0

0

0

0

0

0

0

0

0

ಈ ಲೇಖನದಲ್ಲಿ

ಇಳಿವಯಸ್ಸಿನಲ್ಲಿ ಚಲನಶೀಲತೆಯನ್ನು ಸಂರಕ್ಷಿಸುವುದು ಹೇಗೆ
16

ಇಳಿವಯಸ್ಸಿನಲ್ಲಿ ಚಲನಶೀಲತೆಯನ್ನು ಸಂರಕ್ಷಿಸುವುದು ಹೇಗೆ

ಜೀವನದುದ್ದಕ್ಕೂ ಆರೋಗ್ಯದಾಯಕ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಇಳಿವಯಸ್ಸಿನಲ್ಲಿ ಚಲನಶೀಲತೆಯ ಸಮಸ್ಯೆಗಳು ತಲೆದೋರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತಿದೆ ಎಂದು ವೈದ್ಯರು ಹೇಳುತ್ತಾರೆ
ಇಳಿವಯಸ್ಸಿನಲ್ಲಿ ಚಲನಶೀಲತೆಯನ್ನು ಸಂರಕ್ಷಿಸುವುದು
ಚಿತ್ರ/ ಅನಂತ ಸುಬ್ರಮಣ್ಯಮ್ ಕೆ

ಇಳಿವಯಸ್ಸಿನಲ್ಲಿ ಚಲನಶೀಲತೆಯನ್ನು ಸಂರಕ್ಷಿಸುವುದು ಹೇಗೆ ಎಂದು ತಿಳಿದುಕೊಳ್ಳಿ. ಕಾಲ ಮತ್ತು, ಅಲೆಗಳು ಯಾರಿಗೂ ಕಾಯುವುದಿಲ್ಲ.  ಮುಪ್ಪು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ವಯಸ್ಸಾದಂತೆ ಹೆಚ್ಚಾಗಿ ದೌರ್ಬಲ್ಯತೆ, ಬಲಹೀನತೆ ಹಾಗೂ ಚಲನಶೀಲತೆಯ ಸಮಸ್ಯೆಗಳು ಸಾಮಾನ್ಯ. ಆದರೆ, 70-ವರ್ಷದ ದೇಹದಾರ್ಢ್ಯಕಾಯರು ಮತ್ತು ಕ್ರೀಡಾಪಟುಗಳು ಇಪ್ಪತ್ತರ ಅಥವಾ ಮೂವತ್ತರ ಹರೆಯದವರಿಗಿಂತ ಅರೋಗ್ಯವಂತರು ಹಾಗೂ ಉಲ್ಲಾಸಮಯಿಗಳು ಆಗಿರುವಾಗ, ಒಂದು ಪ್ರಶ್ನೆ ಕೇಳಬಹುದು –  ನಾವು ಅಂದುಕೊಂಡುದಕ್ಕಿಂತ ನಮ್ಮ ಬಾಳಿನ ಇಳಿವಯಸ್ಸಿನಲ್ಲಿ  ಆರೋಗ್ಯದ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿಕೊಳ್ಳಬಹುದೇ? 

ನೀವು ಈಗಷ್ಟೇ ನಿವೃತ್ತಿ ಪಡೆದಿರಬಹುದು ಅಥವಾ ಈಗಷ್ಟೇ ಕಾಲೇಜು ಶಿಕ್ಷಣ ಮುಗಿಸಿ ಹೊರಬಂದವರಾಗಿರಬಹುದುಚಲನಶೀಲತೆ ಹೇಗೆ ನಷ್ಟವಾಗುತ್ತದೆ ಮತ್ತು ಅದನ್ನು ಹೇಗೆ ಸಂರಕ್ಷಿಸಬಹುದು ಎಂಬುದನ್ನು ತಿಳಿದುಕೊಂಡರೆ ಅದು ನಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ತುಂಬಾ ಸಹಕಾರಿಯಾಗಬಹುದು. 

ಚಲನಶೀಲತೆ ನಷ್ಟವಾಗುವುದು ಹೇಗೆಕೊಲ್ಲಾಜನ್ (ದೇಹದಲ್ಲಿರುವ ನೈಸರ್ಗಿಕ ಪ್ರೊಟೀನ್) ಪಾತ್ರ 

ಸಾಮಾನ್ಯವಾಗಿ ತಮ್ಮ ಎಪ್ಪತ್ತರ ಮತ್ತು ಎಂಬಂತ್ತರ ವಯಸ್ಸಿನಲ್ಲಿರುವ ಜನರು ಅಸ್ಟಿಯೊಪೊರೋಸಿಸ್ (ಅಸ್ಥಿರಂದ್ರತೆ), ಅಸ್ಟಿಯೊಆರ್ಥ್‌ರೈಟಿಸ್ (ಅಸ್ಥಿಸಂಧಿವಾತ) ಮತ್ತು ನ್ಯೂರೊಮಸ್ಕುಲಾರ್ (ನರಸ್ನಾಯುಕ) ಸಮಸ್ಯೆ  ಮೊದಲಾದ ಕಾಯಿಲೆಗಳನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚು ಮತ್ತು ಅಂತಹ ಸಂದರ್ಭಗಳಲ್ಲಿ ಚಲನಶೀಲತೆಯು ತೀವೃವಾಗಿ ಬಾಧಿಸಬಹುದು.  ಆದರೆ ಇಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲುಸಾಮಾನ್ಯವಾಗಿ ವಯಸ್ಸಿಗೆ ಸಂಬಂಧಿಸಿದ ಮದ್ದು – ದೈಹಿಕ ಚಟುವಟಿಕೆಗಳು – ಸೂಕ್ತ. 

ಪ್ರಪಂಚದಾದ್ಯಂತ ವೈದ್ಯರು ಮತ್ತು ಸಂಶೋಧಕರು ಆರೋಗ್ಯಕರ ದೈಹಿಕ ಚಟುವಟಿಕೆಗಳನ್ನು ನಿರ್ವಹಿಸಿಕೊಳ್ಳುವುದಕ್ಕೆ ಮಹತ್ವ ನೀಡುತ್ತಾರೆ, ಏಕೆಂದರೆ ಅದರಿಂದ  ಬದುಕಿನ ಇಳಿವಯಸ್ಸಿನಲ್ಲಿ ಚಲನಶೀಲತೆಯ ಸಮಸ್ಯೆಗಳು ಉದ್ಭವಿಸುವ ಸಂಭವಗಳು ಕಡಿಮೆಯಾಗುತ್ತದೆ.  ಅದು ನಿಜಕ್ಕೂ ಖಾತರಿ ಆಗಿರದಿದ್ದರೂ ಅದರ ಸಂಭವನೀಯತೆ ನಾಟಕೀಯವಾಗಿ ನಿಮ್ಮ ಪರವಾಗಿ ತಿರುಗುತ್ತದೆ ಮತ್ತು ಕಾಲ ಕಳೆದಂತೆ ನೀವು ಚಲನಶೀಲತೆಯ ಸಮಸ್ಯೆ ಅನುಭವಿಸಿದರೂ, ಆ ಸಮಸ್ಯೆಯಿಂದ ಗುಣಮುಖರಾಗುವ  ನಿಮ್ಮ ಸಾಮರ್ಥ್ಯ  ಹೆಚ್ಚಾಗಲಿದೆ. 

ಸಾಮಾನ್ಯವಾಗಿ ವಯಸ್ಸಿಗೆ ಸಂಬಂಧಿಸಿದ ಚಲನಶೀಲತೆಯ ಸಮಸ್ಯೆ ಉದ್ಭವಿಸುವುದು ನೀರು ಶೇಖರಣೆ ಮಾಡುವಂತಹ ಹಾಗೂ ನಮ್ಮ ಕೀಲು-ಸಂದುಗಳು ಸಲೀಸಾಗಿ ಚಲಿಸುವಂತಿರಲು ಮೆದುವಾಗಿರಲು ನೆರವಾಗುವ ನೈಸರ್ಗಿಕ ಪ್ರೊಟೀನ್ ಆಗಿರುವ ಕೊಲ್ಲಾಜನ್ ರಚನೆಯ ಕುಸಿತದಿಂದಾಗಿ. ಕೊಲ್ಲಾಜನ್ ನಷ್ಟವಾದಾಗ, ಬಾಧಿತವಾದ ಕೀಲುಗಳು ಮೊದಲಿನಂತೆ ಎಂದಿನ ಚಲನಾ ಕ್ರಿಯೆಗಳನ್ನು ಮಾಡಲು ಅಶಕ್ತವಾಗುತ್ತವೆ. ಜಡ ಜೀವನಶೈಲಿ ಅಥವಾ ದೈಹಿಕ ಚಟುವಟಿಕೆ ಮಾಡದಿರುವುದರಿಂದ, ಕ್ಷೀಣಿಸುವಿಕೆಯ ಗತಿ ಹೆಚ್ಚಾಗಬಹುದು. 

 “ವಯಸ್ಸಾದಂತೆ ಸ್ವಾಭಾವಿಕ ಕ್ಷೀಣಿಸುವಿಕೆ ಸಹಜ. ಕೀಲುಸಂದುಗಳು ಮೊದಲಿನಂತೆ ಕೆಲಸ ಮಾಡಲು ಅಶಕ್ತವಾಗುತ್ತವೆ ಮತ್ತು ಕೆಲವೊಮ್ಮೆ ಇದೊಂದು ವಿಷಚಕ್ರವಾಗುವ ಸಾಧ್ಯತೆಯಿದೆ. ಅಶಕ್ತ ಕೀಲುಗಳು ಮತ್ತು ಮೂಳೆಗಳಿಂದಾಗಿ ವಯಸ್ಸಾದವರು ಆಚೀಚೆ ಸುತ್ತಾಡಲು ಕಷ್ಟಪಡುತ್ತಾರೆ ಮತ್ತು ಅದರಿಂದಾಗಿ ಸಕ್ರಿಯರಾಗದಿರಲು ಬಯಸುತ್ತಾರೆ ಮತ್ತು ಅದರಿಂದಾಗಿ ಕ್ಷೀಣವಾಗಿದ್ದ ಅವರ ಕೀಲುಸಂದುಗಳು ಹಾಗೂ ಮೂಳೆಗಳು ಇನ್ನಷ್ಟು ಅಶಕ್ತವಾಗುತ್ತವೆ,” ಎನ್ನುತ್ತಾರೆ ಬೆಂಗಳೂರಿನ ಅಪೊಲ್ಲೊ ಆಸ್ಪತ್ರೆಯಲ್ಲಿ ವೃದ್ಧಾಪ್ಯ ತಜ್ಞರಾಗಿರುವ ಡಾ. ಪಾವ್ಲ್ ಮಂಜಾಲಿ. 

ಆದುದರಿಂದ, ಚಲನಶೀಲತೆಯು ಕುಂಟಿತವಾಗಲು ಜೀವನಶೈಲಿಯಲ್ಲಿ ಬದಲಾವಣೆಯಂತೆ ದೇಹಗಳ ಬದಲಾವಣೆಯಷ್ಟೇ ಅಗತ್ಯ ಮತ್ತು ಜನರು ತಮ್ಮ ಇಳಿವಯಸ್ಸಿನಲ್ಲಿ ನಡೆದಾಡಲು  ಕಷ್ಟ್ರಪಡುವುದು ಅಥವಾ ಚಲನಶೀಲತೆ ಕುಂಟಿತವಾಗಲು ದೈಹಿಕ ಚಟುವಟಿಕೆಗಳು ಕಡಿಮೆ ಮಾಡಿರುವುದು ಪ್ರಾಥಮಿಕ ಕಾರಣ. 

ಇಳಿವಯಸ್ಸಿನಲ್ಲಿ ಚಲನಶೀಲತೆ ಕಾಪಾಡಿಕೊಳ್ಳುವುದು ಹೇಗೆ 

ನೀವೆಷ್ಟು ವಯಸ್ಸಾದಂತೆ ಭಾವಿಸುತ್ತೀರೋ ಹಾಗೆಯೇ ಇರುತ್ತೀರಿ” ಎನ್ನುವುದು ವಾಸ್ತವವಲ್ಲದೆ ಇರಬಹುದು.  ಆದರೆ ಇದೊಂದು ಒಳ್ಳೆಯ  ಸಾಮಾನ್ಯ ಸಲಹೆ.  ಹಲವಾರು ವಯಸ್ಸಾದ ಕ್ರೀಡಾಪಟುಗಳು ತಾವು 60 ಅಥವಾ 70 ವಯಸ್ಸಿನ ಗಡಿ ದಾಟಿದರೂ ತಮ್ಮ ದೈಹಿಕ ಚಟುವಟಿಕೆಗಳನ್ನು ಕಡಿಮೆಗೊಳಿಸದೆ ಇದ್ದುದರಿಂದ ಇನ್ನೂ ಉತ್ತಮ ಸ್ಥಿತಿಯಲ್ಲಿ ಇದ್ದೇವೆ ಎನ್ನುತ್ತಾರೆ.  ಅವರು ದೇಹದಾರ್ಢ್ಯತೆ ಮತ್ತು ಕ್ರೀಡೆಗಳಲ್ಲಿ ತಮ್ಮ ಆಸಕ್ತಿಯನ್ನು ಉಳಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಅವರ ವಯಸ್ಸಿನವರು ಇಂತಹ ಚಟುವಟಿಕೆಗಳನ್ನು ತೊರೆದು, ಶಾಂತ ಜೀವನ ಹಾಗೂ ಅಲ್ಪ ಶ್ರಮವುಳ್ಳ ಜೀವನಶೈಲಿ ಅನುಸರಿಸಬೇಕೆಂದು ಅಪೇಕ್ಷಿಸಲಾಗುತ್ತಿದೆ. 

ದೈಹಿಕವಾಗಿ ಸಕ್ರಿಯರಾಗಿ ಇರುವುದರಿಂದ ಎಲ್ಲ ಕಾಯಿಲೆಗಳನ್ನು ದೂರವಿಡಬಹುದು.  ಈ ತನಕ ನಾನು ಯಾವುದೇ ಆರೋಗ್ಯ ಸಮಸ್ಯೆಗಳನ್ನು ಎದುರಿಸಿಲ್ಲ ಮತ್ತು ಪ್ರಬಲವಾದ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದ್ದೇನೆಪ್ರತೀ ದಿನ ನಾನು ಒಂದು ಗಂಟೆಯಾದರೂ ವ್ಯಾಯಾಮ ಮಾಡುತ್ತಿದ್ದೇನೆ ಮತ್ತು ವ್ಯಾಯಾಮ ಮಾಡುವುದು ನನ್ನ ಬಾಳಿನ ಅಂಗವಾಗಿ ಬಿಟ್ಟಿದೆ,” ಎನ್ನುತ್ತಾರೆ ಶಿವಮೊಗ್ಗದ ರೈತರಾದ ಎಚ್. ರಾಮಪ್ಪ. ‘ಹ್ಯಾಪಿಯೆಸ್ಟ್ ಹೆಲ್ತ್“ ಜೊತೆಗೆ ಮಾತನಾಡುತ್ತಾ ಅವರು ದೇಹದಾರ್ಢ್ಯತೆ ಬಗ್ಗೆ ತನ್ನ ಉತ್ಸಾಹ ಮತ್ತು 70 ವರ್ಷದ ವಯಸ್ಸಿನಲ್ಲೂ ತಾನು ಹೇಗೆ ಅದನ್ನು ಮಾಡುತ್ತಿರುವ ಬಗ್ಗೆ ವಿವರಿಸುತ್ತಾರೆ. 

ಹೆಚ್ಚಿನ ಜನರು ಒಂದು ನಿರ್ಧಿಷ್ಟ ವಯಸ್ಸಿನ ನಂತರ ಕ್ರೀಡೆಗಳ ಬಗ್ಗೆ ತಮ್ಮ ಉತ್ಸಾಹವನ್ನು ಬಿಟ್ಟುಬಿಡುವಾಗ, ತಾನು ಮಾತ್ರ ಹಾಗೆ ಮಾಡದೆ ತನ್ನ ಶರೀರವನ್ನು ಗಟ್ಟಿಮುಟ್ಟಾಗಿ ಇಟ್ಟುಕೊಂಡು ಸಶಕ್ತನಾಗಿರಲು ತನ್ನನ್ನೇ ಪ್ರೇರೇಪಿಸುವುದನ್ನು ಅವರು ವಿವರಿಸುತ್ತಾರೆ.  “ಜನರು ನನ್ನನ್ನು ನೋಡಿಕೊಂಡು ನನ್ನ ವಯಸ್ಸಿನಲ್ಲೂ ದೇಹದಾರ್ಢ್ಯತೆ ಕಾಪಾಡಿಕೊಳ್ಳುವ ನನ್ನ ಸಂಕಲ್ಪವನ್ನು ನೋಡಿ ಮೆಚ್ಚುವುದು ನನಗೆ ಹೆಮ್ಮೆ ಎನಿಸುತ್ತದೆ.  ನಾನು ಜನರನ್ನು ಪ್ರೇರೇಪಿಸಿ, ವಿಶೇಷವಾಗಿ ಯುವಜನಾಂಗ ತಮ್ಮ ಜೀವನಶೈಲಿ ಬದಲಾಯಿಸಿಕೊಳ್ಳಬೇಕೆಂದು ನನ್ನ ಬಯಕೆ. ನನ್ನ ವಯಸ್ಸಿನಲ್ಲಿ ನಾನು ಮಾಡಬಹುದಾದರೆ, ಅವರು ಕೂಡಾ ಮಾಡಬಹುದು ಎಂದು ನಾನು ಅವರಿಗೆ ತಿಳಿಸುತ್ತೇನೆ.  ಜನರು ಸಕ್ರಿಯರಾಗಿರದಿದ್ದರೆ ತಮ್ಮ ಇಳಿವಯಸ್ಸಿನಲ್ಲಿ ಚಲನೆಶೀಲತೆಯ ಸಮಸ್ಯೆ ಅನುಭವಿಸಬೇಕಾಗುತ್ತದೆಚಿಕ್ಕಂದಿನಿಂದಲೇ ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಸಶಕ್ತರಾಗಿರುವುದು ಸಾಧ್ಯ ಮತ್ತು ಅವರಿಗೆ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳು ಬರುವುದಿಲ್ಲ,” ಎನ್ನುತ್ತಾರೆ ಅವರು. 

 ಹಿರಿಯ ನಾಗರಿಕರಿಗೆ ರಾಮಪ್ಪ ಅವರು ಒಂದು ಕಿವಿಮಾತು ಕೊಡುತ್ತಾರೆ – ವ್ಯಾಯಾಮ ಮಾಡುವುದರಲ್ಲಿ ತೊಡಗಿಸಿಕೊಳ್ಳುವುದನ್ನು ಆರಂಭಿಸಲು ಯಾವತ್ತೂ ಸೂಕ್ತ ಸಮಯವೇ.  “ಅವರು ಅಲ್ಪಸ್ವಲ್ಪವಾಗಿ ಆರಂಭಿಸಬಹುದು ಮತ್ತು ಅದರಿಂದಾಗಿ ಅವರು ಹೆಚ್ಚು ಸಶಕ್ತರಾಗಿ ಸ್ವತಂತ್ರರಾಗುವುದು ಸಾಧ್ಯ.  ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಮಾತ್ರ ಎನ್ನುವುದು ನನ್ನ ನಂಬಿಕೆ ಮತ್ತು 60 ವಯಸ್ಸು ಮೀರಿದವರು  ಕೂಡಾ ವ್ಯಾಯಾಮ ಮಾಡುವುದನ್ನು ಆರಂಭಿಸಬಹುದು. ಅದು ಮೊದಲ ಬಾರಿಗೆ ಎಂದು ಅಂಜಬೇಕಾಗಿಲ್ಲ” ಎಂದು ಅವರು ಹೇಳುತ್ತಾರೆ.  

ಈ ಹಾದಿಯಲ್ಲಿ ನಿಮಗೆ ನೆರವಾಗಬಲ್ಲ ಕೆಲವು ಸೂಚನೆಗಳು 

  • ನಿಮಗೆ ನಿಯಮಿತವಾಗಿ ಸಾಕಷ್ಟು ವ್ಯಾಯಾಮ ಸಿಗುವುದನ್ನು ಖಚಿತ ಮಾಡಿಕೊಳ್ಳಿ.  ನಿಮ್ಮ ಮೊಣಕಾಲಿನ ಕೀಲುಗಳು ಚೆನ್ನಾಗಿರುವಂತೆ ನೋಡಿಕೊಳ್ಳಲು ನಡೆಯುವುದು ಬಹಳ ಒಳ್ಳೆಯದು, ಆದರೆ ನಿಮ್ಮ ಮೊಣಕಾಲಿನ ಕೀಲು ಮತ್ತು ಮಂಡಿಯ ಸ್ನಾಯುಗಳಿಗೂ ವ್ಯಾಯಾಮ ಸಿಗುವಂತೆ ನೋಡಿಕೊಳ್ಳಬೇಕು ಏಕೆಂದರೆ ನಡೆಯುವುದ ಮಾತ್ರ ಅವುಗಳಿಗೆ ಉತ್ತೇಜನ ಸಿಗುವುದಿಲ್ಲ.
  • ನೀವು ಮೇಜಿನ ಮುಂದೆ ಬಹಳ ಹೊತ್ತು ಕುಳಿತು ಕೆಲಸ ಮಾಡುತ್ತೀರಾದರೆ, ನೀವು ಕುಳಿತುಕೊಳ್ಳುವ ಭಂಗಿ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದರೊಂದಿಗೆ ನಡುವೆ ವಿರಾಮ ತೆಗೆದುಕೊಂಡು ಸುತ್ತಾಡಿ ನಿಮ್ಮ ಕಾಲುಗಳು ನಿಗುರಿಸಲು ಅನುವು ಮಾಡಿಕೊಳ್ಳಬೇಕು.
  • ಸಾಧ್ಯವಾದರೆ ಮಹಡಿ ಮೆಟ್ಟಲುಗಳನ್ನು ಹತ್ತಿಳಿಯಲು ಪ್ರಯತ್ನಿಸಿ
  • ನಿಯಮಿತವಾಗಿ ನಿಮ್ಮ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಿಆರೋಗ್ಯದ ಸಮಸ್ಯೆಗಳನ್ನು ಮೊದಲೇ ಪತ್ತೆ ಹಚ್ಚಿದರೆ ಅವುಗಳ ತೀವ್ರತೆಯನ್ನು ಕಡಿಮೆಮಾಡಿಸಿಕೊಳ್ಳಬಹುದು ಮತ್ತು ಅವುಗಳಿಂದ ಗುಣಮುಖರಾಗುವ ನಿಮ್ಮ ಸಾಮರ್ಥ್ಯ ಅಧಿಕವಾಗುತ್ತಿದೆ.
  • ನಿಮಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅಥವಾ ಇನ್ನಾವುದೇ ರೀತಿಯಲ್ಲಿ ದೈಹಿಕವಾಗಿ ಕ್ರಿಯಾತ್ಮಕವಾಗುವುದು ಇಷ್ಟವಾದರೆ, ನಿಮ್ಮ ಆಸಕ್ತಿಯನ್ನು ವಯಸ್ಸಾದಾಗಲೂ ಬಿಟ್ಟುಬಿಡಬೇಕು ಎಂದುಕೊಂಡಾಗಲೂ ಉಳಿಸಿಕೊಂಡು ಹೋಗಿ. 

ಏನಾದರೂ, ಯಾವುದೇ ವಿಷಯ-ಅಭ್ಯಾಸ ನಿಮ್ಮನ್ನು ಸಂತೋಷದಲ್ಲಿ ಇಟ್ಟುಕೊಂಡು ಮತ್ತು ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡುವುದಾದರೆ, ನೀವೇಕೆ ಅದನ್ನು ಬಿಟ್ಟುಬಿಡಬೇಕುಸಂತೋಷ ಮತ್ತು ಆರೋಗ್ಯ ಬಾಳನ್ನು ರೋಮಾಂಚನಗೊಳಿಸುತ್ತದೆ, ಆದ್ದರಿಂದ ನಿಜಕ್ಕೂ ನೀವು ಭಾವಿಸಿದಷ್ಟೇ ನಿಮ್ಮ ವಯಸ್ಸು. 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ