ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಚರ್ಮದ ಟೋನ್ ಸುಧಾರಿಸಲು ಸಲಹೆಗಳು
7

ಚರ್ಮದ ಟೋನ್ ಸುಧಾರಿಸಲು ಸಲಹೆಗಳು

ನಿಮ್ಮ ಚರ್ಮದ ರಚನೆಯ ಸಮಸ್ಯೆಗಳನ್ನು ನಿಭಾಯಿಸಿ ಮತ್ತು ಹೈಪರ್ಪಿಗ್ಮೆಂಟೇಶನ್ ಚಿಕಿತ್ಸೆ ನೀಡುವ ತ್ವಚೆಯ ದಿನಚರಿಯನ್ನು ಅನುಸರಿಸಿ

ಚರ್ಮದ ಟೋನ್ ಸುಧಾರಿಸಲು ಸಲಹೆಗಳು

ಚರ್ಮದ ಟೋನ್ ಚನ್ನಾಗಿರಲೆಂದು ಎಲ್ಲರೂ ಬಯಸುತ್ತಾರೆ. ಆದರೆ ವಯಸ್ಸು, ಮಾಲಿನ್ಯದಂತಹ ವಿವಿಧ ಪರಿಸರ ಒತ್ತಡಗಳಿಗೆ ಒಡ್ಡಿಕೊಳ್ಳುವುದು ಮತ್ತು ಸೂರ್ಯನ ಹಾನಿಗೆ ಒಳಗಾಗುವುದರಿಂದ ಚರ್ಮ ಡಲ್ ಮತ್ತು ಮತ್ತು ಅಸಮವಾಗುತ್ತದೆ. ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೇಗೆ ನಿರ್ವಹಿಸುವುದು ಮತ್ತು ಚರ್ಮದ ಟೋನ್ ಹೇಗೆ ಪಡೆಯುವುದು ಎಂಬುದರ ಕುರಿತು ತಜ್ಞರು ಮಾಹಿತಿ ನೀಡಿದ್ದಾರೆ.

ಗುರುಗ್ರಾಮ್‌ನ ಸಿಕೆ ಬಿರ್ಲಾ ಆಸ್ಪತ್ರೆಯ ಡರ್ಮಟಾಲಜಿಯ ಸಲಹೆಗಾರರಾದ ಡಾ ಸೀಮಾ ಒಬೆರಾಯ್ ಲಾಲ್ ಅವರು ಚರ್ಮದ ಟೋನ್ ಕಾಪಾಡಿಕೊಳ್ಳಲು ತ್ವಚೆಯ ದಿನಚರಿಯನ್ನು ನಿರ್ವಹಿಸುವುದು ಮುಖ್ಯ ಎಂದು ಹೇಳುತ್ತಾರೆ. ಇದು ಚರ್ಮವನ್ನು ಆರೋಗ್ಯಕರ, ಸ್ಪಷ್ಟ ಮತ್ತು ತಾಜಾವಾಗಿರಿಸಲು ಸಹಾಯ ಮಾಡುತ್ತದೆ. “ಸರಳ ಮತ್ತು ಸ್ಥಿರವಾದ ದಿನಚರಿಯನ್ನು ಪಾಲಿಸುವುದರಿಂದ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ಕಡಿಮೆಯಾಗುವುದು, ಚರ್ಮದ ವಿನ್ಯಾಸ ಮತ್ತು ಟೋನ್ ಸುಧಾರಿಸುವುದು ಮತ್ತು ಪರಿಸರ ಹಾನಿಯಿಂದ ಚರ್ಮವನ್ನು ರಕ್ಷಿಸುವಂತಹ ಹಲವಾರು ಪ್ರಯೋಜನಗಳಳಿವೆ” ಎನ್ನುವುದು ಅವರ ಮಾತು.

ಚರ್ಮದ ಟೋನ್ ಪಡೆಯಲು ಡಾ ಲಾಲ್ ಅವರ ಸಲಹೆಗಳು

ಸ್ಥಿರವಾದ ಸೂರ್ಯನ ಕಿರಣಗಳಿಂದ ರಕ್ಷಣೆ: ತಜ್ಞರ ಪ್ರಕಾರ ಇದು ನೆಗೋಶಬಲ್ ಅಲ್ಲ. ಹೈಪರ್ಪಿಗ್ಮೆಂಟೇಶನ್, ಸನ್‌ಸ್ಪಾಟ್‌ಗಳು ಮತ್ತು ಮೆಲಸ್ಮಾ ಮೂಲಕ ಅಸಮ ಚರ್ಮದ ಟೋನ್‌ಗೆ ಸೂರ್ಯನ ಕಿರಣಗಳು ಕಾರಣ. “ಪ್ರತಿ ಮೂರರಿಂದ ನಾಲ್ಕು ಗಂಟೆಗಳಿಗೊಮ್ಮೆ SPF 30 ಅಥವಾ ಹೆಚ್ಚಿನ ಸನ್‌ಸ್ಕ್ರೀನ್ ಅನ್ನು ಪ್ರತಿದಿನ ಹಚ್ಚಿ. ಮೋಡ ಕವಿದ ದಿನಗಳಲ್ಲಿಯೂ ಸಹ ಮತ್ತು ಪ್ರತಿ ಎರಡು ಗಂಟೆಗಳಿಗೊಮ್ಮೆ ಪುನಃ ಹಚ್ಚಿ. ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಲು ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸಿ” ಎಂದು ಅವರು ಸಲಹೆ ನೀಡುತ್ತಾರೆ.

ನಿಮ್ಮ ಮುಖದ ಮೇಲೆ ಕನಿಷ್ಠ ಅರ್ಧ ಟೀ ಚಮಚ ಸನ್‌ಸ್ಕ್ರೀನ್ ಬಳಸಿ. ಹೆಚ್ಚಿನ ಸನ್‌ಸ್ಕ್ರೀನ್‌ಗಳು ಮೂರರಿಂದ ನಾಲ್ಕು ಗಂಟೆಗಳ ಕಾಲ ಚರ್ಮವನ್ನು ರಕ್ಷಿಸುತ್ತವೆ, ಆದ್ದರಿಂದ ನಿಮ್ಮ ಸನ್‌ಸ್ಕ್ರೀನ್‌ನ ದೀರ್ಘಾಯುಷ್ಯದ ಆಧಾರದ ಮೇಲೆ ಪುನಃ ಹಚ್ಚಲು ಮರೆಯಬೇಡಿ. ಜೆಲ್‌ಗಳು, ಕ್ರೀಮ್‌ಗಳು ಮತ್ತು ಲೋಷನ್‌ಗಳು, ಹಾಗೆಯೇ ಭೌತಿಕ ಮತ್ತು ರಾಸಾಯನಿಕ ಸನ್‌ಸ್ಕ್ರೀನ್ ಫಾರ್ಮುಲೇಶನ್‌ಗಳಿಂದ ನಿಮಗೆ ಸೂಕ್ತವಾದ ಆಯ್ಕೆ ಯಾವುದು ಎಂದು ತಿಳಿಯಲು ನಿಮ್ಮ ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ.

ಮೃದುವಾದ ಎಫ್ಫೋಲಿಯೇಶನ್: ನಿಯಮಿತವಾದ ಎಫ್ಫೋಲಿಯೇಶನ್ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ, ಇದು ಹೊಳಪಿನ, ಹೆಚ್ಚು ಸಮ-ಟೋನ್ ಚರ್ಮಕ್ಕೆ ಅನುವು ಮಾಡಿಕೊಡುತ್ತದೆ. ಎಣ್ಣೆಯುಕ್ತ ಮತ್ತು ಮೊಡವೆ ಇರುವ ಚರ್ಮವಿದ್ದರೆ AHA ಗಳು (ಗ್ಲೈಕೋಲಿಕ್ ಆಮ್ಲ) ಅಥವಾ BHA ಗಳು (ಸ್ಯಾಲಿಸಿಲಿಕ್ ಆಮ್ಲ) ಹೊಂದಿರುವ ರಾಸಾಯನಿಕ ಎಕ್ಸ್‌ಫೋಲಿಯಂಟ್‌ಗಳಂತಹ ಸೌಮ್ಯ ವಿಧಾನಗಳನ್ನು ಆಯ್ಕೆಮಾಡಿ.

ಉದ್ದೇಶಿತ ಹೊಳಪು ನೀಡುವ ಸೀರಮ್‌ಗಳು: ವಿಟಮಿನ್ ಸಿ, ನಿಯಾಸಿನಾಮೈಡ್, ಕೋಜಿಕ್ ಆಸಿಡ್ ಅಥವಾ ಅರ್ಬುಟಿನ್‌ನಂತಹ ಪದಾರ್ಥಗಳನ್ನು ಹೊಂದಿರುವ ಸೀರಮ್‌ಗಳನ್ನು ಬಳಸಿ. ಇದು ಹೈಪರ್ಪಿಗ್ಮೆಂಟೇಶನ್ ಮತ್ತು ಅಸಮಾನತೆಯ ಮೇಲೆ ಕಾರ್ಯನಿರ್ವಹಿಸುತ್ತದೆ, ಪ್ರಕಾಶಮಾನವಾದ, ಹೆಚ್ಚು ಮೈಬಣ್ಣವನ್ನು ಉತ್ತೇಜಿಸುತ್ತದೆ. ನಿಮ್ಮ ಚರ್ಮದ ಪ್ರಕಾರ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ಸೂಕ್ತವಾದ ಸೂತ್ರಗಳನ್ನು ಆರಿಸಿ.

ವೃತ್ತಿಪರ ಚಿಕಿತ್ಸೆಗಳನ್ನು ಪರಿಗಣಿಸಿ: ಲೇಸರ್ ಪೀಲ್ಸ್, ಕೆಮಿಕಲ್ ಪೀಲ್ಸ್ ಅಥವಾ ಮೈಕ್ರೊನೀಡ್ಲಿಂಗ್‌ಗಳಂತಹ ಚಿಕಿತ್ಸೆಗಳು ಹೆಚ್ಚು ಕಠಿಣವಾದ ಹೈಪರ್ಪಿಗ್ಮೆಂಟೇಶನ್‌ಗೆ ಪರಿಣಾಮಕಾರಿಯಾಗಬಹುದು. ನಿಮ್ಮ ನಿರ್ದಿಷ್ಟ ಅಗತ್ಯತೆಗಳು ಮತ್ತು ಕಾಳಜಿಗಳಿಗೆ ಉತ್ತಮ ಆಯ್ಕೆಯನ್ನು ಚರ್ಚಿಸಲು ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸಿ.

ಆರೋಗ್ಯಕರ ಜೀವನಶೈಲಿ ಅಭ್ಯಾಸಗಳು: ಆಹಾರ, ನಿದ್ರೆ ಮತ್ತು ಒತ್ತಡ ಎಲ್ಲವೂ ಚರ್ಮದ ಆರೋಗ್ಯದಲ್ಲಿ ಪಾತ್ರವಹಿಸುತ್ತವೆ. ಹಣ್ಣುಗಳು, ತರಕಾರಿಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ, ಗುಣಮಟ್ಟದ ನಿದ್ರೆಗೆ ಆದ್ಯತೆ ನೀಡಿ ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ. ಈ ಅಭ್ಯಾಸಗಳು ಒಟ್ಟಾರೆ ಚರ್ಮದ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ ಮತ್ತು ಟೋನ್ ಸುಧಾರಿಸಲು ಸಹಾಯ ಮಾಡಬಹುದು.

ಸಲಹೆಗಳು

ಹೈಡ್ರೇಟೆಡ್ ಆಗಿರಲು ದಿನವಿಡೀ ಸಾಕಷ್ಟು ನೀರು ಕುಡಿಯಿರಿ.
ಚರ್ಮದ ಆರೋಗ್ಯವನ್ನು ಬೆಂಬಲಿಸಲು ಹಣ್ಣುಗಳು, ತರಕಾರಿಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ.
ನಿಮ್ಮ ಚರ್ಮವನ್ನು ಸರಿಪಡಿಸಲು ಮತ್ತು ಪುನರುತ್ಪಾದಿಸಲು ಅನುಮತಿಸಲು ಗುಣಮಟ್ಟದ ನಿದ್ರೆಗೆ ಆದ್ಯತೆ ನೀಡಿ.
ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ, ಏಕೆಂದರೆ ಇದು ಚರ್ಮದ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ಅಸಮ ಟೋನ್ಗೆ ಕೊಡುಗೆ ನೀಡುತ್ತದೆ.
ನಿಮ್ಮ ತ್ವಚೆಗೆ ಗಮನ ಕೊಡಿ ಮತ್ತು ಅದಕ್ಕೆ ತಕ್ಕಂತೆ ನಿಮ್ಮ ದಿನಚರಿಯನ್ನು ಅಳವಡಿಸಿಕೊಳ್ಳಿ. ನೀವು ಕೆಂಪು, ಕಿರಿಕಿರಿ ಅಥವಾ ಶುಷ್ಕತೆಯನ್ನು ಗಮನಿಸಿದರೆ, ಉತ್ಪನ್ನವನ್ನು ಬಳಸುವುದನ್ನು ನಿಲ್ಲಿಸಿ ಅಥವಾ ಅದರ ಆವರ್ತನವನ್ನು ಕಡಿಮೆ ಮಾಡಿ. ವಿಶೇಷವಾಗಿ ನೀವು ಗಮನಾರ್ಹ ಕಾಳಜಿಯನ್ನು ಹೊಂದಿದ್ದರೆ ಅಥವಾ ನಿರ್ದಿಷ್ಟ ಚಿಕಿತ್ಸೆಗಳ ಅಗತ್ಯವಿದ್ದರೆ ಚರ್ಮರೋಗ ವೈದ್ಯರಿಂದ ವೈಯಕ್ತಿಕಗೊಳಿಸಿದ ಸಲಹೆಯನ್ನು ಪಡೆಯಿರಿ.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ