ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಆಲ್ಕೋಹಾಲ್ ಬಳಕೆಯಿಂದ ಮೂಳೆಗಳ ಆರೋಗ್ಯಕ್ಕೆ ಹಾನಿಯಾಗಬಹುದು
97

ಆಲ್ಕೋಹಾಲ್ ಬಳಕೆಯಿಂದ ಮೂಳೆಗಳ ಆರೋಗ್ಯಕ್ಕೆ ಹಾನಿಯಾಗಬಹುದು

ಆಲ್ಕೋಹಾಲ್ ಅತಿಯಾದ ಸೇವನೆಯು, ಮೂಳೆಯ ಮರುಪೂರಣವನ್ನು ತಡೆಯುವುದರಿಂದ ಹಿಡಿದು ಮುರಿತಗಳು ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುವವರೆಗೆ, ಮೂಳೆಗಳಿಗೆ ಶಾಶ್ವತ ಹಾನಿಯನ್ನು ಉಂಟುಮಾಡಬಹುದು  

ಕಟು ಸತ್ಯ: ಆಲ್ಕೋಹಾಲ್ ಬಳಕೆಯಿಂದ ಮೂಳೆಯ ಆರೋಗ್ಯಕ್ಕೆ ಹಾನಿಯಾಗಬಹುದು 

ಆಲ್ಕೋಹಾಲ್ಹಾನಿಕಾರಕ ಪರಿಣಾಮಗಳ ಬಗ್ಗೆ ಮಾತನಾಡುವಾಗ, ಅಂಗಗಳು ಮತ್ತು ಶರೀರದ ಮೇಲೆ ಅದು ಉಂಟು ಮಾಡುವ ನೇರ ಪರಿಣಾಮವು ಗಮನವನ್ನು ಸೆಳೆದು ಬಿಡುತ್ತದೆ. ಒಟ್ಟಾರೆ ಆರೋಗ್ಯದ ಮೇಲೆ ಆಲ್ಕೋಹಾಲ್ ಬೀರುವ ಮುಖ್ಯ ಪರಿಣಾಮಗಳ ನಡುವೆ, ಆಲ್ಕೋಹಾಲ್ ಬಳಕೆ ಮತ್ತು ಮೂಳೆ ಆರೋಗ್ಯದ ನಡುವೆ ಇರುವ ಸಂಬಂಧವನ್ನು ಕಡೆಗಣಿಸಲಾಗುತ್ತದೆ. ಆಲ್ಕೋಹಾಲ್ ಸೇವನೆಯು ಮೂಳೆ ಸಾಂದ್ರತೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ, ಮುರಿತದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಮೂಳೆ ನಿರ್ವಹಣೆಯನ್ನು ನಿಯಂತ್ರಿಸುವ ಕಾರ್ಯವಿಧಾನಗಳಿಗೆ ಅಡಚಣೆ ಉಂಟುಮಾಡುತ್ತದೆ. ಎಲ್ಲಾ ಅಂಶಗಳು ಜೀವನದ ಗುಣಮಟ್ಟವನ್ನು ತಗ್ಗಿಸುತ್ತವೆ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ 

ಮೂಳೆಗಳ ಮೇಲೆ ಆಲ್ಕೋಹಾಲ್ ಪರಿಣಾಮವು ಅದನ್ನು ಸೇವಿಸುವ ಪ್ರಮಾಣ, ವ್ಯಕ್ತಿಯ ವಯಸ್ಸು ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಯಾವುದೇ ಆರೋಗ್ಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಮಾತ್ರವಲ್ಲ, ಆಲ್ಕೋಹಾಲ್ ಸೇವನೆಯು ಮೂಳೆಯ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಸಾಬೀತಾಗಿದೆ ” – ಎಂದು ಗೋವಾದ ಮಣಿಪಾಲ್ ಆಸ್ಪತ್ರೆಗಳ ಸಲಹೆಗಾರ ಮೂಳೆಚಿಕಿತ್ಸಕ ಡಾ ಸುಶಾಂತ್ ಮುಮ್ಮಿಗಟ್ಟಿ ಹೇಳುತ್ತಾರೆ.. 

ಆಲ್ಕೋಹಾಲ್ ಮೂಳೆಗಳ ಮೇಲೆ ಹೇಗೆ ಋಣಾತ್ಮಕ ಪರಿಣಾಮ ಬೀರುತ್ತದೆ? 

ಮಗುವಿನ ಜನನದ ನಂತರ, ಬೆಳವಣಿಗೆಯ ಮುಂದಿನ ವರ್ಷಗಳಲ್ಲಿ ಶರೀರದ ಮೂಳೆಗಳು ಬೆಳೆಯುತ್ತವೆ ಮತ್ತು ಬೆಳವಣಿಗೆಯಾಗುತ್ತವೆ. ಮೂಳೆಗಳು ಗಾತ್ರ ಮತ್ತು ಸಾಮರ್ಥ್ಯದಲ್ಲಿ ವಿಸ್ತರಿಸುವ ಬೆಳವಣಿಗೆಯ ಹಂತವು ಸುಮಾರು 20 ವರ್ಷ ವಯಸ್ಸಿನವರೆಗೆ ಇರುತ್ತದೆ. ಇದನ್ನು ಅನುಸರಿಸಿ, ವ್ಯಕ್ತಿಯ ಆಹಾರ ಮತ್ತು ಜೀವನಶೈಲಿಯನ್ನು ಅವಲಂಬಿಸಿ ಸುಮಾರು 40 ವರ್ಷ ವಯಸ್ಸಿನವರೆಗೆ, ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಬಹುದು. ನಾವು ಜೀವನದ 70 ನೇ ದಶಕವನ್ನು ತಲುಪುವ ಹೊತ್ತಿಗೆ, ಮೂಳೆ ಸಾಂದ್ರತೆಯು ಕ್ಷೀಣಿಸುತ್ತದೆ ಮತ್ತು ಅದು ತನ್ನ ಶಕ್ತಿಯನ್ನು 30 ರಿಂದ 40 ಪ್ರತಿಶತದಷ್ಟು ಕಳೆದುಕೊಳ್ಳುತ್ತದೆ. 

ಸಂಪೂರ್ಣ ಪ್ರಕ್ರಿಯೆಯನ್ನು ಮುಖ್ಯವಾಗಿ ಆಸ್ಟಿಯೋಬ್ಲಾಸ್ಟ್‌ಗಳು (ಮೂಳೆರೂಪಿಸುವ ಜೀವಕೋಶಗಳು) ಮತ್ತು ಆಸ್ಟಿಯೋಕ್ಲಾಸ್ಟ್‌ಗಳು (ಮೂಳೆರೀಸಾರ್ಬಿಂಗ್ ಜೀವಕೋಶಗಳು) ಎಂಬ ಎರಡು ವಿಧದ ಜೀವಕೋಶಗಳು ನಿರ್ವಹಿಸುತ್ತವೆಎಂದು ಡಾ ಮುಮ್ಮಿಗಟ್ಟಿ ವಿವರಿಸುತ್ತಾರೆ. “ಆಲ್ಕೋಹಾಲ್ ಸೇವನೆಯು, ನಂತರದ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ಮತ್ತು ಮೊದಲಿನ ಚಟುವಟಿಕೆಯನ್ನು ಕಡಿಮೆ ಮಾಡುವ ಮೂಲಕ ಎರಡೂ ಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತದೆ. ಮೂಳೆಗಳು ತಮ್ಮ ಗುಣಮಟ್ಟ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಲು ನಿರಂತರ ಮಾರ್ಪಾಡುಗಳಿಗೆ ಒಳಗಾಗುವ ಪ್ರಕ್ರಿಯೆಯು, ಮೂಳೆ ಮರುರೂಪಿಸುವಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆಎಂದು ಅವರು ಹೇಳುತ್ತಾರೆ. 

ಮೂಳೆಗಳ ಮೇಲೆ ಅತಿಯಾದ ಆಲ್ಕೊಹಾಲ್ ಸೇವನೆಯ ಪರಿಣಾಮ 

ಹಲವಾರು ಅಪಾಯಕಾರಿ ಅಂಶಗಳು ಮೂಳೆಯ ಆರೋಗ್ಯ ಮತ್ತು ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಆಲ್ಕೋಹಾಲ್ ಬಳಕೆಯಿಂದಾಗಿ ಮೂಳೆಗಳ ಮೇಲೆ ಆಗುವ ಒಟ್ಟು ಪ್ರಭಾವವನ್ನು ಆಲ್ಕೋಹಾಲ್ಪ್ರೇರಿತ ಮೂಳೆ ರೋಗ ಎಂದು ಕರೆಯುತ್ತಾರೆ. 

ಮದ್ಯಪಾನವು ಮೂಳೆಗಳ ಮೇಲೆ ಬಹುವಿಧದ ಪರಿಣಾಮಗಳನ್ನು ಬೀರುತ್ತದೆ. ಮೊದಲನೆಯದಾಗಿ, ಮೂಳೆ ಖನಿಜ ಸಾಂದ್ರತೆ (BMD) ಕಡಿಮೆಯಾಗುತ್ತದೆ. ಎರಡನೆಯದಾಗಿ, ಕಡಿಮೆಯಾದ BMD ಯಿಂದಾಗಿ ಮುರಿತಗಳ ಅಪಾಯ ಹೆಚ್ಚಾಗುತ್ತದೆ, ”ಎಂದು ಡಾ ಮುಮ್ಮಿಗಟ್ಟಿ ಹೇಳುತ್ತಾರೆ. ಆಸ್ಟಿಯೊಪೊರೋಸಿಸ್ ಮತ್ತು ಆಸ್ಟಿಯೋಪೆನಿಯಾದಂತಹ ಮೂಳೆ ಅನಾರೋಗ್ಯ ಪರಿಸ್ಥಿತಿಗಳಿಂದ BMD ಉಂಟಾಗಬಹುದು. ಆಸ್ಟಿಯೊಪೊರೋಸಿಸ್ ಸ್ಥಿತಿಯು ಮೂಳೆ ಖನಿಜ ಸಾಂದ್ರತೆಯಲ್ಲಿ ಗಣನೀಯ ನಷ್ಟವಾಗುವುದರಿಂದ ಉಂಟಾಗುತ್ತದೆ, ಪರಿಸ್ಥಿತಿಯಲ್ಲಿ ಮೂಳೆ ಸುಲಭವಾಗಿ ಮುರಿಯುತ್ತದೆ ಮತ್ತು ದುರ್ಬಲವಾಗುತ್ತದೆ. ಕೆಲವೊಮ್ಮೆ ವಯಸ್ಸಾಗುವಿಕೆ ಮತ್ತು ಹಾರ್ಮೋನುಗಳ ಬದಲಾವಣೆಗಳು ಸಹ ಆಸ್ಟಿಯೊಪೊರೋಸಿಸ್ ಸ್ಥಿತಿಗೆ ಕಾರಣವಾಗಬಹುದು. ಆಸ್ಟಿಯೋಪೆನಿಯಾವನ್ನು ಆಸ್ಟಿಯೊಪೊರೋಸಿಸ್‌ನಆರಂಭಿಕ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಇದು ಕಡಿಮೆ ತೀವ್ರತೆಯ ಅನಾರೋಗ್ಯಕರ ಸ್ಥಿತಿಅಂದರೆ ಇದರಲ್ಲಿಯು ಸಹ ಮೂಳೆಗಳ ಖನಿಜ ಸಾಂದ್ರತೆಯು ಕಡಿಮೆಯಾಗುತ್ತದೆ, ಆದರೆ ಆಸ್ಟಿಯೊಪೊರೋಸಿಸ್ ರೀತಿಯಲ್ಲಿ ತೀವ್ರ ಸ್ವರೂಪದಲ್ಲಿ ಇರುವುದಿಲ್ಲ. 

ಮೂಳೆಗಳ ಆರೋಗ್ಯ ಮತ್ತು ಆಲ್ಕೋಹಾಲ್: ಯಾರು ಈಡಾಗಬಹುದು? 

ಆಲ್ಕೋಹಾಲ್ ಸೇವನೆಯು ಯಾವತ್ತೂ ಸುರಕ್ಷಿತವಲ್ಲ, ಆದರೆ ಕೆಲವು ವಯೋಮಾನದವರು ವ್ಯಸನದಿಂದಾಗಿ ತಮ್ಮ ಮೂಳೆಯ ಮೇಲೆ ತೀವ್ರವಾದ ಹಾನಿಕಾರಕ ಪರಿಣಾಮಗಳನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಡಾ ಮುಮ್ಮಿಗಟ್ಟಿ ವಿವರಿಸುತ್ತಾರೆ. 

  1. ಹದಿಹರೆಯದವರು: ಆಲ್ಕೋಹಾಲ್ ಹೆಲ್ತ್ & ರಿಸರ್ಚ್ ವರ್ಲ್ಡ್ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧದ ಪ್ರಕಾರ, ಯುವ ವಯಸ್ಕರು ಮತ್ತು ಬೆಳೆಯುತ್ತಿರುವ ಮೂಳೆಗಳ ಮೇಲೆ ಆಲ್ಕೋಹಾಲ್ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ ಏಕೆಂದರೆ ಇದು ಮೂಳೆಯ ಗರಿಷ್ಠ ದ್ರವ್ಯರಾಶಿಯನ್ನು ಕಡಿಮೆ ಮಾಡುತ್ತದೆ (ಒಬ್ಬ ವ್ಯಕ್ತಿಯು ತಮ್ಮ ಜೀವಿತಾವಧಿಯಲ್ಲಿ ಬೆಳೆಸಬಹುದಾದ ಗರಿಷ್ಠ ಪ್ರಮಾಣದ ಮೂಳೆ ಅಂಗಾಂಶ). ಇದರಿಂದಾಗಿ ತುಲನಾತ್ಮಕವಾಗಿ ವಯಸ್ಕ ಮೂಳೆಗಳ ದೌರ್ಬಲ್ಯ ಮತ್ತು ಶಕ್ತಿಹೀನತೆಗೆ ಕಾರಣವಾಗಬಹುದು, ಇಂತಹ ಮೂಳೆಗಳು ಹೆಚ್ಚು ಮುರಿತಗಳಿಗೆ ಒಳಗಾಗುತ್ತದೆ. 
  1. ವೃದ್ಧರು: ವಯಸ್ಸಾದವರು ಅಥವಾ ವೃದ್ಧರು ಆಲ್ಕೋಹಾಲ್ಪ್ರೇರಿತ ಮೂಳೆ ಪರಿಸ್ಥಿತಿಗಳಿಗೆ ಹೆಚ್ಚು ಒಳಗಾಗುತ್ತಾರೆ. ಮೂಳೆ ಸಾಂದ್ರತೆ ಕಡಿಮೆಯಾಗುವುದು, ದುರ್ಬಲಗೊಂಡ ಮೂಳೆಗಳು ಮತ್ತು ದುರ್ಬಲಗೊಂಡ ಯಕೃತ್ತಿನ ಕ್ರಿಯಾಶೀಲತೆ ಸೇರಿದಂತೆ ಹಲವಾರು ಕಾರಣಗಳಿಂದ ಮೂಳೆಗಳ ಆರೋಗ್ಯಕ್ಕೆ ಹಾನಿಯಾಗಬಹುದು . 
  1. ಋತುಬಂಧಕ್ಕೊಳಗಾದ ಮಹಿಳೆಯರು:ಮಹಿಳೆಯರು ಋತುಬಂಧಕ್ಕೊಳಗಾದ ವಯಸ್ಸನ್ನು ತಲುಪಿದ ನಂತರ ಮೂಳೆಯ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುವ ಈಸ್ಟ್ರೊಜೆನ್ ಎಂಬ ಹಾರ್ಮೋನ್ ಮಟ್ಟವು ಕಡಿಮೆಯಾಗುತ್ತದೆ, ಇದು ಮೂಳೆ ಮರುಹೀರಿಕೆಯ ದರದ ಹೆಚ್ಚಳಕ್ಕೆ ಕಾರಣವಾಗುತ್ತದೆ, ಪರಿಣಾಮವಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ. ಮದ್ಯಪಾನವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ”-ಎಂದು ಎಂದು ಡಾ ಮುಮ್ಮಿಗಟ್ಟಿ ಹೇಳುತ್ತಾರೆ. 

ಆಲ್ಕೋಹಾಲ್ ಸೇವನೆ ಮಿತಿಯಲ್ಲಿರಲಿ 

ದಿನಗಳಲ್ಲಿ ಅನೇಕರಿಗೆ ಮದ್ಯಪಾನ ಅಂದರೆ ಅದೊಂದು ಸಾಮಾಜಿಕ ಚಟುವಟಿಕೆಯಾಗಿದೆ. ಆದರೆ ಅದು ಮಿತಿಯಲ್ಲಿದ್ದರೆ ಉತ್ತಮ. ಆಲ್ಕೋಹಾಲ್ ಸೇವನೆಯಲ್ಲಿ ಸಮತೋಲನವನ್ನು ಕಂಡುಕೊಳ್ಳುವ ಮೂಲಕ ಆಲ್ಕೋಹಾಲ್ಪ್ರೇರಿತ ಮೂಳೆ ರೋಗಗಳನ್ನು ತಪ್ಪಿಸಬಹುದು. ಮದ್ಯದ ಪರಿಣಾಮವು ಸೇವಿಸುವ ಪ್ರಮಾಣವನ್ನು ಅವಲಂಬಿಸಿರುತ್ತದೆಎಂದು ಡಾ ಮುಮ್ಮಿಗಟ್ಟಿ ಹೇಳುತ್ತಾರೆ. “ದಿನಕ್ಕೆ ಒಂದು ಅಥವಾ ಎರಡು ಬಾರಿ ಮದ್ಯಪಾನ ಮಾಡಿದರೆ ಅದರಿಂದ ಮೂಳೆ ಸಾಂದ್ರತೆಯ ಮೌಲ್ಯ ಗಮನಾರ್ಹವಾಗಿ ಬದಲಾಗುವುದಿಲ್ಲ. ಆದರೆ, ಮೂಳೆಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ, ಸರಿಯಾದ ಪೋಷಕಾಂಶಗಳ ಸೇವನೆ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದರ ಜೊತೆ ಜೊತೆಗೆ ಇದು ಸಾಗಬೇಕು”. 

ಆರೋಗ್ಯಕರ ಕ್ಯಾಲ್ಸಿಯಂ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಸಾಕಷ್ಟು ವಿಟಮಿನ್ ಡಿ 3 ಯನ್ನು ಉತ್ಪಾದಿಸಲು ಸಾಕಷ್ಟು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಕು, ಸೊಪ್ಪು ತರಕಾರಿಗಳು, ಹಾಲು, ಡೈರಿ ಉತ್ಪನ್ನಗಳು, ಬೀಜಗಳು ಮತ್ತು ಹಲವಾರು ರೀತಿಯ ಧಾನ್ಯಗಳನ್ನು ಸೇವಿಸಬೇಕು ಬಲವಾದ ಮೂಳೆಗಳಿಗೆ ಪೋಷಕಾಂಶಗಳು ಅವಶ್ಯಕವಾಗಿದೆಎಂದು ಡಾ ಮುಮ್ಮಿಗಟ್ಟಿ ಸಲಹೆ ನೀಡುತ್ತಾರೆ. 

ಸಾರಾಂಶ: 

  • ಅತಿಯಾದ ಆಲ್ಕೋಹಾಲ್ ಸೇವನೆಯು ಆಸ್ಟಿಯೋಬ್ಲಾಸ್ಟ್ಗಳು ಮತ್ತು ಆಸ್ಟಿಯೋಕ್ಲಾಸ್ಟ್ಗಳ ಕಾರ್ಯನಿರ್ವಹಣೆ ಮತ್ತು ಮೂಳೆ ಮರುಪೂರಣದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. 
  • ಆಲ್ಕೋಹಾಲ್ ಬಳಕೆಯ ಕಾರಣದಿಂದ ಉಂಟಾಗುವ ಮೂಳೆ ಪರಿಸ್ಥಿತಿಗಳನ್ನು ಆಲ್ಕೋಹಾಲ್ಪ್ರೇರಿತ ಮೂಳೆ ಕಾಯಿಲೆಗಳು ಎಂದು ಕರೆಯುತ್ತಾರೆ. ಅವುಗಳೆಂದರೆ ಆಸ್ಟಿಯೊಪೊರೋಸಿಸ್ ಮತ್ತು ಆಸ್ಟಿಯೋಪೆನಿಯಾ 
  • ಹದಿಹರೆಯದವರು, ಋತುಬಂಧಕ್ಕೊಳಗಾದ ಮಹಿಳೆಯರು ಮತ್ತು ವಯಸ್ಸಾದವರಲ್ಲಿ ಆಲ್ಕೋಹಾಲ್ಸಂಬಂಧಿತ ಮೂಳೆ ಸಮಸ್ಯೆಗಳ ಅಪಾಯ ಹೆಚ್ಚು. 
  • ಆಲ್ಕೋಹಾಲ್‌ನ ಮಿತ ಬಳಕೆಯ ಜೊತೆಗೆ, ಸಾಕಷ್ಟು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ವ್ಯಾಯಾಮ ಮತ್ತು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕ. 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ