ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ದೇಹಕ್ಕೆ ಎಷ್ಟು ನೀರು ಬೇಕು? ನೀರು ಕುಡಿಯುವ ಆಯುರ್ವೇದದ ವಿಧಾನ
22

ದೇಹಕ್ಕೆ ಎಷ್ಟು ನೀರು ಬೇಕು? ನೀರು ಕುಡಿಯುವ ಆಯುರ್ವೇದದ ವಿಧಾನ

ದೇಹವನ್ನು ಜಲಸಂಚಯನಗೊಳಿಸುವುದೇ ಅಲ್ಲದೆ ನೀರಿನಿಂದ ನಿಮಗೆ ಹಲವಾರು ಪ್ರಯೋಜನಗಳಿವೆ.
ದೇಹಕ್ಕೆ ಎಷ್ಟು ನೀರು ಬೇಕು? ನೀರು ಕುಡಿಯುವ ಆಯುರ್ವೇದದ ವಿಧಾನ
 

ನಿಮ್ಮ ದೇಹಕ್ಕೆ ಅಗತ್ಯವಿರುವ ನೀರು ಕುಡಿಯುವಾಗ ಎಷ್ಟು ಗುಟುಕು ನೀರು ಕುಡಿಯುತ್ತಿದ್ದೇವೆ ಎಂದು ನೀವು ಅಳೆದು ನೋಡುತ್ತೀರಾ? ನಿಮ್ಮ ಜಲಸಂಚಯನ ಮಟ್ಟವನ್ನು ಲೆಕ್ಕ ಹಾಕಲು ಇದು ಸರಿಯಾದ ವಿಧಾನವೆಂದು ನೀವು ಭಾವಿಸಿಕೊಂಡಿದ್ದರೆ, ಆಯುರ್ವೇದದ ಲೆಕ್ಕಾಚಾರವೇ ಬೇರೆ. ನಿಜ ಹೇಳಬೇಕೆಂದರೆ, ವಾಡಿಕೆಯ ಮಿತಿ ಅಂದುಕೊಂಡ ಮೂರರಿಂದ ನಾಲ್ಕು ಲೀಟರ್ ನೀರನ್ನು ದಿನಕ್ಕೆ ಕುಡಿಯಬೇಕೆನ್ನುವ ಕಾರಣಕ್ಕಾಗಿ ಸೇವಿಸುವುದು ಸರಿಯಲ್ಲದೆಯೂ ಇರಬಹುದು. ನೀರು ಕುಡಿಯುವುದರ ಬಗ್ಗೆ ಆಯುರ್ವೇದ ಏನೆನ್ನುತ್ತದೆ ಎಂಬುದನ್ನುತಿಳಿದುಕೊಳ್ಳಲು ಹ್ಯಾಪಿಯೆಸ್ಟ್ ಹೆಲ್ತ್ ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದೆ.

ನಿಮ್ಮ ದೇಹವೇ ನಿರ್ಧರಿಸಲಿ

ಆಯುರ್ವೇದದಲ್ಲಿ ಒಬ್ಬರು ದಿನಕ್ಕೆ ಎಷ್ಟು ನೀರು ಕುಡಿಯುತ್ತಾರೆ ಎಂದು ಲೆಕ್ಕವಿಟ್ಟುಕೊಳ್ಳಲು ಹೇಳುವುದಿಲ್ಲ ಎನ್ನುತ್ತಾರೆ ಕರ್ನಾಟಕದ ಮೂಡಬಿದ್ರಿಯಲ್ಲಿರುವ ಆಳ್ವಾಸ್ ಆಯುವೇದ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಡಾ. ಘನಶ್ಯಾಮ್ ಬಿ ಶರ್ಮಾ. ಅವರ ಪ್ರಕಾರ ಎಷ್ಟು ನೀರು ಅಗತ್ಯವಿದೆ ಎಂದು ನಿರ್ಧರಿಸಲು ತಮ್ಮ ದೇಹಕ್ಕೆ ನಾವು ಬಿಡಬೇಕು.

“ಬಾಯರಿಕೆಯ ಮೂಲಕ ನಿಮ್ಮ ದೇಹವು ನಿಮಗೆ ಸಂಜ್ಞೆ ನೀಡುತ್ತದೆ. ನಿಮ್ಮ ದೇಹದ ಅವಶ್ಯಕತೆಗಳನ್ನು ಅರಿತುಕೊಂಡು, ಅದರಂತೆಯೇ ನಾವು ಮಾಡಬೇಕು,” ಎಂದು ಡಾ. ಶರ್ಮಾ ವಿವರಿಸುತ್ತಾರೆ.

ಅಗತ್ಯತೆಗೆ ಅನುಗುಣವಾದ ವಿಧಾನ

ಎಲ್ಲರಿಗೂ ನಿರ್ಧಿಷ್ಟ ಪ್ರಮಾಣದ ನೀರಿನ ಅಗತ್ಯವಿರುವುದಿಲ್ಲ. ಈ ಅಗತ್ಯವು ವಯಸ್ಸು, ಋತುಮಾನಗಳು, ಜೀವನಶೈಲಿ (ಜಡತ್ವದ ಅಥವಾ ಸಕ್ರಿಯ) ಮತ್ತು ವೈದ್ಯಕೀಯ ಸಮಸ್ಯೆಗಳು (ಇದ್ದಲ್ಲಿ) ಅನುಸರಿಸಿ ನಿರ್ಧಾರವಾಗುತ್ತದೆ. ವೇಗದ ಚಯಾಪಚಯ ಇರುವ ವ್ಯಕ್ತಿಗೆ (ಪಿತ್ತ ಶರೀರ ವರ್ಗ) ಹೆಚ್ಚು ನೀರು ಬೇಕಾಗಬಹುದು, ಆದರೆ ನಿಧಾನಗತಿಯ ಅಥವಾ ಆರಾಮದ ಚಯಾಪಚಯವುಳ್ಳ (ಕಫ ಶರೀರ ವರ್ಗ) ವ್ಯಕ್ತಿಗೆ ಕಡಿಮೆ ನೀರು ಕುಡಿಯಬೇಕಾಗಬಹುದು. ಅದಲ್ಲದೆ ಬೇಸಿಗೆ ಕಾಲದಲ್ಲಿ ಅಧಿಕ ನೀರು ಕುಡಿಯಬೇಕಾಗಬಹುದು ಮತ್ತೆ ಚಳಿಗಾಲದಲ್ಲಿ ಅಷ್ಟು ನೀರಿನ ಅಗತ್ಯವಿರುವುದಿಲ್ಲ.

ಆಹಾರದೊಂದಿಗೆ ನೀರು ಕುಡಿಯಬಹುದೇ?

ಊಟದ ವೇಳೆ ನೀರು ಕುಡಿಯುವದರ ಬಗ್ಗೆ ವಿವಿಧ ಅಭಿಪ್ರಾಯಗಳಿವೆಯಾದರೂ, ಗುಜರಾತಿನ ಆಯುರ್ವೇದ ವೈದ್ಯ ಡಾ. ಹೇಮಂತ್ ಶರ್ಮಾ ಅವರ ಪ್ರಕಾರ ಊಟದ ಸ್ವಲ್ಪ ನೀರನ್ನು ಸೇವಿಸುತ್ತಾ ಇರುವುದರಿಂದ ಆಹಾರವು ಬೇಗನೆ ವಿಭಜನೆಯಾಗಿ, ಜೀರ್ಣಕ್ರಿಯೆಗೆ ನೆರವಾಗುತ್ತದೆ.
“ಆಹಾರ ತೆಗೆದುಕೊಳ್ಳುವ ಮೊದಲು ನೀರು ಕುಡಿಯುವುದರಿಂದ ಬೊಜ್ಜು ಬೆಳೆಯಲು ಸಹಕಾರಿಯಾಗುತ್ತದೆ. ಆಯುರ್ವೇದದ ಪ್ರಕಾರ ಆಹಾರ ಸೇವಿಸಿದ ನಂತರ, ಜೀರ್ಣಕ್ರಿಯೆಯ ಮೊದಲ ಹಂತ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ, ನೀರು ಕುಡಿಯುವುದು ಪೌಷ್ಟಿಕಾಂಶಗಳು ಅಸಂಘಟಿತ ವಿಭಜನೆಗೆ ಅನುವು ಮಾಡಬಹುದಾಗಿದ್ದು,ಅದು ಬೊಜ್ಜು ಅಧಿಕವಾಗಲು ಕಾರಣವಾಗುತ್ತದೆ. ಊಟದ ಮೊದಲು ನೀರು ಕುಡಿಯುವುದು ಸೂಕ್ತವಲ್ಲ. ಏಕೆಂದರೆ, ಅದರಿಂದಾಗಿ ಹಸಿವು ಭಾದಿತವಾಗುತ್ತದೆ. ಈ ಅಭ್ಯಾಸವು ದುರ್ಬಲತೆಗೂ ಎಡೆಮಾಡುತ್ತದೆ.” ಎನ್ನುತ್ತಾರೆ ಡಾ. ಶರ್ಮಾ.

ಕೊರಿಯಾದ ಜಿಯೆಂಜು ವಿಶ್ವವಿದ್ಯಾಲಯದ ಸಂಶೋಧಕರು ಊಟದ ಮೊದಲು ನೀರು ಸೇವಿಸುವುದರ ಪರಿಣಾಮಗಳ ಕುರಿತು ಅಧ್ಯಯನ ಮಾಡಿದ್ದರು. ಊಟದ ಮೊದಲು ನೀರು ಕುಡಿಯುವುದು ಊಟದ ಶಕ್ತಿಯನ್ನು ಕಡಿಮೆಮಾಡುತ್ತದೆ ಎಂದು ಅವರು ಕಂಡುಹಿಡಿದಿದ್ದರು. ಅವರ ಪ್ರಕಾರ ಊಟದ ಮೊದುಲು ನೀರು ಕುಡಿಯುವುದು ದೇಹದ ತೂಕ ಇಳಿಸೋಕೆ ಉತ್ತಮ ತಂತ್ರವಾಗಬಹುದು ಎಂದು ಅವರು ಸೂಚಿಸಿದ್ದಾರೆ.

ಊಟದ ಕಾಲಂಶ ನೀರು/ದೃವರೂಪದಲ್ಲಿರುವುದು ಒಳ್ಳೆಯದು ಎಂದು ಆಯುರ್ವೇದ ಶಿಫಾರಸು ಮಡುತ್ತದೆ. ಮತ್ತು ಅರ್ಧ ಭಾಗ ಘನ/ಅರೆಪಾಲು-ಘನ ಇರಬೇಕು ಮತ್ತು ಇನ್ನುಳಿದ ಕಾಲು ಭಾಗವು ವಾಯುವಿನ ಮುಕ್ತ ಚಲನೆಗೆ ಖಾಲಿ ಬಿಡಬೇಕು.

ಬೆಚ್ಚಗಿನ ನೀರು ಅಥವಾ ತಂಪಾದ ನೀರು

ತಂಪಾದ/ಐಸ್‌ನಿಂದ ತಣ್ಣಗಾದ ನೀರನ್ನು ಕುಡಿಯುವುದನ್ನು ಆಯುರ್ವೇದ ಉತ್ತೇಜಿಸುವುದಿಲ್ಲ ಎಂದು ಡಾ. ಶರ್ಮಾ ಅವರು ಸ್ಪಷ್ಟವಾಗಿ ಹೇಳುತ್ತಾರೆ. ಏಕೆಂದರೆ ಅದರಿಂದ ಜೀರ್ಣಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಸಾಧ್ಯ. ಆದರೆ, ಅತಿಯಾಗಿ ಬಾಯಾರಿಕೆ ಆಗಿದ್ದವರಿಗೆ, ಸುಸ್ತಾದವರಿಗೆ, ವಾಂತಿ ಮಾಡುವವರಿಗೆ, ಮದ್ಯಪಾನದಿಂದ ಅಮಲು ಹೊಂದಿದವರಿಗೆ, ಸುಡುವಿಕೆಯ ಸಂವೇದನೆಯುಳ್ಳವರಿಗೆ ಮತ್ತು ಬೇಸಿಗೆ ಕಾಲದಲ್ಲಿ ತಂಪಾದ ನೀರು ಕುಡಿಯುವುದು ವಿಹಿತವಾಗಿದೆ.

ಅಜೀರ್ಣತೆ, ಮಲಬದ್ಧತೆ, ಕಫ (ಜಲ ಮತ್ತು ನೆಲ ಅಂಶಗಳಲ್ಲಿ ಅಸಮತೋಲನ) ಮುಂತಾದ ಸ್ವಾಸ್ಥ್ಯ ಪರಿಸ್ಥಿತಿಗಳು ಇದ್ದವರು ಮತ್ತು ಚಳಿಗಾಲದ ಸಮಯದಲ್ಲಿ ಉಗುರುಬೆಚ್ಚಗೆ ನೀರು ಕುಡಿಯುವುದು ಒಳ್ಳೆಯದು ಎನ್ನಲಾಗುತ್ತಿದೆ. ಆಲ್ಲದೆ, ಅದು ಜೀರ್ಣಕ್ರಿಯೆಗೂ ಹಗುರವೆಂದು ಪರಿಗಣಿಸಲಾಗುತ್ತಿದೆ.

ಸಾಕಷ್ಟು ನೀರು ಕುಡಿಯುವುದರ ಪ್ರಯೋಜನಗಳು

ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂನ್ಶನ್ (ಸಿಡಿಸಿ) ಅರ್ಥಾತ್ ಕಾಯಿಲೆ ನಿಯಂತ್ರಣ ಹಾಗೂ ತಡೆಗಟ್ಟುವ ಕೇಂದ್ರದ ವ್ಯಾಖ್ಯಾನದ ಪ್ರಕಾರ ಆಹಾರದೊಂದಿಗೆ ಹಾಗೂ ನೇರವಾಗಿ ಮತ್ತು ಇತರ ಪಾನೀಯಗಳೊಂದಿಗೆ ಸೇವಿಸಿದ ಎಲ್ಲಾ ನೀರನ್ನು ಒಟ್ಟಿಗೆ ಪರಿಗಣಿಸಲಾಗುತ್ತೆ. ನಮ್ಮ ದೇಹದ ಜಲಸಂಚಯನದ ಮಟ್ಟವು ನಾವು ಕುಡಿಯುವ ನೀರು ಮಾತ್ರವಲ್ಲದೆ ನಮ್ಮ ಅಧಿಕ ನೀರಿನಾಂಶವುಳ್ಳ ಹಣ್ಣುಹಂಪಲು ಹಾಗೂ ತರಕಾರಿಯ ಸೇವನೆಯ ಮೇಲೂ ನಿರ್ಧಾರವಾಗುತ್ತದೆ. ದೇಹದಲ್ಲಿ ಜಲಸಂಚಯನ ಮಟ್ಟವನ್ನು ಕಾಪಾಡಿಕೊಳ್ಳಲು ನೀರು ಕುಡಿಯುವುದು ಸುಲಭವಾದ ಉಪಾಯವಾಗಿದ್ದು, ನೀರಿನಲ್ಲಿ ಶೂನ್ಯ ಕ್ಯಾಲೋರಿಗಳಿರುವುದರಿಂದ ಇನ್ನೂ ಓಳ್ಳೆಯದು.

ಜಲಸಂಚಯನ ಮಟ್ಟವು ದೈಹಿಕ ಸಾಮರ್ಥ್ಯ ವರ್ಧಿಸುತ್ತದೆ. ನೀರಿನ ಸೇವನೆ ಜ್ಞಾಪನಾ ಶಕ್ತಿ ಮತ್ತು ಅರಿವಿನ ಮೇಲೂ ಪ್ರಭಾವ ಬೀರುತ್ತದೆ. ಅದೇ ಸಮಯದಲ್ಲಿ, ನಿರ್ಜಲೀಕರಣದಿಂದ ಒಬ್ಬ ವ್ಯಕ್ತಿಯ ಮನ:ಸ್ಥಿತಿ ಹಾಗೂ ಅರಿವಿನ ವರ್ತನೆಯಲ್ಲಿ ತೊಂದರೆಯಾಗಬಹುದು.

ಮೂತ್ರಪಿಂಡಗಳು ರಕ್ತ ಸೋಸಿಕೊಂಡು ಶುದ್ಧ ಮಾಡುತ್ತವೆಯಾದ್ದರಿಂದ ರಕ್ತದಲ್ಲಿರುವ ಕಶ್ಮಲಗಳು ಸೋಸಿ ಮೂತ್ರದ ರೂಪದಲ್ಲಿ ವಿಸರ್ಜನೆಯಾಗಲು ನೀರಿನ ಅಗತ್ಯವಿದೆ ಮಾತ್ರವಲ್ಲದೆ ಸಾಕಷ್ಟು ನೀರು ಕುಡಿಯುವುದು ದೇಹಲ್ಲಿರುವ ಕಶ್ಮಲಗಳು ಮತ್ತು ವಿಷಮಯ ವಸ್ತುಗಳು ವಿಸರ್ಜನೆಯಾಗಲು ನೆರವಾಗುತ್ತದೆ.

ರಕ್ತದ ಪ್ರಮಾಣ, ರಕ್ತದ ಒತ್ತಡ ಹಾಗೂ ಹೃದಯ ಬಡಿತಗಳು ನೀರಿನ ಸೇವನೆ ಮತ್ತು ಹೊರ ಹರಿವಿಗೆ ಹತ್ತಿರದ ಸಂಬಂಧ ಹೊಂದಿವೆ.

ಫ್ರಾನ್ಸ್‌ನ ಸಂಶೋಧಕರು ಮಾಡಿದ ಅಧ್ಯಯನವೊಂದರಲ್ಲಿ ಕಡಿಮೆ ನೀರು ಕುಡಿದು ರೂಡಿಯಾದವರ ನೀರಿನ ಸೇವನೆಯ ಪ್ರಮಾಣ ಹೆಚ್ಚಿಸಿದುದರ ಪರಿಣಾಮವಾಗಿ ಅವರ ಮನ:ಸ್ಥಿತಿಯಲ್ಲಿ ಗಣನೀಯ ಸುಧಾರಣೆ ಹಾಗೂ ಕಡಿಮೆ ಆಯಾಸ ಮತ್ತು ಗೊಂದಲ ಮಾತ್ರವಲ್ಲದೆ ಉತ್ತಮ ನಿದ್ದೆಯಾಗುವುದು ತಿಳಿದುಬಂದಿದೆ. ಯಾವಾಗಲೂ ಹೆಚ್ಚು ನೀರು ಕುಡಿದು ರೂಢಿಯಾದವರ ಪ್ರಮಾಣ ಕಡಿಮೆ ಮಾಡಿದಾಗ, ಅವರ ಮನ:ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮವಾಗಿದ್ದು ತಿಳಿದುಬಂದಿದೆ. ಅಂಥಹವರಲ್ಲಿ ಶಾಂತತೆ ಕಡಿಮೆಯಾಗಿದ್ದು ಅವರಲ್ಲಿ ಸಕಾರಾತ್ಮಕ ಭಾವನೆಗಳು ಸಹಾ ಕಡಿಮೆಯಾಗಿದ್ದವು. ಈ ಅಧ್ಯಯನದಲ್ಲಿ ದಿನಕ್ಕೆ 2.5 ಲೀಟರ್ ನೀರು ಕುಡಿಯುವುದು ಬೇಸ್‌ಲೈನ್ (ಮೂಲಾಧಾರ) ಅಧಿಕ ಮತ್ತು 1 ಲೀಟರ್ ಕಡಿಮೆ ಎಂದು ಪರಿಗಣಿಸಲಾಗಿದೆ.

ನೀರು ಕುಡಿಯಲು ಆಯುರ್ವೇದದ ಸಲಹೆಗಳು

ನಿಮ್ಮ ದಿನವನ್ನು ನೀರು ಕುಡಿಯುವುದರೊಂದಿಗೆ ಆರಂಭಿಸಿ: ಬೆಳಗ್ಗೆ ಎದ್ದ ಕೂಡಲೇ ದೈನಂದಿನ ನಿತ್ಯಕರ್ಮಗಳನ್ನು ಪೂರೈಸಿದ ಬಳಿಕ ಸೂರ್ಯೋದಯ ಆಗುವ ಮೊದಲೇ ನೀರು ಕುಡಿಯಬೇಕು. ಖಾಲಿ ಹೊಟ್ಟೆಯಲ್ಲಿ ಸುಮಾರು 640 ಮಿ.ಲೀ. ಅಷ್ಟಾದರೂ ನೀರು ಕುಡಿದರೆ, ದೇಹದಲ್ಲಿನ ತ್ಯಾಜ್ಯಗಳನ್ನು ವಿಸರ್ಜನೆ ಮಾಡಲು ಸುಲಭ.

ನಿಮಗೆ ಬಾಯಾರಿಕೆ ಆದಾಗಲೆಲ್ಲಾ ನೀರು ಕುಡಿಯಿರಿ: ಬಾಯಾರಿಕೆಯು ನಿಗ್ರಹಿಸಲಾಗದ ಪ್ರಚೋದನೆಗಳಲ್ಲೊಂದು ಎಂದು ಆಯುರ್ವೇದ ಪರಿಗಣಿಸುತ್ತದೆ. ನಿಮಗೆ ಬಾಯಾರಿಕೆಯಾದಲ್ಲಿ ತಕ್ಷಣ ನೀರು ಕುಡಿಯಿರಿ.

ನೀರನ್ನು ಒಮ್ಮೆಲೇ ಕುಡಿಯಬೇಡಿ: ಒಂದೇ ಬಾರಿ ಇಡೀ ಬಾಟಲಿನಷ್ಟು ನೀರನ್ನು ಗುಟುಕು ಹಾಕಿಕೊಂಡರೆ ಅದರಿಂದ ಅಜೀರ್ಣತೆ ಹಾಗೂ ಹಸಿವಿನ ನಷ್ಟವಾಗುವ ಅಪಾಯವಿದೆ.

ತಂಪಾದ/ಐಸ್‌ನಿಂದ ತಣ್ನಗಾದ ನೀರಿನ ಸೇವನೆ ತಪ್ಪಿಸಿ: ಆಯುರ್ವೇದವು ಐಸ್‌ನಿಂದ ತಣ್ನಗಾದ ನೀರಿನ ಸೇವನೆಗೆ ಬಲವಾಗಿ ವಿರೋಧವಾಗಿದೆ, ಏಕೆಂದರೆ ಅದು ಜೀರ್ಣಕ್ರಿಯೆಗೆ ಅಡ್ಡಿ ಮಾಡುತ್ತದೆ.

ಋತುಮಾನಗಳಿಗೆ ಅನುಸಾರವಾಗಿ ನೀರು ಕುಡಿಯಿರಿ: ನೀರಿನ ಸೇವನೆಯಾನ್ನು ಋತುಮಾನಗಳಿಗೆ ಅನುಸಾರವಾಗಿ ನಿರ್ಧರಿಸಬೇಕು, ಏಕೆಂದರೆ ಸೆಕೆಗಾಲದಲ್ಲಿ ದೇಹಕ್ಕೆ ಅಧಿಕ ನೀರು ಬೇಕಾಗುತ್ತದೆ, ಆದರೆ ಚಳಿಗಾಲದಲ್ಲಿ ಕಡಿಮೆ ಬೇಕಾಗಬಹುದು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ