ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಮಕ್ಕಳಲ್ಲಿ ಬೆನ್ನು ನೋವು: ಪೋಷಕರು ಮಗುವಿನ ಆರೋಗ್ಯದ ಬೆನ್ನೆಲುಬಾಗಬೇಕು 
48

ಮಕ್ಕಳಲ್ಲಿ ಬೆನ್ನು ನೋವು: ಪೋಷಕರು ಮಗುವಿನ ಆರೋಗ್ಯದ ಬೆನ್ನೆಲುಬಾಗಬೇಕು 

ಭಂಗಿಯ ಅಸಹಜತೆಗಳು ಮತ್ತು ಡಿಸ್ಕ್ ಹರ್ನಿಯೇಶನ್‌ನಂತಹ ತೊಡಕುಗಳನ್ನು ತಡೆಗಟ್ಟಲು ಮಕ್ಕಳಲ್ಲಿ ಬೆನ್ನು ನೋವಿನ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಬೇಕು. 

ಪೋಷಕರು ಮಗುವಿನ ಆರೋಗ್ಯದ ಬೆನ್ನೆಲುಬಾಗಬೇಕು 

ಬೆನ್ನು ನೋವು ವಯಸ್ಕರಲ್ಲಿ ಮಾತ್ರ ಕಂಡು ಬರುವ ಸಮಸ್ಯೆ ಎಂದು ಬಹಳ ಜನರು ಅಂದುಕೊಳ್ಳುತ್ತಾರೆ, ಆದರೆ ವಾಸ್ತವ ಹಾಗಿಲ್ಲ. ಇತೀಚೆಗೆ ಮಕ್ಕಳಲ್ಲೂ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಸ್ಪಷ್ಟವಾಗಿದ್ದರೂ ಸಮಸ್ಯೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯ. ಮಕ್ಕಳಲ್ಲಿ ಬೆನ್ನುನೋವು ಕಾಣಿಸಿಕೊಳ್ಳಲು ಪ್ರಮುಖ ಮತ್ತು ಸಂಭಾವ್ಯ ಕಾರಣ, ಬೆನ್ನ ಮೇಲಿನ ಭಾರವಾದ ಹೊರೆಗಳು ಅಥವಾ ಭಾರವಾದ ಶಾಲಾಚೀಲಗಳು. ಶಾಲಾಚೀಲಗಳ ಹೊರೆಯನ್ನು ತಗ್ಗಿಸುವಂತೆ ಶೈಕ್ಷಣಿಕ ವಲಯಕ್ಕೆ ಆಗಾಗ ಸಲಹೆಗಳನ್ನು ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತಿರುವ ಜಡ ಜೀವನಶೈಲಿಯೂ ಕೂಡ ಮಕ್ಕಳಲ್ಲಿ ಬೆನ್ನು ನೋವು ಕಾಣಿಸಿಕೊಳ್ಳಲು ಒಂದು ಪ್ರಮುಖ ಕಾರಣ. ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ತಡೆಗಟ್ಟಲು ಪೋಷಕರು ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ.  

ಮಕ್ಕಳಲ್ಲಿ ಬೆನ್ನುನೋವಿಗೆ ಸಾಮಾನ್ಯ ಕಾರಣಗಳು 

ಮಕ್ಕಳ ಎಲ್ಲಾ ಬೆನ್ನುನೋವಿನ ಪ್ರಕರಣಗಳಲ್ಲಿ, ಶೇಕಡಾ 20 ರಷ್ಟು ಬೆನ್ನುಮೂಳೆಯ ಪ್ರಕರಣಗಳಿಗೆ, ತಪ್ಪಿಸಿಕೊಂಡ ಏಟು ಅಥವಾ ಬೇರೊಂದು ಅಂಗಕ್ಕೆ ಸಂಬಂಧಿಸಿದ ಸೂಚಿತ ನೋವಿನ ಕಾರಣ ಇರಬಹುದು, ಆದರೆ ಉಳಿದ 80 ಪ್ರತಿಶತವು ಜಡ ಜೀವನಶೈಲಿ ಮತ್ತು ಕುಳಿತುಕೊಳ್ಳುವ ಕಳಪೆ ಭಂಗಿಯ ಕಾರಣದಿಂದ ಕಾರಣದಿಂದ ಉಂಟಾಗುತ್ತದೆ ಎಂದು ಬೆಂಗಳೂರಿನ DHEE ಹಾಸ್ಪಿಟಲ್ಸ್‌ನ ಹಿರಿಯ ಮಕ್ಕಳತಜ್ಞರಾದ ಡಾ.ಸುಪ್ರಜಾ ಚಂದ್ರಶೇಖರ್ ಅವರು ಹೇಳುತ್ತಾರೆ 

“ಮಗು ಬೆನ್ನುನೋವು ಎಂದು ಹೇಳಿದಾಗ ಮಕ್ಕಳ ವೈದ್ಯೆಯಾಗಿರುವ ನಾನು ಎಚ್ಚೆತ್ತುಕೊಳ್ಳುತ್ತೇನೆ. ಹದಿಹರೆಯದವರು ಮತ್ತು ಹಿರಿಯ ಮಕ್ಕಳಲ್ಲಿ ನೋವು ಸಾಮಾನ್ಯವಾಗಿ ಕುಳಿತುಕೊಳ್ಳುವ ಕೆಟ್ಟ ಭಂಗಿ ಮತ್ತು ಜಡ ಜೀವನಶೈಲಿಯ ಕಾರಣದಿಂದ ಬೆನ್ನುನೋವು ಉಂಟಾಗುತ್ತದೆ. ಆದರೆ ಕಿರಿಯ ಮಕ್ಕಳಲ್ಲಿ ಏನು ಕಾರಣ ಎಂಬುದನ್ನು ನಾವು ಪತ್ತೆಹಚ್ಚಬೇಕಾಗುತ್ತದೆ. ಬೆನ್ನುಮೂಳೆಯ ತಪ್ಪಿದ ಏಟು ಅಥವಾ ಚಿಕಿತ್ಸೆ ನೀಡದ ಆಘಾತದಿಂದ ನೋವು ಉಂಟಾಗಿರಬಹುದೇ ಎಂಬುದನ್ನು ನೋಡಬೇಕಾಗುತ್ತದೆ. ಇದು ಸೂಚಿತ ನೋವು ಕೂಡಾ ಆಗಿರಬಹುದು ( ಅಂದರೆ ಸಮಸ್ಯೆಯ ನಿಜವಾದ ಮೂಲಕ್ಕೆ ಹೊರತಾಗಿ ಬೇರೊಂದು ಜಾಗದಲ್ಲಿ ನೋವಿನ ಅನುಭವವಾಗುವುದು).” ಎಂದು ಡಾ ಚಂದ್ರಶೇಖರ್ ಹೇಳುತ್ತಾರೆ. 

ಇಷ್ಟು ಮಾತ್ರವಲ್ಲದೆ, ಮೂತ್ರಜನಕಾಂಗ ಅಥವಾ ಕರುಳಿನ ಅಸ್ವಸ್ಥತೆಗಳಿಗೆ ಸಂಬಂಧಿಸಿಯೂ ಸಹ ಬೆನ್ನುನೋವು ಕಾಣಿಸಿಕೊಳ್ಳಬಹುದು, ಏಕೆಂದರೆ ವಿಸರ್ಜನಾಂಗಗಳ ಕಾರ್ಯಗಳನ್ನು ನಿಯಂತ್ರಿಸುವ ನರ ಸಂಕೇತಗಳನ್ನು ರವಾನಿಸುವಲ್ಲಿ ಬೆನ್ನುಹುರಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 

ಜೀವನಶೈಲಿ ಮತ್ತು ಬೆನ್ನು ನೋವು 

ಜಡ ಜೀವನಶೈಲಿಯಿಂದಾಗಿ, ಶರೀರದ ಒಟ್ಟು (ಕೇಂದಿತ) ಸಾಮರ್ಥ್ಯ ಮತ್ತು ಮತ್ತು ಬೆನ್ನಿನ ಸ್ನಾಯುಗಳ ದೌರ್ಬಲ್ಯ, ಬೆನ್ನು ಮೂಳೆಯ ನಮ್ಯತೆ ತಗ್ಗುವುದು ಮತ್ತು ಬೆನ್ನಿನ ಡಿಸ್ಕ್ಗಳು ಮತ್ತು ಕೀಲುಗಳ ಮೇಲೆ ಒತ್ತಡವು ಹೆಚ್ಚಾಗುವ ಕಾರಣದಿಂದಲೂ,  ಬೆನ್ನು ನೋವು ಕಾಡಬಹುದು. ಚಟುವಟಿಕೆಯಿಲ್ಲದೆ ಬಹಳ ಸಮಯ ಕುಳಿತುಕೊಳ್ಳುವುದೆ ಇವಕ್ಕೆಲ್ಲ ಮುಖ್ಯ ಕಾರಣ. 

ಈಗ ಮಕ್ಕಳು ಮೊದಲಿನಂತೆ ಹೆಚ್ಚು ಕ್ರಿಯಾಶೀಲರಾಗಿಲ್ಲ, ಅವರು ಯಾವುದೇ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೂ, ಅದು ಸಮಯ ನಿರ್ಬಂಧಿತವಾಗಿರುತ್ತದೆ. ಉದಾಹರಣೆಗೆ, ಅವರ ಡಾನ್ಸ್ ಅಥವಾ ಮಾರ್ಷಲ್ ಆರ್ಟ್ ತರಬೇತಿಯು ವಾರದ ಕೆಲವು ಗಂಟೆಗಳಿಗೆ ಸೀಮಿತವಾಗಿರುತ್ತದೆ. ವಯಸ್ಕರಲ್ಲಿ ಹೆಚ್ಚು ಸಾಮಾನ್ಯವಾಗಿ ಕಂಡುಬರುವ ಸಿಯಾಟಿಕಾ ಮತ್ತು ಸೊಂಟದ ಸಮಸ್ಯೆಗಳನ್ನು ಹೊಂದಿರುವ ಮಕ್ಕಳನ್ನು ನಾನು ನೋಡಿದ್ದೇನೆ. ಕಡಿಮೆ ಸಮಯಾವಧಿಯಲ್ಲಿ ಹೆಚ್ಚು ಡಾನ್ಸ್ ಅಭ್ಯಾಸದಲ್ಲಿ ತೊಡಗುತ್ತಾರೆ ಮತ್ತು ಅಭ್ಯಾಸದ ತರಗತಿ ಮುಗಿದ ನಂತರ ಅವರು ಮತ್ತೆ ಅದೇ ಸೀಮಿತ ಚಲನೆಯ ತಮ್ಮ ದೈನಂದಿನ ದಿನಚರಿಗಳನ್ನು ಮುಂದುವರಿಸುತ್ತಾರೆ”. ಎಂದು ಬೆಂಗಳೂರಿನ ಅಪೊಲೊ ಸ್ಪೆಕ್ಟ್ರಾ ಆಸ್ಪತ್ರೆಯ ಹಿರಿಯ ಕನ್ಸಲ್ಟೆಂಟ್, ಆರ್ಥೊಪೆಡಿಕ್ ಸರ್ಜನ್ ಡಾ.ಪವನ್ ಚೆಬ್ಬಿ ಹೇಳುತ್ತಾರೆ 

ಇಷ್ಟು ಮಾತ್ರವಲ್ಲದೆ, ದೀರ್ಘಾವಧಿಯವರೆಗೆ ತಪ್ಪಾದ ಕಳಪೆ ಭಂಗಿಯಲ್ಲಿ ಕುಳಿತುಕೊಳ್ಳುತ್ತಾರೆ, ಇದರಿಂದ ದೇಹದ ಯಾಂತ್ರಿಕ ಚಾಲನಾ ವಿಧಾನವು (ಮೆಕ್ಯಾನಿಸಂ) ತಪ್ಪಿ. ಬೆನ್ನು ನೋವು ಉಲ್ಬಣಗೊಳಿಸಬಹುದು. 

ಮಕ್ಕಳ ಶರೀರವು ವಯಸ್ಕರಿಗಿಂತ ಹೆಚ್ಚು ನಮ್ಯತೆಯನ್ನು(ಫ್ಲೆಕ್ಸಿಬಿಲಿಟಿ) ಹೊಂದಿರುವುದರಿಂದ, ಅವರು ಹೆಚ್ಚು ಸಮಯದವರೆಗೆ ಅವರು ಬಯಸುವ ಯಾವುದೇ ಭಂಗಿಯಲ್ಲಿ ಕುಳಿತುಕೊಳ್ಳಬಹುದು. ಆದರೆ, ಕುಳಿತುಕೊಳ್ಳುವ ಸರಿಯಾದ ಭಂಗಿಯನ್ನು ನಿರ್ವಹಿಸದೆ, ಕಂಪ್ಯೂಟರ್ ಪರದೆಯನ್ನು ಕಣ್ಣಿನ ಮಟ್ಟಕ್ಕೆ ನೇರವಾಗಿ ಇರಿಸದೆ, ಬಹಳ ಸಮಯದವರೆಗೆ ಕುಳಿತುಕೊಳ್ಳುವ ಅಭ್ಯಾಸವು – ದೀರ್ಘಾವಧಿಯಲ್ಲಿ ಋಣಾತ್ಮಕ ಪರಿಣಾಮವನ್ನು ಬೀರಬಹುದು. 

 ವಿಟಮಿನ್ ಡಿ ಕೊರತೆ ಮತ್ತು ಬೆನ್ನು ನೋವು 

ಮೂಳೆ ಮತ್ತು ಸ್ನಾಯುವಿನ ಆರೋಗ್ಯಕ್ಕೆ ವಿಟಮಿನ್ ಡಿ ಅಗತ್ಯವಾಗಿ ಬೇಕು. ಇದರ  ಕೊರತೆಯಿಂದ ಮೂಳೆಗಳು ದುರ್ಬಲವಾಗುತ್ತವೆ ಮತ್ತು ಬೆನ್ನುಮೂಳೆಯು ಒತ್ತಡ ಮತ್ತು ಹೆಚ್ಚು ಹಾನಿಗೆ ಗುರಿಯಾಗುತ್ತದೆ. 

ಮೂಳೆರೋಗ ಸಮಸ್ಯೆಗಳಿಗೆ ನನ್ನನ್ನು ಸಂಪರ್ಕಿಸುವ ಮಕ್ಕಳಲ್ಲಿ ಕನಿಷ್ಠ 60 ಪ್ರತಿಶತದಷ್ಟು ಮಕ್ಕಳು ವಿಟಮಿನ್ ಡಿ ಕೊರತೆಯನ್ನು ಹೊಂದಿದ್ದಾರೆ” ಎಂದು ಡಾ ಚೆಬ್ಬಿ ಹೇಳುತ್ತಾರೆ. 

ಹಿಂದೆ, ಮಕ್ಕಳು ಹೊರಾಂಗಣದಲ್ಲಿ, ಸುರ್ಯನ ಬೆಳಕಿನಲ್ಲಿ ಆಡುತ್ತಿದ್ದರು ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಡಿ ಶರೀರದಲ್ಲಿ ಉತ್ಪತ್ತಿಯಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ, ಅವರು ಹೆಚ್ಚಿನ ಸಮಯವನ್ನು ಮನೆಯೊಳಗೆ ಕಳೆಯುತ್ತಾರೆ, ಇದರಿಂದ ವಿಟಾಮಿನ್ ಕೊರತೆ ಉಂಟಾಗಿ, ಅವರ ಸ್ನಾಯುಗಳು ಮತ್ತು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. 

 ಮಕ್ಕಳಲ್ಲಿ ಬೆನ್ನು ನೋವು: ಪೋಷಕರು ಹೇಗೆ ಸಹಾಯ ಮಾಡಬಹುದು 

ಮಕ್ಕಳಲ್ಲಿ ಕಂಡುಬರುವ ಬೆನ್ನುನೋವಿನ ಸಮಸ್ಯೆಗಳನ್ನು ಕಡೆಗಣಿಸಬಾರದು, ಏಕೆಂದರೆ ಅವು ಚಿಕ್ಕ ವಯಸ್ಸಿನಲ್ಲೇ ಭಂಗಿಯ ಅಸಹಜತೆಗಳು ಅಥವಾ ಸ್ಲಿಪ್ ಡಿಸ್ಕ್ ಗೆ ಕಾರಣವಾಗಬಹುದು. ನಿಮ್ಮ ಮಗುವಿಗೆ ನಿರಂತರ ಬೆನ್ನು ನೋವು ಇದ್ದಾಗ, ನೋವಿನ ಕಾರಣವನ್ನು ನಿರ್ಧರಿಸಲು ತಜ್ಞರನ್ನು ಸಂಪರ್ಕಿಸುವುದು ಮತ್ತು ಪರೀಕ್ಷೆಗಳಿಗೆ ಒಳಗಾಗುವುದು ಉತ್ತಮ. 

ಮಾತ್ರವಲ್ಲದೆ, ಸಕ್ರಿಯ ಜೀವನಶೈಲಿಯ ಪ್ರಯೋಜನಗಳ ಬಗ್ಗೆ ನಾವೆಲ್ಲರೂ ತಿಳಿದಿರುವ ಕಾರಣ, ನಾವು ಆ ಅರಿವನ್ನು ಆಚರಣೆಗೆ ತರಬೇಕು. 

ನಾವು ನಮ್ಮ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಬಹುದು, ನಡಿಗೆಯನ್ನು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಳ್ಳಬಹುದು, ಅದು ನಮ್ಮ ಮಕ್ಕಳಿಗೆ ಮತ್ತು ನಮಗೆ ಪ್ರಯೋಜನಕಾರಿ.  ನಡಿಗೆ, ಲಿಫ್ಟ್ ಬದಲು ಮೆಟ್ಟಿಲು ಹತ್ತುವುದು, ಹೊರಗೆ ಆಟವಾಡುವುದು ಮುಂತಾದ ಅಭ್ಯಾಸಗಳನ್ನು ರೂಢಿಸಿದರೆ ಮಕ್ಕಳಲ್ಲಿ ಕ್ರಿಯಾಶೀಲ ಜೀವನಶೈಲಿಯನ್ನು ಬೆಳೆಸಿದಂತಾಗುತ್ತದೆ’ ಎನ್ನುತ್ತಾರೆ ಡಾ.ಚಂದ್ರಶೇಖರ್. 

ಬೆನ್ನು ನೋವನ್ನು ತಡೆಗಟ್ಟಲು ಕ್ರಿಯಾಶೀಲರಾಗಿರುವುದು ಎಷ್ಟು ಮುಖ್ಯವೋ, ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯವಾಗಿದೆ. “ನಿಮ್ಮ ಮಗುವಿನ ಭಂಗಿಯನ್ನು ಸತತವಾಗಿ ಸರಿಪಡಿಸುವುದರ ಜೊತೆಗೆ, ಮಕ್ಕಳ ಆವಶ್ಯಕತೆಗೆ ತಕ್ಕ ಹಾಗೆ ನಿಮ್ಮ ಮನೆಯನ್ನು ವ್ಯವಸ್ಥೆಗೊಳಿಸುವುದೂ ಸಹ ಬಹಳ ಮುಖ್ಯ. ಉದಾಹರಣೆಗೆ, ತಮ್ಮ ಹೋಮ್ ವರ್ಕ್ ಅನ್ನು ಪೂರ್ಣಗೊಳಿಸಲು ಅಥವಾ ಕಂಪ್ಯೂಟರ್ ಅನ್ನು ಬಳಸಲು, ಅವರು ಹಾಸಿಗೆ ಅಥವಾ ಮಂಚದ ಮೇಲೆ ಒರಗಿಕೊಳ್ಳುವ ಬದಲು, ಮೇಜಿನ ಮುಂದೆ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು, ಅಂತಹ ವ್ಯವಸ್ಥೆ ಮನೆಯಲ್ಲಿ ಇರಬೇಕು.” ಎಂದು ಡಾ ಚೆಬ್ಬಿ ಹೇಳುತ್ತಾರೆ. 

ಮಾತ್ರವಲ್ಲದೆ, ದೀರ್ಘಕಾಲ ಕುಳಿತುಕೊಳ್ಳುವಾಗ ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಒಂದು ಗಂಟೆ ನಿರಂತರ ಕುಳಿತುಕೊಂಡ ನಂತರ ಮಕ್ಕಳು ಕನಿಷ್ಠ 15-20 ನಿಮಿಷಗಳ ವಿರಾಮವನ್ನು ಪಡೆಯಬೇಕು. 

ಸಾರಾಂಶ 

  • ಹದಿಹರೆಯದವರು ಮತ್ತು ಹಿರಿಯ ಮಕ್ಕಳಲ್ಲಿ ಬೆನ್ನು ನೋವು ಸಾಮಾನ್ಯವಾಗಿ ಜಡ ಜೀವನಶೈಲಿ ಮತ್ತು ಕುಳಿತುಕೊಳ್ಳುವ ಭಂಗಿಯ ಸಮಸ್ಯೆಗಳಿಂದ ಉಂಟಾಗುತ್ತದೆ, ಆದರೆ ಕಿರಿಯ ಮಕ್ಕಳಲ್ಲಿ ತಪ್ಪಿದ ಆಘಾತ ಅಥವಾ ಸೂಚಿತ ನೋವಿನ ಕಾರಣದಿಂದ ಉಂಟಾಗಬಹುದು. 
  • ಮಕ್ಕಳಲ್ಲಿ ಬೆನ್ನಿನ ಸಮಸ್ಯೆಗಳನ್ನು ಕಡೆಗಣಿಸಬಾರದು, ಏಕೆಂದರೆ ಅವು ಚಿಕ್ಕ ವಯಸ್ಸಿನಲ್ಲೇ ಭಂಗಿಯ ಅಸಹಜತೆಗಳು ಅಥವಾ ಸ್ಲಿಪ್ ಡಿಸ್ಕ್ಗೆ ಕಾರಣವಾಗಬಹುದು. 
  • ನಡಿಗೆ, ಮೆಟ್ಟಿಲುಗಳನ್ನು ಬಳಸುವುದು ಮತ್ತು ಹೊರಾಂಗಣದಲ್ಲಿ ಆಡುವ ಅಭ್ಯಾಸಗಳನ್ನು ರೂಢಿಸುವುದರಿಂದ ಮಕ್ಕಳಲ್ಲಿ ಕ್ರಿಯಾಶೀಲ ಜೀವನಶೈಲಿಯನ್ನು ಬೆಳೆಸಬಹುದು, ಈ ಮೂಲಕ ಬೆನ್ನು ನೋವನ್ನು ತಡೆಯಬಹುದು. 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ