ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಮಕ್ಕಳಲ್ಲಿ ಮೊಣಕೈ ಮೂಳೆ ಮುರಿತ – ಮೂಳೆ ಮುರಿತದ ಆರೈಕೆ:
27

ಮಕ್ಕಳಲ್ಲಿ ಮೊಣಕೈ ಮೂಳೆ ಮುರಿತ – ಮೂಳೆ ಮುರಿತದ ಆರೈಕೆ:

ತ್ವರಿತವಾಗಿ ಗುಣಪಡಿಸಲು ಸಕಾಲಿಕ ವೈದ್ಯಕೀಯ ಆರೈಕೆ ಅತ್ಯವಶ್ಯಕವಾಗಿರುವುದರಿಂದ ಉಳುಕು ಮತ್ತು ಮೊಣಕೈ ಮುರಿತದ(ಫ್ರಾಕ್ಚರ್) ನಡುವಿನ ವ್ಯತ್ಯಾಸವನ್ನು ಗುರುತಿಸಲು ತಜ್ಞರು ಚಿಹ್ನೆಗಳು ಮತ್ತು ಲಕ್ಷಣಗಳ ಬಗ್ಗೆ ವಿವರಿಸುತ್ತಾರೆ,.

ಮಕ್ಕಳಲ್ಲಿ ಮೊಣಕೈ ಮೂಳೆ ಮುರಿತ

ಎರಡು ವರ್ಷದ ಪ್ರಕಾಶ್ ಜೈನ್ ಬಿದ್ದು ಮೊಣಕೈಯನ್ನು ಮುರಿದುಕೊಂಡಿದ್ದ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಮುಗ್ಧ ಸ್ವಭಾವದವರಾದ ಮಕ್ಕಳು ಸಣ್ಣ ಪುಟ್ಟ ಗಲಾಟೆಯೊಂದಿಗೆ ಎದ್ದು ಹೋಗಿ ತಮ್ಮ ಆಟಗಳಲ್ಲಿ ಮಗ್ನರಾಗುತ್ತಾರೆ. ಆದರೆ ಈ ಪ್ರಕರಣದಲ್ಲಿ ಹಾಗಾಗಲಿಲ್ಲ. ಈ ಘಟನೆ ಸಂಭವಿಸಿದಾಗ ಜೈನ್‌ನ ತಾಯಿ ಜೊತೆಯಲ್ಲಿರಲಿಲ್ಲ. ವಿಷಯ ತಿಳಿದಾಗ ಆಕೆ ಅವನನ್ನು ಸಮಾಧಾನಗೊಳಿಸಲು ಯತ್ನಿಸಿದರು. “ಸ್ವಲ್ಪ ಸಮಯದಲ್ಲೇ ಅವನ ಬಲಗೈಯಲ್ಲಿ (ಅವನು ಏಟುಮಾಡಿಕೊಂಡ ಕೈ) ಚಲನೆ ಇಲ್ಲದಿರುವುದನ್ನು ನಾನು ಗಮನಿಸಿದೆ. ನಾನು ಚೆಂಡೊಂದನ್ನು ಅವನತ್ತ ಎಸೆದಾಗ ಅವನಿಗದನ್ನು ಹಿಡಿದುಕೊಳ್ಳಲಾಗಲಿಲ್ಲ. ಅವನ ಕೈಯಲ್ಲಿ ಚಲನೆ ಇಲ್ಲದಿರುವುದನ್ನು ಕಂಡು ನಾನು ಕೂಡಲೇ ಅವನೊಂದಿಗೆ ಆಸ್ಪತ್ರೆಗೆ ಧಾವಿಸಿದೆ” ಎಂದು ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ ಕುಸುಮ್ ಜೈನ್.

ಮೊಣಕೈ ಮುರಿತವು ಮಕ್ಕಳಲ್ಲಿ ಸಾಮಾನ್ಯವಾಗಿ ಸಂಭವಿಸುವಂಥದ್ದಾಗಿದೆ, ಆದರೂ ಇದರ ತೀವ್ರತೆಯಲ್ಲಿ ವ್ಯತ್ಯಾಸಗಳಿವೆ. ಈತನ ತಾಯಿಯು ಗಾಯವನ್ನು ತಕ್ಷಣವೇ ಗುರುತಿಸಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರಿಂದ ಈತನಿಗೆ ಚೇತರಿಸಿಕೊಳ್ಳಲು ನೆರವಾಯಿತು.

ಮೊಣಕೈ ಮುರಿತ – ಲಕ್ಷಣಗಳು

ಜೈನ್‌ಗೆ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸುಪ್ರಕಾಂಡೈಲರ್ ಮೊಣಕೈ ಮುರಿತವಾಗಿತ್ತು. ಈ ಮುರಿತದಲ್ಲಿ, ಮೊಣಕೈ ಕೀಲಿನ ಮೇಲಿರುವ ಹ್ಯೂಮರಸ್ ಮೂಳೆಯಲ್ಲಿ ಮುರಿತ ಉಂಟಾಗುತ್ತದೆ.

ಬೆಂಗಳೂರಿನ ಅಪೋಲೋ ಹಾಸ್ಪಿಟಲ್ಸ್‌ನ ಮಕ್ಕಳ ತಜ್ಞರಾದ ಡಾ ಹರಿದರ್ಶನ್ ಜಿಜೆ ಅವರು ಮಕ್ಕಳಲ್ಲಿ ಗಮನಿಸಬೇಕಾದ ಮುರಿತದ ದೈಹಿಕ ಲಕ್ಷಣಗಳನ್ನು ಪಟ್ಟಿ ಮಾಡುತ್ತಾರೆ.

  • ಎರಡೂ ಕೈಗಳನ್ನು ಹೋಲಿಸಿದಾಗ ಮುರಿತಕ್ಕೆ ಒಳಗಾದ ಕೈಯಲ್ಲಿ ಊತ ಕಾಣಿಸಿಕೊಳ್ಳುವುದು.
  • ಸಹಿಸಲಸಾಧ್ಯವಾದ ನೋವು
  • ಕೈಯ ಅಸಹಜ ಚಲನೆ
  • ನಿರ್ಬಂಧಿತ ಚಲನೆ
  • ದೈನಂದಿನ ಅಥವಾ ಶ್ರಮವಿಲ್ಲದ ಕೆಲಸ ಮಾಡುವುದಕ್ಕೂ ಕೈಯನ್ನು ಬಳಸಲು ಹಿಂಜರಿಯುವುದು.

ಮಕ್ಕಳಲ್ಲಿ ಮೊಣಕೈ ಮುರಿತಕ್ಕೆ ಚಿಕಿತ್ಸೆ

“ಮಗುವಿಗೆ ಉಂಟಾದ ಗಾಯದ ತೀವ್ರತೆ ಮತ್ತು ಪ್ರಕಾರವನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಮುರಿತವು ಸಣ್ಣದಿರಬಹುದು ಅಥವಾ ಬಲವಾದ ಪೆಟ್ಟುಗಳು ಬಿದ್ದ ಸಂದರ್ಭದಲ್ಲಿ ತೊಡಕುಗಳೂ ಇರಬಹುದು” ಎಂದು ಡಾ ಹರಿದರ್ಷನ್ ಹೇಳುತ್ತಾರೆ.

ಸಾಮಾನ್ಯ ಮುರಿತದಲ್ಲಿ, ಚಿಕಿತ್ಸೆಯ ವಿಧಾನವು ಮೂಳೆ/ಕೀಲನ್ನು ಚಲಿಸದಂತೆ ಕಾಸ್ಟ್‌ನಲ್ಲಿ ಇಡುವುದು. ಕಾಲಕ್ರಮೇಣ ಇದು ಮಿನರಲೈಸೇಶನ್ ಮೂಲಕ ಗುಣವಾಗುತ್ತದೆ. ಮೂಳೆಗಳ ತುಂಡುಗಳು ಛಿದ್ರವಾಗಿರುವ ಅಥವಾ ಸ್ಥಾನಪಲ್ಲವಾಗಿರುವಂತಹ ತೀವ್ರ ಅಥವಾ ಕಾಂಪೌಂಡ್ ಫ್ರಾಕ್ಚರ್‌ನಲ್ಲಿ  ಶಸ್ತ್ರಚಿಕಿತ್ಸೆಯನ್ನು ಶಿಫಾರಸುಮಾಡಲಾಗುತ್ತದೆ.

ಫ್ರಾಕ್ಚರ್ ಉಂಟಾದಾಗ, ಮೂಳೆಯು ‘ಅಬ್‌ನಾರ್ಮಲ್ ಪ್ರಾಕ್ಸಿಮಿಟಿ’ (ಮೂಲರೂಪಕ್ಕಿಂತ ವಿಭಿನ್ನ ಸ್ಥಾನ ಅಥವಾ ಜೋಡಣೆ) ರಚನೆಗೆ ಒಳಗಾಗಬಹುದು. ಇದು ಕ್ರಮೇಣ ಅಧಿಕ ಊತ ಮತ್ತು ಕ್ಯಾಲಸ್ ಬೆಳವಣಿಗೆಗೆ ಕಾರಣವಾಗಬಹುದು. ಇಂತಹ ಸಂದರ್ಭಗಳಲ್ಲಿ, ಮೂಳೆಯನ್ನು ಸರಿಪಡಿಸಲು ಮಗುವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು. ಇದಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡದೆ ಇದ್ದ ಸಂದರ್ಭದಲ್ಲಿ, ಮೂಳೆಗಳು ಜೋಡಣೆಯಾಗದಿರುವುದು ಅಥವಾ ಸ್ಥಾನಪಲ್ಲಟವಾಗಲು ಕಾರಣವಾಗಬಹುದು.

ಜೈನ್ ಪ್ರಕರಣದಲ್ಲಿ, ವೈದ್ಯರು ಫ್ರಾಕ್ಚರ್‌ನ ತೀವ್ರತೆಯನ್ನು ತಿಳಿಯಲು ಎಕ್ಸ್-ರೇ ತೆಗೆದು ನೋಡಿದರು. ಮೂಳೆಗಳು ಅನೇಕ ತುಂಡುಗಳಾಗಿ ಮುರಿದ ಕಾರಣ ಅವರು ತಕ್ಷಣದ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿದರು(ಓಪನ್ ರಿಡಕ್ಷನ್ ಆಂಡ್ ಇಂಟರ್ನಲ್ ಫಿಕ್ಸೇಶನ್ ಸರ್ಜರಿ ಅಥವಾ ORIF).

ಶಸ್ತ್ರಚಿಕಿತ್ಸೆಯ ನಂತರ ಫ್ರಾಕ್ಚರ್‌ಗಳು ಗುಣವಾದರೂ, ಜೈನ್‌ನ ಮೂಳೆ ಮೂಲಸ್ಥಾನಕ್ಕೆ ಜೋಡಣೆಯಾಗುವುದು ಬಾಕಿಯಿತ್ತು. ಮೂಳೆ ಮುರಿತವು ಗುಣವಾದ ನಂತರ ಮೂಳೆಗಳ ಈ ಸ್ಥಾನಪಲ್ಲಟವು ಮಕ್ಕಳಲ್ಲಿ ಸಾಮಾನ್ಯವಾಗಿ ಸಂಭವಿಸುತ್ತವೆ.

“ಅವನು ಬೆಳೆದಂತೆ, ಅವನ ಬಲಗೈ ಸರಿಯಾಗಿ ಜೋಡಣೆ ಹೊಂದಿರಲಿಲ್ಲ- ಮತ್ತೆ ನಾನು ವೈದ್ಯರನ್ನು ಸಂಪರ್ಕಿಸಿದಾಗ, ಅವರು ನನಗೆ ತನ್ನಷ್ಟಕ್ಕೇ ಗುಣವಾಗಲು ಕಾಯುವಂತೆ ತಿಳಿಸಿದರು, ಮತ್ತೂ ಸರಿಯಾಗದಿದ್ದರೆ 12ರ ವಯಸ್ಸಿನಲ್ಲಿ ಅವನಿಗೆ ಮತ್ತೆ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿದರು” ಎಂದು ಜೈನ್ ತಾಯಿ ಕುಸುಮ್ ಹೇಳುತ್ತಾರೆ.

ಮಗುವಿನ ಬೆಳವಣಿಗೆಯನ್ನು (ಮೂಳೆಯ ಬೆಳವಣಿಗೆ) ಪರಿಗಣಿಸಿ, ಸಾಮಾನ್ಯವಾಗಿ ಮಗುವು 12 ವಯಸ್ಸಿಗೆ ಬರುವ ತನಕ , ಕಾಯುವ ಅವಧಿಯನ್ನು ಸೂಚಿಸಲಾಗುತ್ತದೆ. ಬೆಳೆಯುತ್ತಾ ಹೋದಂತೆ ಮೂಳೆಯು ತನ್ನಷ್ಟಕ್ಕೆ ಸರಿಯಾಗುವ ಸಂಭವ  ಇರುತ್ತದೆ, ಆದರೆ ಇದಕ್ಕೆ ಸಾಕಷ್ಟು ವ್ಯಾಯಾಮ ಮತ್ತು ಚಟುವಟಿಕೆಗಳನ್ನೂ ಮಾಡಬೇಕಾಗುತ್ತದೆ.

“ನಾಲ್ಕು ವರ್ಷ ವಯಸ್ಸಿನ ಜೈನ್‌ಗೆ, ಕೈಯ ಉತ್ತಮ ಚಲನೆಯನ್ನು ಖಾತ್ರಿಪಡಿಸುವಂತಹ ಡ್ರಿಬ್ಲಿಂಗ್, ಚೆಂಡನ್ನು ಎಸೆಯುವುದು ಮತ್ತು ಬೌನ್ಸಿಂಗ್ ಮುಂತಾದ ಕೈಯಿಂದ ಮಾಡುವಂತಹ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ,”ಎಂದು ಕುಸುಮ್ ಹೇಳುತ್ತಾರೆ.

ಮೊಣಕೈ ಮುರಿತ – ಚೇತರಿಕೆ ಅವಧಿ ಏನು?

ಜೈನ್‌ಗೆ ORIF ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು, ಇಲ್ಲಿ ಅವನ ಮೂಳೆಯನ್ನು ಸರಿಯಾದ ಸ್ಥಳದಲ್ಲಿ ಕೂರಿಸಲು ಅವನ ಬಲಗೈಗೆ ಕೆ-ವೈರ್ (ಸ್ಟೇನ್‌ಲೆಸ್ ಸ್ಟೀಲ್ ಅಥವಾ ಟೈಟಾನಿಯಮ್) ಅನ್ನು ಹಾಕಲಾಯಿತು. 21 ದಿನಗಳ ನಂತರ, ವೈರ್ ಅನ್ನು ತೆಗೆದು ಮತ್ತೆ 10 ದಿನಗಳ ಕಾಲ ಬೆಂಬಲಕ್ಕಾಗಿ ಹೊರಗಿನ ಬ್ಯಾಂಡೇಜ್ ಅನ್ನು ಹಾಕಲಾಯಿತು. ಚಲನೆಯ ಗತಿಯನ್ನು ನೋಡಲು ತೋಳು ಮತ್ತು ಮೊಣಕೈ ಕೀಲನ್ನು ಸಡಿಲಗೊಳಿಸಿ ರೆಹಾಬ್/ಫಿಸಿಯೋ ವ್ಯಾಯಾಮಗಳನ್ನು ಮಾಡಿಸಲಾಯಿತು. ಕಾಲಕ್ರಮೇಣ, ಅವನ ಚಲನೆಯ ಗತಿ ಸರಿಹೊಂದಿದರೂ ಜೋಡಣೆಯು ಮೂಲಸ್ಥಾನಕ್ಕೆ ಮರಳಲಿಲ್ಲ.

ಎಲ್ಲಾ ಮುರಿತಗಳು ವಾಸಿಯಾಗಲು ಇಷ್ಟು ದೀರ್ಘ ಪ್ರಕ್ರಿಯೆಯ ಅವಶ್ಯವಿರುವುದಿಲ್ಲ. ಆದರೂ, ಮಕ್ಕಳು ಮುರಿತಕ್ಕೆ ಒಳಗಾದಾಗ ಮತ್ತು ಆರಂಭಿಕ ಚೇತರಿಕೆಯ ಹಂತದಲ್ಲಿ ಸಹಿಸಲಸಾಧ್ಯವಾದ ನೋವನ್ನು ಅನುಭವಿಸುತ್ತಾರೆ. ಆದರೆ ತಮ್ಮ ಜೀವನದ ಬೆಳವಣಿಗೆಯ ಹಂತದಲ್ಲಿರುವುದರಿಂದ, ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಚೇತರಿಕೆಯ ಪ್ರಕ್ರಿಯೆಯು ವೇಗವಾಗಿ ಆಗುತ್ತದೆ. ಮಕ್ಕಳಿಗೆ ಧೈರ್ಯ ತುಂಬುವಲ್ಲಿ ಪೋಷಕರು ಪ್ರಮುಖ ಪಾತ್ರವಹಿಸಬಹುದು ಮತ್ತು ಸುಗಮ ಚೇತರಿಕೆಗೆ ಸಾಕಷ್ಟು ಸಮಯ ನೀಡಬಹುದು.

ಸಾರಾಂಶ

  • ಮಕ್ಕಳಲ್ಲಿ ಮೊಣಕೈ ಮುರಿತವು ಸಾಮಾನ್ಯವಾಗಿದ್ದು, ಅದರಲ್ಲೂ ಸುಪ್ರಾಕೊಂಡೈಲರ್ ಮೊಣಕೈ ಮುರಿತವು ವ್ಯಾಪಕವಾಗಿ ಕಂಡುಬರುವ ಪ್ರಕರಣವಾಗಿದೆ.

ಮುರಿತಗಳ ತೀವ್ರತೆಯನ್ನು ಆಧರಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸಾಮಾನ್ಯ ಮುರಿತದಲ್ಲಿ ಚಿಕಿತ್ಸಾ ವಿಧಾನವು ಮೂಳೆ ಮತ್ತು ಕೀಲನ್ನು ಕಾಸ್ಟ್‌ನಲ್ಲಿ ಚಲಿಸದಂತೆ ಇಡುವುದು. ಆದರೆ, ತೀವ್ರ ಮುರಿತದ ಸಂದರ್ಭದಲ್ಲಿ, ಮೂಳೆಗಳ ತುಂಡುಗಳು ಸ್ಥಾನಪಲ್ಲಟಗೊಂಡಾಗ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ