ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಪ್ಲಸೀಬೊ ನೋವು ನಿವಾರಕ – ಮನಸ್ಸಿನ ಅದ್ಭುತ ಪ್ರವೃತ್ತಿ
44

ಪ್ಲಸೀಬೊ ನೋವು ನಿವಾರಕ – ಮನಸ್ಸಿನ ಅದ್ಭುತ ಪ್ರವೃತ್ತಿ

ಈ ನೋವು ನಿರ್ವಹಣಾ ವಿಧಾನವು, ಚಿಕಿತ್ಸಾ ಕ್ರಮದ ಮೇಲೆ ವ್ಯಕ್ತಿಯ ನಂಬಿಕೆಯನ್ನು ಟ್ಯಾಪ್ ಮಾಡುವ ಮೂಲಕ ನೋವಿನ ಗ್ರಹಿಕೆಯನ್ನು ಬದಲಾಯಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ ಮತ್ತು ಗುಣಪಡಿಸಲು ಮನಸ್ಸಿನ ಶಕ್ತಿಯನ್ನು ಬಳಸುತ್ತದೆ 

ಪ್ಲಸೀಬೊ ನೋವು ನಿವಾರಕ

 ಅನೇಕ ನೋವು ನಿರ್ವಹಣಾ ವಿಧಾನಗಳು ಅಸ್ತಿತ್ವದಲ್ಲಿದ್ದರೂ, ವೈದ್ಯರು ಸಾಮಾನ್ಯವಾಗಿ ಪ್ರತಿ ಪ್ರಕರಣದಲ್ಲಿಯೂ ಹೆಚ್ಚು ಪರಿಣಾಮಕಾರಿ ಸಾಮರ್ಥ್ಯ ಹೊಂದಿರುವ ಒಂದನ್ನು ಅಳವಡಿಸಿಕೊಳ್ಳುತ್ತಾರೆನೋವಿನ ಸ್ವರೂಪ ಮತ್ತು ನೋವನ್ನು ಸಹಿಸುವಲ್ಲಿ ವ್ಯಕ್ತಿಯ ಕ್ಷಮತೆಯನ್ನು ಗಮನಿಸುತ್ತಾರೆಅಂದರೆ ಶಾರೀರಿಕ ಮತ್ತು ಮಾನಸಿಕ ಪ್ರತಿಕ್ರಿಯೆಗಳ ಮೂಲಕ ರೋಗಿಯ ನೋವು ಸಹಿಷ್ಣುತೆಯ ಮಟ್ಟವನ್ನು ಗಮನಿಸುತ್ತಾರೆ ನೋವು ಎನ್ನುವುದು, ಮೆದುಳು ಅಥವಾ ಮನಸ್ಸು ದೈಹಿಕ ಸಂವೇದನೆಗಳನ್ನು ಹೇಗೆ ದಾಖಲಿಸುತ್ತದೆ ಮತ್ತು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಆಧರಿಸಿದ  ಒಂದು ಮನೋದೈಹಿಕ ವಿಚಾರ ಆಗಿರುವುದರಿಂದ, ವೈದ್ಯರು ನೋವನ್ನು ನಿವಾರಿಸಲು ಮನುಷ್ಯನ ಮನಸ್ಸಿನ ಶಕ್ತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. 

ಪ್ಲಸೀಬೊ ನೋವು ನಿವಾರಣಾ ವಿಧಾನದ ಮೂಲಕ ನೋವು ನಿರ್ವಹಣೆ ಅಂದರೆ ಯಾವುದೇ ಚಿಕಿತ್ಸಕ ಪರಿಣಾಮವಿಲ್ಲದ ಚಿಕಿತ್ಸೆಯನ್ನು ಪಡೆದ ನಂತರ ವ್ಯಕ್ತಿಯು ನೋವು ಕಡಿಮೆಯಾಗುವುದು ಪರಿಣಾಮಕಾರಿತ್ವದ ಮೇಲಿನ ವ್ಯಕ್ತಿಯ ನಂಬಿಕೆ ಅಥವಾ ವಿಶ್ವಾಸದ ಮೇಲೆ ಕೆಲಸ ಮಾಡುತ್ತದೆ. ವೈದ್ಯಕೀಯ ಸೆಟ್ಟಿಂಗ್ಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಂಪ್ರದಾಯಿಕ ಚಿಕಿತ್ಸೆಗಳಿಗೆ ಪೂರಕವಾಗಿ ವಿಧಾನವನ್ನು ಬಳಸುತ್ತಾರೆ. ಪ್ರಮುಖ ನೋವಿನ ಚಿಕಿತ್ಸೆಗಳ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ಸಂಶೋಧನೆಯಲ್ಲಿ, ಸಂಶೋಧನಾ ಅಧ್ಯಯನಗಳಲ್ಲಿ ವಿಧಾನವನ್ನು ಅನುಸರಿಸುತ್ತಾರೆ ನೋವು ನಿರ್ವಹಣೆಗೆ ಇದು ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ. 

 ಪ್ಲಸೀಬೊ ನೋವು ನಿವಾರಕ (Placebo analgesia) ಎಂದರೇನು? 

ಒಬ್ಬ ವ್ಯಕ್ತಿಯು ಅನುಭವಿಸುವ ನೋವು ಮನಸ್ಸಿಗೆ ಸಂಬಂಧಿಸಿದೆ, ಅವರ ನಂಬಿಕೆಯು ಅವರ ಗ್ರಹಿಕೆಯ ಮೇಲೆ ಪ್ರಭಾವ ಬೀರುತ್ತದೆ, ನೋವನ್ನು ಗುಣಪಡಿಸಲಾಗದು ಮತ್ತು ಅದು ಶಾಶ್ವತವಾಗಿ ಉಳಿಯುತ್ತದೆ ಎಂದು ನಾನು ಭಯಪಟ್ಟರೆ ನನ್ನ ಗ್ರಹಿಕೆಯು ಕೆಟ್ಟದಾಗಿ ಪರಿಣಾಮ ಬೀರಬಹುದು. ಯಾರಾದರೂ ನೋವನ್ನು ಆರೋಗ್ಯದ  ಬಗೆಗಿನ ಕಾಳಜಿಯ ಸಂಕೇತವೆಂದು ಪರಿಗಣಿಸಿ, ಅದರ ಕಾರಣವನ್ನು ಕಂಡುಹಿಡಿಯಲು ಮತ್ತು ಅದನ್ನು ಪರಿಹರಿಸಲು ಪ್ರಯತ್ನಿಸಿದರೆ, ರೋಗಿಗಳು ತಮ್ಮ ಚಿಕಿತ್ಸೆಯನ್ನು ನಂಬುತ್ತಾರೆ ಮತ್ತು ಪ್ರಕ್ರಿಯೆಯ ಉದ್ದಕ್ಕೂ ಅವರ ನೋವು ಕಡಿಮೆಯಾಗುತ್ತಾ ಹೋಗುತ್ತದೆಎಂದು ಗುಜರಾತ್ ಅಹಮದಾಬಾದ್ HCG ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಹನ್ಸಾಲ್ ಭಚೆಚ್ ಅವರು ಹೇಳುತ್ತಾರೆ 

ನಂಬಿಕೆ ಅಥವಾ ಭರವಸೆಯು ದೊಡ್ಡ ಪಾತ್ರವನ್ನು ಹೊಂದಿದ್ದರೂ, ಪ್ಲಸೀಬೊ ನೋವು ನಿವಾರಣಾ ಪ್ರಕ್ರಿಯೆಯಲ್ಲಿ ಇತರ ನರವೈಜ್ಞಾನಿಕ ಪ್ರಕ್ರಿಯೆಗಳ ಕೊಡುಗೆಯೂ ಇದೆ. ಪ್ಲಸೀಬೊ ನೋವು ನಿವಾರಣೆಯನ್ನು ಕೇಂದ್ರ ನರಮಂಡಲ ಮತ್ತು ಬಾಹ್ಯ ಮನೋದೈಹಿಕ ಕಾರ್ಯವಿಧಾನಗಳನ್ನು ಒಳಗೊಂಡಿರುವ ಸಂಕೀರ್ಣವಾದ, ಮಾನಸಿಕನರಜೈವಿಕ ಘಟನೆ ಎಂದು ಚೆನ್ನೈನ ಕಾವೇರಿ ಆಸ್ಪತ್ರೆಗಳ ಸಮಾಲೋಚಕರಾದ ನರವಿಜ್ಞಾನಿ ಡಾ ಶುಭಾ ಸುಬ್ರಮಣಿಯನ್ ಹೇಳುತ್ತಾರೆಸಕ್ರಿಯ ನೋವು ನಿವಾರಕಗಳ (ಬಾಹ್ಯ ಅಂಗಾಂಶಗಳು ಮತ್ತು ಕೇಂದ್ರ ನರಮಂಡಲದ ಮೇಲೆ ಕಾರ್ಯನಿರ್ವಹಿಸುವ ಮೂಲಕ ನೋವು ಮತ್ತು ಉರಿಯೂತದ ಅರ್ಥವನ್ನು ಕಡಿಮೆ ಮಾಡುವ ವಸ್ತುಗಳು ಅಥವಾ ಔಷಧಿಗಳು) ಪ್ರತಿಕ್ರಿಯೆಯನ್ನು ಮಾರ್ಪಡಿಸುವಲ್ಲಿ ಎರಡೂ ಅಂಶಗಳು ನೋವು ಗ್ರಹಿಕೆ ಮತ್ತು ಕ್ಲಿನಿಕಲ್ ರೋಗಲಕ್ಷಣಗಳ ಮೇಲೆ ಪ್ರಭಾವ ಬೀರಬಹುದು. 

ಪ್ಲಸೀಬೊ ನೋವು ನಿವಾರಕದ ಹಿಂದಿನ ನರಜೈವಿಕ (ನ್ಯೂರೋಬಯಾಲಾಜಿಕಲ್) ಅಂಶಗಳು: 

ಮಾನಸಿಕ ಅಂಶಗಳ ಜೊತೆಗೆ, ನ್ಯೂರೋಬಯಾಲಾಜಿಕಲ್ ಅಂಶಗಳು ಪ್ಲಸೀಬೊ ನೋವು ನಿವಾರಕದ ಮೇಲೆ ಪರಿಣಾಮ ಬೀರಬಹುದು. 

 “ಪ್ಲಸೀಬೊ ನೋವು ನಿವಾರಕವು, ಮಾನಸಿಕ ಪ್ರತಿಕ್ರಿಯೆಯ ಪರಿಣಾಮವಾಗಿ ಬಿಡುಗಡೆಗೊಳ್ಳುವ ಡೋಪಮೈನ್, ಸಿರಾಟೋನಿನ್ ಮತ್ತು ಕ್ಯಾನಬಿನಾಯ್ಡ್ಗಳಂತಹ ಅಂತರ್ವರ್ಧಕ ನ್ಯೂರೋಮಾಡ್ಯುಲೇಟರ್ಗಳಿಂದ (ನರಮಂಡಲದಲ್ಲಿನ ನ್ಯೂರಾನ್ಗಳ ಚಟುವಟಿಕೆಯನ್ನು ಮಾರ್ಪಡಿಸುವ ಅಥವಾ ಬದಲಾಯಿಸುವ ರಾಸಾಯನಿಕಗಳು) ಪ್ರಭಾವಿತಗೊಳ್ಳುತ್ತದೆ ಎಂದು ಡಾ ಸುಬ್ರಮಣಿಯನ್ ಹೇಳುತ್ತಾರೆ. 

ವಿಭಿನ್ನ ನ್ಯೂರೋಮಾಡ್ಯುಲೇಟರ್ಗಳು ಮೆದುಳಿನ ಮೇಲೆ ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಬೀರಬಹುದು. ಡೋಪಮೈನ್, ಸಂತೋಷ ಮತ್ತು ಸಾಧನೆಯ ಪ್ರತಿಫಲಕ್ಕೆ ಸಂಬಂಧಿಸಿದ್ದು, ಅದರ ಬಿಡುಗಡೆಯು ಪ್ಲಸೀಬೊ ಚಿಕಿತ್ಸೆಯಂತೆ ಕಾರ್ಯನಿರ್ವಹಿಸುತ್ತದೆ ಅಂದರೆ ಡೊಪಮೈನ್ ಸ್ರವಿಕೆಯು ಜನರ ಸಕಾರಾತ್ಮಕ ನಂಬಿಕೆಯನ್ನು ಬಲಪಡಿಸುತ್ತದೆ. ಸಿರಾಟೋನಿನ್ ನಾವು ನೋವನ್ನು ಹೇಗೆ ಅನುಭವಿಸುತ್ತೇವೆ ಮತ್ತು ಅರ್ಥೈಸಿಕೊಳ್ಳುತ್ತೇವೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ. ಪ್ಲಸೀಬೊ ಚಿಕಿತ್ಸೆಯು ಸಿರಾಟೋನಿನ್ ಮಟ್ಟ ಮತ್ತು ನೋವು ಹೇಗೆ ಸಂಸ್ಕರಿಸಲ್ಪಡುತ್ತದೆ ಎಂಬುದರ ಮೇಲೆಯೂ ಸಹ ಪರಿಣಾಮ ಬೀರಬಹುದು. ದೇಹವು ಕ್ಯಾನಬಿನಾಯ್ಡ್ಗಳನ್ನು ಸಹ ಉತ್ಪತ್ತಿ ಮಾಡುತ್ತದೆ, ಇದು ನೋವಿನ ಪ್ರಚೋದನೆಗಳನ್ನು ಗ್ರಹಿಸುವ ಪ್ರಕ್ರಿಯೆಯನ್ನು ಬದಲಿಸುತ್ತದೆ. 

ವಿವಿಧ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು 

ಪ್ಲಸೀಬೊ ನೋವು ನಿವಾರಕವು ವ್ಯಕ್ತಿಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಮಾತ್ರವಲ್ಲ, ಕೆಲವು ಜನರು ಬಯಸಿದ ಫಲಿತಾಂಶವನ್ನು ಪಡೆಯದೆಯೇ ಇರಬಹುದು. “ನಿರ್ದಿಷ್ಟ ಪ್ರಮಾಣದ ನೋವು ಕಡಿತ ಅಥವಾ ಸಂಪೂರ್ಣ ನೋವು ಪರಿಹಾರದಂತಹ ಯಾವುದೇ ಪರಿಣಾಮಗಳು ಇಲ್ಲದಿರಬಹುದು, ಫಲಿತಾಂಶಗಳು ಅನೇಕ ಅಸ್ಥಿರ ಅಂಶಗಳ ಮೇಲೆ ಅವಲಂಬಿತವಾಗಿದೆಎಂದು ಡಾ ಭಚೆಚ್ ವಿವರಿಸುತ್ತಾರೆ. 

ಮನೋಸಾಮಾಜಿಕ ಅಸ್ಥಿರಗಳು: ವ್ಯಕ್ತಿಗಳ ನಡುವಿನ ಮನೋಸಾಮಾಜಿಕ ಅಂಶಗಳು ಸಹ ಅವರು ಪ್ಲಸೀಬೊಗೆ ಹೇಗೆ ಸ್ಪಂದಿಸುತ್ತಾರೆ ಎಂಬುದರ ಮೇಲೆ ಪರಿಣಾಮ ಬೀರಬಹುದು. 

ಪ್ಲಸೀಬೊಗೆ ಅವರ ಪ್ರತಿಕ್ರಿಯೆಯು ಅವರ ಮಾನಸಿಕ ಸ್ಥಿತಿ, ಆಶಾವಾದದ ಮಟ್ಟ ಮತ್ತು ನಿಭಾಯಿಸುವ ತಂತ್ರದಂತಹ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಹೊಂದಾಣಿಕೆ, ಒಪ್ಪುವಿಕೆ, ಒತ್ತಡ ನಿಭಾಯಿಸುವ ಉತ್ತಮ ಕಾರ್ಯವಿಧಾನಗಳು ಮತ್ತು ಸಕಾರಾತ್ಮಕ ಮನಸ್ಥಿತಿಯಂತಹ ಅಂಶಗಳು, ಅಂತಸ್ರಾವಕ ಒಪಿಯಾಡ್ (ದೇಹದ ನೈಸರ್ಗಿಕ ಉತ್ಪಾದಿಸುವ ಮತ್ತು ಬಿಡುಗಡೆಗೊಳಿಸುವ ನೋವು ನಿವಾರಕ ಒಪಿಯಾಡ್ ಸಂಯುಕ್ತಗಳು, ಇವು ನೋವು ನಿವಾರಣೆ, ಮೂಡ್ ಕಂಟ್ರೋಲ್ ಮತ್ತು ಒತ್ತಡದ ಪ್ರತಿಕ್ರಿಯೆಯನ್ನು ನಿಯಂತ್ರಿಸುತ್ತವೆ) ಸ್ರವಿಸುವಿಕೆಯನ್ನು ಉತ್ತಮಪಡಿಸುವ ಮೂಲಕ ಪ್ಲಸೀಬೊಗೆ ಅವರ ಪ್ರತಿಕ್ರಿಯೆಯನ್ನು ಅನುಕೂಲಕರವಾಗಿ ಬದಲಾಯಿಸಬಹುದು ಎಂದು ಡಾ ಸುಬ್ರಮಣಿಯನ್ ಹೇಳುತ್ತಾರೆ. 

ಆನುವಂಶಿಕ ಪ್ರವೃತ್ತಿ: ಕೆಲವು ಜನರು ತಮ್ಮ ಪೋಷಕರಿಂದ ಆನುವಂಶಿಕವಾಗಿ ಪಡೆದ ಆನುವಂಶಿಕ ರೂಪಾಂತರಗಳ ಕಾರಣದಿಂದಾಗಿ ಕೆಲವು ಗುಣಲಕ್ಷಣಗಳಿಂದ ಹೆಚ್ಚು ಪ್ರಭಾವಿತರಾಗಿರುತ್ತಾರೆ, ಪರಿಣಾಮವಾಗಿ, ಕೆಲವು ಜೀನೋಮ್ಗಳು ಪ್ಲಸೀಬೊ ನೋವು ನಿವಾರಕಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸಬಹುದು, ಇನ್ನು ಕೆಲವು ಉತ್ತಮವಾಗಿ ಪ್ರತಿಕ್ರಿಯಿಸದೆಯೇ ಇರಬಹುದು. 

ಮೆದುಳಿನ ಅಂಗರಚನಾಶಾಸ್ತ್ರ: ಅರಿವು ಮತ್ತು ಭಾವನಾತ್ಮಕ ಸಂಸ್ಕರಣಾ ಪ್ರದೇಶಗಳು ಪ್ಲಸೀಬೊ ಕಾರಣದ ನೋವು ನಿವಾರಣೆಯನ್ನು ನಿರೀಕ್ಷಿಸುವಲ್ಲಿ ಮತ್ತು ಗ್ರಹಿಸುವಲ್ಲಿ ಕೆಲಸ ಮಾಡುತ್ತವೆ. ಚೆನ್ನಾಗಿ ಬೆಳವಣಿಗೆ ಹೊಂದಿದ ಅರಿವಿನ ಮತ್ತು ಭಾವನಾತ್ಮಕ ಸಂಸ್ಕರಣಾ ಪ್ರದೇಶಗಳನ್ನು ಹೊಂದಿರುವವರು, ನೋವು ನಿವಾರಣೆಯಲ್ಲಿ ದೊಡ್ಡ ಪ್ರಮಾಣದ ಪ್ಲಸೀಬೊ ಪರಿಣಾಮಗಳನ್ನು ತೋರಿಸಬಹುದು. “ಪ್ರೀಫ್ರಂಟಲ್ ಕಾರ್ಟೆಕ್ಸ್ ಮತ್ತು ಆಂಟೀರಿಯರ್ ಸಿಂಗ್ಯುಲೇಟ್ ಕಾರ್ಟೆಕ್ಸ್ (ಮೆದುಳಿನ ಪ್ರದೇಶಗಳು) ನಂತಹ ಮೆದುಳಿನ ಅಂಗರಚನಾ ಅಂಶಗಳು ಪ್ಲಸೀಬೊ ನೋವು ನಿವಾರಕ ಪ್ರತಿಕ್ರಿಯೆಗಳನ್ನು ನಿಯಂತ್ರಿಸುವಲ್ಲಿ ಮುಖ್ಯವಾದವುಗಳುಎಂದು ಡಾ ಸುಬ್ರಮಣಿಯನ್ ಹೇಳುತ್ತಾರೆ. 

ಪ್ಲಸೀಬೊ ನೋವು ನಿವಾರಕವನ್ನು ಬಳಸುವುದು ನೈತಿಕವೇ? 

ತಾವು ನೋವಿಗೆ ಪ್ಲಸೀಬೊವನ್ನು ಸ್ವೀಕರಿಸುತ್ತಿದ್ದೀರಿ ಎಂದು ರೋಗಿಗೆ ತಿಳಿಸಿದರೆ, ಅವರ ನಂಬಿಕೆ ಕಾರಣದಿಂದ, ಚಿಕಿತ್ಸೆಯ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಮಾತ್ರವಲ್ಲ ಪ್ಲಸೀಬೊಗೆ ಅವರ ತೋರುವ ಪ್ರತಿಕ್ರಿಯೆಯ ಮೇಲೆ ಕೂಡಾ ಪರಿಣಾಮ ಬೀರಬಹುದು. ಇದು ಕ್ಲಿನಿಕಲ್ ಸಂದರ್ಭಗಳಲ್ಲಿ ಪ್ಲಸೀಬೊ ನೋವು ನಿವಾರಕದ ಬಳಕೆಯ ಬಗ್ಗೆ ನೈತಿಕ ಕಾಳಜಿಗಳ ಹೆಚ್ಚಳಕ್ಕೆ ಕಾರಣವಾಗಿದೆ. 

ವೈಜ್ಞಾನಿಕವಾಗಿ ಅಗತ್ಯವಿದ್ದಾಗ, ನೈತಿಕ ವಿಶ್ಲೇಷಣೆ ಮತ್ತು ಅಂತಾರಾಷ್ಟ್ರೀಯ ನೈತಿಕ ಮಾರ್ಗದರ್ಶನದಿಂದ ವಿವರಿಸಲಾದ ಕೆಲವು ಸನ್ನಿವೇಶಗಳು ಯಾದೃಚ್ಛಿಕ ಪ್ರಯೋಗಗಳಲ್ಲಿ ಪ್ಲಸೀಬೊ ನಿಯಂತ್ರಣಗಳ ಬಳಕೆಯನ್ನು ಅನುಮತಿಸುತ್ತವೆ. ಇವು ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇಲ್ಲದ, ಚಿಕಿತ್ಸೆಯ ತಡೆಹಿಡಿಯುವಿಕೆಯಿಂದ ಭಾಗವಹಿಸುವವರಿಗೆ ಅಪಾಯಗಳು ಕಡಿಮೆ ಇರುವ ಅಥವಾ ಪ್ಲಸೀಬೊ ಬಳಕೆಯ ಸಮರ್ಥ ಕಾರ್ಯವಿಧಾನದಗಳನ್ನು ಹೊಂದಿರುವ ಮತ್ತು ಚಿಕಿತ್ಸೆಯನ್ನು ತಡೆಹಿಡಿಯುವುದರಿಂದ ವ್ಯಕ್ತಿಗಳಿಗೆ ಗಣನೀಯ ಅಪಾಯ ಆಗದಿರುವ ಅಧ್ಯಯನ ಪರಿಸ್ಥಿತಿಗಳನ್ನು ಒಳಗೊಂಡಿರುತ್ತವೆ ಎಂದು ಕಂಟೆಂಪರರಿ ಕ್ಲಿನಿಕಲ್ ಟ್ರಯಲ್ಸ್ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧ ಹೇಳುತ್ತದೆ. 

ಸಾರಾಂಶ: 

  • ರೋಗಿಯು ಯಾವುದೇ ನಿಜವಾದ ಚಿಕಿತ್ಸಕ ಪ್ರಯೋಜನವಿಲ್ಲದೆ ಚಿಕಿತ್ಸೆಯನ್ನು ಪಡೆದ ನಂತರ ನೋವು ಪರಿಹಾರವನ್ನು ಅನುಭವಿಸಿದಾಗ ಪ್ಲಸೀಬೊ ನೋವು ನಿವಾರಣೆ ಸಂಭವಿಸುತ್ತದೆ. ಇದು ಪರಿಣಾಮಕಾರಿಯಾಗಿರುತ್ತದೆ ಏಕೆಂದರೆ ರೋಗಿಯು ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ನಂಬುತ್ತಾನೆ.
  • ವ್ಯಕ್ತಿಯ ನಂಬಿಕೆಯ ವ್ಯವಸ್ಥೆಯು ಪ್ಲಸೀಬೊ ನೋವು ನಿವಾರಕದ ಕಾರ್ಯವಿಧಾನದಲ್ಲಿ ಮಹತ್ವದ ಅಂಶವಾಗಿದ್ದಾಗ, ಅಂತರ್ವರ್ಧಕ ನ್ಯೂರೋಮಾಡ್ಯುಲೇಟರ್ಗಳು ಸಹ ಒಂದು ಪಾತ್ರವನ್ನು ವಹಿಸುತ್ತವೆ.
  • ಮನೋಸಾಮಾಜಿಕ ಅಂಶಗಳು, ಆನುವಂಶಿಕ ಸ್ವಭಾವ ಮತ್ತು ಮೆದುಳಿನ ರಚನೆಯನ್ನು ಅವಲಂಬಿಸಿ ಪ್ಲಸೀಬೊ ಚಿಕಿತ್ಸೆಗಳಿಗೆ ವ್ಯಕ್ತಿಗಳ ಪ್ರತಿಕ್ರಿಯೆಯು ಬದಲಾಗಬಹುದು.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ