0

0

0

0

0

0

0

0

0

ಈ ಲೇಖನದಲ್ಲಿ

Food For Lungs:ಶ್ವಾಸಕೋಶದ ಆರೋಗ್ಯ ಕಾಪಾಡುವ ಆಹಾರಗಳು  
83

Food For Lungs:ಶ್ವಾಸಕೋಶದ ಆರೋಗ್ಯ ಕಾಪಾಡುವ ಆಹಾರಗಳು  

ನೀವು ಸೇವಿಸುವ ಆಹಾರವು ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಬಹುದು. ಆರೋಗ್ಯಕರ ಆಹಾರವು ಶ್ವಾಸಕೋಶದ ಸಮಸ್ಯೆಗಳನ್ನು ಮತ್ತು ಉರಿಯೂತದ ಅಪಾಯಗಳನ್ನು ತಗ್ಗಿಸಬಹುದು.  

ನಿಮ್ಮ ಶ್ವಾಸಕೋಶದ ಆರೋಗ್ಯ ಕಾಪಾಡುವ ಆಹಾರಗಳು  

ಶ್ವಾಸಕೋಶದ ಆರೋಗ್ಯ ಕಾಪಾಡುವ ಆಹಾರಗಳು  ಎಂದಾಗ ಅಚ್ಚರಿ ಪಡಬೇಡಿ. ಆರೋಗ್ಯಕರ ಆಹಾರವು ನೀವು ಉತ್ತಮವಾಗಿ ಉಸಿರಾಡಲು ನೆರವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ನಿಮ್ಮ ತಟ್ಟೆಯಲ್ಲಿರುವ ಆಹಾರವು ಶ್ವಾಸಕೋಶದ ಸೋಂಕಿನ ವಿರುದ್ಧ ನಿಮ್ಮ ಶ್ವಾಸಕೋಶದ ಅಂಗಾಂಶದಿಂದ ಹಿಡಿದು ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ತನಕ ನಿಮ್ಮ ಶ್ವಾಸಕೋಶದ ಆರೋಗ್ಯದ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. 

 ಸಮತೋಲಿತ ಆಹಾರವು ಶ್ವಾಸಕೋಶದ ಕಾರ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಲು ಮತ್ತು ಶ್ವಾಸಕೋಶ ಸಮಸ್ಯೆಗಳ ಅಪಾಯವನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದಾಗಿ ನವದೆಹಲಿಯ ಇಂಡಿಯನ್ ಸ್ಪೈನಲ್ ಇಂಜುರೀಸ್ ಸೆಂಟರ್‌ನ (ISIC) ಗ್ಯಾಸ್ಟ್ರೋ ಎಂಟಿರಾಲಜಿಯ ಹಿರಿಯ ಸಲಹೆಗಾರರಾದ ಡಾ ಅಂಕುರ್ ಜೈನ್ ಅವರು ಹೇಳುತ್ತಾರೆ. 

 ನಿಮ್ಮ ಶ್ವಾಸಕೋಶಕ್ಕೂ ನಿಮ್ಮ ಆಹಾರಕ್ಕೂ ಇರುವ ಸಂಬಂಧವೇನು? 

ಅಸ್ತಮಾ, ಕ್ರೋನಿಕ್ ಅಬ್ಸ್‌ಟ್ರಕ್ಟಿವ್ ಪಲ್ಮನರಿ ಡಿಸೀಸ್ (COPD) ಮತ್ತು ಶ್ವಾಸಕೋಶದ ಕ್ಯಾನ್ಸರ್ ಮುಂತಾದ ದೀರ್ಘಕಾಲಿಕ ಶ್ವಾಸಕೋಶ ಸಮಸ್ಯೆಗಳ ಹಿನ್ನೆಲೆಯಲ್ಲಿ ವ್ಯಕ್ತಿಯ ಆಹಾರಕ್ರಮವು ಪ್ರಮುಖವಾಗುತ್ತದೆ. ನಿಮ್ಮ ಆಹಾರಕ್ರಮವು ಶ್ವಾಸಕೋಶದ ಉತ್ತಮ ಆರೋಗ್ಯಕ್ಕೆ ಕಾರಣವಾಗುವ ಮೂರನೇ ಒಂದು ಅಂಶಗಳು ಕಾರಣವಾಗುತ್ತದೆ ಎಂದು ತೆಲಂಗಾಣದ ಹೈದರಾಬಾದ್‌ನ ಯಶೋದಾ ಹಾಸ್ಪಿಟಲ್ಸ್‌ನ ಹಿರಿಯ ಸಲಹೆಗಾರ ಇಂಟರ್ವೆನ್ಷನಲ್ ಪಲ್ಮನಾಲಾಜಿಸ್ಟ್ ಆಗಿರುವ ಡಾ ಗೋಪಿ ಕೃಷ್ಣ ಯಡ್ಲಪತಿಯವರು ಹೇಳುತ್ತಾರೆ. 

 ಸಾಕಷ್ಟು ವಿಟಮಿನ್‌ಗಳು (ಎ,ಸಿ, ಇ), ಖನಿಜಗಳು (ಮ್ಯಾಗ್ನೇಷಿಯಂ ಮತ್ತು ಸೆಲೆನಿಯಂ) ಮುಂತಾದ ಅಗತ್ಯ ಪೋಷಕಾಂಶಗಳು ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳ ಸೇವನೆಯು ಶ್ವಾಸಕೋಶದ ಅಂಗಾಂಶಗಳ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ ಹಾಗೂ ಮಾಲಿನ್ಯಕಾರಕಗಳು ಮತ್ತು ವಿಷಗಳಿಂದ ಉಂಟಾಗುವ ಹಾನಿಗಳಿಂದ ರಕ್ಷಣೆ ಒದಗಿಸುತ್ತದೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬಿನಂತಹ ಆಹಾರಗಳು ಉರಿಯೂತ ನಿರೋಧಕ ಗುಣವನ್ನು ಹೊಂದಿರುತ್ತದೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳುವುದರಿಂದ ಅನೇಕ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗುವ ದೀರ್ಘಕಾಲಿಕ ಉರಿಯೂತವನ್ನು ಕಡಿಮೆಗೊಳಿಸಬಹುದುಎಂದು ಡಾ ಜೈನ್ ಹೇಳುತ್ತಾರೆ. 

 ಕ್ಷಯರೋಗ, ಶ್ವಾಸಕೋಶದ ಬಾವು ಅಥವಾ ದೀರ್ಘಾವಧಿ ಶ್ವಾಸಕೋಶದ ಕಾಯಿಲೆಗಳಂತಹ ಶ್ವಾಸಕೋಶ ಸಂಬಂಧಿತ ರೋಗಗಳು ಮತ್ತು ಸೋಂಕುಗಳನ್ನು ಹೊಂದಿರುವವರಿಗೆ ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಅಧಿಕ ಪ್ರೊಟೀನ್ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ. ಪ್ರೊಟೀನ್ ಕೊರತೆಯಿಂದಾಗಿ ಈ ಸಮಸ್ಯೆಗಳು ಉಂಟಾಗಬಹುದು. ಸೋಯಾ ಬೀನ್, ಮೊಳಕೆ ಕಾಳು ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಪ್ರಯೋಜನವಾಗುತ್ತದೆ ಎಂದು ಬೆಂಗಳೂರಿನ ಸಾಕ್ರಾ ವರ್ಲ್ಡ್ ಹಾಸ್ಪಿಟಲ್‌ನ ಪಲ್ಮನಾಲಜಿ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಹಿರಿಯ ಸಮಾಲೋಚಕರಾದ ಡಾ ಸಚಿನ್‌ಕುಮಾರ್ ಅವರು ಹೇಳುತ್ತಾರೆ.  

 ಮೇಲಾಗಿ, ಅಡುಗೆ ಎಣ್ಣೆಯೂ ಶ್ವಾಸಕೋಶದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಭತ್ತದ ಹೊಟ್ಟು ಅಥವಾ ಆಲಿವ್ ಅಥವಾ ತಾಳೆ ಎಣ್ಣೆಯನ್ನು ನಾವು ಶಿಫಾರಸು ಮಾಡುತ್ತೇವೆ. ಈ ಅಡುಗೆ ಎಣ್ಣೆಗಳು ಪ್ರಬಲವಾದ ಮತ್ತು ಪ್ರಯೋಜನಕಾರಿಯಾದ ಆ್ಯಂಟಿಆಕ್ಸಿಡೆಂಟ್ಗುಣಗಳನ್ನು ಹೊಂದಿರುತ್ತವೆಎಂದು ಡಾ ಯಡ್ಲಪತಿ ಹೇಳುತ್ತಾರೆ. 

 ಶ್ವಾಸಕೋಶ-ಸ್ನೇಹಿ ಆಹಾರ: ಆಹಾರಕ್ರಮ

ಅಸ್ತಮಾ ಮತ್ತು COPDಯಂತಹ ಶ್ವಾಸಕೋಶದ ಕಾಯಿಲೆಗಳಿರುವವರು ಏನನ್ನು ಸೇವಿಸಬೇಕು ಮತ್ತು ಏನನ್ನು ಸೇವಿಸಬಾರದು? 

ಆಹಾರಕ್ರಮ ಮತ್ತು ಕ್ಷಯ 

ಕ್ಷಯರೋಗ ಮತ್ತು ಶಿಲೀಂಧ್ರ ಸೋಂಕಿನಂತಹ ಶ್ವಾಸಕೋಶದ ಅಸ್ವಸ್ಥತೆಗಳನ್ನು ಹೊಂದಿರುವವರಿಗೆ ಮೀನು, ಚಿಕನ್ ಮತ್ತು ಕಡಿಮೆ ಕೊಬ್ಬಿನ ಮಾಂಸಾಹಾರವನ್ನು ಒಳಗೊಂಡ ಪ್ರೊಟಿನ್ ಭರಿತ ಆಹಾರವನ್ನು ಸೂಚಿಸಲಾಗುತ್ತದೆ. ಅಲ್ಲದೇ, ಅಂಥವರು ಸಂಸ್ಕರಿಸಿದ ಮಾಂಸಾಹಾರವನ್ನು ಸೇವಿಸಬಾರದು, ಪ್ರೊಟಿನ್‌ಗಳು ಮತ್ತು ಒಮೆಗಾ-3 ಫ್ಯಾಟಿ ಆಸಿಡ್‌ಗಳನ್ನು ಅಧಿಕವಾಗಿ ಹೊಂದಿರುವ ಮೊಟ್ಟೆಯನ್ನು ಸೇವಿಸಲು ಅಂಥವರಿಗೆ ಸೂಚಿಸುತ್ತೇವೆ ಎನ್ನುತ್ತಾರೆ ಡಾ.ಯಡ್ಲಪತಿ. 

ಆಹಾರಕ್ರಮ – ಅಸ್ತಮಾ ಇದ್ದಾಗ ಹೀಗೆ ಮಾಡಿ

ಅಸ್ತಮಾ ಇರುವವರಿಗೆ  ಕೆಲವು ಆಹಾರಗಳು ಅತ್ಯಂತ ಪ್ರಶಸ್ತ ಎಂದು ಪರಿಗಣಿಸಲಾಗಿದೆ. ಅವರಿಗೆ ತಮ್ಮ ಆಹಾರದಲ್ಲಿ ಬೀಟ್‌ರೂಟ್‌ ಮತ್ತು ಸೇಬು ಹಣ್ಣುಗಳನ್ನು ಸೇರಿಸಲು ಹೇಳುತ್ತೇವೆ. ಸಾಧ್ಯವಿದ್ದಾಗ ಅವರು ತಮ್ಮ ಆಹಾರದಲ್ಲಿ ಮೊಟ್ಟೆ ಮತ್ತು ಮೀನನ್ನೂ ಸೇರಿಸಲು ಹೇಳುತ್ತೇವೆ. ಶ್ವಾಸಕೋಶದ ಕಾರ್ಯವನ್ನು ಸುಧಾರಿಸಲು ಅವರು ಒಣಹಣ್ಣುಗಳನ್ನೂ ಸೇವಿಸಬಹುದುಎಂದು ಡಾ ಯಡ್ಲಪತಿ ಹೇಳುತ್ತಾರೆ. 

 ಅಸ್ತಮಾ ಇರುವವರು  ಬಾಳೆಹಣ್ಣು, ಅನನಾಸು, ಸೀತಾಫಲ ಮತ್ತು ನಿಂಬೆಹಣ್ಣು ಮುಂತಾದ ಆಹಾರಗಳನ್ನು ಸೇವಿಸಬಾರದು. ಈ ಹಣ್ಣುಗಳು, ಅದರಲ್ಲೂ ವಿಶೇಷವಾಗಿ ಬಾಳೆಹಣ್ಣು, ಹಿಸ್ಟಿಡಿನ್‌ ಅನ್ನು ಒಳಗೊಂಡ ಕೆಲವು ಪ್ರೋಟೀನ್‌ಗಳನ್ನು ಹೊಂದಿದ್ದು ಹೆಚ್ಚು ಕಫವನ್ನು ಉತ್ಪಾದಿಸುತ್ತವೆ. ಈ ರೋಗಿಗಳು ಚಾಕ್ಲೇಟ್‌ಗಳು ಅದರಲ್ಲೂ ಕಂದು ಚಾಕ್ಲೇಟ್‌ಗಳನ್ನು ಸೇವಿಸದಿರಲು ಸೂಚಿಸುತ್ತೇವೆ ಎಂದು ಡಾ ಯಡ್ಲಪತಿ ವಿವರಿಸುತ್ತಾರೆ. 

 ಬಾದಾಮಿ, ಹಸಿ ಬೀಜಗಳು, ಸ್ವಿಸ್ ಚಾರ್ಡ್, ಸಾಸಿವೆ ಸೊಪ್ಪು, ಕಾಲೆ, ಬ್ರುಕೋಲಿ ಮತ್ತು ಹೇಸಲ್‌ನಟ್‌ಗಳಂತಹ ವಿಟಮಿನ್ ಇ ಭರಿತ ಆಹಾರಗಳನ್ನೂ ಅಮೆರಿಕನ್ ಲಂಗ್ ಫೌಂಡೇಶನ್ ಶಿಫಾರಸು ಮಾಡುತ್ತದೆ. ಇಂಥವುಗಳು ಟೋಕೋಫೆರೋಲ್ ಎಂಬ ಕೆಮ್ಮು ಅಥವಾ ಸೀನು ಮುಂತಾದ ಅಸ್ತಮಾ ಲಕ್ಷಣಗಳನ್ನು ಕಡಿಮೆ ಮಾಡುವ ಅಂಶಗಳನ್ನು ಹೊಂದಿದೆ. 

  ಆಹಾರಕ್ರಮ 

COPD ಇರುವವರು ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಪ್ರೊಟೀನ್‌ಭರಿತ ಆಹಾರಗಳನ್ನು ಆಯ್ಕೆ ಮಾಡಬೇಕು. ಮೊಟ್ಟೆ, ಮೀನು, ಕಡಿಮೆ ಕೊಬ್ಬಿನ ಮಾಸಾಂಹಾರಗಳು, ಟೊಮೆಟೋ, ಸಿಹಿಕುಂಬಳ ಮತ್ತು ಬೀಟ್‌ರೂಟ್‌ಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸಬೇಕು ಹಾಗೂ ಸಂಸ್ಕರಿಸಿದ ಮಾಂಸಾಹಾರವನ್ನು ಸೇವಿಸಬಾರದು. ಇಂಥವರು ಚಹಾ ಅಥವಾ ಕಾಫಿ, ಅದರಲ್ಲೂ ಗ್ರೀನ್ ಟೀ ಸೇವಿಸುವುದು ಉತ್ತಮ ಎಂದು ಯಡ್ಲಪತಿಯವರು ಹೇಳುತ್ತಾರೆ. 

 ಶ್ವಾಸಕೋಶದ ಕ್ಯಾನ್ಸರ್ ಹೊಂದಿರುವವರಿಗೆ ಆಹಾರಕ್ರಮ 

ಶ್ವಾಸಕೋಶದ ಕ್ಯಾನ್ಸರ್ ವಿಷಯದಲ್ಲಿ ಯಾವುದೇ ಆಹಾರ ವಿರೋಧಾಭಾಸಗಳಿಲ್ಲ. ಶ್ವಾಸಕೋಶದ ಕ್ಯಾನ್ಸರ್ ಹೊಂದಿರುವವರು ತಂಬಾಕು, ಮದ್ಯ, ಕರಿದ ಮತ್ತು ಅಧಿಕ ಉಪ್ಪಿನಂಶದ ಆಹಾರಗಳನ್ನು ಸೇವಿಸದಿರಲು ನಾವು ಹೇಳುತ್ತೇವೆ. ಇದೇವೇಳೆ, ಖರ್ಜೂರದಂತಹ ಒಣಹಣ್ಣುಗಳನ್ನು ಸೇವಿಸಲು ಹೇಳುತ್ತೇವೆ. ಇವುಗಳು ವಿಶೇಷವಾಗಿ ತಮ್ಮ ಉರಿಯೂತ ನಿರೋಧಕ ಅಂಶಗಳಿಂದಾಗಿ ರೋಗದ ವಿರುದ್ಧ ಹೋರಾಡುತ್ತವೆ ಎಂದು ಡಾ.ಯಡ್ಲಪತಿ ವಿವರಿಸುತ್ತಾರೆ. 

 ಇದಲ್ಲದೇ, JAMA ಆಂಕಾಲಜಿಯಲ್ಲಿ ಪ್ರಕಟಿಸಲಾದ 2019ರ ಅಧ್ಯಯನದಲ್ಲಿ ಅಧಿಕ ನಾರಿನಂಶದ ಆಹಾರ ಮತ್ತು ಯೋಗರ್ಟ್ ಸೇವನೆಯು ಶ್ವಾಸಕೋಶದ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂಬುದನ್ನು ಕಂಡುಹಿಡಿದಿದೆ. ಹೆಚ್ಚಿನ ಜನರು ಮೊಸರು ಅಥವಾ ಯೋಗರ್ಟ್ ಕಫವನ್ನು ಹೆಚ್ಚಿಸುತ್ತದೆ ಎಂದು ತಿಳಿದಿದ್ದಾರೆ. ಇದು ಸುಳ್ಳು. ನೀವು ಸೇವಿಸುವ ಮೊಸರು ಶೀತಲೀಕೃತವಾಗಿರಬಾರದು. ಇದು ಪೊಟ್ಯಾಸಿಯಂ ಮತ್ತು ಕ್ಯಾಲ್ಸಿಯಂನಂತಹ ಉತ್ತಮ ಖನಿಜಗಳನ್ನು ಹೊಂದಿದ್ದು ಶ್ವಾಸಕೋಶದ ಕಾಯಿಲೆಗಳಿಂದ ಬಳಲುವವರಿಗೆ ಪ್ರಯೋಜನಕಾರಿಯಾಗಿದೆ ಎಂದು ಡಾ.ಯಡ್ಲಪತಿ ಹೇಳುತ್ತಾರೆ 

 ಶ್ವಾಸಕೋಶದ ಆರೋಗ್ಯಕ್ಕಾಗಿ ಸೇವಿಸಬಾರದ ಆಹಾರಗಳು 

ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದು ಆಹಾರಗಳನ್ನು ಸೇವಿಸಬಾರದು ಅಥವಾ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಡಾ ಜೈನ್ ಅವರು ಈ ಆಹಾರಗಳ ಬಗ್ಗೆ ಹೀಗೆ ವಿವರಿಸುತ್ತಾರೆ: 

 ಸಂಸ್ಕರಿಸಿದ ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳು: ಇವುಗಳು ಅನಾರೋಗ್ಯಕರ ಟ್ರಾನ್ಸ್ ಫ್ಯಾಟ್‌ಗಳು ಮತ್ತು ಹೆಚ್ಚಿನ ಮಟ್ಟದ ಲವಣಗಳನ್ನು ಹೊಂದಿದ್ದು ಉರಿಯೂತವನ್ನು ಉಂಟುಮಾಡಬಹುದು. ಅಧಿಕ ಉಪ್ಪು ಸೇವನೆ ಫ್ಲೂಯಿಡ್ ರಿಟೆನ್ಷನ್ ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿ ವ್ಯಕ್ತಿಯ ಶ್ವಾಸಕೋಶದ ಕಾರ್ಯದ ಮೇಲೆ ಪರಿಣಾಮ ಬೀರಬಹುದು.  

 ಸಕ್ಕರೆಭರಿತ ಪಾನೀಯಗಳು: ಸೋಡಾ, ಕೆಲವು ಎನರ್ಜಿ ಡ್ರಿಂಕ್‌ಗಳು ಇತ್ಯಾದಿ ಉಸಿರಾಟ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಅಂಥವುಗಳನ್ನು ಸೇವಿಸಬಾರದು 

 ಕೊಬ್ಬುಭರಿತ ಹಾಲಿನ ಉತ್ಪನ್ನಗಳು: ಇಂತಹ ಆಹಾರಗಳು ಉಸಿರಾಟ ಸಮಸ್ಯೆಗಳನ್ನು ಹೆಚ್ಚಿಸಿ ಶ್ವಾಸಕೋಶದ ಕಾರ್ಯಗಳನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ ಜನರು ಕಡಿಮೆ ಕೊಬ್ಬಿನಂಶದ ಅಥವಾ ಕೊಬ್ಬು ರಹಿತ ಹಾಲಿನ ಉತ್ಪನ್ನಗಳನ್ನು ಸೇವಿಸಬೇಕು ಎಂದು ಜೈನ್ ಹೇಳುತ್ತಾರೆ. 

 ನಿಮಗೆ ಅಲರ್ಜಿ ಉಂಟುಮಾಡುವ ಆಹಾರಗಳು: ಅಲರ್ಜಿ ಉಂಟುಮಾಡುವ ಆಹಾರಗಳು ಉಸಿರಾಟದ ಸಮಸ್ಯೆಯನ್ನು ಹೆಚ್ಚಿಸಿ ಶ್ವಾಸಕೋಶದ ಸಮಸ್ಯೆಗಳನ್ನು ಉಲ್ಪಣಿಸಬಹುದು. ಆದ್ದರಿಂದ ನಿಮಗೆ ಅಲರ್ಜಿ ಉಂಟುಮಾಡುವ ಆಹಾರಗಳನ್ನು ಗುರುತಿಸಿ ಅಂಥವುಗಳನ್ನು ಸೇವಿಸದಿರುವುದು ಉತ್ತಮ. 

ವ್ಯಾಯಾಮವು ಶ್ವಾಸಕೋಶದ ಆರೋಗ್ಯವನ್ನು ಹೇಗೆ ಸುಧಾರಿಸುತ್ತದೆ?

"ನಿಯಮಿತ ವ್ಯಾಯಾಮ ಮಾಡುವುದರಿಂದ ಸ್ನಾಯುಗಳ ಉತ್ತಮ ಆಮ್ಲಜನಕೀಕರಣಕ್ಕೆ ಕಾರಣವಾಗುತ್ತದೆ, ಇದು ಸ್ನಾಯುವಿನ ಕಾರ್ಯವನ್ನು ಹೆಚ್ಚಿಸುತ್ತದೆ ಮತ್ತು ಅತ್ಯುತ್ತಮ ಶ್ವಾಸಕೋಶದ ಆರೋಗ್ಯಕ್ಕೆ ಕಾರಣವಾಗುತ್ತದೆ" ಎಂದು ಬೆಂಗಳೂರಿನ ನಾರಾಯಣ ಹೆಲ್ತ್‌ನ ಶ್ವಾಸಕೋಶಶಾಸ್ತ್ರಜ್ಞ ಡಾ ಮಂಜುನಾಥ್ ಪಿ ಎಚ್ ಹೇಳುತ್ತಾರೆ.

ಬೆಳಿಗ್ಗೆ ವ್ಯಾಯಾಮ ಮಾಡುವುದು ಹೇಗೆ ಪ್ರಯೋಜನಕಾರಿ?

ಅಸ್ಸಾಂನ 66 ವರ್ಷದ ನಿವೃತ್ತ ನೌಕಾಪಡೆಯ ಅಧಿಕಾರಿ ಉದಯ್ ಚಂದ್ರ ಬರ್ಮನ್ ಅವರು ಬೆಳಗಿನ ದಿನಚರಿಯನ್ನು ಪಾಲಿಸುತ್ತಿದ್ದಾರೆ. ಸುಮಾರು 20 ನಿಮಿಷಗಳನ್ನು ಉದ್ಯಾನವನದಲ್ಲಿ ಸೈಕ್ಲಿಂಗ್ ಮಾಡುವುದು, 20 ನಿಮಿಷಗಳ ಕಾಲ ಚುರುಕಾದ ನಡಿಗೆ ಮತ್ತು ಸ್ಟ್ರೆಚಸ್ ಮಾಡುವುದು. ಹಿಂದಿರುಗಿದ ಮೇಲೆ ಮನೆಯಲ್ಲಿ ಸುಮಾರು 40 ನಿಮಿಷಗಳ ಕಾಲ ಪ್ರಾಣಾಯಾಮದ ಐದು ದೀರ್ಘವಾದ ಉಸಿರಾಟದ ವ್ಯಾಯಾಮಗಳನ್ನು ತಪ್ಪದೇ ಅಭ್ಯಾಸ ಮಾಡುವುದು ಅವರ ದಿನಚರಿಯಾಗಿದೆ. ಪ್ರಾಣಾಯಾಮದ ತಂತ್ರಗಳಾದ ಭಸ್ತ್ರಿಕಾ (ವೇಗವಾಗಿ ಉಸಿರಾಡುವಿಕೆ ಮತ್ತು ನಿಶ್ವಾಸ), ಅನುಲೋಮ ವಿಲೋಮ (ಪರ್ಯಾಯ ಮೂಗಿನ ಹೊಳ್ಳೆ ಉಸಿರಾಟ), ಭ್ರಮರಿ (ಹಮ್ಮಿಂಗ್ ಬೀ ಉಸಿರಾಟ) ಮತ್ತು ಕಪಾಲಭಾತಿ (ತಲೆಬುರುಡೆ ಹೊಳೆಯುವ ಉಸಿರಾಟ) ಯಂತಹ ತಂತ್ರಗಳನ್ನು ನಿಖರವಾಗಿ ಅನುಸರಿಸುತ್ತೇನೆ ಎಂದು ಅವರು ಹೇಳುತ್ತಾರೆ.
“ಬೆಳಿಗ್ಗೆ ವ್ಯಾಯಾಮದ ನಂತರ ನಾನು ದಿನಪೂರ್ತಿ ಉಲ್ಲಾಸದಿಂದ ಇರುತ್ತೇನೆ. ಒಂದುವೇಳೆ ದಿನಚರಿಯನ್ನು ಅನುಸರಿಸಲಾಗದಿದ್ದರೆ ಸಾಕಷ್ಟು ಆಲಸ್ಯವನ್ನು ಅನುಭವಿಸುತ್ತೇನೆ, ”ಎಂದು ಬರ್ಮನ್ ಹೇಳುತ್ತಾರೆ.
ಗಾಳಿಯ ಗುಣಮಟ್ಟ ಉತ್ತಮವಾಗಿರುವುದರಿಂದ ಬೆಳಿಗ್ಗೆ ವ್ಯಾಯಾಮ ಮಾಡುವುದು ಸಂಜೆಗಿಂತ ಉತ್ತಮವಾಗಿದೆ ಎನ್ನುತ್ತಾರೆ ಡಾ.ಮಂಜುನಾಥ್. "ನಗರಗಳಲ್ಲಿ ವಾಯುಮಾಲಿನ್ಯವು ವಾಹನಗಳ ಚಲನೆಯಿಂದಾಗಿ ಹೆಚ್ಚಾಗಿ ಸಂಭವಿಸುತ್ತದೆ, ಇದು ದಿನ ಕಳೆದಂತೆ ಹದಗೆಡುತ್ತದೆ" ಎಂದು ಅವರು ಹೇಳುತ್ತಾರೆ.

ಸಾರಾಂಶ 

ನಿಮ್ಮ ಆಹಾರ ಮತ್ತು ಶ್ವಾಸಕೋಶದ ಆರೋಗ್ಯವು ಒಂದಕ್ಕೊಂದು ಸಂಬಂಧ ಹೊಂದಿದೆ. ಆರೋಗ್ಯಕರ ಆಹಾರವು ನಿಮ್ಮ ದೇಹವು ಶ್ವಾಸಕೋಶದ ಸೋಂಕುಗಳ ವಿರುದ್ಧ ಹೋರಾಡುವುದಷ್ಟೇ ಅಲ್ಲ, ಶ್ವಾಸಕೋಶದ ಸಮಸ್ಯೆಗಳಾದ ಅಸ್ತಮಾ ಮತ್ತು COPD ಅನ್ನು ನಿರ್ವಹಿಸುವುದಲ್ಲದೇ, ದೀರ್ಘಕಾಲಿಕ ಉರಿಯೂತವನ್ನು ಕಡಿಮೆಗೊಳಿಸಿ ನೀವು ಸುಲಭವಾಗಿ ಉಸಿರಾಡಲು ನೆರವಾಗುತ್ತದೆ.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ