0

0

0

ಈ ಲೇಖನದಲ್ಲಿ

ನೆಲದ ಮೇಲೆ ಮಲಗುವುದು ಪ್ರಯೋಜನಕಾರಿಯೇ?
12

ನೆಲದ ಮೇಲೆ ಮಲಗುವುದು ಪ್ರಯೋಜನಕಾರಿಯೇ?

ನೆಲದ ಮೇಲೆ ಮಲಗುವುದು ಸಾಂಪ್ರದಾಯಿಕವಾಗಿ ಉತ್ತಮ ಭಂಗಿ, ದೇಹದ ಅರಿವು ಮತ್ತು ರಕ್ತ ಪರಿಚಲನೆಗೆ ಸಂಬಂಧಿಸಿದೆ

ನೆಲದ ಮೇಲೆ ಮಲಗುವುದು
ನೆಲದ ಮೇಲೆ ಮಲಗುವುದು ಸಾಂಪ್ರದಾಯಿಕವಾಗಿ ಉತ್ತಮ ಭಂಗಿ, ದೇಹದ ಅರಿವು ಮತ್ತು ರಕ್ತ ಪರಿಚಲನೆಗೆ ಸಂಬಂಧಿಸಿದೆ. ಕೆಲವರಿಗೆ ಈ ಅಭ್ಯಾಸವು ಪೋಷಕರಿಂದ ಬಂದಿರಬಹುದು. ಆದರೆ ಬದಲಾಗುತ್ತಿರುವ ಜೀವನಶೈಲಿಗೆ ತಕ್ಕಂತೆ, ಉತ್ತಮ ಹಾಸಿಗೆಗಳು ಮತ್ತು ಅವುಗಳ ವಿಭಿನ್ನತೆ ನಮ್ಮ ಮನಸ್ಸು ಸೆಳೆಯುವಾಗ ಅನೇಕರ ನಿದ್ರೆಯ ಅಭ್ಯಾಸವು ಬದಲಾಗಿದೆ. ಈಗಲೂ ಅನೇಕರು ನೆಲದ ಮೇಲೆ ಮಲಗುವುದರಿಂದ ಆರೋಗ್ಯ ಪ್ರಯೋಜನಗಳಿವೆ ಎಂದು ನಂಬುತ್ತಾರೆ.

ವಯಸ್ಸಾದ ಕೆಲವರು ನೆಲದ ಮೇಲೆ ಮಲಗುವುದು ನೋವನ್ನು ನಿವಾರಿಸುತ್ತದೆ ಎಂದು ನಂಬುತ್ತಾರೆ. ಆದರೆ ಇದು ಬೆನ್ನುಮೂಳೆಯ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. “ಸಾಂದರ್ಭಿಕವಾಗಿ ನೆಲದ ಮೇಲೆ ಮಲಗುವುದು ಅಭ್ಯಾಸವಿರುವವರಿಗೆ ಬೆನ್ನು ಒತ್ತಡವನ್ನು ನಿವಾರಿಸಲು ಪ್ರಯೋಜನಕಾರಿಯಾಗಿದೆ. ಆದರೆ 40 ರಿಂದ 50 ವರ್ಷದೊಳಗಿನ ಒಗ್ಗಿಕೊಂಡಿರದವರಿಗೆ ಇದು ಆರಾಮದಾಯಕವಲ್ಲದಿರಬಹುದು. ಇದು ಇರುವ ನೋವನ್ನು ಕಡಿಮೆ ಮಾಡುವ ಬದಲು ಹೊಸ ನೋವನ್ನು ಹುಟ್ಟುಹಾಕಬಹುದು ಎಂದು ಬೆಂಗಳೂರಿನ ಡಿಹೆಚ್‌ಇಇ ಆಸ್ಪತ್ರೆಗಳ ಸಿಇಒ ಮತ್ತು ಮೂಳೆ ಶಸ್ತ್ರಚಿಕಿತ್ಸಕರಾದ ಡಾ ಚಂದ್ರಶೇಖರ ಚಿಕ್ಕಮುನಿಯಪ್ಪ ವಿವರಿಸುತ್ತಾರೆ.

ನೆಲದ ಮೇಲೆ ಮಲಗುವುದರಿಂದ ಪ್ರಯೋಜನಗಳಿವೆಯೇ?

“ನಾನು 16 ಗಂಟೆಗಳ ಕಾಲ ಸತತವಾಗಿ ಕೆಲಸ ಮಾಡಬೇಕಾದ ಸಂದರ್ಭಗಳಿವೆ. ನಾನು ಮನೆಗೆ ಹಿಂದಿರುಗಿದಾಗ ನನಗೆ ಬೆನ್ನು ನೋವು ಇರುತ್ತದೆ. ಹಾಗಾಗಿ ನೆಲದ ಮೇಲೆ ತೆಳ್ಳಗಿನ ಚಾಪೆ ಹಾಕಿ ದಿಂಬು ಇಲ್ಲದೆ ಮಲಗುತ್ತೇನೆ. ಇದರಿಂದ ನನಗೆ ಪ್ರಯೋಜನವಾಗಿದೆ. ಆದರೆ ನಾನು ನಿಯಮಿತವಾಗಿ ನೆಲದ ಮೇಲೆ ಮಲಗುವುದಿಲ್ಲ. ಎಂದು ಬೆಂಗಳೂರಿನ ಉದ್ಯಮಿ ನರೇಶ್ ಬಾಬು (38) ಹ್ಯಾಪಿಯೆಸ್ಟ್ ಹೆಲ್ತ್‌ಗೆ ತಿಳಿಸಿದ್ದಾರೆ.

“ನೆಲದ ಮೇಲೆ ಮಲಗುವ ಅನೇಕರನ್ನು ನೀವು ನೋಡಿರಬಹುದು ಮತ್ತು ಅವರು ಎಷ್ಟು ಆರಾಮದಾಯಕವಾಗಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ದೀರ್ಘಕಾಲ ನೆಲದ ಮೇಲೆ ಮಲಗಿ ಅಭ್ಯಾಸವಿದ್ದವರು ಅದನ್ನು ಮುಂದುವರಿಸಬಹುದು. ಯಾಕೆಂದರೆ ಅದು ಈಗಾಗಲೇ ಅವರಿಗೆ ಒಗ್ಗಿರುತ್ತದೆ. ಆದರೆ ತೀವ್ರವಾದ ಬೆನ್ನು ಅಥವಾ ಕುತ್ತಿಗೆ ನೋವಿನಿಂದ ಬಳಲುತ್ತಿರುವವರಿಗೆ ಇದು ಸೂಕ್ತವಲ್ಲ, ಏಕೆಂದರೆ ಅದು ಉಲ್ಬಣಗೊಳ್ಳುತ್ತದೆ. ಇದಲ್ಲದೆ, ನೆಲದ ಮೇಲೆ ಮಲಗುವುದರಿಂದ ಪ್ರಯೋಜನಗಳಿವೆ ಎಂದು ತಿಳಿದುಬಂದಿದ್ದರೂ ಅದರ ಬಗ್ಗೆ ಯಾವುದೇ ಪುರಾವೆಗಳು ಲಭ್ಯವಿಲ್ಲ ಎಂದು ಡಾ ಚಿಕ್ಕಮುನಿಯಪ್ಪ ಹೇಳುತ್ತಾರೆ.

ನೆಲದ ಮೇಲೆ ಮಲಗುವುದು ಯಾರಿಗೆ ಸೂಕ್ತವಲ್ಲ

ಯಾವುದೇ ಪೂರ್ವ ವೈದ್ಯಕೀಯ ಪರಿಸ್ಥಿತಿಗಳಿಲ್ಲದವರು ನೆಲದ ಮೇಲೆ ಮಲಗಲು ಪ್ರಯತ್ನಿಸಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ದುರ್ಬಲವಾದ ಚರ್ಮವನ್ನು ಹೊಂದಿರುವ ಮತ್ತು ಬದಲಾಗುತ್ತಿರುವ ತಾಪಮಾನಗಳಿಗೆ ಸೂಕ್ಷ್ಮವಾಗಿರುವ ಮಕ್ಕಳು ಮತ್ತು ವಯಸ್ಸಾದವರು ಇದನ್ನು ತಪ್ಪಿಸಬೇಕು. ಉದಾಹರಣೆಗೆ, ರುಮಟಾಯ್ಡ್ ಸಂಧಿವಾತದಿಂದ ಬಳಲುತ್ತಿರುವವರ ಆರೋಗ್ಯವು (ದೀರ್ಘಕಾಲದ ಉರಿಯೂತದ ಅಸ್ವಸ್ಥತೆಯು ಕೇವಲ ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ) ಅವರು ನೆಲದ ಮೇಲೆ ಮಲಗಿದರೆ ಹದಗೆಡಬಹುದು. ಹಾಗಾಗಿ ಮಕ್ಕಳು ಮತ್ತು ವಯಸ್ಸಾದವರಿಗೆ ಇದು ಸೂಕ್ತವಲ್ಲ

ವಿಜ್ಞಾನ ಏನು ಹೇಳುತ್ತದೆ?

“ಇದು ವಿವಾದಾತ್ಮಕವಾಗಿದೆ – ಸುಮಾರು 70 ರಿಂದ 80 ಪ್ರತಿಶತದಷ್ಟು ಮೂಳೆ ಶಸ್ತ್ರಚಿಕಿತ್ಸಕರು ನೆಲದ ಮೇಲೆ ಮಲಗುವ ಅಭ್ಯಾಸವನ್ನು ಬೆಂಬಲಿಸುವುದಿಲ್ಲ. ವೈಯಕ್ತಿಕ ಆದ್ಯತೆಗಳ ಹೊರತಾಗಿ, ನೆಲದ ಮೇಲೆ ಮಲಗಿರುವವರು ಉತ್ತಮ ಆರೋಗ್ಯವನ್ನು ಹೊಂದುತ್ತಾರೆ ಎಂದು ಹೇಳುವ ಪ್ರಚಲಿತ ಪುರಾಣಗಳನ್ನು ಜನರು ನಂಬುತ್ತಾರೆ ಎನ್ನುತ್ತಾರೆ” ಚೆನ್ನೈ, ಫೋರ್ಟಿಸ್ ಮಲಾರ್ ಆಸ್ಪತ್ರೆಯ ಮೂಳೆ ಮತ್ತು ಕೀಲು ತಜ್ಞರಾದ ಡಾ.ಶರತ್ ಕುಮಾರ್

“ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುವವರು ಹಾಸಿಗೆಯ ಮೇಲೆ ಮಲಗುವುದಕ್ಕಿಂತ ಹೆಚ್ಚಾಗಿ ನೆಲದ ಮೇಲೆ ಮಲಗಲು ಆರಾಮದಾಯಕವಾಗಬಹುದು. ಹಾಗಾಗಿ ಕೆಲವು ಸಂದರ್ಭಗಳಲ್ಲಿ, ನೆಲದ ಮೇಲೆ ಮಲಗುವುದು ಭಂಗಿಯನ್ನು ಸುಧಾರಿಸಲು ಮತ್ತು ಬೆನ್ನು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅದು ಜೀವನಶೈಲಿ ಮತ್ತು ಆರ್ಥಿಕ ಪರಿಸ್ಥಿತಿಗಳ ಮೇಲೆ ನಿರ್ಧಾರಿತ ಎನ್ನುತ್ತಾರೆ ಡಾ ಕುಮಾರ್.

ಸಾರಾಂಶ:

  • ನೆಲದ ಮೇಲೆ ಮಲಗುವುದು ಹೊಸ ಅಭ್ಯಾಸವೇನಲ್ಲ. ಆದರೆ ಇದು ಪ್ರಯೋಜನಕಾರಿಯಾಗದಿರಬಹುದು ಎಂದು ಅಭಿಪ್ರಾಯಪಡುತ್ತಾರೆ
  • ಅದಕ್ಕೆ ಒಗ್ಗಿಕೊಂಡಿರುವವರಿಗೆ ಮಾತ್ರ ಒಮ್ಮೊಮ್ಮೆ ನೆಲದ ಮೇಲೆ ಮಲಗುವುದರಿಂದ ಬೆನ್ನುನೋವು ನಿವಾರಣೆಯಾಗಬಹುದು,
  • ಮಕ್ಕಳು ಮತ್ತು ವಯಸ್ಸಾದವರು ನೆಲದ ಮೇಲೆ ಮಲಗುವುದು ಸೂಕ್ತವಲ್ಲ.
  • ಯಾವುದೇ ಪೂರ್ವ ವೈದ್ಯಕೀಯ ಪರಿಸ್ಥಿತಿಗಳಿಲ್ಲದವರು ಬಯಸಿದರೆ ನೆಲದ ಮೇಲೆ ಮಲಗಬಹುದು ಎಂದು ತಜ್ಞರು ಸೂಚಿಸುತ್ತಾರೆ.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತೃಪ್ತಿಕರವಾದ ನಿಕಟ ಸಂಬಂಧಗಳನ್ನು ಆನಂದಿಸಬೇಕಾದರೆ ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ತಜ್ಞರು ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ಕಡಿಮೆ-ತಿಳಿದಿರುವ ಸಲಹೆಗಳನ್ನು ನೀಡಿದ್ದಾರೆ.  
ಲೇಖನ
ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು, ಸೋಡಿಯಂ ಮತ್ತು ಪೊಟ್ಯಾಸಿಯಮ್ ಕಡಿಮೆ ಇರುವಂತಹ ಆಹಾರ ಸೇವನೆಯತ್ತ ಗಮನ ಕೇಂದ್ರೀಕರಿಸಿ. ಆದರೆ, ಉತ್ತಮ ಗುಣಮಟ್ಟದ ಪ್ರೋಟೀನ್ ಜೊತೆಗೆ  ಇವನ್ನು ಸೇವಿಸುವುದು ಮುಖ್ಯ ಎಂದು ತಜ್ಞರು ಸೂಚಿಸುತ್ತಾರೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ