0

0

0

ಈ ಲೇಖನದಲ್ಲಿ

ವೆಸ್ಟಿಬುಲರ್ (vestibular) ಪುನರ್ವಸತಿ ಚಿಕಿತ್ಸೆಯಿಂದ ಸಮತೋಲನಗೊಳಿಸುವುದು 
0

ವೆಸ್ಟಿಬುಲರ್ (vestibular) ಪುನರ್ವಸತಿ ಚಿಕಿತ್ಸೆಯಿಂದ ಸಮತೋಲನಗೊಳಿಸುವುದು 

ವಯಸ್ಸಾದವರಲ್ಲಿ ಕಂಡುಬರುವ ವೆಸ್ಟಿಬುಲರ್ (vestibular) ಸಂವೇದನಾ ವ್ಯವಸ್ಥೆಯ ತೊಂದರೆಯನ್ನು ಔಷಧ ನೀಡಿ, ಚಲನೆಯ ಅಭ್ಯಾಸಗಳು ಮತ್ತು ಪುನರ್ವಸತಿಯೊದಿಗೆ ಪುನರ್ವಸತಿಯ ಕಾರ್ಯಕ್ರಮಗಳನ್ನು ಅಳವಡಿಸಿ ಚಿಕಿತ್ಸೆ ಮಾಡಬಹುದು. 

ವೆಸ್ಟಿಬುಲರ್ (vestibular) ಪುನರ್ವಸತಿ ಚಿಕಿತ್ಸೆಯಿಂದ ಸಮತೋಲನಗೊಳಿಸುವುದು 

ವಯಸ್ಸಾದ ಜನರು ಹೆಚ್ಚಾಗಿ ತಮ್ಮ ವೆಸ್ಟಿಬುಲರ್ (vestibular) ಸಂವೇದನಾ ವ್ಯವಸ್ಥೆಯಲ್ಲಿ ಅಸಮತೋಲನದಿಂದಾಗಿ  ಬೀಳುತ್ತಾರೆವೆಸ್ಟಿಬುಲರ್ (vestibular) ಸಂವೇದನಾ ವ್ಯವಸ್ಥೆಯ ಆರೋಗ್ಯವು ವಯಸ್ಸಾದವರು ಬೀಳದಂತೆ ಇರಲು ಮಹತ್ವದ  ಪಾತ್ರ ನಿರ್ವಹಿಸುತ್ತದೆ. 

 ಮಂಗಳೂರಿನ ಯೆನೆಪೋಯಾ ವೈದ್ಯಕೀಯ ಕಾಲೇಜಿನ ವೃದ್ಧಾರೋಗಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಪ್ರೊಪೆಸರ್ ಆಗಿರುವ ಡಾ. ಪ್ರಭಾ ಅಧಿಕಾರಿ ಅವರು ”ಹ್ಯಾಪಿಯೆಸ್ಟ್ ಹೆಲ್ತ್ನೊಂದಿಗೆ ಮಾತಾಡುತ್ತಾ ಹೇಳುತ್ತಾರೆ, “ಮಧ್ಯಮ ವಯಸ್ಕರಲ್ಲಿ ಮತ್ತು ವಯಸ್ಸಾದವರಲ್ಲಿ, ಅದರಲ್ಲೂ ಮಹಿಳೆಯರಲ್ಲಿ ವೆಸ್ಟಿಬುಲರ್ (vestibular) ಕಾಯಿಲೆಗಳು ಸಾಮಾನ್ಯವಾಗಿವೆ.” 

 ವಯಸ್ಸಾದವರ ವೆಸ್ಟಿಬುಲರ್ (vestibular) ವ್ಯವಸ್ಥೆ: ವಯಸ್ಕರಲ್ಲಿ ತಲೆಸುತ್ತುವಿಕೆ ಮತ್ತು ಅಸಮತೋಲನ,” ಕುರಿತು 2019 ರಲ್ಲಿ ಪ್ರಕಟಿಸಲಾದ ಸಂಶೋಧನಾತ್ಮಕ ಅಧ್ಯಯನದಲ್ಲಿ ಹೀಗೆ ಹೇಳಲಾಗಿದೆ: 60 ಕ್ಕೂ ಮೇಲ್ಪಟ್ಟ ವಯಸ್ಕರಲ್ಲಿ 20%, 70 ಕ್ಕೂ ಮೇಲ್ಪಟ್ಟ ವಯಸ್ಕರಲ್ಲಿ 30 ಮತ್ತು 80 ಕ್ಕೂ ಮೇಲ್ಪಟ್ಟ ವಯಸ್ಕರಲ್ಲಿ 50% ಮಂದಿ ತಮ್ಮ ದೈನಂದಿನ ಕೆಲಸಗಳಲ್ಲಿ ತಲೆಸುತ್ತುವಿಕೆಯ ಸಮಸ್ಯೆ ಅನುಭವಿಸಿದ್ದಾರೆ.

 ತಲೆಸುತ್ತುವಿಕೆಗೆ ಚಿಕಿತ್ಸೆ ಮಾಡಿಸದಿದ್ದರೆ, ಕ್ರಮೇಣ ಬೀಳುವುದು ಅಥವಾ ನಡಿಗೆಯಲ್ಲಿ ಅಸಹಜತೆಗೆ ಕಾರಣವಾಗಬಹುದು. 

 ಈ ಕುರಿತು, ಬೆಂಗಳೂರಿನ ಅಪೊಲ್ಲೊ ಆಸ್ಪತ್ರೆಗಳ ವೃದ್ಧಾರೋಗಶಾಸ್ತ್ರ ಸಲಹೆಗಾರರಾದ ಡಾ. ಸ್ಟೀವ್ ಪೌಲ್ ಮಂಜಾಲಿ, ಅವರು ”ಹ್ಯಾಪಿಯೆಸ್ಟ್ ಹೆಲ್ತ್” ಗೆ ಹೀಗೆ ಹೇಳುತ್ತಾರೆ, “75 ಕ್ಕೂ ಮೇಲ್ಪಟ್ಟ ವಯಸ್ಕರಲ್ಲಿ ವೆಸ್ಟಿಬುಲರ್ (vestibular) ಸಮಸ್ಯೆಯಿಂದ ಬೀಳುವ ಅಪಾಯ ಅಧಿಕ.  ಆದರೆ, ಅರವತ್ತರ ಹರೆಯದಲ್ಲಿದ್ದು ಅಧಿಕ ರಕ್ತದೊತ್ತಡ ಅಥವಾ ಮಧುಮೇಹದ ಸಹವರ್ತಿ ಕಾಯಿಲೆಗಳಿದ್ದವರು ವೆಸ್ಟಿಬುಲರ್ (vestibular) ಸಂವೇದನಾ ವ್ಯವಸ್ಥೆಯ ಪೀಡೆಗೆ ಬಲಿಯಾಗುವ ಅಪಾಯವು 75 ಕ್ಕೂ ಮೇಲ್ಪಟ್ಟ (ಆದರೆ ಸಹವರ್ತಿ ಕಾಯಿಲೆಗಳಿಲ್ಲದವರು) ವಯಸ್ಕರಿಗಿಂತ ಹೆಚ್ಚು,” ಎನ್ನುತ್ತಾರೆ ಡಾ. ಮಂಜಾಲಿ. 

 ವೆಸ್ಟಿಬುಲರ್ (vestibular) ಸಂವೇದನಾ ವ್ಯವಸ್ಥೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು 

ವೆಸ್ಟಿಬುಲರ್ (vestibular) ಕಾಯಿಲೆಗಳು ಚಲನೆ ಮತ್ತು ತಿರುಗುವಿಕೆಗಳ ಕುರಿತ  ವೆಸ್ಟಿಬುಲರ್ (vestibular) ಸಂವೇದನಾ ವ್ಯವಸ್ಥೆಗೆ ಸಂಬಂಧಪಟ್ಟವು. ಇದು ಕಿವಿಗೆ ಸಂಬಂಧಿಸಿದ ನರಶಾಸ್ತ್ರ (ಓಟೊನ್ಯೂರೋಜಿಕಲ್ – otoneurological) ವ್ಯವಸ್ಥೆ – ಒಳಕಿವಿಯನ್ನು ನರಗಳ ನಾಳಗಳಿಗೆ ಸಂಪರ್ಕಿಸಿ ಮೆದುಳಿಗೆ ತಲುಪಿಸುತ್ತದೆ. ದೇಹದ ಸ್ಥಾನ, ತಲೆಯಿಂದ ಶರೀರದ ಚಲನೆ ಮತ್ತು ಸಮತೋಲನ (ಪ್ರೊಪ್ರಿಯೊಸೆಪ್ಶನ್ – proprioception) ಸಂಪರ್ಕವಿಟ್ಟುಕೊಂಡು ನಿಯಂತ್ರಿಸುತ್ತದೆ. 

 ನಿರ್ದಿಷ್ಟವಾಗಿ, ಒಳಕಿವಿಯ ಅಂಗಾಂಗಳಾದ ಅರ್ಧಚಂದ್ರ ನಾಳಗಳು (ತಲೆಯ ಚಲನೆಯ ಸಮತೋಲನ ಹಾಗೂ ರೇಖೀಯ ವೇಗವರ್ಧನೆ ಗ್ರಹಿಸಲು ನೆರವಾಗುವ), ಓಟೋಲಿತ್ (otolith) ಅಂಗಗಳು (ಮುಂದಕ್ಕೆ-ಹಿಂದಕ್ಕೆ, ಎಡ-ಬಲ ಮತ್ತು ಮೇಲೆ-ಕೆಳಗೆ ಹೋಗುವ ಚಲನೆಗಳನ್ನು ಗ್ರಹಿಸಲು ನೆರವಾಗುವ), ಓಕ್ಟೋನಿಯಾ (otoconia) (ಕೂದಲಿನ ಜೀವಕೋಶಗಳನ್ನು ರೇಖೀಯ ವೇಗವರ್ಧನೆಯಲ್ಲಿ ಬಗ್ಗಿಸಲು ನೆರವಾಗುವ ಬಹು ಕ್ಯಾಲ್ಸಿಯಮ್ ಕಾರ್ಬೋನೇಟ್ ಕಣಗಳು) ಮತ್ತು ವೆಸ್ಟಿಬುಲರ್ (vestibular) ಕೇಂದ್ರಬಿಂದು (ಪ್ರತಿಫಲಿತ ಕಣ್ಣಿನ ಚಲನೆಗಳಲ್ಲಿ ಪಾತ್ರ ವಹಿಸುವ ಒಳಕಿವಿಯ ಭಾಗ) ವೆಸ್ಟಿಬುಲರ್ (vestibular) ಸಮತೋಲನ ಅಥವಾ ಅಸಮತೋಲನ ನಿರ್ಧರಿಸುತ್ತದೆ. 

 ಈ ಕೆಳಗಿನ ದಿನನಿತ್ಯದ ಕೆಲಸಗಳನ್ನು ಬೀಳುವ ಅಥವಾ ತಲೆತಿರುಗುವಿಕೆಯ ಭಾವನೆಯಿಲ್ಲದೆ ವ್ಯಕ್ತಿಯು ಮಾಡಲು ಸಾಧ್ಯವಾದರೆ, ವೆಸ್ಟಿಬುಲರ್ (vestibular) ಸಂವೇದನಾ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡುತ್ತದೆ ಎನ್ನಬಹುದು: 

  • ತಲೆಯನ್ನು ಆಚೆ-ಈಚೆ, ಮೇಲೆ-ಕೆಳಗೆ ಅಥವಾ ಎಡ-ಬಲ ಬದಿಗೆ ತಿರುಗಿಸಲು
  • ಮಹಡಿ ಹತ್ತುವುದು/ಇಳಿಯುವುದು
  • ಕಾರು ಅಥವಾ ದ್ವಿಚಕ್ರ ವಾಹನ ಚಲಿಸುವುದು
  • ಕಪಾಟಿನ ತುತ್ತತುದಿಯಿಂದ ವಸ್ತುಗಳನ್ನು ತೆಗೆಯಲು ಸಾಧ್ಯವಾಗುವುದು

ಸಂವೇದನಾ ವ್ಯವಸ್ಥೆಯ ಅಸಮತೋಲನ ವಿವರಿಸುವ ಒಂದು ಅತ್ಯುತ್ತಮ ಪ್ರಕರಣ 

 ಮಂಗಳೂರಿನ ಶಾಂತಾ ರಾವ್ (ಹೆಸರು ಬದಲಾಯಿಸಲಾಗಿದೆ), 62, ತನ್ನ ನಿವೃತ್ತಿಯ ನಂತರ ಸಂತೋಷದಿಂದ ಬಾಳುತ್ತಿದ್ದರು. ಒಮ್ಮೆಲೆ ಅವರಿಗೆ ತಲೆಸುತ್ತುವಿಕೆ ಪ್ರಾರಂಭವಾಯಿತು. ಆಕೆಯ ಪರಿಸ್ಥಿತಿ ಎಷ್ಟು ಕೆಟ್ಟಿತ್ತೆಂದರೆ, ರಾವ್ ಅವರಿಗೆ ತಲೆ ತಿರುಗಿಸಲು ಮತ್ತು ತನ್ನ ಎಡ/ಬಲದಲ್ಲಿ ಇರುವವರೊಂದಿಗೆ ಸಂಭಾಷಣೆ ಮಾಡಲು ಅಥವಾ ಬಗ್ಗಿ ನೆಲದ ಮೇಲೆ ಬಿದ್ದ ವಸ್ತುವನ್ನು ಹೆಕ್ಕಿಕೊಳ್ಳಲು ಸಹಿತ ಅಸಾಧ್ಯವಾಗಿತ್ತು. 

ತನ್ನ ತಲೆಸುತ್ತುವಿಕೆ ತಾತ್ಕಾಲಿಕ ಸಮಸ್ಯೆ ಆಗಿರಬಹುದು, ಪ್ರಾಯಶ: ಯಾವುದೋ ಆಹಾರ ಸೇವಿಸಿದ್ದುದರಿಂದ ಅಥವಾ ಬದಲಾದ ಋತುಮಾನದ ಪರಿಸ್ಥಿತಿಯೇ ಕಾರಣವೆಂದು ಅವರು ಭಾವಿಸಿದರು. ದಿನಸಿ ವಸ್ತುಗಳನ್ನು ಕೊಳ್ಳುವುದು ಮತ್ತು ಸಂಜೆ ಹೊತ್ತು ತನ್ನ ಗೆಳತಿಯರೊಂದಿಗೆ ವಿಹಾರಕ್ಕೆ ಹೋಗುವುದನ್ನು ಅವರು ತಾತ್ಕಾಲಿಕವಾಗಿ ಬಿಟ್ಟುಬಿಡಬೇಕಾಯಿತು. ವಿರಾಮ ತೆಗೆದುಕೊಂಡರೆ ತನ್ನ ಸಮಸ್ಯೆ ಪರಿಹಾರವಾದೀತು ಎಂದು ಅವರು ಭಾವಿಸಿದ್ದರು. 

ಎರಡು ವಾರಗಳ ನಂತರವೂ ತಲೆಸುತ್ತುವಿಕೆಯ ತೊಂದರೆ ಮುಂದುವರೆದಿತ್ತು.  ತನ್ನ ಸ್ನೇಹಿತೆಯರ ಸಲಹೆಯಂತೆ, ಅವರು ನರಶಾಸ್ತ್ರಜ್ಞರು (neurologist), ಇಎನ್‌ಟಿ (ENT) (ಕಿವಿ, ಮೂಗು ಮತ್ತು ಗಂಟಲಿನ) ಸರ್ಜನ್, ಮೂಳೆಚಿಕಿತ್ಸಕ ಸರ್ಜನ್ (orthopedic surgeon) ಮಾತ್ರವಲ್ಲದೆ ಎಂಡೋಕ್ರಿನೋಲೋಜಿಸ್ಟ್ (endocrinologist) (ಅಂತ:ಸ್ರಾವಶಾಸ್ತ್ರಜ್ಞ) ಅವರಲ್ಲೂ ಪರೀಕ್ಷೆ ಮಾಡಿಸಿಕೊಂಡರು. 

ಕೆಲ ಕಾಲದ ಮಟ್ಟಿಗೆ ಈ ತಲೆಸುತ್ತುವಿಕೆಯ ಸಮಸ್ಯೆಯಿಂದ ನನ್ನ ಓಡಾಟ ನಿಯಂತ್ರಿಸಬೇಕಾಯಿತು.  ನನ್ನಷ್ಟಕ್ಕೆ ಹೊರಹೋಗಲು ನನಗೆ ಹೆದರಿಕೆಯಾಗುತ್ತಿತ್ತು. ನನಗೆ ತಲೆಸುತ್ತುವಿಕೆ ಅಥವಾ ವರ್ಟಿಗೋ (vertigo) ಕಾಯಿಲೆ ಎಂದು ವೈದ್ಯರು ತಿಳಿಸಿದರು.  ನನ್ನ ಪರಿಸ್ಥಿತಿ ನಿಭಾಯಿಸಲು ವೈದ್ಯರು ನನಗೆ ಆರು ವಿಧದ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ನನ್ನ ಮಧುಮೇಹದ ಮಾತ್ರೆಗಳೊಂದಿಗೆ ಈ ಮಾತ್ರೆಗಳನ್ನು ಕೂಡಾ ಒಂದು ತಿಂಗಳಿನಿಂದ ನಾನು ತೆಗೆದುಕೊಳ್ಳುತ್ತೇನೆ. ನಾನು ನಡೆಯುವಾಗ ತಪ್ಪದೆ ಕತ್ತಿನ ಕಾಲರ್ ಉಪಯೋಗಿಸುತ್ತಿದ್ದೇನೆ,” ಎಂದು ರಾವ್  ”ಹ್ಯಾಪಿಯೆಸ್ಟ್ ಹೆಲ್ತ್ನೊಂದಿಗೆ ಹೇಳುತ್ತಾರೆ. 

ಬ್ರೆಜಿಲ್‌ನ ಜರ್ನಲ್ ಆಪ್ ಓಟೋರಿನೊಲ್ಯಾರಿಂಗೋಲೊಜಿಯಲ್ಲಿ 2006 ರಲ್ಲಿ”ದೀರ್ಘಕಾಲದ  ವೆಸ್ಟಿಬುಲರ್ (vestibular) ಅಪಸಾಮಾನ್ಯ ಕಾಯಿಲೆ ಇರುವ ವಯಸ್ಕರ ವೈದ್ಯಕೀಯ ಮೌಲ್ಯಮಾಪನ”  ಎನ್ನುವ  ತಲೆಬರಹದಡಿ ಪ್ರಕಟವಾದ ಅಧ್ಯಯನದ ಪ್ರಕಾರ “ತಲೆಸುತ್ತುವಿಕೆ (ವರ್ಟಿಗೋ (vertigo) ರೂಪದಲ್ಲಿ), ಆಲಿಸುವ ಶಕ್ತಿ ನಷ್ಟ ಟಿನ್ನಿಟಸ್ (ಒಂದು ಅಥವಾ ಎರಡೂ ಕಿವಿಗಳಲ್ಲಿ ಅಸಾಧಾರಣವಾದ ರಿಂಗಣಿಸುವ ಸದ್ದು), ದೇಹದ ಸಮತೋಲನದಲ್ಲಿ ವ್ಯತ್ಯಾಸ, ವರ್ತನೆಯಲ್ಲಿ ತೊಂದರೆಗಳು ಮತ್ತು ಕೆಲವೊಮ್ಮೆ ಸಮತೋಲನ ತಪ್ಪಿ ಬೀಳುವ ಮೊದಲಾದ ಸಮಸ್ಯೆಗಳು ಕಂಡುಬಂದಿವೆ.” 

ವೆಸ್ಟಿಬುಲರ್ (vestibular) ಅಸಮತೋಲನದ ಎಚ್ಚರಿಕೆಯ ಸಂಕೇತಗಳು 

ತಲೆಸುತ್ತುವಿಕೆ  (ವರ್ಟಿಗೋ (vertigo) ಕಾಯಿಲೆಗೆ ಪರಿವರ್ತನೆಗೊಳ್ಳಬಹುದಾದ  ಸ್ಥಿತಿ) – ದೇಹವು ಅಥವಾ ಪರಿಸರವು ಗಿರಕಿ ಹೊಡೆದಂತೆ ಭಾಸವಾಗುವುದು)  ವೆಸ್ಟಿಬುಲರ್ (vestibular) ಕಾಯಿಲೆ ಇರುವ ತಕ್ಷಣದ ಎಚ್ಚರಿಕೆಯ ಸಂಕೇತವೆಂದು ಡಾ. ಅಧಿಕಾರಿ ವಿವರಿಸುತ್ತಾರೆ. 

ದೀರ್ಘಕಾಲದ ಅಥವಾ ಗಂಭೀರ ಪ್ರಕರಣಗಳಲ್ಲಿ ತಲೆಸುತ್ತುವಿಕೆ ಮತ್ತು ವಾಂತಿ ಹಾಗೂ ನಿಂತುಕೊಳ್ಳಲು ಅಥವಾ ನಡೆದಾಡಲು ಅಸಾಧ್ಯವೆನಿಸುವುದೂ ಕೂಡಾ ಎಚ್ಚರಿಕೆಯ ಸಂಕೇತ. 

ವೆಸ್ಟಿಬುಲರ್ (vestibular) ಅಪಸಾಮಾನ್ಯ ಕಾಯಿಲೆಯ ಶರೀರಶಾಸ್ತ್ರ 

ಶರೀರಶಾಸ್ತ್ರದ ಪರೀಕ್ಷೆಯಿಂದ ಒಳಕಿವಿಯ ಭಾಗಗಳ ಅವನತಿಯು ವೆಸ್ಟಿಬುಲರ್ (vestibular) ಅಪಸಾಮಾನ್ಯ ಕಾಯಿಲೆಯ ಪ್ರಮುಖ ಕಾರಣಗಳಲ್ಲೊಂದು ಎಂದು ತಿಳಿದು ಬರುತ್ತಿದೆ. 

ವಯಸ್ಸಿನ ವೆಸ್ಟಿಬುಲರ್ (vestibular)  ವ್ಯವಸ್ಥೆವಯಸ್ಕರಲ್ಲಿ ತಲೆಸುತ್ತುವಿಕೆ ಮತ್ತು ಅಸಮತೋಲನ” ಎನ್ನುವ  ಅಧ್ಯಯನದ ಪ್ರಕಾರ ಪ್ರತೀ ದಶಕದಲ್ಲಿ ವೆಸ್ಟಿಬುಲರ್ (vestibular) ಕೂದಲಿನ ಜೀವಕೋಶಗಳು ಕಡಿಮೆಯಾಗುತ್ತಿವೆ. 

ಒಳಕಿವಿಯ ಅರ್ಧವೃತ್ತಾಕಾರದ ನಾಳಗಳಲ್ಲಿನ ಕೂದಲಿನ ಜೀವಕೋಶಗಳು ಮೊದಲು ಕ್ಷೀಣಿಸುತ್ತವೆ, ನಂತರ ಒಳಕಿವಿಯಲ್ಲಿರುವ ಓಟೋಲಿತ್ (ಕ್ಯಾಲ್ಸಿಯಂ ಕಾರ್ಬೋನೇಟಿನ ಸಣ್ಣ ಕಣ) ಅಂಗಗಳಲ್ಲಿರುವ ಕೂದಲಿನ ಜೀವಕಣಗಳು. 

ಅದಲ್ಲದೆ, ವೃದ್ಧ್ಯಾಪ್ಯದಿಂದ ಒಟೋಕೋನಿಯ, ಕೂದಲಿನ ಜೀವಕಣಗಳು ಕ್ಷೀಣವಾಗಿ, ವೆಸ್ಟಿಬುಲರ್ (vestibular) ವೆಸ್ಟಿಬುಲರ್ (vestibular) ನರಗಳು ಹಾಗೂ ವೆಸ್ಟಿಬುಲರ್ (vestibular) ವ್ಯವಸ್ಥೆಲ್ಲಿನ ಜೀವಕಣಗಳ ಕೇಂದ್ರಬಿಂದು ನಷ್ಟವಾಗುತ್ತದೆ ಎಂದು ಅಮೇರಿಕದ ವೃದ್ಧ್ಯಾಪ್ಯದ ಸಂಘವು 2012 ರಲ್ಲೇ ಧೃಡೀಕರಿಸಿದೆ. 

ವಯಸ್ಕರು ಮತ್ತು ಹಿರಿಯ ನಾಗರಿಕರಲ್ಲಿ ಒಳಕಿವಿಯ ಭಾಗಗಳ ಅವನತಿಯಿಂದ ಹಾನಿಕರವಲ್ಲದ ಬಿನೈನ್ ಪ್ಯಾರೊಕ್ಸಿಸ್ಮಲ್ ಪೊಷಿಶನಲ್ ವರ್ಟಿಗೋ (vertigo) ಅಥವಾ ಬಿಪಿಪಿವಿ (BPPV) (ಸ್ಥಾನಿಕ  ಪ್ಯಾರೊಕ್ಸಿಸ್ಮಲ್ ತಲೆಸುತ್ತುವಿಕೆ) ಅಂದರೆ ಕಿವಿಯ ಒಳಗಿನ ಸಮತೋಲನ ವ್ಯವಸ್ಥೆಯಲ್ಲಿ ಅಡಚಣೆಯಿಂದಾಗಿ ಉಂಟಾಗುವ ಹಠಾತ್ ಆಕ್ರಮಣದ ಕಾಯಿಲೆ ಉದ್ಭವಿಸಬಹುದು. ಇದು ಒಳಕಿವಿಯ ಅರ್ಧವೃತ್ತಾಕಾರದ ನಾಳಗಳಲ್ಲಿನ ತ್ಯಾಜ್ಯದ  ಸ್ಥಾನಪಲ್ಲಟ ಆಗುವುದರಿಂದ, ವೆಸ್ಟಿಬುಲರ್ (vestibular) ನರಗಳಲ್ಲಿ ಸೋಂಕು ಅಥವಾ ಉರಿಯೂತ ಉಂಟಾಗುವುದರಿಂದ ಬರುವ ವೆಸ್ಟಿಬುಲರ್ (vestibular) ನ್ಯೂರೊನಿಟಿಸ್ ಅಥವಾ ಒಳಕಿವಿಯ ಪೊರೆಯ ಚಕ್ರವ್ಯೂಹ ದುರ್ಬಲಗೊಳ್ಳುವ ಮೆನಿಯರ್ ಕಾಯಿಲೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು,” ಎಂದು ವಿವರಿಸುತ್ತಾರೆ ಡಾ. ಅಧಿಕಾರಿ. 

ಈ ಸಮಸ್ಯೆಗಳಿಂದ ತಲೆಸುತ್ತುವಿಕೆ, ಬಿದ್ದುಬೀಳುವುದು ಮತ್ತು ನಡಿಗೆಯಲ್ಲಿ ವ್ಯತ್ಯಾಸಗಳಿಗೂ ಕಾರಣವಾಗುವ ಸಂಭವಗಳು ಅಧಿಕ. 

ವೆಸ್ಟಿಬುಲರ್ (vestibular) ಅಸ್ವಸ್ಥತೆಗಳ ಸ್ಥಿತಿ ಹೆಚ್ಚಾಗುವ ಅಪಾಯಕ್ಕೆ ಕಾರಣವಾಗುವ ಸಹವರ್ತಿ ಪರಿಸ್ಥಿತಿಗಳಲ್ಲಿ ಶ್ರವಣ ಅಥವಾ ವೀಕ್ಷಣೆಯ ತೊಂದರೆಗಳು ಅಥವಾ ಜ್ಞಾಪನಾ-ಸಂಬಂಧಿತ ಸಮಸ್ಯೆಗಳು ಅಥವಾ ನಿಯಂತ್ರಿಸಲಾಗದ ಮಧುಮೇಹ ಅಥವಾ ರಕ್ತದೊತ್ತಡ ಅಥವಾ ಹೃದಯ ಕಾಯಿಲೆ ಅಥವಾ ರಕ್ತದ ಒತ್ತಡ (ಬಿಪಿ) ಸೇರಿವೆ,” ಎಂದು ಡಾ. ಮಂಜಾಲಿ ಅವರು ತಿಳಿಸುತ್ತಾರೆ. 

ವೆಸ್ಟಿಬುಲರ್ (vestibular) ಪುನರ್ವಸತಿಯ ಚಿಕಿತ್ಸೆ 

 ಸುಮಾರು ಒಂದು ತಿಂಗಳ ಕಾಲ ಸತತವಾಗಿ ತಲೆಸುತ್ತುವಿಕೆಯಿಂದ ಪೀಡಿತರಾದ ಶಾಂತಾ ರಾವ್ ಕೊನೆಗೂ ವಿಶೇಷ ಚಿಕಿತ್ಸಾಲಯದ (ಕ್ಲಿನಿಕ್) ಮೊರೆಹೋದರುವರ್ಟಿಗೋ (vertigo) ಕಾಯಿಲೆಯೇ ಅವರ ಸಮಸ್ಯೆ ಎಂದು ಧೃಡೀಕರಿಸಿಚಿಕಿತ್ಸೆ ನೀಡುತ್ತಿದ್ದ ಮಂಗಳೂರಿನ ಡಾ. ಅಧಿಕಾರಿ ಹೀಗೆ ವಿವರಿಸುತ್ತಾರೆ: “ಕೆಲವು ಔಷಧಗಳೊಂದಿಗೆ ಚಿಕಿತ್ಸೆಯ ಪ್ರಥಮ ಹಂತವಾಗಿ ವೆಸ್ಟಿಬುಲರ್ (vestibular) ಪುನರ್ವಸತಿಯ ವ್ಯಾಯಾಮಗಳನ್ನು ಸೂಚಿಸಲಾಯಿತು. ಸುಮಾರು ಮೂರು ವಾರಗಳಲ್ಲಿ ಅವರ ಪರಿಸ್ಥಿತಿ ಸುಧಾರಿಸಿತು, ಮತ್ತು ಈಗ ಅವರು ಸ್ವತಂತ್ರವಾಗಿ ಹಾಗೂ ಧೈರ್ಯದಿಂದ ಆಚೀಚೆ ಹೋಗುತ್ತಾರೆ.” 

ತಲೆಸುತ್ತುವಿಕೆ (ವರ್ಟಿಗೋ (vertigo)) ಮತ್ತು ವೆಸ್ಟಿಬುಲರ್ (vestibular) ಅಸ್ವಸ್ಥತೆಗಳುಳ್ಳ ಬಹಳಷ್ಟು ಜನರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಅಧಿಕಾರಿ ಹೇಳುತ್ತಾರೆ: “ತೀವೃ ವರ್ಟಿಗೋ (vertigo) ಇದ್ದರೆ ಹೆಚ್ಚಾಗೊ ಔಷಧಗಳನ್ನು ನೀಡಿ ಚಿಕಿತ್ಸೆ ಮಾಡಬೇಕಾಗುತ್ತೆ. ಬಿಪಿಪಿವಿ (BPPV) ಕಾಯಿಲೆಯಿಂದ ಬಾಹ್ಯ ತಲೆಸುತ್ತುವಿಕೆಯ ಚಿಕಿತ್ಸೆಗೆ ಸಾಮಾನ್ಯವಾಗಿ ಉಪಾಯಗಳನ್ನು ಅನುಸರಿಸಿ  – ಎಪ್ಲಿ ಕುಶಲತೆಯ (Epley manoeuvre) ಅಂದರೆ ಕಿವಿಯ ಮುಂಭಾಗದ ಅಥವಾ ಹಿಂಭಾಗದ ಕಾಲುವೆಗಳನನ್ನು ಮರುಸ್ಥಾಪಿಸುವ ವ್ಯಾಯಾಮದಿಂದ – ಚಿಕಿತ್ಸೆ ಮಾಡಲಾಗುತ್ತದೆ.” 

ಆದರೆ, ಕಾಯಿಲೆಯ ಇತರ ಗುಣಲಕ್ಷಣಗಳಿದ್ದಾಗ ನಿರ್ದಿಷ್ಟವಾದ  ವೆಸ್ಟಿಬುಲರ್ (vestibular) ಪುನರ್ವಸತಿಯ ವ್ಯಾಯಾಮವನ್ನು, ಕಣ್ಣಿನ ಪ್ರತಿಫಲಿತ ಚಲನೆಯನ್ನು ವೀಡಿಯೋನಿಸ್ಟಾಗ್ಮೋಗ್ರಾಮ್ (videonystagmogram) (ವಿಎನ್‌ಜಿ (VNG))  ಮೂಲಕ ವಿಶೇಷವಾದ ವರ್ಟಿಗೋ (vertigo) ಕ್ಲಿನಿಕ್‌ನಲ್ಲಿ ಪರೀಕ್ಷೆ ಮಾಡಿಸಿಕೊಂಡರೆ ವೈದ್ಯರಿಗೆ ನಿಖರವಾದ ರೋಗಲಕ್ಷಣ ತಿಳಿದುಕೊಳ್ಳಲು ನೆರವಾಗುತ್ತದೆ.” 

ವೆಸ್ಟಿಬುಲರ್ (vestibular) ಪುನರ್ವಸತಿಯು (ವಿಆರ್) ವ್ಯಾಯಾಮದ ಮೂಲಕ ಮಾಡುವ ಚಿಕಿತ್ಸೆ.  ಕೊರಿಯಾದ ವಿಶ್ವವಿದ್ಯಾಲಯಗಳ ನರಶಾಸ್ತ್ರಜ್ಞರಾದ ಡಾ. ಬೈಯುಂಗ್ ಇನ್ ಹಾನ್, ಡಾ. ಹ್ಯೂನ್ ಸೆವ್ಕ್ ಸೊಂಗ್ ಮತ್ತು ಡಾ. ಜಿ ಸೂ ಕಿಮ್ ಅವರುಗಳು ಚಿಕಿತ್ಸೆಯ ವಿಧಾನವನ್ನು ಹೀಗೆ ವಿವರಿಸುತ್ತಾರೆ: 

  • ದೇಹದ ವಿವಿಧ ಭಂಗಿಗಳೊಂದಿಗೆ ತಲೆ-ಕಣ್ಣು ಚಲನೆಗಳನ್ನು ಮತ್ತೆ ಮತ್ತೆ ಮಾಡುವುದು
  • ತಲೆ ಮತ್ತು ದೇಹದ ಕೆಳಗಿನ ಭಾಗದ ವಿವಿಧ ನಿಲುವುಗಳನ್ನು ಕಡಿಮೆ ಬೆಂಬಲದ ಆಧಾರದೊಂದಿಗೆ ಸಮತೋಲನವನ್ನು ಮರುಸ್ಥಾಪಿಸುವುದು
  • ದೇಹದ ಮೇಲ್ಭಾಗಗಳ ಕ್ರಿಯೆಗಳಿಗೆ ತರಬೇತಿ
  • ತಲೆಸುತ್ತುವಿಕೆ ಆಗುವಂತೆ ಮಾಡಲು ಚಲನೆಗಳನ್ನು ಮತ್ತೆ ಮತ್ತೆ ಮಾಡುವುದು

 ಹೀಗೆ ಮಾಡಿ: 

  • ನೋಟ ಮತ್ತು ನಡತೆಯಲ್ಲಿ ಸ್ಥಿರತೆ ಸಾಧಿಸುವುದು
  • ವರ್ಟಿಗೋ (vertigo) ಸ್ಥಿತಿಯಲ್ಲಿ ಮತ್ತು ದೈನಂದಿನ ಕೆಲಸಗಳಲ್ಲಿ ಸುಧಾರಣೆ ಮಾಡುವುದು

 ವಿಅರ್ ಚಿಕಿತ್ಸೆ ಮಾಡುವುದರಿಂದ  ಮಾನಸಿಕವಾಗಿ ವಯಸ್ಸಾದವರಲ್ಲಿ ಧೈರ್ಯ ತುಂಬುತ್ತದೆ ಮತ್ತು ಆತಂಕ ಕಡಿಮೆಯಾಗುತ್ತದೆ ಎಂದು ತಜ್ಞರ ಅಭಿಪ್ರಾಯ. 

 ಏಜಿಂಗ್ ಕ್ಲಿನಿಕಲ್ ಆಂಡ್ ಎಕ್ಸ್‌ಪೇರಿಮೆಂಟಲ್ ರಿಸರ್ಚ್’ (Aging Clinical and Experimental Research 2015) ಅಧ್ಯಯನದಲ್ಲಿ ಪ್ರಕಟವಾದ  “ವಯಸ್ಕರಲ್ಲಿ ವೆಸ್ಟಿಬುಲರ್ (vestibular) ಪುನರ್ವಸತಿಯ ಪರಿಣಾಮಗಳು” ಎನ್ನುವ  ತಲೆಬರಹದ ಲೇಖನದ ಪ್ರಕಾರ, “ರೂಪಾಂತರಿಸುವುದು, ಅಭ್ಯಸಿಸುವಿಕೆಪರ್ಯಾಯ ಹಾಗೂ ವೆಸ್ಟಿಬುಲರ್ (vestibular) ಪರಿಹಾರ (ಸಮತೋಲನ  ಮೀರಿಸುವ ಮತ್ತು ವ್ಯಾಯಾಮದ ಮೂಲಕ ನಡತೆ ನಿರ್ವಹಿಸುವ ವಿಧಾನ)”  ಕಂಡುಕೊಳ್ಳುವುದು ವಿಅರ್ ಚಿಕಿತ್ಸೆಯ ತಾರ್ಕಿಕತೆ. 

ವಯಸ್ಕರು  ನಿಯಮಿತವಾಗಿವೆಸ್ಟಿಬುಲರ್ (vestibular) ಪುನರ್ವಸತಿಯ ವ್ಯಾಯಾಮಗಳನ್ನು” ಮಾಡಿ ಕಾಯಿಲೆ ಬರದಂತೆ ನೋಡಿಕೊಳ್ಳಬೇಕು ಎಂದು ಡಾ. ಮಂಜಾಲಿ ಸೂಚಿಸುತ್ತಾರೆ. “ಪಟ್ಟಿಯಲ್ಲಿ ವಿವರಿಸಲಾದ ವ್ಯಾಯಾಮಗಳಲ್ಲಿ ದೃಷ್ಟಿಯನ್ನು ಒಂದು ವಸ್ತುವಿನ ಮೇಲೆ ಕೇಂದ್ರೀಕರಿಸುವುದು , ಅದೇ ಸಂದರ್ಭದಲ್ಲಿ ವಸ್ತುವನ್ನು ಎರಡೂ ಬದಿಗಳಲ್ಲಿ ಆಚೀಚೆ ಅಥವಾ ಮೇಲೆ ಕೆಳಗೆ ತಿರುಗಿಸಿ ಕುತ್ತಿಗೆ ಬಗ್ಗಿಸುವುದು ಸೇರಿದೆ,” ಎನ್ನುತ್ತಾರೆ ಡಾ. ಮಂಜಾಲಿ. 

ಆದರೆ, ವೈದ್ಯರ ಮಾರ್ಗದರ್ಶನದಲ್ಲಿ ಇಂತಹ ವ್ಯಾಯಾಮಗಳನ್ನು ಮಾಡಬೇಕೆಂದು ಡಾ. ಮಂಜಾಲಿ ಎಚ್ಚರಿಕೆ ನೀಡುತ್ತಾರೆ. “ಕುತ್ತಿಗೆಯ ಮೃದ್ವಸ್ಥಿ (ಕಾರ್ಟಿಲೆಜ್) ಮತ್ತು ಮೂಳೆಗಳ ಅಸಹಜ ಸ್ಥಿತಿಯಿಂದ ಉದ್ಭವಿಸುವ ಅಸ್ವಸ್ಥತೆ (ಸರ್ವಿಕಲ್ ಸ್ಪೊಂಡಿಲೋಸಿಸ್) ಅಥವಾ ಯಾವುದೇ ಕುತ್ತಿಗೆ ಸಂಬಂಧಿಸಿದ ಗಾಯಗಳಿದ್ದವರು ಈ ವ್ಯಾಯಾಮಗಳನ್ನು ಮಾಡಬಾರದು,” ಎಂದು ಅವರು ಜ್ಞಾಪಿಸುತ್ತಾರೆ. 

ಕಾಯಿಲೆಯ ಕಾರಣಗಳು ಮತ್ತು ತಡೆಗಟ್ಟುವಿಕೆಯ ಕ್ರಮಗಳ ಬಗ್ಗೆ ಮಾತಾಡುತ್ತಾ  ಡಾ. ಅಧಿಕಾರಿ ವಿವರಿಸುತ್ತಾರೆ: “ಆಘಾತಗಳು  ಕ್ರಮೇಣವಾಗಿ ವೆಸ್ಟಿಬುಲರ್ (vestibular) ಸಮಸ್ಯೆಗಳು ಉದ್ಭವಿಸಲು ಪ್ರಮುಖ ಕಾರಣಗಳಲ್ಲೊಂದು.  ಆದ್ದರಿಂದ, ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಿಸುವುದು ಮಾತ್ರವಲ್ಲದೆ ದೈಹಿಕವಾಗಿ ಕ್ರಿಯಾಶೀಲರಾಗಿರುವುದು ಮತ್ತು ಧೂಮಪಾನ ವರ್ಜಿಸುವುದು ಕಾಯಿಲೆ ಬರದಂತೆ ನೋಡಿಕೊಳ್ಳಲು ಸಹಕಾರಿ,” ಎನ್ನುತ್ತಾರೆ ಅವರು. 

ದೀರ್ಘಕಾಲ ಕುತ್ತಿಗೆಯ ಚಲನೆ ಮಾಡದಿರುವುದು, ದ್ವಿಚಕ್ರ ವಾಹನಗಳನ್ನು ಕೆಟ್ಟ ರಸ್ತೆಗಳಲ್ಲಿ ಓಡಿಸುವುದು ಅಥವಾ ಕಠಿಣ 

 ಏರೋಬಿಕ್ (ಆಮ್ಲಜನಕದ ಲಭ್ಯತೆ ಹೆಚ್ಚಿಸುವ) ವ್ಯಾಯಾಮಗಳನ್ನು ಮಾಡುವುದನ್ನು  ನಿಲ್ಲಿಸಿದರೆ ಬಿಪಿಪಿವಿ (BPPV), ಅರ್ಥಾತ್ ವಯಸ್ಕರಲ್ಲಿ ಸಾಮಾನ್ಯವಾಗಿ ಬರುವ ವರ್ಟಿಗೋ (vertigo) ಸಮಸ್ಯೆಯನ್ನು ತಡೆಗಟ್ಟುವುದು ಸಾಧ್ಯ,” ಎಂದು ಅವರ ಸಲಹೆ.  

ಮಧುಮೇಹಕ್ಕೆ ಸಂಬಂಧಿಸಿದಂತೆ, ಡಾ. ಮಂಜಾಲಿ ಹೇಳುತ್ತಾರೆ, “ಈ ಸಮಸ್ಯೆಗಳು ಅಪಧಮನಿ ಕಾಠಿಣ್ಯದ (ಎಥೆರೋಸ್ಕ್ಲೆರೋಸಿಸ್ – atherosclerosis) ಕಾಯಿಲೆ (ಅಂದರೆ ಅಪಧಮನಿಗಳಲ್ಲಿ ಕೊಬ್ಬಿನ ಶೇಖರಣೆ) ಅಥವಾ ನರಗಳ ಅವನತಿಗೆ ಸಂಬಂಧಿಸಿದವುಗಳಾಗಿವೆ.” 

ಮಧುಮೇಹವನ್ನು ನಿಯಂತ್ರಿಸುವುದರಿಂದ ವೆಸ್ಟಿಬುಲರ್ (vestibular) ಸಮಸ್ಯೆಗಳು ಉದ್ಭವಿಸುವ ಸಂಭವಗಳನ್ನು ಬಹಳಷ್ಟು ಮಟ್ಟಿಗೆ ಕಡಿಮೆ ಮಾಡಬಹುದು. ಅದರೊಂದಿಗೆ, 60  ವರ್ಷ ವಯಸ್ಸಿನ ನಂತರ ಮತ್ತು ವಿವಿಧ ಸಹವರ್ತಿ ರೋಗಳಿದ್ದವರು ಇಎನ್‌ಟಿ (ENT) ಮತ್ತು ಕಣ್ಣಿನ ಪರೀಕ್ಷೆಗಳನ್ನೊಳಗೊಂಡ ವಯಸ್ಕರ ಸಮಗ್ರ ಪರಿಶೀಲನೆಯನ್ನು ನಿಯಮಿತವಾಗಿ ಮಾಡುವುದು ಸೂಕ್ತವಾಗಿದೆ. 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

one × two =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ