂದಾಗಿ ಹೆಚ್ಚು ಆಹಾರವನ್ನು ಸೇವಿಸುವಂತೆ ಮಾಡುತ್ತದೆ. ಊಟದ ನಡುವಿನ ದೀರ್ಘ ಅಂತರವು ಕಡುಬಯಕೆಗಳನ್ನು ಹೆಚ್ಚಿಸುತ್ತದೆ ಮತ್ತು ಸಾಮಾನ್ಯಕ್ಕಿಂತ ಎರಡು ಪಟ್ಟು ಆಹಾರವನ್ನು ಗೊತ್ತಿಲ್ಲದೇ ಸೇವಿಸುವಂತೆ ಮಾಡುತ್ತದೆ. ಅಲ್ಲದೆ ಹಸಿವಾದಾಗ ತಟ್ಟೆಯಲ್ಲಿ ಏನಿದೆಯೋ ಅದನ್ನೇ ತಿನ್ನುತ್ತೀರಿ’ ಎನ್ನುತ್ತಾರೆ ರಾಜ್.

8. ಆರೋಗ್ಯಕರ ತಿಂಡಿಗಳನ್ನು ಒಯ್ಯಿರಿ

“ನೀವು ಪ್ರಯಾಣಿಸುವಾಗ ಕೆಲವು ಆರೋಗ್ಯಕರ ತಿಂಡಿಗಳನ್ನು ಪ್ಯಾಕ್ ಮಾಡಿಕೊಳ್ಳಿ. ಬೆರ್ರಿ ಮತ್ತು ಬೀಜಗಳೊಂದಿಗೆ ಟ್ರಯಲ್ ಮಿಶ್ರಣ, ಹೀಗೆ ಆರೋಗ್ಯಕರ ಆಯ್ಕೆ ಮಾಡಬಹುದು. ಹಣ್ಣುಗಳು ಅಥವಾ ಆರೋಗ್ಯಕರ ಬಾರ್‌ಗಳು ಅಥವಾ ಮನೆಯಲ್ಲಿ ತಯಾರಿಸಿದ ಕುಕೀಗಳನ್ನು ಒಯ್ಯುವುದು ಸಹ ಒಳ್ಳೆಯದು. ನಿಮ್ಮ ಊಟ ಮತ್ತು ನೀವು ಏನು ತಿನ್ನಲು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರ ಬಗ್ಗೆ ಗಮನವಿರಲಿ” ಎನ್ನುತ್ತಾರೆ ರಾಜ್

9. ನಿದ್ದೆ

ಸರಿಯಾದ ನಿದ್ರೆ ಕೂಡ ಮುಖ್ಯವಾಗಿದೆ. ಹೊಸ ಹೋಟೆಲ್ ಕೊಠಡಿ ಅಥವಾ ಸ್ಥಳ ಅಥವಾ ಪ್ರಯಾಣದ ಒತ್ತಡದಿಂದ ನಿದ್ದೆ ಸರಿಯಾಗದೆ ಇರಬಹುದು. ಕಳಪೆ ನಿದ್ರೆಯು ಒತ್ತಡದಿಂದ ಆಹಾರ ಸೇವನೆ ಹೆಚ್ಚುವ ಸಾಧ್ಯತೆ ಇರುತ್ತದೆ .. ಕಳಪೆ ನಿದ್ರೆಯು ತೂಕ ಹೆಚ್ಚಳ ಮತ್ತು ಸ್ಥೂಲಕಾಯತೆಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಇದು ಹೆಚ್ಚಿದ ಹಸಿವು, ಕಡಿಮೆ ದೈಹಿಕ ಚಟುವಟಿಕೆ, ಹೆಚ್ಚು ಕ್ಯಾಲೊರಿಗಳನ್ನು ಸೇವಿಸುವುದು ಮತ್ತು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು” ಎಂದು ಖಾಂಡೇಕರ್ ಹೇಳುತ್ತಾರೆ

ರಜೆಯ ನಂತರ ತನ್ನ ದಿನಚರಿಗೆ ಮರಳಿದರೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿದರೆ ರಜೆಯ ತೂಕ ಹೆಚ್ಚಾಗುವುದು ತಾತ್ಕಾಲಿಕವಾಗಿರುತ್ತದೆ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಸರಿಯಾದ ನಿದ್ರೆಯೊಂದಿಗೆ ಮುಂದುವರಿಯುವುದು ಮುಖ್ಯವಾಗಿದ್ದು, ಹೆಚ್ಚುವರಿ ಕಿಲೋಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಯಾಪಚಯವನ್ನು ಸುಧಾರಿಸುತ್ತದೆ. ಫಿಟ್‌ನೆಸ್ ಮತ್ತು ಪೌಷ್ಟಿಕಾಂಶ ತಜ್ಞರ ಮಾರ್ಗದರ್ಶನದಲ್ಲಿ ತಮ್ಮ ತೂಕ ಇಳಿಸುವ ಯೋಜನೆಗೆ ಸ್ಥಿರವಾಗಿದ್ದರೆ ಒಬ್ಬರು ವಾರಕ್ಕೆ ಒಂದು ಕೆಜಿಯನ್ನು ಕಡಿಮೆ ಮಾಡಬಹುದು ಎಂದು ರಾಜ್ ಹೇಳುತ್ತಾರೆ.

ನೀರು, ಗಿಡಮೂಲಿಕೆ ಚಹಾ ಮತ್ತು ಡಿಟಾಕ್ಸ್ ರಸದೊಂದಿಗೆ ಸರಿಯಾದ ಜಲಸಂಚಯನದ ಜೊತೆಗೆ ರಜೆಯ ನಂತರ ತೂಕ ನಷ್ಟಕ್ಕೆ ತೂಕದ ತರಬೇತಿ ಮತ್ತು ಕಾರ್ಡಿಯೋವನ್ನು ಖಾಂಡೇಕರ್ ಶಿಫಾರಸು ಮಾಡುತ್ತಾರೆ. ತೂಕವನ್ನು ಕಡಿಮೆ ಮಾಡಲು ಮಾತ್ರವಲ್ಲದೆ ದೇಹದಿಂದ ವಿಷವನ್ನು ಹೊರಹಾಕಲು ಮತ್ತು ಅನಾರೋಗ್ಯವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ