ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಮಕ್ಕಳಿಗೆ ನೀಡಬಾರದ ಆಹಾರಗಳು
0

ಮಕ್ಕಳಿಗೆ ನೀಡಬಾರದ ಆಹಾರಗಳು

ನಿಮ್ಮ ಮಗುವಿಗೆ ಒಂದು ವರ್ಷವಾಗುವವರೆಗೆ ಈ ಆಹಾರಗಳನ್ನು ನೀಡಬೇಡಿ

ಮಕ್ಕಳಿಗೆ ನೀಡಬಾರದ ಆಹಾರಗಳು

ಗರ್ಭಧಾರಣೆ ಮತ್ತು ಜೀವನದ ಮೊದಲ ಎರಡು ವರ್ಷಗಳನ್ನು ಸಾಮಾನ್ಯವಾಗಿ ಮೊದಲ ಸಾವಿರ ದಿನಗಳು ಎಂದು ಕರೆಯಲಾಗುತ್ತದೆ. ಮಗುವಿನ ಬೆಳವಣಿಗೆಯಲ್ಲಿ ಇದು ಅತ್ಯಂತ ನಿರ್ಣಾಯಕ ಸಮಯ ಎಂದು ಪರಿಗಣಿಸಲಾಗುತ್ತದೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಮಗುವಿನ ಕರುಳಿನ ಸೂಕ್ಷ್ಮಜೀವಿಗಳು ಈ ಸಮಯದಲ್ಲಿ ಗಮನಾರ್ಹ ಬದಲಾವಣೆಗಳಿಗೆ ಒಳಗಾಗುತ್ತವೆ.

ಈ ಮೊದಲ ವರ್ಷಗಳಲ್ಲಿ, ಶಿಶುಗಳ ಮೆದುಳು ವೇಗವಾಗಿ ಬೆಳೆಯುತ್ತದೆ. UNICEF ವರದಿಯ ಪ್ರಕಾರ ಮಕ್ಕಳ ನರಕೋಶಗಳು ವೇಗವಾಗಿ ಸಂಪರ್ಕಗಳನ್ನು ಸೃಷ್ಟಿಸುತ್ತವೆ. ಮತ್ತು ಆ ಪ್ರಕ್ರಿಯೆಯಲ್ಲಿ ಸಹಾಯ ಮಾಡಲು ಪೋಷಕರು ಸಹಾಯ ಮಾಡಬೇಕು.

ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ನಿರಂತರ ಗೊಂದಲ
ತಾಯಂದಿರು ಯಾವಾಗಲೂ ಮಕ್ಕಳಿಗೆ ಅತ್ಯುತ್ತಮವಾದ ಆರೈಕೆಯನ್ನು ನೀಡಲು ಪ್ರಯತ್ನಿಸುತ್ತಾರೆ. ಆದರೆ ವಿಷಯದ ಬಗ್ಗೆ ಲಭ್ಯವಿರುವ ಮಾಹಿತಿಯ ಅಗತ್ಯಕ್ಕಿಂತಾ ಹಚ್ಚೇ ಇದ್ದು, ಸಂಬಂಧಿಕರು ಮತ್ತು ಸ್ನೇಹಿತರಿಂದ ಸಹ ಸಲಹೆಗಳು ಬರುತ್ತಲೇ ಇರುತ್ತವೆ. ಯಾವುದು ಉತ್ತಮ ಎಂದು ನಿರ್ಧರಿಸಲು ಗೊಂದಲವಾಗುವುದು ಸಹಜ. ಅದಕ್ಕಾಗಿಯೇ ನಿಮ್ಮ ಮಗುವಿಗೆ ಯಾವುದು ಉತ್ತಮ ಎಂದು ತಿಳಿಯಲು ತಜ್ಞರನ್ನು ಸಂಪರ್ಕಿಸುವುದು ಉತ್ತಮ ಆಯ್ಕೆ.

ಹ್ಯಾಪಿಯೆಸ್ಟ್ ಹೆಲ್ತ್ ಹೈದರಾಬಾದಿನ ಲಿಟಲ್ ವಂಡರ್ಸ್ ಕ್ಲಿನಿಕ್‌ನ ಮಕ್ಕಳ ತಜ್ಞೆ ಡಾ.ಮೇಘನಾ ರಾಮರಾಜು ಮತ್ತು ಮಧ್ಯಪ್ರದೇಶದ ಭೋಪಾಲ್‌ನ ಮಕ್ಕಳ ಪೌಷ್ಟಿಕತಜ್ಞೆ ಡಾ.ನಿಶಾ ಓಜಾ ಅವರೊಂದಿಗೆ ಶಿಶುಗಳಿಗೆ ಯಾವುದು ಉತ್ತಮ ಎಂದು ತಿಳಿದುಕೊಳ್ಳುವಾಗ ಅವರು ಮಕ್ಕಳಿಗೆ ನೀಡಬಾರದ ಆಹಾರಗಳ ಪಟ್ಟಿಯನ್ನು ನೀಡಿದ್ದಾರೆ

ಸಕ್ಕರೆ

ಮಗುವಿಗೆ ಎರಡು ವರ್ಷ ತುಂಬುವವರೆಗೆ ಮತ್ತು ಅವರು ಘನ ಆಹಾರವನ್ನು ಸೇವಿಸುವವರೆಗೆ ಅವರ ಊಟಕ್ಕೆ ಸಕ್ಕರೆಯನ್ನು ಸೇರಿಸಬಾರದೆಂದು ಶಿಫಾರಸು ಮಾಡಲಾಗಿದೆ. ಸಕ್ಕರೆಯು ಆಕರ್ಷಕವಾದ ಆಯ್ಕೆಯಾಗಿದ್ದರೂ, ಇದು ಆಹಾರಕ್ಕೆ ಕ್ಯಾಲೊರಿಗಳನ್ನು ಸೇರಿಸುತ್ತದೆ ಮತ್ತು ತೂಕ ಹೆಚ್ಚಾಗುವ ಅಪಾಯವನ್ನು ಹೆಚ್ಚಿಸುತ್ತದೆ. WHO ಪ್ರಕಾರ, ಸಕ್ಕರೆಯ ಸೇವನೆಯು ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಋಣಾತ್ಮಕವಾಗಿ ಪರಿಣಾಮ ಬೀರಬಹುದು ಮತ್ತು ಅಗತ್ಯವಾದ ಪೋಷಕಾಂಶಗಳ ಕೊರತೆಯಿರುವಾಗ ಗಮನಾರ್ಹ ಶಕ್ತಿಯನ್ನು ನೀಡುತ್ತದೆ. ಇದು ಸ್ಥೂಲಕಾಯತೆಯ ಸಮಸ್ಯೆ ಜೊತೆಗೆ ದಂತಕ್ಷಯದಂತಹ ಅಪಾಯವನ್ನು ಹೆಚ್ಚಿಸುತ್ತದೆ, ಇದು ವಿಶ್ವಾದ್ಯಂತ ಪ್ರಮುಖ ಸಾಂಕ್ರಾಮಿಕವಲ್ಲದ ಆರೋಗ್ಯ ಸಮಸ್ಯೆಯಾಗಿದೆ.

ಇದಲ್ಲದೆ, ಸಂಸ್ಕರಿಸಿದ ಸಕ್ಕರೆಯ ಸೇವನೆಯಿಂದ ಬಾಲ್ಯದ ಸ್ಥೂಲಕಾಯತೆ, ಹೈಪರ್ಆಕ್ಟಿವಿಟಿ ಮತ್ತು ಹೃದಯದ ಸಮಸ್ಯೆಗಳ ಆರಂಭಿಕ ಆಕ್ರಮಣವಾಗುವ ಸಾಧ್ಯತೆಯಿದೆ ಎಂದು ಡಾ ಓಜಾ ತಿಳಿಸುತ್ತಾರೆ. ಬದಲಿಗೆ ಖರ್ಜೂರದ ಪುಡಿ, ಹಣ್ಣಿನ ಪ್ಯೂರೀಸ್ (ಬಾಳೆಹಣ್ಣು, ಸೇಬು, ಸ್ಟ್ರಾಬೆರಿಗಳು), ಅಂಜೂರದ ಪ್ಯೂರಿ, ಒಣದ್ರಾಕ್ಷಿ ಪ್ಯೂರಿ ಅಥವಾ ಮಾಗಿದ ಏಪ್ರಿಕಾಟ್ ಪ್ಯೂರೀಯನ್ನು ಬಳಸಲು ಅವರು ಸಲಹೆ ನೀಡುತ್ತಾರೆ.

ಉಪ್ಪು

ಡಾ ಓಜಾ ಮತ್ತು ಡಾ ರಾಮರಾಜು ಅವರು ಆರು ಮತ್ತು ಹನ್ನೆರಡು ತಿಂಗಳ ವಯಸ್ಸಿನ ಮಗುವಿಗೆ ಉಪ್ಪನ್ನು ಬಳಸದಂತೆ ಸಲಹೆ ನೀಡುತ್ತಾರೆ. ವಯಸ್ಕರು ಕೂಡ ಅತಿಯಾದ ಉಪ್ಪು ಸೇವನೆಯನ್ನು ತಪ್ಪಿಸಬೇಕು ಏಕೆಂದರೆ ಇದು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ಅದರಲ್ಲೂ ಮಕ್ಕಳಲ್ಲಿ ಇದು ಬೆಳವಣಿಗೆಯಾಗುತ್ತಿರುವ ಮೂತ್ರಪಿಂಡಗಳಿಗೆ ಹೆಚ್ಚು ಹಾನಿಕಾರಕವಾಗಿದೆ. ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ನಂತರದ ಜೀವನದಲ್ಲಿ ಉಪ್ಪು ಆಹಾರಗಳನ್ನು ಮಗು ಇಷ್ಟಪಡುತ್ತದೆ.

ಜೇನುತುಪ್ಪ

ಜೇನುತುಪ್ಪವು ಸಕ್ಕರೆಯ ನೈಸರ್ಗಿಕ ಮೂಲವಾಗಿದ್ದರೂ ಸಹ, ನವಜಾತ ಶಿಶುಗಳಿಗೆ ಗಮನಾರ್ಹ ಮತ್ತು ಸಂಭಾವ್ಯ ಮಾರಣಾಂತಿಕ ಅಪಾಯವನ್ನು ಉಂಟುಮಾಡಬಹುದು. ಈ ಅಪಾಯವು ಕ್ಲೋಸ್ಟ್ರಿಡಿಯಮ್ ಬೊಟುಲಿನಮ್‌ನಿಂದ ಉಂಟಾಗುತ್ತದೆ, ಇದು ಬೊಟುಲಿಸಮ್ ಅನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ, ಈ ಸ್ಥಿತಿಯು ಕರುಳಿನ ನಿಶ್ಚಲತೆ ಮತ್ತು ಕ್ರಮೇಣ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ ಎಂದು ಡಾ ರಾಮರಾಜು ವಿವರಿಸುತ್ತಾರೆ. ಹಲವಾರು ಕೇಸ್ ಸ್ಟಡೀಸ್‌ಗಳಿಂದ ಮಕ್ಕಳಿಗೆ ಜೇನುತುಪ್ಪವನ್ನು ನೀಡಿದ್ದರಿಂದ ಅಪಾಯವಾಗಿದೆ ಎಂದು ತಿಳಿದುಬಂದಿದೆ.

ಹಸುವಿನ ಹಾಲು

ಶಿಶುವಿನ ಜೀರ್ಣಾಂಗವು ಸೂಕ್ಷ್ಮವಾಗಿದ್ದು, ಎದೆಹಾಲನ್ನು ಮಾತ್ರ ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ವಾಸ್ತವವಾಗಿ, NCBI ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಮಾನವ ಹಾಲಿನ ಸಂಯೋಜನೆಯು ಇತರ ಸಸ್ತನಿಗಳಿಗಿಂತ ಭಿನ್ನವಾಗಿರುತ್ತದೆ ಎಂದು ಸೂಚಿಸುತ್ತದೆ. ನವಜಾತ ಶಿಶುವಿಗೆ ಅಗತ್ಯವಿರುವ ಲಿಪಿಡ್‌ಗಳು, ಖನಿಜಗಳು, ವಿಟಮಿನ್‌ಗಳು ಮತ್ತು ಕೊಬ್ಬಿನಾಮ್ಲಗಳಂತಹ ನಿರ್ಣಾಯಕ ಅಂಶಗಳನ್ನು ಎದೆಹಾಲು ಒಳಗೊಂಡಿದೆ. ಆದ್ದರಿಂದ, ವಿಶ್ವ ಆರೋಗ್ಯ ಸಂಸ್ಥೆಯು ಉನ್ನತ ಆಹಾರಗಳ ಪರಿಚಯದ ನಂತರವೂ ಎದೆಹಾಲನ್ನು ಪೋಷಣೆಯ ಪ್ರಾಥಮಿಕ ಮೂಲವಾಗಿ ಶಿಫಾರಸು ಮಾಡುತ್ತದೆ.

ಆರರಿಂದ 11 ತಿಂಗಳ ವಯಸ್ಸಿನ ಮಗುವಿಗೆ ಹಸುವಿನ ಹಾಲನ್ನು ನೀಡುವುದರಿಂದ ರಕ್ತಹೀನತೆಯ ಅಪಾಯವನ್ನು ಹೆಚ್ಚಿಸಬಹುದು ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಹಸುವಿನ ಹಾಲು ಅಥವಾ ಹಸುವಿನ ಹಾಲಿನ-ಆಧಾರಿತ ಫಾರ್ಮುಲಾ ಮಿಲ್ಕ್, ವಿಶೇಷವಾಗಿ ಅವಧಿಪೂರ್ವ ನವಜಾತ ಶಿಶುಗಳಲ್ಲಿ, ಹಸುವಿನ ಹಾಲಿನ ಪ್ರೋಟೀನ್ ಅಲರ್ಜಿಯನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಹೆಚ್ಚುವರಿ ಆಧಾರಗಳಿವೆ. ಈ ದೃಷ್ಟಿಯಿಂದ, ಘನ ಆಹಾರವನ್ನು ಪರಿಚಯಿಸುವಾಗ ಮಗುವಿಗೆ ಪ್ರಮುಖ ಪೋಷಕಾಂಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸ್ತನ್ಯಪಾನವನ್ನು ಕಾಪಾಡಿಕೊಳ್ಳಲು ಡಾ ರಾಮರಾಜು ಶಿಫಾರಸು ಮಾಡುತ್ತಾರೆ.

ನಟ್ಸ್ ಮತ್ತು ಸೀಡ್ಸ್

ಆಹಾರವು ಗಂಟಲಿನಲ್ಲಿ ಸಿಲುಕಿಕೊಂಡಾಗ ಉಸಿರು ಕಟ್ಟುತ್ತದೆ. ಶ್ವಾಸನಾಳವನ್ನು ತಡೆಯುತ್ತದೆ ಮತ್ತು ಆಮ್ಲಜನಕದ ಪೂರೈಕೆಯನ್ನು ಥಟ್ಟನೆ ಕಡಿತಗೊಳಿಸುತ್ತದೆ.ನಟ್ಸ್ ಮತ್ತು ಸೀಡ್ಸ್ ಅದಕ್ಕೆ ಒಂದು ಉದಾಹರಣೆಯಾಗಿದೆ. ಡಾ ರಾಮರಾಜು ಅವರ ಪ್ರಕಾರ, ನಿಮ್ಮ ಮಗುವಿಗೆ ಹಾಲುಣಿಸುವಾಗ ಬೆರಳುಗಳ ಸಹಾಯದಿಂದ ಪುಡಿ ಮಾಡಲಾಗದ ಗಟ್ಟಿಯಾದ ಯಾವುದೇ ಆಹಾರದ ಕಣವನ್ನು ಉಸಿರುಗಟ್ಟಿಸುವ ಅಪಾಯವೆಂದು ಪರಿಗಣಿಸಬೇಕು.

ಮೊಟ್ಟೆಗಳು

ನವಜಾತ ಶಿಶುವಿಗೆ ಮೊಟ್ಟೆಯಿಂದ ಅಲರ್ಜಿಯಾಗಬಹುದು. ವಿಶೇಷವಾಗಿ ಅವರ ಪೋಷಕರಿಗೆ ಮೊಟ್ಟೆ ಅಲರ್ಜಿಯಿದ್ದರೆ ಈ ಸಾಧ್ಯತೆ ಹೆಚ್ಚು. ಡಾ ರಾಮರಾಜು ಅವರು ಮಗುವಿಗೆ ಒಂದು ವರ್ಷವಾದ ನಂತರ ಮೊಟ್ಟೆಯ ಬಿಳಿಭಾಗಕ್ಕೆ ಮೊದಲು ಮೊಟ್ಟೆಯ ಹಳದಿ ಲೋಳೆಯನ್ನು ಪರಿಚಯಿಸಬಹುದು. ಮಗು ಅದನ್ನು ಜೀರ್ಣಿಸಿಕೊಳ್ಳುತ್ತದೆಯೇ ಎನ್ನುವುದನ್ನು ಗಮನಿಸಬೇಕು ಎಂದು ತಿಳಿಸುತ್ತಾರೆ. ಇದೇ ರೀತಿಯ ಎಚ್ಚರಿಕೆ ಸಮುದ್ರಾಹಾರಕ್ಕೂ ಅನ್ವಯಿಸುತ್ತದೆ. ಯಾವುದೇ ಆಹಾರ ನೀಡುವಾಗ ಸರಿಯಾಗಿ ಗಮನಿಸಿ, ಅದರ ಪ್ರತಿಕ್ರಿಯೆ ನೋಡಿದಮೇಲಷ್ಟೇ ಆಹಾರಗಳನ್ನು ಕ್ರಮೇಣ ಪರಿಚಯಿಸಬಹುದು.

ಪ್ಯಾಕೇಜ್ ಮಾಡಿದ ಆಹಾರಗಳು

ಪ್ಯಾಕ್ ಮಾಡಲಾದ ಉತ್ಪನ್ನಗಳಿಗೆ ಅವುಗಳ ಶೆಲ್ಫ್ ಲೈಫ್ ಹೆಚ್ಚಿಸಲು, ಪರಿಮಳವನ್ನು ಸುಧಾರಿಸಲು ಮತ್ತು ತಾಜಾತನವನ್ನು ಉಳಿಸಿಕೊಳ್ಳಲು ಆಹಾರ ಅಡಿಟಿವ್ಸ್ ಸೇರಿಸಲಾಗುತ್ತದೆ. ಈ ರಾಸಾಯನಿಕಗಳ ಸುರಕ್ಷತೆಯು ಪ್ರಶ್ನಾರ್ಹವಾಗಿರುವುದರಿಂದ ಮಗುವಿಗೆ ಪ್ಯಾಕೇಜ್ ಮಾಡಿದ ಆಹಾರ ನೀಡುವುದನ್ನು ತಪ್ಪಿಸುವುದು ಉತ್ತಮ. ಇದು ಮಗುವಿನ ದೈಹಿಕ ಬೆಳವಣಿಗೆಗೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಸುವಾಸನೆಯುಕ್ತ ಹಾಲು ಮತ್ತು ಮೊಸರು (ಸಕ್ಕರೆ ಸೇರಿಸುವುದನ್ನು ತಪ್ಪಿಸಲು), ಪ್ಯಾಕ್ ಮಾಡಿದ ಚಿಪ್ಸ್ ಮತ್ತು ಫ್ರೆಂಚ್ ಫ್ರೈಗಳು (ಹೆಚ್ಚಿನ ಉಪ್ಪು ಮತ್ತು ಟ್ರಾನ್ಸ್-ಕೊಬ್ಬಿನ ಅಂಶಕ್ಕಾಗಿ), ಮತ್ತು ತಿನ್ನಲು ರೆಡಿ ಟು ಈಟ್ (ಮಗುವಿನ ದೈನಂದಿನ ಸೇವನೆಯನ್ನು ಮೀರಿದ ಅತಿಯಾದ ಉಪ್ಪಿನಂಶಕ್ಕಾಗಿ) ಆಹಾರಗಳನ್ನು ಮಗುವಿಗೆ ನೀಡದಂತೆ ಡಾ ಓಜಾ ಅವರು ಹೇಳುತ್ತಾರೆ. ಪ್ರವಾಸ ಮತ್ತು ತುರ್ತು ಸಮಯದಲ್ಲೂ ಮನೆಯಲ್ಲಿಯೇ ತಯಾರಿಸಿದ ಆಹಾರವೇ ಆದ್ಯತೆಯಾಗಿರಲಿ ಎಂದು ಅವರು ಶಿಫಾರಸು ಮಾಡುತ್ತಾರೆ.

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ