0

0

0

ಈ ಲೇಖನದಲ್ಲಿ

ಆರೋಗ್ಯವಂತ ಮನುಷ್ಯನ ಆಯಸ್ಸು ಎಷ್ಟು? 
8

ಆರೋಗ್ಯವಂತ ಮನುಷ್ಯನ ಆಯಸ್ಸು ಎಷ್ಟು? 

ಮುಂದಿನ ದಶಕದಲ್ಲಿ ವಿಶ್ವದ ಶತಾಯುಷಿಗಳ ಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆಯಿದೆ 
ಆರೋಗ್ಯವಂತ ಮನುಷ್ಯನ ಆಯಸ್ಸು ಎಷ್ಟು? 
ಚಿತ್ರಗಳು- ಬೆಹ್ರೂಜ್ ಮೆಹ್ರಿ / ಎಎಫ್‌ಪಿ

ತಮ್ಮ 118 ನೇ ವಯಸ್ಸಿನಲ್ಲಿ ವಿಶ್ವದಲ್ಲಿಯೇ ಅತ್ಯಂತ ಹಿರಿಯ ವ್ಯಕ್ತಿಯ ಸಾವು, ಒಬ್ಬ ಆರೋಗ್ಯವಂತ ಮನುಷ್ಯ ಎಷ್ಟು ಕಾಲ ಬದುಕಬಹುದು ಎಂಬುದಕ್ಕೆ ಯಾವುದಾದರೂ ಮಿತಿ ಇದೆಯೇ? ಎಂಬ ಶತಮಾನಗಳಷ್ಟು ಹಳೆಯ ವಿಜ್ಞಾನಿಗಳ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. 

 ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ ಕಳೆದ ವಾರ ನಿಧನರಾದ ನಂತರ, ತಮ್ಮ 115 ನೇ ವಯಸ್ಸಿನಲ್ಲಿ ಸ್ಪ್ಯಾನಿಷ್‌ನ ಮುತ್ತಜ್ಜಿ ಮಾರಿಯಾ ಬ್ರನ್ಯಾಸ್ ಮೊರೆರಾ ಅವರು ಜೀವಂತವಾಗಿರುವ ಅತ್ಯಂತ ಹಿರಿಯ ಜೀವ ಎಂಬ ಗಿನ್ನಿಸ್ ದಾಖಲೆಯ ಗೌರವಕ್ಕೆ ಪಾತ್ರರಾದರು. 

 18 ನೇ ಶತಮಾನದಲ್ಲಿ ಕಾಮ್ಟೆ ಡಿ ಬುಫೊನ್ ಎಂದು ಕರೆಯಲಾಗುವ ಫ್ರೆಂಚ್ ನೈಸರ್ಗಿಕವಾದಿ ಜಾರ್ಜಸ್-ಲೂಯಿಸ್ ಲೆಕ್ಲರ್ಕ್, ಅಪಘಾತ ಅಥವಾ ಅನಾರೋಗ್ಯದಿಂದ ಬಳಲದ ವ್ಯಕ್ತಿಯು ಗರಿಷ್ಠ 100 ವರ್ಷಗಳವರೆಗೆ ಬದುಕಬಹುದು ಎಂಬ ಸಿದ್ಧಾಂತವನ್ನು ಮಂಡಿಸಿದರು.  

 ಅಂದಿನಿಂದ, ವೈದ್ಯಕೀಯ ಪ್ರಗತಿಗಳು ಮತ್ತು ಸುಧಾರಿತ ಜೀವನ ಪರಿಸ್ಥಿತಿಗಳು ಈ ಮಿತಿಯನ್ನು ಒಂದೆರಡು ದಶಕಗಳಷ್ಟು ಹಿಂದಕ್ಕೆ ತಳ್ಳಿವೆ. 

 ಫ್ರೆಂಚ್ ಮಹಿಳೆ ಜೀನ್ ಕಾಲ್ಮೆಂಟ್ 1995 ರಲ್ಲಿ ತಮ್ಮ 120 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಾಗ ಈ ವಿಷಯವು ಹೊಸ ಮೈಲಿಗಲ್ಲನ್ನು ತಲುಪಿತು. 

ಆ ಹುಟ್ಟುಹಬ್ಬದ ಆಚರಣೆಯ ಎರಡು ವರ್ಷಗಳ ನಂತರ, ಅಂದರೆ ಅವರ 122 ನೇ ವಯಸ್ಸಿನಲ್ಲಿ ಕಾಲ್ಮೆಂಟ್ ನಿಧನರಾದರು ಹಾಗೂ ಅತಿ ಹೆಚ್ಚು ಕಾಲ ಬದುಕಿದ್ದ ವ್ಯಕ್ತಿಯಾಗಿ ಗುರುತಿಸಿಕೊಂಡರು.  ವಿಶ್ವಸಂಸ್ಥೆಯ ಪ್ರಕಾರ, 2021 ರಲ್ಲಿ 100 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 593,000 ಜನರಿದ್ದರು, ಹಾಗೂ ಒಂದು ದಶಕದ ಹಿಂದೆ ಈ ಸಂಖ್ಯೆಯು 353,000 ಆಗಿತ್ತು. ಸ್ಟ್ಯಾಟಿಸ್ಟಾ ಡೇಟಾ ಏಜೆನ್ಸಿಯ ಪ್ರಕಾರ ಮುಂದಿನ ದಶಕದಲ್ಲಿ ಶತಾಯುಷಿಗಳ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. 

1980 ರ ದಶಕದಿಂದೀಚೆಗೆ ಹೆಚ್ಚುತ್ತಿರುವ 110 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಅಂದರೆ ಶತಾಯುಷಿಗಳ ಏರಿಕೆಯಿಂದ ಕಾಮ್ಟೆ ಡಿ ಬುಫೊನ್ ಕೂಡಾ ಆಶ್ಚರ್ಯಗೊಂಡಿದ್ದಾರೆ. 

ನೈಸರ್ಗಿಕ ಮಿತಿ 115 ವರ್ಷವೇ? 

ಹಾಗಾದರೆ ನಾವು ಮಾನವರು ಎಷ್ಟು ವರ್ಷಗಳ ಕಾಲ ಬದುಕಬಹುದು? ಮನುಷ್ಯದ ಜೀವಿತಾವಧಿಯು ಕಟ್ಟುನಿಟ್ಟಾದ ಜೈವಿಕ ನಿರ್ಬಂಧಗಳಿಂದ ಸೀಮಿತವಾಗಿದೆ ಎಂಬ ಕೆಲವರ ವಾದವನ್ನು ವಿಜ್ಞಾನಿಗಳ ಒಪ್ಪುವುದಿಲ್ಲ. 1990 ರ ದಶಕದ ಅಂತ್ಯದ ನಂತರ ಮಾನವದ ದೀರ್ಘಾಯುಷ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು 2016 ರಲ್ಲಿ ನೇಚರ್ ಎಂಬ ಜರ್ನಲ್‌ನಲ್ಲಿ ಬರೆಯುವ ತಳಿಶಾಸ್ತ್ರಜ್ಞರು ಹೇಳಿದರು.  ಜಾಗತಿಕ ಜನಸಂಖ್ಯಾ ಡೇಟಾವನ್ನು ವಿಶ್ಲೇಷಿಸುವಾಗ, ಜಗತ್ತಿನಲ್ಲಿ ಹೆಚ್ಚು ವಯಸ್ಸಾದ ಜನರಿದ್ದರೂ ಸಹ ಕಾಲ್ಮೆಂಟ್ ಅವರ ಮರಣದ ನಂತರ ಮಾನವನ ಗರಿಷ್ಠ ಜೀವಿತಾವಧಿಯು ಕುಸಿಯುತ್ತಿದೆ ಎಂಬುದನ್ನು ಅವರು ಅರಿತುಕೊಂಡರು. 

 ಮಾನವನ ಜೀವಿತಾವಧಿಯು ನೈಸರ್ಗಿಕ ಮಿತಿಯನ್ನು ಹೊಂದಿದ್ದು, ದೀರ್ಘಾಯುಷ್ಯವು ಸುಮಾರು 115 ವರ್ಷಗಳವರೆಗೆ ಸೀಮಿತವಾಗಿದೆ ಎಂಬುದನ್ನು ಅವರು ತೀರ್ಮಾನಿಸಿದ್ದಾರೆ ಎಂದು ಫ್ರೆಂಚ್ ಜನಸಂಖ್ಯಾಶಾಸ್ತ್ರಜ್ಞ ಜೀನ್-ಮೇರಿ ರಾಬಿನ್ ಎಎಫ್‌ಪಿಗೆ ತಿಳಿಸಿದ್ದಾರೆ.  “ಆದರೆ ಈ ತೀರ್ಮಾನವನ್ನು ಅನೇಕ ಜನಸಂಖ್ಯಾಶಾಸ್ತ್ರಜ್ಞರು ಒಪ್ಪುವುದಿಲ್ಲ ಎಂದು ಐಎನ್‌ಎಸ್‌ಇಆರ್‌ಎಂ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಶತಾಯುಷಿ ತಜ್ಞರಾದ ರಾಬಿನ್ ಹೇಳುತ್ತಾರೆ. 

 2018 ರಲ್ಲಿ ನಡೆದ ಸಂಶೋಧನೆಯೊಂದು ವಯಸ್ಸಿನೊಂದಿಗೆ ಸಾವಿನ ಪ್ರಮಾಣವು ಹೆಚ್ಚುತ್ತಿದ್ದರೆ, 85 ವಯಸ್ಸಿನ ನಂತರ ಅದು ನಿಧಾನಗೊಳ್ಳುತ್ತದೆ ಎಂಬುದನ್ನು ಕಂಡುಕೊಂಡಿದೆ. ಸುಮಾರು 107 ನೇ ವಯಸ್ಸಿನಲ್ಲಿ, ಸಾವಿನ ಪ್ರಮಾಣವು ಪ್ರತಿ ವರ್ಷ 50-60% ಕ್ಕೆ ತಲುಪುತ್ತದೆ ಎಂದು ಈ ಸಂಶೋಧನೆಯು ಹೇಳಿದೆ. ಈ ಸಿದ್ಧಾಂತದ ಅಡಿಯಲ್ಲಿ, 110 ವರ್ಷ ವಯಸ್ಸಿನ 12 ಜನರಿದ್ದರೆ, ಆರು ಜನರು 111 ವಯಸ್ಸಿನ ಜನರು, ಮೂರು ಜನರು 112 ವರ್ಷ ವಯಸ್ಸಿನವರು ಮತ್ತು ಹೀಗೆಯೇ ಬದುಕುಳಿಯುತ್ತಾರೆ,” ಎಂದು ರಾಬಿನ್ ಹೇಳುತ್ತಾರೆ. 

 ದೀರ್ಘಾಯುಷ್ಯಕ್ಕೆ ನಿಶ್ಚಿತ ಮಿತಿಗಳಿವೆಯೇ? 

ಶತಾಯುಷಿಗಳ ಸಂಖ್ಯೆ ಹೆಚ್ಚಿದ್ದರೂ, ದಾಖಲೆಯ ವಯಸ್ಸಿನ ತನಕ ಬದುಕುವವರು ಕೆಲವರಷ್ಟೇ.  “ಒಂದೊಮ್ಮೆ 100 ಶತಾಯುಷಿಗಳಿದ್ದರೆ, 50 ಜನರು 111 ವರ್ಷಗಳವರೆಗೆ, 25 ಜನರು 112 ವರ್ಷಗಳವರಗೆ ಬದುಕುತ್ತಾರೆ. ನಾವು ವಾಲ್ಯೂಮ್ ಎಫೆಕ್ಟ್ ಗೆ ಧನ್ಯವಾದಗಳನ್ನು ಅರ್ಪಿಸಬೇಕು, ಏಕೆಂದರೆ ದೀರ್ಘಾಯುಷ್ಯಕ್ಕೆ ಇನ್ನು ಮುಂದೆ ಯಾವುದೇ ಸೀಮಿತ ಮಿತಿಗಳಿಲ್ಲ ಎಂದು ರಾಬಿನ್ ಹೇಳುತ್ತಾರೆ.  ರಾಬಿನ್ ಮತ್ತು ಅವರ ತಂಡವು, 105 ವರ್ಷ ವಯಸ್ಸಿನ ನಂತರ ಸಾವಿನ ಪ್ರಮಾಣವು ಹೆಚ್ಚಾಗುತ್ತದೆ ಎಂಬುದನ್ನು ತೋರಿಸುವ ಒಂದು ಸಂಶೋಧನೆಯನ್ನು ಪ್ರಕಟಿಸುತ್ತಿದೆ. 

ನಾವು ಎಷ್ಟು ಕಾಲ ಬದುಕಬಹುದು ಎಂಬುದಕ್ಕೆ ಕಠಿಣವಾದ ಗರಿಷ್ಠ ಪರಿಮಿತಿ ಇದೆಯೇ ಎಂಬುದು ಇದರ ಅರ್ಥವೇ? ರಾಬಿನ್ ಅಲ್ಲಿಯವರೆಗೂ ಹೋಗುವುದಿಲ್ಲ. “ನಾವು ಯಾವತ್ತಿನಂತೆ ಆವಿಷ್ಕಾರಗಳನ್ನು ಮುಂದುವರಿಸುತ್ತೇವೆ, ಮತ್ತು ಸ್ವಲ್ಪ ಸ್ವಲ್ಪವಾಗಿ ವಯಸ್ಸಾದವರ ಆರೋಗ್ಯವು ಸುಧಾರಿಸುತ್ತದೆ,” ಎಂದು ಅವರು ಹೇಳಿದರು. 

ಇತರ ತಜ್ಞರೂ ನಿಶ್ಚಿತವಾದ ಅಭಿಪ್ರಾಯವನ್ನು ಹೇಳುವುದಿಲ್ಲ.  

ಈ ಕ್ಷಣಕ್ಕೆ ಯಾವುದೇ ನಿರ್ಣಾಯಕ ಉತ್ತರ ನೀಡಲಾಗುವುದಿಲ್ಲ,” ಎಂದು ಫ್ರೆಂಚ್ ಇನ್ಸಿಟ್ಯೂಟ್ ಆಫ್ ಡೆಮಾಗ್ರಾಫಿಕ್ ಸ್ಟಡೀಸ್ (INED) ನಲ್ಲಿ ಜನಸಂಖ್ಯಾಶಾಸ್ತ್ರಜ್ಞರಾದ ಫ್ರಾನ್ಸ್ ಮೆಸ್ಲೆ ಹೇಳಿದರು. “ಅದು ಹೆಚ್ಚಾಗಿದ್ದರೂ ಸಹ, ಅಧಿಕ ವೃದ್ಧಾಪ್ಯವನ್ನು ತಲುಪುವ ಜನರ ಸಂಖ್ಯೆಯು ಇನ್ನೂ ಸಾಕಷ್ಟು ಚಿಕ್ಕದಾಗಿದೆ ಮತ್ತು ನಾವು ಇನ್ನೂ ಯಾವುದೇ ಗಮನಾರ್ಹ ಅಂಕಿಅಂಶಗಳ ಅಂದಾಜು ಮಾಡಲು ಸಾಧ್ಯವಿಲ್ಲ.” ಎಂಬುದು ಅವರ ಅಭಿಮತ. ಆದ್ದರಿಂದ, ವಾಲ್ಯೂಮ್ ಎಫೆಕ್ಟ್ ಅನ್ನು ಪರೀಕ್ಷಿಸಲು ಹೆಚ್ಚುತ್ತಿರುವ ಶತಾಯುಷಿಗಳ ಸಂಖ್ಯೆಗಾಗಿ ಕಾಯುವ ವಿಷಯವಾಗಿರಬಹುದು. ಮತ್ತು ಸಹಜವಾಗಿ, ಭವಿಷ್ಯದ ಕೆಲವು ವೈದ್ಯಕೀಯ ಪ್ರಗತಿಗಳು ಸಾವಿನ ಬಗ್ಗೆ ನಮಗೆ ತಿಳಿದಿರುವ ಎಲ್ಲವನ್ನೂ ಶೀಘ್ರದಲ್ಲೇ ಹೆಚ್ಚಿಸಬಹುದು.  “ಜೆನೆಟಿಕ್ ಮ್ಯಾನಿಪ್ಯುಲೇಷನ್ ಕೆಲವು ಜನರು 140 ಅಥವಾ 150 ವರ್ಷಗಳವೆರಗೆ ಬದುಕಲು ಅನುವು ಮಾಡಿಕೊಡುತ್ತದೆ ಎಂದು ವಯಸ್ಸಾದ ಜನರ ವಿಷಯದಲ್ಲಿ ಪರಿಣತಿ ಹೊಂದಿರುವ ಫ್ರೆಂಚ್ ವೈದ್ಯ ಎರಿಕ್ ಬೌಲಾಂಗರ್ ಹೇಳುತ್ತಾರೆ.   

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.
ಲೇಖನ
ಹುಡುಗಿಯರ ಪ್ರೌಢಾವಸ್ಥೆ  ಸಮಯದಲ್ಲಿ ಗೊಂದಲ ಹೆಚ್ಚು. ಪೋಷಕರೊಂದಿಗೆ ಮುಕ್ತ ಸಂಭಾಷಣೆಗಳು ಈ ಪರಿವರ್ತನೆಗೆ ಅವರನ್ನು ತಯಾರಾಗಲು ಸಹಾಯ ಮಾಡುತ್ತದೆ 
ಲೇಖನ
ಜಾಗತಿಕವಾಗಿ ಕನಿಷ್ಠ 5.4 ಲಕ್ಷ ಹೃದಯ ಸಂಬಂಧಿ ಸಾವುಗಳಿಗೆ ಟ್ರಾನ್ಸ್-ಫ್ಯಾಟಿ ಆಸಿಡ್‌ಗಳಿಂದ ತುಂಬಿದ ಸಂಸ್ಕರಿಸಿದ ಆಹಾರ ಕಾರಣ ಎಂದು ಭಾರತ ಸರ್ಕಾರ ಹೇಳುತ್ತದೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ