ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಗ್ರೇಡೆಡ್ ಮೋಟಾರ್ ಇಮೇಜರಿ: ನೋವನ್ನು ನಿರ್ವಹಿಸಲು ಒಂದು ನೂತನ ವಿಧಾನ 
10

ಗ್ರೇಡೆಡ್ ಮೋಟಾರ್ ಇಮೇಜರಿ: ನೋವನ್ನು ನಿರ್ವಹಿಸಲು ಒಂದು ನೂತನ ವಿಧಾನ 

ಗ್ರೇಡೆಡ್ ಮೋಟಾರ್ ಇಮೇಜರಿಯು ದೀರ್ಘಕಾಲದ ನೋವಿನಿಂದ ಬಳಲುತ್ತಿರುವವರ ನೋವು ನಿರ್ವಹಣೆಗೆ ಸಹಾಯ ಮಾಡಲು ಮಾನವ ಮೆದುಳಿನ ಪ್ಲಾಸ್ಟಿಸಿಟಿಯ ಮೇಲೆ ಕಾರ್ಯನಿರ್ವಹಿಸುತ್ತದೆ ಹಾಗೂ ನೋವಿಗೆ ಅವರ ಮೆದುಳಿನ ಪ್ರತಿಕ್ರಿಯೆಗಳನ್ನು ಮರುಹೊಂದಿಸುತ್ತದೆ.

ಗ್ರೇಡೆಡ್ ಮೋಟಾರ್ ಇಮೇಜರಿ

ನೋವಿಗೆ ವಿವಿಧ ಕಾರಣಗಳಿರಬಹುದು, ವಿವಿಧ ಕಾರಣಗಳು ನೋವನ್ನು ಪ್ರಚೋದಿಸಬಹುದು ಸ್ನಾಯು ಅಥವಾ ಕೀಲುಗಳಿಗಾಗುವ ಏಟು ಅಥವಾ ಉರಿಯೂತದಿಂದ ಹಿಡಿದು ನರಗಳ ಸಂಕುಚನೆ ಅಥವಾ ಕಿರಿಕಿರಿಯವರೆಗೆ ವಿವಿಧ ಕಾರಣಗಳಿಂದ ನೋವು ಕಾಣಿಸಿಕೊಳ್ಳಬಹುದು. ಕೆಲವರಲ್ಲಿ ಕೆಲವು ದಿನಗಳವರೆಗೆ ನೋವು ಇರಬಹುದು, ಇನ್ನು ಕೆಲವರಿಗೆ ಅನೇಕ ವರ್ಷಗಳವರೆಗೆ ನೋವು ಕಾಡಬಹುದು. ನೋವಿನ ಕಾರಣವನ್ನು ಲೆಕ್ಕಿಸದೆಯೇ, ದೇಹದ ಬಾಧಿತ ಭಾಗದಿಂದ ನೋವಿನ ಸಂಕೇತಗಳನ್ನು ಸಂಸ್ಕರಿಸುವ ಮತ್ತು ಅರ್ಥೈಸುವ ಮೂಲಕ ಜನರು ನೋವನ್ನು ಹೇಗೆ ಅನುಭವಿಸುತ್ತಾರೆ ಎಂಬ ಪ್ರಕ್ರಿಯೆಯಲ್ಲಿ ಮೆದುಳು ಮತ್ತು ನರಮಂಡಲವು ಒಂದು ಪಾತ್ರವನ್ನು ವಹಿಸುತ್ತದೆ 

 ಈ ಸೂಚಕ ಕಾರ್ಯ ವಿಧಾನದ ಮೇಲೆ ಕೇಂದ್ರೀಕರಿಸಿ, ಆಸ್ಟ್ರೇಲಿಯಾದ ನೋವು ವಿಜ್ಞಾನ ಮತ್ತು ಫಿಸಿಯೋಥೆರಪಿ ತಜ್ಞರಾದ ಡಾ.ಲೊರಿಮರ್ ಮೊಸ್ಲೆ ಮತ್ತು ಡೇವಿಡ್ ಬಟ್ಲರ್ ಗ್ರೇಡೆಡ್ ಮೋಟಾರ್ ಇಮೇಜರಿಯನ್ನು ರೂಪಿಸಿದರು. ಇದು 2000 ದ ಆರಂಭದಲ್ಲಿ ಅಭಿವೃದ್ಧಿಪಡಿಸಲಾದ, ನೋವು ನಿರ್ವಹಣೆಯ ಒಂದು ನೂತನ ತಂತ್ರಜ್ಞಾನ. ಈ ತಂತ್ರಜ್ಞಾನವು ಬ್ರೈನ್ ಪ್ಲಾಸ್ಟಿಸಿಟಿಯ (ಅಂದರೆ ಹೊಸ ನರ ಸಂಪರ್ಕಗಳನ್ನು ರಚಿಸಿಕಲಿಕೆ, ಅನುಭವ ಅಥವಾ ಏಟಿನ ಮೂಲಕ ಪಡೆದ ಸಂವೇದನೆಗಳನ್ನು ಮರುರೂಪಿಸಿ ಅದಕ್ಕೆ ಹೊಂದಿಕೊಳ್ಳುವ ಮೆದುಳಿನ ಸಾಮರ್ಥ್ಯ) ಮೇಲೆ ಅವಲಂಬಿತವಾಗಿದೆ. 

 ಗ್ರೇಡೆಡ್ ಮೋಟಾರ್ ಇಮೇಜರಿಯು ದೀರ್ಘಕಾಲಿಕ ನೋವಿನಿಂದ ಬಳಲುತ್ತಿರುವ ಜನರಿಗೆ, ನೋವು ಮತ್ತು ಚಲನೆಗೆ ಮೆದುಳಿನ ಪ್ರತಿಕ್ರಿಯೆಯನ್ನು ಮರುಹೊಂದಿಸಲು ಮತ್ತು ಆ ಮೂಲಕ ನೋವನ್ನು ತಗ್ಗಿಸಲು ಸಹಾಯ ಮಾಡುತ್ತದೆ 

 ಗ್ರೇಡೆಡ್ ಮೋಟಾರ್ ಇಮೇಜರಿ ಎಂದರೇನು? 

 ಗ್ರೇಡೆಡ್ ಮೋಟಾರ್ ಇಮೇಜರಿ ಅಂದರೆ ದೀರ್ಘಕಾಲಿಕ ನೋವು ನಿರ್ವಹಣೆಯ ಒಂದು ಚಿಕಿತ್ಸಾ ಸಾಧನ. ಇದನ್ನು ಆಸ್ಟ್ರೇಲಿಯಾದ ಸಕ್ರಿಯ ಆರೋಗ್ಯ ಸಂಪನ್ಮೂಲ ನೆಟ್‌ವರ್ಕ್ ನ್ಯೂರೋ ಆರ್ಥೋಪೆಡಿಕ್ ಇನ್ಸ್ಟಿಟ್ಯೂಟ್ (NOI) ಅಭಿವೃದ್ಧಿಪಡಿಸಿದ್ದು, ಇದು ನೋವು ನಿರ್ವಹಣೆ, ನ್ಯೂರೋಡೈನಮಿಕ್ಸ್, ಆರೋಗ್ಯ ಕಾರ್ಯಕ್ಷಮತೆ ಮತ್ತು ಭೌತಿಕ ಚಿಕಿತ್ಸೆಯ ಗುರಿಯನ್ನು ಒಳಗೊಂಡಿದೆ. NOI ಸಂಸ್ಥೆಯನ್ನು ಬಟ್ಲರ್ ಮತ್ತು ಡಾ. ಮೋಸ್ಲೆ ಸ್ಥಾಪಿಸಿದರು. 

 ಗುಣವಾಗುವ ಅವಧಿ ಮೂರು ತಿಂಗಳಿಗಿಂತಲೂ ಹೆಚ್ಚು ಸಮಯ ನೋವು ಮುಂದುವರಿಯುವ ಪರಿಸ್ಥಿತಿಯನ್ನು ನಾವು ದೀರ್ಘಕಾಲಿಕ ನೋವು, ಅಂದರೆ ಕಾಂಪ್ಲೆಕ್ಸ್ ರೀಜನಲ್ ಪೈನ್ ಸಿಂಡ್ರೋಮ್(CRPS),  ಎಂದು ವರ್ಗೀಕರಿಸುತ್ತೇವೆ, ಈ ಹಿಂದೆ ಇದನ್ನು ಇಫ್ಲೆಕ್ಸ್ ಸಿಂಪಥ್ಯಾಟಿಕ್ ಡಿಸ್ಟೋಫಿ(RSD),  ಮತ್ತು ಫೈಬ್ರೋಮಯಾಲ್ಜಿಯಾ ಎಂದು ಕರೆಯಲಾಗುತ್ತಿತ್ತು” ಎಂದು NOI ಗಾಗಿ ಗ್ರೇಡೆಡ್ ಮೋಟಾರ್ ಇಮೇಜರಿ ಸೆಶನ್ಗಳನ್ನು ನಡೆಸುವ ಮುಂಬೈಯ ಫಿಸಿಯೋಥೆರಪಿಸ್ಟ್ ಪ್ರಕಾಶ್ ಆರ್. ಶರೋಫ್ ಹೇಳುತ್ತಾರೆ. ಅಂಗವು ಗುಣವಾಗುವ ಪ್ರಕ್ರಿಯೆಯ ಅವಧಿಯು ದೀರ್ಘವಾದರೆ, ನೋವಿನ ಅನುಭವದ ಒಟ್ಟಾರೆ ಪ್ರಕ್ರಿಯೆಯಲ್ಲಿ ನರವ್ಯೂಹವು ಒಂದು ಗಮನಾರ್ಹ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ನಾವು ಗಮನಿಸಿದ್ದೇವೆ” ಶರೋಫ್ ಹೇಳುತ್ತಾರೆ.   

 ನೋವನ್ನು ವಿವರಿಸಿ ಎಂಬ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳದ ಹೊರತು ನೀವು ಗ್ರೇಡೆಡ್ ಮೋಟಾರ್ ಇಮೇಜರಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಶರೋಫ್ ಹೇಳುತ್ತಾರೆ. 

 ನೋವನ್ನು ವಿವರಿಸಿ ಎನ್ನುವುದು ಒಂದು ಅರಿವುಆಧಾರಿತ ವಿಧಾನವಾಗಿದ್ದು, ಅದು ನೋವಿನ ಸಂಕೀರ್ಣ ಸ್ವರೂಪ ಮತ್ತು ಅದರ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಜನರಿಗೆ ಸಹಾಯ ಮಾಡುತ್ತದೆ. ನೋವು ಎನ್ನುವುದು ಏಟು ಅಥವಾ ಹಾನಿಯ ಪರಿಣಾಮಕ್ಕಿಂತ ಹೆಚ್ಚಾಗಿ, ಅದೊಂದು ಸಂವೇದನಾ ಮಾಹಿತಿ, ಭಾವನಾತ್ಮಕ ಪ್ರತಿಕ್ರಿಯೆಗಳು ಮತ್ತು ಹಿಂದಿನ ಅನುಭವಗಳಿಗೆ ಸಂಬಂಧಿಸಿದ ಮೆದುಳಿನ ವ್ಯಾಖ್ಯಾನವೂ ಸೇರಿದಂತೆ ಹಲವಾರು ಅಂಶಗಳಿಂದ ಪ್ರಭಾವಿತವಾಗಿರುವ ಬಹು ಆಯಾಮದ ಅನುಭವವಾಗಿದೆ ಎಂಬ ಅಂಶದ ಮೇಲೆ ಅವಲಂಬಿತವಾಗಿದೆ. 

 ಗ್ರೇಡೆಡ್ ಮೋಟಾರ್ ಇಮೇಜರಿಯ ಮೂರು ಹಂತಗಳು: 

 ಗ್ರೇಡೆಡ್ ಮೋಟಾರ್ ಇಮೇಜರಿಯನ್ನು ಆರು ವಾರಗಳಲ್ಲಿ, ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಪ್ರತಿಯೊಂದು ಹಂತವು ಎರಡು ವಾರಗಳವರೆಗೆ ಇದ್ದು (ದಿನಕ್ಕೆ ಎರಡು ಗಂಟೆಗಳು), ಹಂತಗಳು ಈ ಕೆಳಗಿನಂತಿವೆ 

 ಪಾರ್ಶ್ವವನ್ನು ಗುರುತಿಸುವಿಕೆ: 

ಲ್ಯಾಟರಾಲಿಟಿ ರೆಕಗ್ನಿಷನ್ ಅಥವಾ ಪಾರ್ಶ್ವವನ್ನು ಗುರುತಿಸುವಿಕೆ ಅನ್ನುವುದು ದೇಹದ ನೋವಿನ ಭಾಗವನ್ನು, ಅಂದರೆ ಎಡ ಅಥವಾ ಬಲ ಭಾಗದ ಚಿತ್ರಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯದ ಪರೀಕ್ಷೆಯಾಗಿದೆ. ನೋವಿನ ಪುನ:ಶ್ಚೇತನಾ ಪ್ರಕ್ರಿಯೆಯಲ್ಲಿ ಈ ಸಾಮರ್ಥ್ಯವು ನಿರ್ಣಾಯಕವಾಗಿದೆ ಯಾರಿಗಾದರೂ ಆರು ತಿಂಗಳ ಹಿಂದೆ ಕೈಗೆ ಏಟಾಗಿತ್ತು ಅಂದುಕೊಳ್ಳಿ, ನಂತರ ಅವರಿಗೆ ಎಡ ಮತ್ತು ಬಲ ಭಾಗದ ನಡುವಿನ ವ್ಯತ್ಯಾಸವನ್ನು ಗುರುತಿಸಲು ಕಷ್ಟವಾಗಬಹುದು, ರೋಗಿಗಳು ದೀರ್ಘಕಾಲ ನೋವಿನಲ್ಲಿದಾಗ ಅದು ಬದಲಾಗುತ್ತದೆ. ಎಡ ಮತ್ತು ಬಲ ಭಾಗದ ವ್ಯತ್ಯಾಸವನ್ನು ಗುರುತಿಸುವ ವ್ಯಕ್ತಿಯ ಸಾಮರ್ಥ್ಯವನ್ನು ನಿರ್ಣಯಿಸುವ ಸಾಧನವು ನಮ್ಮಲ್ಲಿದೆ. ಪರೀಕ್ಷೆಗಳಿಗೆ ಉತ್ತರಿಸುವ ಸಮಯವು 1 ರಿಂದ 1.5 ಸೆಕೆಂಡ್ ನಡುವೆ ಇರಬೇಕು. ನಿಖರತೆಗಾಗಿ, ಒಟ್ಟು ಸ್ಕೋರ್ 80% ಗಿಂತ ಹೆಚ್ಚು ಇರಬೇಕು ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಶರೋಫ್ ಹೇಳುತ್ತಾರೆ. 

ದೃಶ್ಯ ಇಮೇಜರಿ: 

 ಮಿರರ್ ನ್ಯೂರಾನ್‌ಗಳು ಎಂಬ ನರಕೋಶಗಳು ಮೆದುಳಿನ 25% ನಷ್ಟು ಕೋಶಗಳನ್ನು ಆವರಿಸಿವೆ. ನೀವು ನೋವಿರುವ ದೇಹಭಾಗವನ್ನು ಅಲ್ಲಾಡಿಸುವ ಬಗ್ಗೆ ಯೋಚಿಸುವಾಗ ಇವು ಜಾಗೃತಗೊಳ್ಳುತ್ತವೆ. ಚಲನೆಯನ್ನು ಕಲ್ಪಿಸಿಕೊಳ್ಳುವ ಆ ಸಂದರ್ಭದಲ್ಲಿ(ನೀವು ವಾಸ್ತವವಾಗಿ ಅಲುಗಾಡಿಸುವಾಗ) ನೀವು ಮೆದುಳಿನ ಅದೇ ಭಾಗವನ್ನು ಬಳಸುತ್ತೀರಿ. 

ದೃಶ್ಯ ಇಮೇಜರಿಯಲ್ಲಿ, ನಾವು ನಿಮ್ಮನ್ನು ಚಲಿಸುವುದನ್ನು ದೃಶ್ಯೀಕರಿಸುವಂತೆ ಅಥವಾ ನೋವಿರುವ ದೇಹ ಭಾಗವನ್ನು ಅಲುಗಾಡಿಸುವಂತೆ ಮತ್ತು ಅದು ಸಹಜವಾಗಿರುವಂತೆ ಮಾಡುತ್ತೇವೆ. ಹೀಗೆ ಮಾಡುವಾಗ, ಬಳಸಿದ ಘಟಕದಲ್ಲಿ ಸಹಜವಾಗಿ ಕಾರ್ಯ ನಿರ್ವಹಿಸಿದ ಮೆದುಳಿನ ಅದೇ ಸರ್ಕ್ಯೂಟ್ಗಳನ್ನು ನಾವು ಸೇರಿಸುತ್ತೇವೆ” ಎಂದು ಶರೋಫ್ ಹೇಳುತ್ತಾರೆ. 

 ಮಿರರ್ ಥೆರಪಿ: 

ಮಿರರ್ ಥರೆಪಿ (ಕನ್ನಡಿ ಚಿಕಿತ್ಸೆ) ಅಂದರೆ, ಇದು ನಿಮಗೆ ನೋವುಂಟು ಮಾಡುವ ದೇಹ ಭಾಗದ ಇನ್ನೊಂದು ಬದಿಯ ಪ್ರತಿಬಿಂಬವನ್ನು ತೋರಿಸುತ್ತದೆ. ನೋವಿನ ಭಾಗದ ಚಲಿಸುವಿಕೆಯು ಅಪಾಯ ರಹಿತವಾಗಿದೆ ಎಂಬುದನ್ನು ಮೆದುಳಿಗೆ ತಿಳಿಯಪಡಿಸಲು, ಕನ್ನಡಿ ಚಿಕಿತ್ಸೆಯು ಸಲೀಸಾಗಿ ಚಲಿಸುವ ವಿರುದ್ಧ ಭಾಗದ ಪ್ರತಿಬಿಂಬವನ್ನು ಬಿಂಬಿಸುತ್ತದೆ. ಪರಿಣಾಮವಾಗಿ, ಬಾಧಿತ ದೇಹ ಭಾಗದ ಚಲಿಸುವಿಕೆಯು ಆರಾಮದಾಯಕವಾಗಿದೆ ಮತ್ತು ಹಾಗೆ ಮಾಡುವಾಗ ಯಾವುದೇ ರೀತಿಯ ನೋವು ಕಾಣಿಸಿಕೊಳ್ಳುವುದಿಲ್ಲ ಎಂಬ ಹೊಸ ಮಾಹಿತಿಯನ್ನು ಮೆದುಳು ಪಡೆಯಲು ಪ್ರಾರಂಭಿಸುತ್ತದೆ 

 ಗ್ರೇಡೆಡ್ ಮೋಟಾರ್ ಇಮೇಜರಿಯ ವೈಶಿಷ್ಟ್ಯತೆ: 

ನೋವು ನಿರ್ವಹಣೆಯಲ್ಲಿ ಗ್ರೇಡೆಡ್ ಮೋಟಾರ್ ಇಮೇಜರಿಯ ಕಾರ್ಯವಿಧಾನವು ಇತರ ಚಿಕಿತ್ಸೆಗಳಿಗಿಂತ ವಿಶೇಷ ರೀತಿಯದ್ದಾಗಿದೆ ಎಂದು ಶೆರೋಫ್ ಹೇಳುತ್ತಾರೆ, ಒಬ್ಬ ವ್ಯಕ್ತಿಯು ಅನುಭವಿಸುವ ನೋವು ಆತನ ಮೆದುಳಿನ ಚಟುವಟಿಕೆಯಿಂದ ಪ್ರಭಾವಿತವಾಗಿರುತ್ತದೆ. ನೋವಿನಲ್ಲಿರುವ ವ್ಯಕ್ತಿಗೆ ತನ್ನ ನೋವಿನಲ್ಲಿ ಒಳಗೊಂಡಿರುವ ಮೆದುಳಿನ ಪಾತ್ರದ ಬಗ್ಗೆ ಅರಿವಿರುವುದಿಲ್ಲ. ಗ್ರೇಡೆಡ್ ಮೋಟಾರ್ ಇಮೇಜರಿ ಪ್ರಕ್ರಿಯೆಯಲ್ಲಿ ಇರುವ ಪರೀಕ್ಷೆಗಳು, ಆತ ನೋವು ಅನುಭವಿಸುವಲ್ಲಿ ಅಥವಾ ನೋವು ಮರುಕಳಿಸುವಲ್ಲಿ ಮೆದುಳಿನ ಪಾತ್ರವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ರೋಗಿಗೆ ಸಹಾಯ ಮಾಡುತ್ತದೆ. ಮಾತ್ರವಲ್ಲದೆ, ಪ್ರಕ್ರಿಯೆಯ ಅವಧಿಯಲ್ಲಿ ಅವರ ಚೇತರಿಸುವಿಕೆಯು ಯಾವ ರೀತಿಯಲ್ಲಿ ಮುಂದುವರಿಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಶರೋಫ್ ಹೇಳುತ್ತಾರೆ. 

 ಸಾರಾಂಶ 

  • ಗ್ರೇಡೆಡ್ ಮೋಟಾರ್ ಇಮೇಜರಿ ಅಂದರೆ ದೀರ್ಘಕಾಲಿಕ ನೋವು ನಿರ್ವಹಣೆಯ ಒಂದು ನೂತನ ಚಿಕಿತ್ಸಾ ಸಾಧನವಾಗಿದ್ದು, ಬ್ರೈನ್ ಪ್ಲಾಸ್ಟಿಸಿಟಿ ಎಂಬ ಅಂಶವನ್ನು ಆಧರಿಸಿದೆ. ದೀರ್ಘಕಾಲಿಕ ನೋವಿನಿಂದ ಬಳಲುತ್ತಿರುವ ಜನರ ನೋವಿನ ಸ್ಪಂದನೆಯನ್ನು ಮರುಹೊಂದಿಸಲು ಸಹಾಯಕ. 
  • ನೋವಿನ ಸಂಕೀರ್ಣತೆ ಮತ್ತು ಅದರ ಮೂಲ ಕಾರಣವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಗ್ರೇಡೆಡ್ ಮೋಟಾರ್ ಇಮೇಜರಿ ಪ್ರಕ್ರಿಯೆಯನ್ನು ತಿಳಿಯಬೇಕಾದರೆ ನೋವಿನ ವಿವರಣೆಯನ್ನು ಅರ್ಥಮಾಡಿಕೊಳ್ಳುವುದು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ