ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಕಾಲಿನಲ್ಲಿ ಆಣಿ ಆಗಿದೆಯೇ?
101

ಕಾಲಿನಲ್ಲಿ ಆಣಿ ಆಗಿದೆಯೇ?

ಪಾದದಲ್ಲಿ ಉಂಟಾಗುವ ಆಣಿಯು(ಕಾರ್ನ್) ತೀವ್ರವಾದ ನೋವುಂಟುಮಾಡುತ್ತದೆ ಮತ್ತು ನಿಲ್ಲುವುದಕ್ಕೆ, ನಡೆಯುವುದಕ್ಕೆ ಮತ್ತು ವ್ಯಾಯಾಮ ಮಾಡಲು ತೊಂದರೆ ಉಂಟುಮಾಡುತ್ತದೆ. ಕೆಲವು ಮುಂಜಾಗ್ರತೆಗಳು ಅಥವಾ ಆರಂಭಿಕ ಚಿಕಿತ್ಸೆಯಿಂದ ಇದನ್ನು ತಡೆಗಟ್ಟಬಹುದು ಎಂದು ತಜ್ಞರು ಹೇಳುತ್ತಾರೆ.   

ಕಾಲಿನಲ್ಲಿ  ಆಣಿ ಮತ್ತು ಕ್ಯಾಲಸ್‌ಗಳು ಸತ್ತಚರ್ಮದ ಕೋಶಗಳಾಗಿದ್ದು ಕೈ ಅಥವಾ ಕಾಲುಗಳಲ್ಲಿ ಹಾನಿಯುಂಟುಮಾಡುತ್ತದೆ. ಆದರೂ, ಇವುಗಳು ಒಂದಕ್ಕಿಂತ ಇನ್ನೊಂದು ಭಿನ್ನವಾಗಿರುತ್ತದೆ. ಆಣಿಗಳು ಸಣ್ಣದಾಗಿದ್ದು, ಇದು ಕೇಂದ್ರಭಾಗದಲ್ಲಿ ದಪ್ಪಗೆ ಮತ್ತು ಗಡುಸಾಗಿ ಇರುತ್ತದೆ ಹಾಗೂ ಇದರ ಸುತ್ತಲು ದಪ್ಪವಾದ ಸತ್ತ ಚರ್ಮವು ಆವರಿಸಿರುತ್ತದೆ, ಆದರೆ ಕ್ಯಾಲಸ್ ಆಣಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ, ವಿವಿಧ ಗಾತ್ರದಲ್ಲಿರುತ್ತದೆ, ದಪ್ಪವಾಗಿರುತ್ತದೆ ಆದರೆ ಇದಕ್ಕೆ ಕೇಂದ್ರ ಇರುವುದಿಲ್ಲ. ಆಣಿ ಮತ್ತು ಕ್ಯಾಲಸ್ ಎರಡಕ್ಕೂ ತಕ್ಷಣವೇ ಚಿಕಿತ್ಸೆ ಪಡೆಯಬೇಕು, ಇಲ್ಲದಿದ್ದರೆ ಇದರಲ್ಲಿ ಸೋಂಕು ಉಂಟಾಗುವುದು, ಹರಡುವುದು ಮತ್ತು ತೀವ್ರವಾದ ನೋವಿಗೆ ಕಾರಣವಾಗಬಹುದು ಆಣಿಗೆ ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ-ರಹಿತ ವಿಧಾನಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ, ಕಾಲಿನಲ್ಲಿನ ಆಣಿಯು ಕಾಣಿಸುವ ತನಕ ಕಾಯಬೇಕಿಲ್ಲ, ಬದಲಿಗೆ ಇದನ್ನು ಸರಳ ವಿಧಾನಗಳಲ್ಲಿ ತಡೆಗಟ್ಟಬಹುದು ಎಂದು ತಜ್ಞರು ಹೇಳುತ್ತಾರೆ. 

ಕಾಲಿನಲ್ಲಿ ಆಣಿ ಹೇಗೆ ರೂಪುಗೊಳ್ಳುತ್ತದೆ? 

ಹೀಲೋಮಾಅಥವಾಕ್ಲೇವಸ್ ಎಂದೂ ಕರೆಯಲ್ಪಡುವ ಕಾಲಿನ ಆಣಿ (ಫೂಟ್ ಕಾರ್ನ್) ಗಟ್ಟಿಯಾದ ಚರ್ಮದ ಕೋಶಗಳ ಗುರುತುಗಳಾಗಿವೆ. ಜನರು ನಿಲ್ಲುವಾಗ ಅಥವಾ ನಡೆಯುವಾಗ, ಸಂಪೂರ್ಣ ದೇಹದ ಭಾರವು ಕಾಲಿನ ಮೇಲೆ ಮಾತ್ರ ಬೀಳುತ್ತದೆ. ಇದರ ಪರಿಣಾಮವಾಗಿ, ಪಾದಗಳ ಕೆಲವು ಭಾಗಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಪಾದದ ವಿಧವನ್ನು ಆಧರಿಸಿ- ಅದರಲ್ಲೂ ವಿಶೇಷವಾಗಿ ಚಪ್ಪಟೆ ಪಾದ ಅಥವಾ ಹೆಚ್ಚು ಬಾಗಿದ ಪಾದಗಳಲ್ಲಿ ಹಾಗೂ ಇತರೆಡೆಗಳಲ್ಲಿಯೂ ಒತ್ತಡವು ಬದಲಾಗುತ್ತದೆ. ಆದ್ದರಿಂದ ಹೆಚ್ಚು ಒತ್ತಡಕ್ಕೆ ಒಳಗಾಗುವ ಈ ಪ್ರದೇಶಗಳಲ್ಲಿ ಕ್ಯಾಲಸ್ ಬೆಳವಣಿಗೆ ಉಂಟಾಗುತ್ತದೆ, ಇದಕ್ಕೆ ಚಿಕಿತ್ಸೆ ನೀಡದೆ ಇದ್ದರೆ ಇದು ಕಾರ್ನ್ ಆಗಿ ಬದಲಾಗುತ್ತದೆಎಂದು ಮುಂಬೈನ ವಿ-ಕೇರ್ ಕ್ಲಿನಿಕ್‌ನಲ್ಲಿ ಪೋಡಿಯಾಟ್ರಿಸ್ಟ್ ಆಗಿರುವ ಡಾ ಸಾರಿಕಾ ಜಂಭುಲ್ಕರ್ ಹೇಳುತ್ತಾರೆ. ಆದರೂ, ಆಣಿಯು ಯಾವಾಗಲೂ ಕ್ಯಾಲಸ್‌ನಿಂದಲೇ ಉಂಟಾಗಬೇಕೆಂದೇನಿಲ್ಲ. ಕೆಲವೊಮ್ಮೆ ಅವುಗಳು ತಮ್ಮಷ್ಟಕ್ಕೇ ಬೆಳೆಯಬಹುದು. 

 ಪಾದದ ಆಣಿಗೆ ಕಾರಣಗಳು ಮತ್ತು ಲಕ್ಷಣಗಳು 

ಇತರ ಅನೇಕ ಕಾರಣಗಳೊಂದಿಗೆ, ನಿಲ್ಲುವಾಗ, ನಡೆಯುವಾಗ ಮತ್ತು ಓಡುವಾಗ ಪಾದಗಳ ಮೇಲೆ ಬೀಳುವ ಒತ್ತಡವು ಆಣಿಯ ರಚನೆಗೆ ಕಾರಣವಾಗುತ್ತದೆ. ನೇರ-ಫಿಟ್ಟಿಂಗ್ ಇರುವ ಶೂಗಳು ಮತ್ತು ಹೈ ಹೀಲ್‌ಗಳು, ಕಾಲ್ಬೆರಳ ಸೆಳತ ಮತ್ತು ಭಂಗಿಯ ಸಮಸ್ಯೆಗಳೊಂದಿಗೆ ಆಣಿಯ ರಚನೆಗೂ  ಕಾರಣವಾಗಹುದು. ಅಲ್ಲದೆ ದೇಹದ ತೂಕ ವ್ಯತ್ಯಾಸವಾದಂತೆ ಇವುಗಳೂ ಬದಲಾಗಿ ಮುಂಗಾಲಿನ ಮೇಲೆ ಹೆಚ್ಚಿನ ಒತ್ತಡ ಬೀಳಲು ಕಾರಣವಾಗಬಹುದು. ಸರಿಯಾಗಿ ಹೊಂದಿಕೆಯಾಗದ ಅಥವಾ ಅಸಮರ್ಪಕ ಅಳತೆಯ ಸ್ಪೋರ್ಟ್ಸ್ ಶೂಗಳನ್ನು ಧರಿಸುವುದರಿಂದ ಘರ್ಷಣೆ ಹೆಚ್ಚಾಗಿ ಇದು ಕೂಡಾ ಆಣಿ ಉಂಟಾಗಲು ಪ್ರಮುಖ ಕಾರಣವಾಗಬಹುದು ಎಂದು ಜಂಭುಲ್ಕರ್ ವಿವರಿಸುತ್ತಾರೆ. ಒತ್ತಡ ಮತ್ತು ಘರ್ಷಣೆಗೆ ಈಡಾಗುವ ಪಾದದ ಆ ಭಾಗದಲ್ಲಿ ಚರ್ಮದ ಪದರವು ಗಟ್ಟಿಯಾಗಿ ಆಣಿಯ ರಚನೆಗೆ ಕಾರಣವಾಗುತ್ತದೆ. 

 ಆಣಿಯ ನೋವಿನ ಲಕ್ಷಣಗಳು ಮತ್ತು ಪರಿಣಾಮಗಳು 

 ಕಾಲ್ಬೆರಳುಗಳಲ್ಲಿನ ಗಟ್ಟಿಯಾದ ಆಣಿ ಮತ್ತು ಅವುಗಳ ನಡುವೆ ಇರುವ ಮೃದುವಾದ ಆಣಿ ಎರಡೂ ಮುಟ್ಟುವಾಗ ನೋವು ಉಂಟಾಗದಿರಬಹುದು. ಆದರೆ ಆ ಭಾಗಕ್ಕೆ ಒತ್ತಡ ಬೀಳುವಂತಹ ಚಟುವಟಿಕೆಗಳಾದ ನಿಲ್ಲುವುದು, ನಡೆಯುವುದು ಮತ್ತು ಓಡುವುದು ಮುಂತಾದವುಗಳನ್ನು ಮಾಡಿದಾಗ ನೋವುಂಟಾಗುತ್ತದೆ. ಚಿಕಿತ್ಸೆ ವಿಳಂಬವಾದರೆ ಈ ನೋವು ಉಲ್ಬಣಗೊಳ್ಳುತ್ತದೆ. ಆಣಿಯನ್ನು ಹೊಂದಿರುವ ಜನರಿಗೆ ನೋವಿನಿಂದಾಗಿ ನಡೆಯಲೂ ಕಷ್ಟವಾಗುವುದರಿಂದ, ತಮ್ಮ ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ದೈಹಿಕ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗದೇ, ಇದರಿಂದ ಅವರ ಫಿಟ್‌ನೆಸ್‌ಗೂ ತೊಂದರೆಯಾಗಬಹುದು ಎನ್ನುತ್ತಾರೆ ಡಾ ಜಂಭುಲ್ಕರ್. 

 ಕಾಲಿನಲ್ಲಿ ಆಣಿ ಆಗದಂತೆ ಹೇಗೆ ತಡೆಗಟ್ಟಬಹುದು? 

ಸಮಸ್ಯೆಯ ಮೂಲವನ್ನು ಪರಿಹರಿಸುವುದೇ ತಡೆಗಟ್ಟುವ ಪ್ರಮುಖ ಮಾರ್ಗವಾಗಿದೆ. ಅಸಮರ್ಪಕ ಪಾದರಕ್ಷೆಯು ಒಂದು ಪ್ರಮುಖ ಕಾರಣವಾಗಿದ್ದು, ಕಾಲಿಗೆ ಸರಿಹೊಂದುವ ಶೂಗಳನ್ನು ಧರಿಸುವುದು ಮುಖ್ಯವಾದ ಅಂಶವಾಗಿದೆ. ಹೈ ಹೀಲ್‌ಗಳನ್ನು ಧರಿಸಬೇಡಿ ಅಥವಾ ಬರಿಗಲಿನಲ್ಲಿ ನಡೆಯಬೇಡಿ. ಸ್ಪೋರ್ಟ್ಸ್ ಶೂಗಳನ್ನು ಧರಿಸುವಾಗ, ಸಾಮಾನ್ಯ ಸಾಕ್ಸ್‌ಗಳಿಗಿಂತ ದಪ್ಪನೆಯದನ್ನು ಆರಿಸಿ, ದೈಹಿಕ ಚಟುವಟಿಕೆಯನ್ನು ಮಾಡುವಾಗ ಇದು ಘರ್ಷಣೆಯನ್ನು ಕಡಿಮೆ ಮಾಡಿ ಪಾದಗಳಿಗೆ ಹೆಚ್ಚಿನ ರಕ್ಷಣೆ ನೀಡುತ್ತದೆ. ಚರ್ಮದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು. ಅಂದರೆ, ಪಾದಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಮತ್ತು ಮಾಯಿಶ್ಚರೈಸ್ ಮಾಡುವುದು. ಹಾಗಾಗಿ, ಒಂದು ವೇಳೆ ಕ್ಯಾಲಸ್ ಉಂಟಾದರೂ, ಅದು ಆಣಿಯಾಗಿ ಬೆಳೆಯುವ ಮೊದಲೇ ಬಿದ್ದುಹೋಗುತ್ತದೆ. 

  ಕಾಲಿನಲ್ಲಿ ಆಣಿ ಇದ್ದರೆ ಚಿಕಿತ್ಸೆ ಏನು? 

ಆಣಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಮತ್ತು ಶಸ್ತ್ರಚಿಕಿತ್ಸೆರಹಿತ ವಿಧಾನಗಳ ಮೂಲಕ ತೆಗೆಯಬಹುದು. ಸಾಮಾನ್ಯವಾಗಿ, ಜನ ಚರ್ಮದ ದಪ್ಪನೆಯ ಭಾಗವನ್ನು ಕೆರೆದು ತೆಗೆಯಲು ಪ್ರಯತ್ನಿಸುತ್ತಾರೆ. ಕ್ಯಾಲಸ್ ಅನ್ನು ಈ ರೀತಿಯಾಗಿ ತೆಗೆಯಬಹುದು, ಆದರೆ ಆಣಿಯನ್ನು ಈ ರೀತಿ ತೆಗೆಯುವುದು ಸೂಕ್ತವಲ್ಲ. ಯಾಕೆಂದರೆ, ಇದು ಪಾದಗಳಲ್ಲಿನ ಅಂಗಾಂಶದ ಪದರಗಳ ತನಕ ಬೆಳೆದು ಅವುಗಳನ್ನು ಕೆರೆದು ತೆಗೆಯುವುದರಿಂದ ಇನ್ನಷ್ಟು ಹಾನಿಯಾಗಬಹುದು. 

ಕೆಲವರು ಆಯಿಂಟ್‌ಮೆಂಟ್‌ಗಳು ಅಥವಾ ಕಾರ್ನ್ ಕ್ಯಾಪ್‌ಗಳನ್ನು ಬಳಸುತ್ತಾರೆ, ಆದರೆ ಕಾರ್ನ್ ಚಿಕಿತ್ಸೆಯ ವಿಷಯಕ್ಕೆ ಇದು ಅಷ್ಟೊಂದು ಪರಿಣಾಮಕಾರಿಯಲ್ಲ. ಸಮರ್ಪಕ ಪಾದರಕ್ಷೆಯನ್ನು ಧರಿಸುವುದರಿಂದ ಒತ್ತಡ ಮರುಹಂಚಿಕೆ ಸಾಧ್ಯವಾಗುತ್ತದೆ, ಅದರಿಂದಾಗಿ ಆಣಿಯಿರುವ ಭಾಗದಿಂದ ಒತ್ತಡ ಕಡಿಮೆಗೊಳಿಸಲು ನೆರವಾಗುತ್ತದೆ. ಇದನ್ನು ಅನುಸರಿಸುವುದರಿಂದ ಸುತ್ತಲಿನ ಆರೋಗ್ಯಕರ ಅಂಗಾಂಶಗಳಿಗೆ ಹಾನಿಯುಂಟಾಗದಂತೆ ಆಣಿಯನ್ನು ತೆಗೆಯಬಹುದು ಎಂದು ಡಾ.ಜಂಭುಲ್ಕರ್ ಹೇಳುತ್ತಾರೆ. 

ಆಣಿಯನ್ನು ಸಂಪೂರ್ಣವಾಗಿ ತೆಗೆಯುವುದರಿಂದ ಇದರ ಮರುಕಳಿಕೆಯನ್ನು ತಗ್ಗಿಸಬಹುದು. ಆದರೆ ವ್ಯಕ್ತಿಯು ವೈದ್ಯರು ಸೂಚಿಸಿದಂತೆ ಸರಿಯಾದ-ಅಳತೆಯ ಪಾದರಕ್ಷೆಗಳನ್ನು ಧರಿಸಬೇಕು, ಆಗ ಭಾರವು ಸಮವಾಗಿ ಹಂಚಿಹೋಗಿ ಒತ್ತಡ ಮತ್ತು ಘರ್ಷಣೆ ಕಡಿಮೆಯಾಗುತ್ತದೆ. 

ಸಾರಾಂಶ 

  • ಆಣಿ ಅಥವಾ ಫೂಟ್ ಕಾರ್ನ್ ಎಂಬುದು ಸಣ್ಣದಾದ ಮತ್ತು ನಿರ್ದಿಷ್ಟ ಸ್ಥಳದಲ್ಲಿ ಉಂಟಾಗುವ ಗಟ್ಟಿಯಾದ ಮತ್ತು ದಪ್ಪನೆಯ ಕೇಂದ್ರವನ್ನು ಹೊಂದಿರುವ ಜಡ್ಡಾದ ಸತ್ತ ಚರ್ಮದ ಕೋಶಗಳಾಗಿವೆ 
  • ಪಾದಗಳಲ್ಲಿ ದೇಹದ ತೂಕವು ಯಾವ ರೀತಿಯಾಗಿ ಹಂಚಿಹೋಗುತ್ತದೆ ಎಂಬುದನ್ನು ಅವಲಂಬಿಸಿ ಒತ್ತಡ ಬಿಂದುಗಳು ರಚನೆಯಾಗಿರುತ್ತವೆ. ಸಮಯ ಕಳೆದಂತೆ, ಇವುಗಳು ಆ ಸ್ಥಳದ ಅಂಗಾಂಶವು ದಪ್ಪವಾಗಿ ಆಣಿಯ ರಚನೆಗೆ ಕಾರಣವಾಗುತ್ತದೆ. 
  • ಅಸಮರ್ಪಕ ಗಾತ್ರದ ಶೂ ಧರಿಸುವುದರಿಂದ ಘರ್ಷಣೆ ಉಂಟಾಗಿ ಪಾದದಲ್ಲಿ ಆಣಿ ಉಂಟಾಗುತ್ತದೆ. 

ಇವುಗಳನ್ನು ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ರಹಿತವಾಗಿ ತೆಗೆಯಬಹುದು. ಪೋಡಿಯಾಟ್ರಿಸ್ಟ್ ಅವರನ್ನು ಸಂಪರ್ಕಿಸಿ ಪಾದರಕ್ಷೆಗಳನ್ನು ಸರಿಪಡಿಸಿಕೊಳ್ಳುವುದು, ಪಾದಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು, ಮಾಯಿಶ್ಚರೈಸರ್ ಬಳಸುವುದು ಮುಂತಾದವುಗಳನ್ನು ಮಾಡುವುದರಿಂದ ಚರ್ಮವನ್ನು ಮೃದುವಾಗಿ ಮತ್ತು ಆರೋಗ್ಯಕರವನ್ನಾಗಿಸಿ ಫೂಟ್ಕಾರ್ನ್ ಉಂಟಾಗದಂತೆ ತಡೆಗಟ್ಟುತ್ತದೆ. 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ