ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

Lung Health: ಸಂಗೀತದಿಂದ ಶ್ವಾಸಕೋಶದ ಆರೋಗ್ಯ ವೃದ್ಧಿಸುತ್ತದೆ
5

Lung Health: ಸಂಗೀತದಿಂದ ಶ್ವಾಸಕೋಶದ ಆರೋಗ್ಯ ವೃದ್ಧಿಸುತ್ತದೆ

ಹಾಡುವುದರಿಂದ ನಿಮ್ಮ ಮೂಡ್ ಸುಧಾರಿಸುವುದು ಮಾತ್ರವಲ್ಲ, ಜತೆಗೆ ಶ್ವಾಸಕೋಶಕ್ಕೆ ಉತ್ತಮ ವ್ಯಾಯಾಮ ನೀಡುತ್ತದೆ. ಇದು ಶ್ವಾಸಕೋಶದ ಶುದ್ಧೀಕರಿಸುವುದರೊಂದಿಗೆ, ಉಸಿರಾಟದ ನಿಯಂತ್ರಣವನ್ನು ಹೆಚ್ಚಿಸುವ ಮೂಲಕ ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ.

ಇಂಪಾದ ಸಂಗೀತ: ಗಾಯನವು ವೃದ್ಧಿಸುತ್ತದೆ ಶ್ವಾಸಕೋಶದ ಆರೋಗ್ಯ

ಹಾಡುಗಾರಿಕೆ ನಮ್ಮನ್ನು ಭಾವನಾಲೋಕಕ್ಕೆ ಕರೆದೊಯ್ಯುತ್ತದೆ, ಅಷ್ಟೇ ಅಲ್ಲ, ಮನಸ್ಸನ್ನೂ ಶಾಂತವಾಗಿರಿಸುತ್ತದೆ. ಆದರೆ ಹಾಡುವುದರಿಂದ ನಿಮ್ಮ ಶ್ವಾಸಕೋಶಕ್ಕೆ ಅತ್ಯುತ್ತಮ ವ್ಯಾಯಾಮ ದೊರೆಯುತ್ತದೆ ಎಂಬ ವಿಷಯ ನಿಮಗೆ ತಿಳಿದಿದೆಯೇ? ಹೌದು. ಸಂಗೀತವು ನಿಮ್ಮ ಉತ್ಸಾಹವನ್ನು ನೂರ್ಮಡಿಗೊಳಿಸುವುದಲ್ಲದೇ ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನೂ ಸುಧಾರಿಸುತ್ತದೆ, ಮಾತ್ರವಲ್ಲದೇ ಅಸ್ತಮಾ ಹಾಗೂ ಕ್ರೋನಿಕ್ ಅಬ್ಸ್‌ಟ್ರಕ್ಟಿವ್ ಪಲ್ಮನರಿ ಡಿಸೀಸ್ ಲಕ್ಷಣಗಳನ್ನೂ(COPD) ಸುಧಾರಿಸಬಲ್ಲುದು. ಹಾಗಾಗಿ, ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸಲು ನೀವು ಆಹ್ಲಾದಕರ ಹಾಗೂ ಆರೋಗ್ಯಕರ ಮಾರ್ಗವನ್ನು ಹುಡುಕುತ್ತಿದ್ದರೆ, ಇದಕ್ಕೆ ಹಾಡುಗಾರಿಕೆ ಉತ್ತಮ ಪರಿಹಾರ.

ಬೆಂಗಳೂರಿನ ಅರ್ಪಿತ್ ವಾಗ್ಮರೆ (49) ಎಂಬ ಉದ್ಯಮಿ ಕಳೆದ ಮೂವತ್ತು ವರ್ಷಗಳಿಂದ ಹಾಡುತ್ತಿದ್ದರು. ಇವರು ವಾದ್ಯತಂಡದ ಸಕ್ರಿಯ ಸದಸ್ಯರೂ ಹೌದು. “ಸಾಮಾನ್ಯರಿಗೆ ಹೋಲಿಸಿದರೆ ನನ್ನ ಉಸಿರನ್ನು ದೀರ್ಘಕಾಲದವರೆಗೆ ಹಿಡಿದಿಡಲು ನನಗೆ ಸಾಧ್ಯವಾಗುತ್ತದೆ” ಎಂದು ಅವರು ಹೇಳುತ್ತಾರೆ.

ಸಂಗೀತದ ಕೆಲವೊಂದು ಸ್ವರಗಳನ್ನು ಹಾಡುವಾಗ ನಿಮ್ಮ ಉಸಿರನ್ನು ದೀರ್ಘವಾಗಿ ಹಿಡಿದಿಡಬೇಕಾಗುತ್ತದೆ. “ಹೊಸ ಗಾಯಕರಿಗೆ ತರಬೇತಿ ನೀಡುವಾಗ, ಹವ್ಯಾಸಿ ಹಾಡುಗಾರರಿಗೆ ಹೋಲಿಸಿದರೆ, ಅನುಭವಸ್ಥ ಗಾಯಕರು ದೀರ್ಘಕಾಲದವರೆಗೆ ಉಸಿರು ಹಿಡಿದಿಟ್ಟುಕೊಳ್ಳುವುದನ್ನು ನಾನು ಗಮನಿಸಿದ್ದೇನೆ” ಎನ್ನುತ್ತಾರೆ ವಾಗ್ಮರೆ.

ಹಾಡುಗಾರಿಕೆ ಮತ್ತು ಶ್ವಾಸಕೋಶದ ಆರೋಗ್ಯ

ಹಾಡುಗಾರಿಕೆಯು ಧ್ವನಿತಂತುಗಳ ಮೂಲಕ ಗಾಳಿಯನ್ನು ಹೊರಹಾಕುವ ಕಾರ್ಯವಿಧಾನವಾಗಿದ್ದು ಇದು ದೀರ್ಘವಾಗಿ ಉಸಿರು ಹೊರಹಾಕುವುದು ಹಾಗೂ ಆಳವಾಗಿ ಉಸಿರೆಳೆದುಕೊಳ್ಳುವುದನ್ನು ಒಳಗೊಂಡಿದೆ. ನಾವು ಮಾತನಾಡುವಾಗ ಉಸಿರು ತೆಗೆದುಕೊಳ್ಳಲು ಮತ್ತು ಹೊರಬಿಡಲು ಬೇಕಾಗುವ ಶಕ್ತಿಯ ಪ್ರಮಾಣ ಅತ್ಯಂತ ಕಡಿಮೆ, ಆದರೆ ಹಾಡುಗಾರಿಕೆಯು ಸುದೀರ್ಘ ಮತ್ತು ಆಳವಾದ ಉಸಿರಾಟವನ್ನು ಒಳಗೊಂಡಿರುವುದರಿಂದ ಗಾಳಿಯ ಅನಿಲ ವಿನಿಮಯ ಸುಗಮವಾಗಿ ಆಗುತ್ತದೆ ಎಂದು  ದೆಹಲಿಯ ಅಪೋಲೋ ಹಾಸ್ಪಿಟಲ್ಸ್‌ನ ಪಲ್ಮನಾಲಜಿಸ್ಟ್ ಆಗಿರುವ ಡಾ ವಿನಯ್ ಕಾಂಟ್ರೂ ಅವರು ಹೇಳುತ್ತಾರೆ.

ಹೈದರಾಬಾದ್‌ನ ವೃತ್ತಿಪರ ಗಾಯಕರಾದ 38ರ ಹರೆಯದ ಚಿನ್ಮಯಿ ಶ್ರೀಪಾದ ಅವರು, ಅನೇಕ ದಕ್ಷಿಣ ಭಾರತ ಮತ್ತು ಹಿಂದಿ ಸಿನಿಮಾ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಹ್ಯಾಪಿಯೆಸ್ಟ್ ಹೆಲ್ತ್ ಜೊತೆಗೆ ಮಾತನಾಡುತ್ತಾ ಇವರು, “ನಾನು ನನ್ನ ಮೂರನೇ ವಯಸ್ಸಿನಿಂದಲೇ ಶಾಸ್ತ್ರೀಯ ಸಂಗೀತದ ತರಬೇತಿ ಪಡೆಯುತ್ತಿದ್ದೆ. ಇದರಿಂದ ನನ್ನ ಉಸಿರಾಟದ ನಿಯಂತ್ರಣವು ಅತ್ಯಂತ ಉತ್ತಮವಾಗಿದೆ ಎಂಬುದು ನನಗೆ ತಿಳಿದಿದೆ” ಎಂದು ಹೇಳುತ್ತಾರೆ.

“ಗಾಯನವು ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸುವುದರಲ್ಲಿ ಎರಡು ಮಾತಿಲ್ಲ, ಗಾಯನವೆಂದರೆ ಉಸಿರಾಟದ ನಿರ್ವಹಣೆ ಹಾಗೂ ಸ್ಪಷ್ಟವಾಗಿ, ಜೋರಾಗಿ ಹೇಳುವುದನ್ನು ಒಳಗೊಂಡಿರುತ್ತದೆ, ಆದ್ದರಿಂದ ಇದು ನಿಮ್ಮ ಉಸಿರಿನ ನಿಯಂತ್ರಣವನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ” ಎಂದು ಅವರು ಹೇಳುತ್ತಾರೆ.

ಡಾ ಕಾಂಟ್ರೂ ಅವರು ಹೇಳುವಂತೆ, ಹಾಡುಗಾರಿಕೆಯು ಆರೋಗ್ಯಕರ ಶ್ವಾಸಕೋಶವನ್ನು ಉತ್ತೇಜಿಸುತ್ತದೆ. “ನೀವು ಶ್ವಾಸಕೋಶವನ್ನು ಹೆಚ್ಚು ಹೆಚ್ಚು ಬಳಸಿದಂತೆ ಅದರ ಸಾಮರ್ಥ್ಯವು ಹೆಚ್ಚುತ್ತದೆ. ಹಾಡುವಾಗ ನಿಮ್ಮ ಶ್ವಾಸಕೋಶದ ಸ್ನಾಯುಗಳಿಗೆ ವ್ಯಾಯಾಮ ಹೆಚ್ಚಿದಂತೆ ನಿಮ್ಮ ಶ್ವಾಸಕೋಶದ ಬಲವೂ ಹೆಚ್ಚಾಗುತ್ತದೆ” ಎನ್ನುತ್ತಾರೆ ಡಾ ಕಾಂಟ್ರೂ.

“ಆರೋಗ್ಯವಂತ ಶ್ವಾಸಕೋಶ ಹೊಂದಿರುವವರಲ್ಲಿ ನಿರ್ದಿಷ್ಟ ಪ್ರಮಾಣದ ಮ್ಯೂಕಸ್ (ಕಫ) ಶ್ವಾಸಕೋಶದಲ್ಲಿನ ಧೂಳು ಅಥವಾ ಕೊಳೆ ಮತ್ತು ವಿಷಕಾರಿ ವಸ್ತುಗಳನ್ನು ಹೊರಹಾಕುವಲ್ಲಿ ನೆರವಾಗುತ್ತದೆ. ಇದು ನಿಮ್ಮ ಶ್ವಾಸಕೋಶ ಶುದ್ಧೀಕರಣದ ನೈಸರ್ಗಿಕ ವಿಧಾನವಾಗಿದೆ. ಗಾಯನದ ವೇಳೆಯಲ್ಲಿ ಮಾಡುವಂತೆ ನೀವು ಆಳವಾಗಿ ಉಸಿರಾಟ ನಡೆಸುತ್ತಿದ್ದರೆ, ಈ ಕಾರ್ಯವಿಧಾನವು ವೃದ್ಧಿಯಾಗಿ ನಿಮ್ಮ ಶ್ವಾಸಕೋಶವನ್ನು ಶುದ್ಧೀಕರಿಸುವಲ್ಲಿ ನೆರವಾಗುತ್ತದೆ” ಎಂದು ಡಾ ಕಾಂಟ್ರೂ ಅವರು ಹೇಳುತ್ತಾರೆ.

ದೀರ್ಘಕಾಲದ ಶ್ವಾಸಕೋಶದ ಅನಾರೋಗ್ಯ ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ

“ಆರೋಗ್ಯಕರ ಶ್ವಾಸಕೋಶವನ್ನು ಹೊಂದಿರುವವರಲ್ಲಿ ಉಸಿರಾಟವು ಸಹಜವಾಗಿದ್ದು ಗಾಳಿಯ ಹರಿವು ಸರಾಗವಾಗಿ ಆಗುತ್ತಿರುತ್ತದೆ, ಇದರಿಂದಾಗಿ ಅವರು ಸ್ವಾಭಾವಿಕ ಸ್ಥಿತಿಸ್ಥಾಪಕ ಮರುಕಳಿಕೆಯ ಕಾರ್ಯವಿಧಾನವನ್ನು ಹೊಂದಿರುತ್ತಾರೆ. ಆದರೆ ದೀರ್ಘಕಾಲದ ಶ್ವಾಸಕೋಶದ ಅನಾರೋಗ್ಯವನ್ನು ಹೊಂದಿರುವವರಲ್ಲಿ ಶ್ವಾಸಕೋಶದಲ್ಲಿನ ಅಡಚಣೆ ಅಥವಾ ನಿರ್ಬಂಧದಿಂದಾಗಿ ಗಾಳಿಯ ಹರಿವು ಕುಂಠಿತಗೊಂಡಿರುತ್ತದೆ. ಈ ಕುಂಠಿತಗೊಂಡಂತಹ ಗಾಳಿಯ ಹರಿವು ಮರುಕಳಿಕೆಯ ಕಾರ್ಯವಿಧಾನವನ್ನು ಹಾನಿಗೊಳಿಸುತ್ತದೆ, ಇದರಿಂದಾಗಿ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ” ಎಂದು ಸಂಗೀತ ಕಲೆಯಲ್ಲಿ ಡಾಕ್ಟರೇಟ್ ಪಡೆದಿರುವ ಒಂಟಾರಿಯೋದ ಸಂಗೀತಗಾರರಾದ ರಾಚೆಲ್ ಬಿ ಗೋಲ್ಡನ್‌ಬರ್ಗ್ ಅವರು ಹ್ಯಾಪಿಯೆಸ್ಟ್ ಹೆಲ್ತ್‌ನೊಂದಿಗೆ ನಡೆಸಿದ ಫೋನ್ ಸಂಭಾಷಣೆಯಲ್ಲಿ ವಿವರಿಸಿದರು.

“ಅಸ್ತಮಾ, COPD ಮತ್ತು ಸಿಸ್ಟಿಕ್ ಫೈಬ್ರೋಸಿಸ್‌ನಂತಹ (ಶ್ವಾಸಕೋಶ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಮ್ಯೂಕಸ್ ಶೇಖರಣೆಯಾಗುವ ಅನುವಂಶಿಕ ಅಸ್ವಸ್ಥತೆ) ಶ್ವಾಸಕೋಶದ ತೊಡಕುಗಳು ಇರುವಾಗ ಶ್ವಾಸಕೋಶದಲ್ಲಿನ ಅಡಚಣೆಯಿಂದಾಗಿ ಉಸಿರನ್ನು ಹೊರಗೆ ಬಿಡುವಾಗ ಸಮಸ್ಯೆ ಉಂಟಾಗುತ್ತದೆ. ಶ್ವಾಸನಾಳದಲ್ಲಿ ಶೇಖರಣೆಗೊಂಡ ಮ್ಯೂಕಸ್ ಇದಕ್ಕೆ ಮೂಲ ಕಾರಣ. ಪಲ್ಮನರಿ ಫೈಬ್ರೋಸಿಸ್‌ನಂತಹ ನಿರ್ಬಂಧಕ ಪರಿಸ್ಥಿತಿಯಲ್ಲಿ, ಉಸಿರನ್ನು ಒಳಗೆಳೆದುಕೊಳ್ಳುವಾಗ ಉಂಟಾಗುವ ಶ್ವಾಸಕೋಶದ ಹಿಗ್ಗುವಿಕೆಗೆ ತೊಂದರೆಯಾಗುತ್ತದೆ” ಎಂದು ಗೋಲ್ಡನ್‌ಬರ್ಗ್ ವಿವರಿಸುತ್ತಾರೆ.

ದೀರ್ಘಕಾಲಿಕ ಉಸಿರಾಟ ಸಮಸ್ಯೆ ಉಳ್ಳವರಿಗೆ ನೆರವಾಗುತ್ತದೆ ಹಾಡುಗಾರಿಕೆ

ಪಾಪ್ ಸಂಗೀತಗಾರ್ತಿ ಸಿಯಾ ಅವರು ಹಾಡಿರುವ ‘ಸಿಂಗ್ ಫಾರ್ ಮೈ ಲೈಫ್’ ಕೇವಲ ಹಾಡು ಇರಬಹುದು, ಆದರೆ ಒಂಟಾರಿಯೋದ ನಿವೃತ್ತ ಸಹಾಯಕರಾದ 79ರ ಹರೆಯದ ಎಲಾಯಿನ್ ಬೋವರ್ ಅವರು ತಮ್ಮ ಜೀವಕ್ಕಾಗಿ ಹಾಡುತ್ತಾರೆ. “ನಾಲ್ಕು ವರ್ಷಗಳ ಹಿಂದೆ ನನಗೆ COPD (Chronic Obstructive Pulmonary Disease) ರೋಗನಿರ್ಣಯವಾಯಿತು. ಸಿಂಗಿಂಗ್ ಫಾರ್ ಲಂಗ್ ಹೆಲ್ತ್ ತರಗತಿಗಳನ್ನು ನಡೆಸುವ ಬಗ್ಗೆ ತಿಳಿದ ಬಳಿಕ ನಾನೂ ಹಾಡಲು ಪ್ರಾರಂಭಿಸಿದೆ” ಎಂದು ಅವರು ಹೇಳುತ್ತಾರೆ.

“ಗಾಯನವು ನನಗೆ ಆಳವಾದ ಉಸಿರಾಟದ ವ್ಯಾಯಾಮ. ಇದು ನನಗೆ ಉಸಿರಾಟವನ್ನು ಸುಲಭವಾಗಿಸುತ್ತದೆ” ಎಂದು ಉಸಿರಾಡಲು ಮೂಗಿನ ಕೊಳವೆಯನ್ನು ಬಳಸುವ ಬೋವರ್ ಅವರು ಹೇಳುತ್ತಾರೆ. ಗೋಲ್ಡನ್‌ಬರ್ಗ್ ಅವರ ‘ಸಿಂಗಿಂಗ್ ಫಾರ್ ಲಂಗ್ ಹೆಲ್ತ್’ ತರಗತಿಯಲ್ಲಿ ಪಾಲ್ಗೊಳ್ಳುವವರಲ್ಲಿ ಇವರೂ ಒಬ್ಬರು.

“COPD ಯಂತಹ ಶ್ವಾಸಕೋಶದ ಸಮಸ್ಯೆಗಳನ್ನು ಹೊಂದಿರುವವರ ಶ್ವಾಸನಾಳದಲ್ಲಿ ಅಧಿಕ ಮ್ಯೂಕಸ್ ಶೇಖರಣೆಯಾಗಿರುತ್ತದೆ. ಹಾಡುವಾಗ ಉಂಟಾಗುವ  ಒತ್ತಡದ ಆಂದೋಲನಗಳು ಶ್ವಾಸನಾಳಗಳಿಂದ ಮ್ಯೂಕಸ್ ಅನ್ನು ಹೊರಹಾಕಿ ಸುಲಭವಾಗಿ ಉಸಿರಾಡುವಂತೆ ಮಾಡುತ್ತದೆ” ಎಂದು ಗೋಲ್ಡನ್‌ಬರ್ಗ್ ಅವರು ವಿವರಿಸುತ್ತಾರೆ.

ಹಾಡುಗಾರಿಕೆ ಒಂದು ವ್ಯಾಯಾಮ

ವ್ಯಾಯಾಮದಲ್ಲಿ ಆಗುವಂತೆ ಹಾಡುಗಾರಿಕೆಯಲ್ಲೂ ನಿಮ್ಮ ಶ್ವಾಸಕೋಶದ ಸಾಮರ್ಥ್ಯದ ಬಳಕೆಯಾಗುತ್ತದೆ; ಎರಡರಲ್ಲಿನ ವ್ಯತ್ಯಾಸವೆಂದರೆ, ವ್ಯಾಯಾಮಕ್ಕೆ ಹೋಲಿಸಿದರೆ ಸಂಗೀತದಲ್ಲಿ ಉಸಿರನ್ನು ನಿಯಂತ್ರಿತವಾಗಿ ಹೊರಹಾಕಲಾಗುತ್ತದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಮಾಧ್ಯಮಗಳು ಗಾಯನದ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿದಾಗ, ದೀರ್ಘಕಾಲಿಕ ಕೋವಿಡ್‌ನಿಂದ (ಆರಂಭಿಕ SARS-CoV-2 ಸೋಂಕಿನ ನಂತರ ಲಕ್ಷಣಗಳ ಮುಂದುವರಿಕೆ ಅಥವಾ ಬೆಳವಣಿಗೆ) ಬಳಲುತ್ತಿರುವ ಕೆಲವರಲ್ಲಿ ಪೋಸ್ಟ್-ಎಕ್ಸರ್ಷನಲ್ ಮ್ಯಾಲೈಸ್, ಅಂದರೆ ಅತಿಯಾದ ಆಯಾಸವನ್ನು ಹೊಂದಿರುವ ವರದಿಯಾಗಿತ್ತು. ಆದ್ದರಿಂದ, ದೀರ್ಘಕಾಲಿಕ ಶ್ವಾಸಕೋಶದ ಸಮಸ್ಯೆಗಳನ್ನು ಹೊಂದಿರುವವರಿಗೆ ಶ್ವಾಸಕೋಶದ ಉತ್ತಮ ಆರೋಗ್ಯಕ್ಕಾಗಿ ತಜ್ಞರ ಮೇಲ್ವಿಚಾರಣೆಯಲ್ಲಿ ಹಾಡಲು ಸೂಚಿಸಲಾಗುತ್ತದೆ ಎಂದು ಗೋಲ್ಡನ್‌ಬರ್ಗ್ ಅವರು ಹೇಳುತ್ತಾರೆ.

ಸಾರಾಂಶ

ಗಾಯನವು ನಿಮ್ಮ ಮೂಡ್ ಸರಿಪಡಿಸುವುದಷ್ಟೇ ಅಲ್ಲ, ನಿಮ್ಮ ಶ್ವಾಸಕೋಶದ ಆರೋಗ್ಯವನ್ನೂ ವೃದ್ಧಿಸುತ್ತದೆ. ಇದರಲ್ಲಿನ ಆಳವಾದ ಉಸಿರಾಟದ ಕಾರ್ಯವಿಧಾನವು ದೀರ್ಘವಾದ ಉಸಿರೆಳೆದುಕೊಳ್ಳುವಿಕೆ ಮತ್ತು ಉಸಿರಿನ ಹೊರಹಾಕುವಿಕೆಯನ್ನು ಒಳಗೊಂಡಿದ್ದು ಇದು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಿ ಶ್ವಾಸಕೋಶವನ್ನು ಸ್ವಚ್ಛಗೊಳಿಸುತ್ತದೆ.

ಹಾಡುಗಾರಿಕೆಯು COPD ಮತ್ತು ಅಸ್ತಮಾದಂತಹ ದೀರ್ಘಕಾಲಿಕ ಶ್ವಾಸಕೋಶದ ಸಮಸ್ಯೆ ಇರುವವರ ಶ್ವಾಸನಾಳದಲ್ಲಿ ಶೇಖರಣೆಯಾದ ಮ್ಯೂಕಸ್ ಅನ್ನು ಹೊರಹಾಕಿ ಅದನ್ನು ಶುದ್ಧೀಕರಿಸಲು ನೆರವಾಗುತ್ತದೆ.

ಹಾಡುಗಾರಿಕೆಯು ವ್ಯಾಯಾಮದ ಒಂದು ರೂಪವಾಗಿದ್ದು, ದೀರ್ಘಕಾಲಿಕ ಕೋವಿಡ್‌ನಂತಹ ಶ್ವಾಸಕೋಶದ ಸಮಸ್ಯೆ ಉಳ್ಳವರು ಇದನ್ನು ಎಚ್ಚರಿಕೆಯಿಂದ ಮಾಡಬೇಕು.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ