0

0

0

ಈ ಲೇಖನದಲ್ಲಿ

ಸ್ಲೀಪ್ ಟ್ರ್ಯಾಕರ್‌ ಬಳಸುವುದು ಉತ್ತಮವೇ?
41

ಸ್ಲೀಪ್ ಟ್ರ್ಯಾಕರ್‌ ಬಳಸುವುದು ಉತ್ತಮವೇ?

ನಿಮ್ಮ ನಿದ್ರೆಯ ಮಾದರಿಗಳನ್ನು ಕಂಡುಹಿಡಿಯಲು ಸಂವೇದಕಗಳು ಮತ್ತು ರಿಮೋಟ್ ಡಿಟೆಕ್ಟಿಂಗ್ ತಂತ್ರಗಳನ್ನು ಬಳಸುವ ಸ್ಲೀಪ್ ಟ್ರ್ಯಾಕರ್‌ಗಳು ನೀವು ಯೋಚಿಸುವಷ್ಟು ನಿಖರವಾಗಿಲ್ಲದಿರಬಹುದು
 ಸ್ಲೀಪ್ ಟ್ರ್ಯಾಕರ್‌ ಬಳಸುವುದು ಉತ್ತಮವೇ?
ಚಿತ್ರ: ಅನಂತ ಸುಬ್ರಮಣ್ಯಂ ಕೆ / ಹ್ಯಾಪಿಯೆಸ್ಟ್ ಹೆಲ್ತ್

ಹೆಚ್ಚುತ್ತಿರುವ ನಿದ್ರೆಯ ಕೊರತೆಯ ಸಮಸ್ಯೆ ಮತ್ತು ವಿವಿಧ ಅಸ್ವಸ್ಥತೆಗಳು ಉತ್ತಮ ಗುಣಮಟ್ಟದ ನಿದ್ರೆಯ ಆದ್ಯತೆಯನ್ನು ಹೆಚ್ಚಿಸಿವೆ. ಕಳೆದ ಕೆಲವು ವರ್ಷಗಳಲ್ಲಿ ನಮ್ಮ ದೈನಂದಿನ ಚಟುವಟಿಕೆಗಳನ್ನು ಅನುಸರಿಸುವ ಟ್ರ್ಯಾಕರ್‌ಗಳ ಮಾರಾಟ ಹೆಚ್ಚಾಗುತ್ತಿದೆ. ಇದರೊಂದಿಗೆ ತಮ್ಮ ದೈನಂದಿನ ಚಟುವಟಿಕೆಗಳಾದ ನಡಿಗೆ, ಓಟ ಮತ್ತು ವ್ಯಾಯಾಮಗಳನ್ನು ಟ್ರ್ಯಾಕ್‌ ಮಾಡುವ ಜನರ ಸಂಖ್ಯೆಯೂ ಅನೇಕ ಪಟ್ಟು ಹೆಚ್ಚಾಗಿದೆ. ಈಗ ಈ ಪಟ್ಟಿಗೆ ಸ್ಲೀಪ್ ಟ್ರ್ಯಾಕಿಂಗ್‌ʼನಂತಹ ಸಾಧನಗಳನ್ನು ಸೇರಿಸಲಾಗಿದೆ.

ಈ ಸಾಧನಗಳು ನಮ್ಮ ನಿದ್ರೆಯ ಮಾದರಿಗಳನ್ನು ಟ್ರ್ಯಾಕ್ ಮಾಡುತ್ತವೆ ಮತ್ತು ನಾವು ಯಾವಾಗ ಮಲಗುತ್ತಿದ್ದೇವೆ, ನಾವು ಎಷ್ಟು ಗಂಟೆಗಳ ಕಾಲ ಮಲಗುತ್ತಿದ್ದೇವೆ, ನಿದ್ರೆಯ ಗುಣಮಟ್ಟ ಮತ್ತು ಕೆಲವು ಸಾಧನಗಳು ನಿದ್ರೆಯ ವಿವಿಧ ಹಂತಗಳನ್ನು ಲೆಕ್ಕಹಾಕುತ್ತವೆ. ಆದರೆ ಈ ಸ್ಲೀಪ್ ವೇರೆಬಲ್ಸ್‌ ಎಷ್ಟು ನಿಖರವಾಗಿವೆ? ಅವು ಪರಿಣಾಮಕಾರಿಯಾಗಿವೆಯೇ? ಅವು ನಮಗೆ ಸಹಾಯ ಮಾಡುತ್ತಿವೆಯೇ ಅಥವಾ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆಯೇ?

ಧರಿಸುವ ಮಾದರಿಯ ವಿನ್ಯಾಸ ಹೊಂದಿರುವ ಸ್ಲೀಪ್ ಟ್ರ್ಯಾಕರ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಗಡಿಯಾರಗಳು ಅಥವಾ ಉಂಗುರಗಳಂತಹ ಸ್ಲೀಪ್ ವೇರೆಬಲ್ಸ್‌ ನಮ್ಮ ನಿದ್ರೆಯ ಮಾದರಿಗಳ ಬಗ್ಗೆ ಮಾಹಿತಿ ನೀಡುತ್ತವೆ. ನಮ್ಮ ನಿದ್ದೆಯ ಗುಣಮಟ್ಟವನ್ನು ಆಧರಿಸಿ ಅಂಕವನ್ನು ನೀಡಲು ದೇಹದ ಚಲನೆಗಳು ಮತ್ತು ಹೃದಯ ಬಡಿತದಂತಹ ಮಾನದಂಡಗಳನ್ನು ಅನುಸರಿಸುತ್ತವೆ. ಈ ಮಾನದಂಡಗಳ ಆಧಾರದ ಮೇಲೆ ದೊರಕುವ ಅಂಕಗಳು 50 ರಿಂದ 100ರ ವರೆಗೆ ತಲುಪಬಹುದು ಎನ್ನುತ್ತಾರೆ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಇಂಟರ್ವೆನ್ಷನಲ್ ಪಲ್ಮನಾಲಜಿ, ಸ್ಲೀಪ್ ಮೆಡಿಸಿನ್ ಮತ್ತು ಟ್ರಾನ್ಸ್‌ಪ್ಲಾಂಟ್ ಫಿಸಿಶಿಯನ್ ವಿಭಾಗದ ಮುಖ್ಯ ಮತ್ತು ಹಿರಿಯ ತಜ್ಞ ಡಾ. ಸುನಿಲ್ ಕುಮಾರ್ ಕೆ.

ಆಸ್ಪತ್ರೆಯಲ್ಲಿ, ನಿದ್ರೆಯನ್ನು ಪಾಲಿಸೋಮ್ನೋಗ್ರಫಿ ಎನ್ನುವ ಕಾರ್ಯವಿಧಾನದಿಂದ ಅನುಸರಿಸಲಾಗುತ್ತದೆ. ನಿದ್ರೆಯ ಹಂತಗಳು, ಮೆದುಳಿನ ಚಟುವಟಿಕೆ, ಹೃದಯ ಬಡಿತ, ದೇಹದ ತಾಪಮಾನ, ಗಾಳಿಯ ಹರಿವು ಮತ್ತು ಆಮ್ಲಜನಕದ ಸ್ಯಾಚುರೇಶನ್ ಸೇರಿದಂತೆ ವಿವಿಧ ಮಾನದಂಡಗಳನ್ನು ಈ ಕಾರ್ಯವಿಧಾನದಲ್ಲಿ ಅಳೆಯಲಾಗುತ್ತದೆ.

ಗಡಿಯಾರಗಳು ಅಥವಾ ಉಂಗುರಗಳಂತಹ ಸ್ಲೀಪ್ ವೇರೆಬಲ್ಸ್‌/ನಿದ್ದೆಯನ್ನು ಅಳೆಯಲು ಧರಿಸುವ ಸಾಧನಗಳು ಸಂಕೇತಗಳನ್ನು ಸೆರೆಹಿಡಿಯಲು ಸಂವೇದಕಗಳು ಮತ್ತು ರಿಮೋಟ್ ಡಿಟೆಕ್ಟಿಂಗ್ ತಂತ್ರಜ್ಞಾನಗಳನ್ನು ಬಳಸುತ್ತವೆ. ಅವುಗಳಲ್ಲಿ ದೇಹದ ಚಲನೆ [ಅಕ್ಸೆಲೆರೋಮೀಟರ್ ಮೂಲಕ] ಮತ್ತು ಹೃದಯ ಬಡಿತ [ಫೋಟೋಪ್ಲೆಥೈಸ್ಮೋಗ್ರಫಿ ಮೂಲಕ]ದಂತಹ ಸಾಮಾನ್ಯ ಸಂಕೇತಗಳನ್ನು ಸೆರೆಹಿಡಿಯಲಾಗಿದೆ ಎಂದು ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಸ್ಲೀಪ್‌ ವಿಜ್ಞಾನಿ ಮತ್ತು ಕ್ಲಿನಿಕಲ್ ಸೈಕಾಲಜಿ ಸಂಶೋಧಕ ಜೆಸ್ಸಿ ಕುಕ್ ಹೇಳುತ್ತಾರೆ.

ಸಾಧನಗಳು ಪ್ರತಿಕ್ರಿಯೆ ನೀಡಲು ಅನುಸರಿಸುವ ಮಾನದಂಡಗಳು ಬೇರೆ ಬೇರೆಯಾಗಿರುತ್ತವೆ. ನಿದ್ದೆ ಬರದೆ ಹಾಸಿಗೆಯಲ್ಲಿ ಕಳೆದ ಸಮಯ, ನಿದ್ರೆಯಲ್ಲಿ ಕಳೆದ ಸಮಯ, ನಿದ್ರೆಯ ಗುಣಮಟ್ಟ ಮುಂತಾದ ವಿವಿಧ ಮಾನದಂಡಗಳನ್ನು ಸಾಧನಗಳು ಅನುಸರಿಸಿ ಪತ್ತೆ ಮಾಡುತ್ತವೆ. ರಾತ್ರಿಯ ನಿದ್ರೆಯ ಗುಣಲಕ್ಷಣಗಳು ಮತ್ತು ಒಟ್ಟಾರೆ ನಿದ್ರೆಯ ಅಭ್ಯಾಸಗಳು ಮತ್ತು ಮಾದರಿಗಳಿಗೆ ಸಂಬಂಧಿಸಿದ ಪ್ರತಿಕ್ರಿಯೆಯನ್ನು ಒದಗಿಸಲು ಈ ಸಂಕೇತಗಳನ್ನು ವಿಶ್ಲೇಷಿಸಲಾಗುತ್ತದೆ ಎಂದು ಕುಕ್ ವಿವರಿಸುತ್ತಾರೆ.

ಸ್ಲೀಪ್ ಟ್ರ್ಯಾಕರ್‌ಗಳು ಎಷ್ಟು ನಿಖರವಾಗಿವೆ?

ಆಧುನಿಕ ಸ್ಲೀಪ್ ಟ್ರ್ಯಾಕರ್‌ಗಳು ಒಟ್ಟು ನಿದ್ರೆಯ ಅವಧಿಯಲ್ಲಿ ಸುಮಾರು ಶೇಕಡಾ 50 ರಿಂದ 70 ರಷ್ಟು ಪ್ರಮಾಣದ ನಿದ್ರೆಯ ಹಂತಗಳನ್ನು ಸೂಕ್ತವಾಗಿ ನಿರೂಪಿಸಲು ವಿಕಸನಗೊಂಡಿವೆ. ಸ್ಲೀಪ್ ಟ್ರ್ಯಾಕರ್‌ಗಳ ಆವಿಷ್ಕಾರದೊಂದಿಗೆ ತಂತ್ರಜ್ಞಾನವು ಬಹಳವಾಗಿ ಸುಧಾರಿಸಿದೆ, ಆದರೆ ಚಲನೆಯಿಲ್ಲದೆ ಎಚ್ಚರವಾಗಿರುವಿಕೆಯಂತಹ [ಚಲಿಸದೆ ಎಚ್ಚರವಾಗಿರುವುದು] ಕೆಲವು ಮಾನದಂಡಗಳನ್ನು ಲೆಕ್ಕಹಾಕುವುದರಲ್ಲಿನ ನಿಖರತೆಯ ಸಮಸ್ಯೆಗಳು ಇನ್ನೂ ಹಾಗೆಯೇ ಉಳಿದಿವೆ. ಇದು ನಿದ್ರೆಯ ಸಾಮರ್ಥ್ಯ ಮತ್ತು ಗುಣಮಟ್ಟವನ್ನು ಅಧಿಕ ಎಂದು ಅಂದಾಜು ಮಾಡಲು ಕಾರಣವಾಗುತ್ತದೆ ಎನ್ನುತ್ತಾರೆ ಕುಕ್.

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ನರವಿಜ್ಞಾನಿ, ಮನೋವೈದ್ಯ ಡಾ. ಜಾನ್ ಕ್ರೂಸ್, “ನಿದ್ರೆಯ ಅಧ್ಯಯನಕ್ಕಾಗಿ ಸಾಂಪ್ರದಾಯಿಕ ವಿಧಾನದಲ್ಲಿ ಪ್ರಮುಖವಾಗಿ ಇಇಜಿಗಳು (ಎಲೆಕ್ಟ್ರಾನ್ ಎನ್ಸೆಫಲೋಗ್ರಾಮ್) ಮತ್ತು ಇಎಂಜಿ (ಎಲೆಕ್ಟ್ರೋಮಿಯೋಗ್ರಫಿ) ಸಾಧನ‌ಗಳನ್ನು ಬಳಸಲಾಗುತ್ತದೆʼʼ ಎನ್ನುತ್ತಾರೆ. ಈ ಸಾಧನಗಳು ಮೂಗು / ಬಾಯಿ, ಎದೆಯ ವಿಸ್ತರಿಸುವಿಕೆ ಮತ್ತು ಕೆಲವೊಮ್ಮೆ ಧ್ವನಿಯ ಮುದ್ರಣವನ್ನು ಅಳೆಯುತ್ತದೆ. ಆದರೂ, ಸುಲಭವಾಗಿ ಲಭ್ಯವಿರುವ ಸ್ಲೀಪ್ ಟ್ರ್ಯಾಕರ್‌ಗಳು ಬಳಸುವ ಸಾಧನಗಳು ನಿದ್ರೆಯ ಹಂತಗಳನ್ನು 70ರಿಂದ – 90 ಪ್ರತಿಶತದಷ್ಟು ಮಾತ್ರ ನಿಖರವಾಗಿ ಹೇಳಬಲ್ಲುವು, ಎಂದು ಅವರು ಹೇಳುತ್ತಾರೆ.

 ಸ್ಲೀಪ್ ಟ್ರ್ಯಾಕರ್‌ಗಳ ಪರಿಣಾಮಗಳು

ಚೆನ್ನೈನ ಫೋರ್ಟಿಸ್ ಆಸ್ಪತ್ರೆಯ ಸಮಾಲೋಚಕಿ ಮುಮ್ತಾಜ್ ಬೇಗಂ ಅವರು ಸ್ಲೀಪ್ ಟ್ರ್ಯಾಕರ್‌ಗಳು ವ್ಯಕ್ತಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಹೇಳುತ್ತಾರೆ. ಯಾವುದೇ ದೋಷ ಅಥವಾ ತಪ್ಪು ಲೆಕ್ಕಾಚಾರವು ಬಳಕೆದಾರರ ನಿದ್ರೆಯ ಮಾದರಿಗಳು ಮತ್ತು ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತದೆ ಎಂದು  ಅಭಿಪ್ರಾಯಪಡುತ್ತಾರೆ.

ಆತಂಕ – ನಿದ್ರೆಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕಡಿಮೆ ಅಂಕಗಳು ಹೆಚ್ಚಿನ ಆತಂಕ, ಖಿನ್ನತೆ ಮತ್ತು ತಮ್ಮ ಬಗ್ಗೆ ತಮ್ಮಲ್ಲಿಯೇ ನಕಾರಾತ್ಮಕ ಭಾವನೆಯನ್ನು ಹುಟ್ಟುಹಾಕಬಹುದು.

ಸ್ವಯಂ-ರೋಗನಿರ್ಣಯ – ಅಸಮರ್ಪಕ ನಿದ್ರೆಯ ಮಾದರಿಗಳ ಸಂದರ್ಭದಲ್ಲಿ, ಜನರು ವೈದ್ಯರ ಸಲಹೆಯಿಲ್ಲದೆ ತಮ್ಮಷ್ಟಕ್ಕೆ ತಾವೇ ತಮಗೆ ನಿದ್ರಾಹೀನತೆ ಅಥವಾ ನಿದ್ರೆಗೆ ಸಂಬಂಧಿಸಿದ ಇತರೆ ಅಸ್ವಸ್ಥತೆಗಳಿವೆ ಎಂದು ಸ್ವಯಂ-ರೋಗನಿರ್ಣಯ ಮಾಡುತ್ತಾರೆ

ಗೀಳು – ಬಳಕೆದಾರರು ತಮ್ಮ ದೇಹದ ಜೈವಿಕ ಗಡಿಯಾರಕ್ಕಿಂತ ನಿದ್ರೆಯ ಅಂಕಗಳನ್ನು ಉತ್ತಮ ಪಡೆಯಲು ಗ್ಯಾಜೆಟ್‌ಗಳನ್ನು/ಉಪಕರಣಗಳನ್ನು ಅವಲಂಬಿಸುತ್ತಾರೆ.

ಬದಲಾಗುವ ನಿದ್ರೆಯ ಮಾದರಿಗಳು – ಪ್ರತಿಯೊಬ್ಬರೂ ವಿಭಿನ್ನ ನಿದ್ರೆಯ ಮಾದರಿಯನ್ನು ಹೊಂದಿರುತ್ತಾರೆ. ಕೆಲವರು 6 ಗಂಟೆಗಳ ನಿದ್ರೆಯ ನಂತರ ಉಲ್ಲಸಿತರಾಗುತ್ತಾರೆ ಮತ್ತು ಕೆಲವರಿಗೆ 9 ಗಂಟೆಗಳು ಬೇಕಾಗಬಹುದು. ಅವರ ನಿದ್ರೆಯ ಅಂಕಗಳು ಈ ಅಂಶವನ್ನು ಪರಿಗಣಿಸದ ಕಾರಣ, ಅವರು ಚೆನ್ನಾಗಿ ಮಲಗಿದಾಗ ಕಡಿಮೆ ಅಂಕಗಳನ್ನು ಏಕೆ ಪಡೆದೆವು ಅವರು ಆಶ್ಚರ್ಯ ಪಡುತ್ತಾರೆ.

ನೆನಪಿಡಬೇಕಾದ ಪ್ರಮುಖ ಅಂಶಗಳು

ಸರಿಯಾಗಿ ಬಳಸಬಹುದಾದರೆ, ಧರಿಸಬಹುದಾದ ಸ್ಲೀಪ್ ಟ್ರ್ಯಾಕರ್ ನಮ್ಮ ನಿದ್ರೆಯ ಮಾದರಿಗಳನ್ನು ಗುರುತಿಸಲು, ಉತ್ತಮ ನಿದ್ರೆಗಾಗಿ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಇದರಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ. ಜೈಪುರದ ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮತ್ತು ಇಂಟರ್ನಲ್ ಮೆಡಿಸಿನ್ ವಿಭಾಗದ ಹಿರಿಯ ತಜ್ಞ ಡಾ. ಪಂಕಜ್ ಆನಂದ್ ಅವರ ಪ್ರಕಾರ:

ಸ್ಲೀಪ್ ಟ್ರ್ಯಾಕರ್‌ಗಳು ನಿದ್ರೆಯ ಮೌಲ್ಯಮಾಪನಕ್ಕೆ ಪ್ರಮುಖ ಮಾನದಂಡವಲ್ಲ. ಬದಲಾಗಿ ಅವು ನಿಮ್ಮ ನಿದ್ರೆಯ ಮಾದರಿಗಳ ಬಗ್ಗೆ ಪ್ರತಿಕ್ರಿಯೆ ನೀಡುವ ಸಾಧನಗಳಾಗಿವೆ, ಇದು ಉತ್ತಮ ನಿದ್ರೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಜೀವನಶೈಲಿಗೆ ಸಂಬಂಧಿಸಿದಂತೆ ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಯಾರೂ ನಿದ್ರೆಯ ಗುಣಮಟ್ಟದ ಅಂಕಗಳ ಮೇಲೆ ಅವಲಂಬಿತವಾಗಬಾರದು ಮತ್ತು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಬಾರದು. ಬದಲಿಗೆ ಇದನ್ನು ನಿದ್ರೆಯ ಹಂತಗಳ ಒಂದು ಮಾಪನವಾಗಿ ನೋಡಿ ಮತ್ತು ಒಬ್ಬರ ನಿದ್ರೆಯಲ್ಲಿ ಕಾಲ ಕಾಲದಲ್ಲಿ ಆಗುವ ಬದಲಾವಣೆಗಳನ್ನು ಅರಿತುಕೊಳ್ಳಲು ಇದನ್ನು ಬಳಸಿ. ಆದರೆ ಅವು ನಿಮ್ಮನ್ನು ಆತಂಕಕ್ಕೀಡುಮಾಡುತ್ತಿದ್ದರೆ, ಅವುಗಳು ನಿಮಗೆ ಖಂಡಿತವಾಗಿಯೂ ಸಹಾಯಕ್ಕಿಂತ ಹೆಚ್ಚು ತೊಂದರೆ ನೀಡುತ್ತಿವೆ ಎಂದರ್ಥ.

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.
ಲೇಖನ
ಹುಡುಗಿಯರ ಪ್ರೌಢಾವಸ್ಥೆ  ಸಮಯದಲ್ಲಿ ಗೊಂದಲ ಹೆಚ್ಚು. ಪೋಷಕರೊಂದಿಗೆ ಮುಕ್ತ ಸಂಭಾಷಣೆಗಳು ಈ ಪರಿವರ್ತನೆಗೆ ಅವರನ್ನು ತಯಾರಾಗಲು ಸಹಾಯ ಮಾಡುತ್ತದೆ 
ಲೇಖನ
ಜಾಗತಿಕವಾಗಿ ಕನಿಷ್ಠ 5.4 ಲಕ್ಷ ಹೃದಯ ಸಂಬಂಧಿ ಸಾವುಗಳಿಗೆ ಟ್ರಾನ್ಸ್-ಫ್ಯಾಟಿ ಆಸಿಡ್‌ಗಳಿಂದ ತುಂಬಿದ ಸಂಸ್ಕರಿಸಿದ ಆಹಾರ ಕಾರಣ ಎಂದು ಭಾರತ ಸರ್ಕಾರ ಹೇಳುತ್ತದೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ